ಆಧಾರ್ ಕಾರ್ಡ್ ಅಪ್ಡೇಟ್ ಆಗಿಲ್ಲ ಎಂದರೆ ಈಗಲೇ ಮಾಡಿಕೊಳ್ಳಿ ಇಲ್ಲವಾದರೆ ಹಣ ನೀಡಬೇಕಾಗುತ್ತದೆ. ಈಗಷ್ಟೇ ಜನ ಮುಗಿ ಬಿದ್ದು ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಅಷ್ಟರಲ್ಲಿ ಮತ್ತೊಂದು ಹೊಸ ಅಪ್ಡೇಟ್ ಹೊರ ಬಿದ್ದಿದೆ. ಅದೇನೆಂದರೆ ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸುವುದು. ಸದ್ಯಕ್ಕೆ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವುದಕ್ಕೆ 1000.ರೂ ದಂಡ ಕಟ್ಟಬೇಕಾಗಿದ್ದರೂ.
ಹೊಸದಾಗಿ ಆದೇಶ ಹೊರಡಿಸಿರುವ ಆಧಾರ್ ಕಾರ್ಡ್ ನವೀಕರಣ ಮಾಡಿಸುವ ಪ್ರಕ್ರಿಯೆಗೆ ಯಾವುದೇ ಶುಲ್ಕ ತೆರಬೇಕಾಗಿಲ್ಲ ಎನ್ನುವುದು ಸಮಾಧಾನಕರ ಸಂಗತಿ. ಉಚಿತವಾಗಿ UIDAI ನೀಡಿರುವ ಕಾಲಾವಕಾಶದವರೆಗೆ ನೀವು ಆಧಾರ್ ಕಾರ್ಡ್ ಅನ್ನು ನವೀಕರಣ ಮಾಡಿಕೊಳ್ಳಬಹುದು. ಆದರೆ ಮುಂದಿನ ದಿನಗಳಲ್ಲಿ ಇದಕ್ಕೂ ಕೂಡ ಶುಲ್ಕ ಪಾವತಿ ಮಾಡುವ ಸಂದರ್ಭ ಬರಬಹುದು. ಆದ್ದರಿಂದ ಈಗಲೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ.
ಯಾರು ಈ 10 ವರ್ಷಗಳಲ್ಲಿ ಒಮ್ಮೆ ಕೂಡ ಆಧಾರ್ ಕಾರ್ಡನ್ನು ನವೀಕರಣಗೊಳಿಸಿಲ್ಲ ಅಂತವರು ತಪ್ಪದೆ ಆಧಾರ್ ಕಾರ್ಡನ್ನು ನವೀಕರಣಗೊಳಿಸಬೇಕು ಎಂದು UIDAI ಎಂದರೆ ಆಧಾರ್ ಕಾರ್ಡ್ ಗಳನ್ನು ನೀಡುವ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಸೂಚನೆ ಹೊರಡಿಸಿದೆ. ಸದ್ಯಕ್ಕೆ ಜುಲೈ 14 ರ ವರೆಗೂ ಕೂಡ ಈ ಪ್ರಕ್ರಿಯೆಯನ್ನು ಉಚಿತವಾಗಿಯೇ ಇಡಲಾಗಿದೆ. ಆಧಾರ್ ಕಾರ್ಡ್ ಅನ್ನು ಮೊದಲ ಬಾರಿಗೆ ಪಡೆದುಕೊಂಡ ಸಂದರ್ಭದಲ್ಲಿ ಸಾಕಷ್ಟು ಲೋಪ ದೋಷಗಳಾಗಿತ್ತು.
ಕೊಟ್ಟ ದಾಖಲೆಗಳಿಗೂ ಆಧಾರ್ ಕಾರ್ಡ್ ಅಲ್ಲಿ ಇದ್ದ ಮಾಹಿತಿಗೂ ಹೊಂದಾವಣೆ ಆಗುತ್ತಿರಲಿಲ್ಲ. ಆ ಸಮಯದಲ್ಲಿ ಸಾಕಷ್ಟು ಜನ ಸರಿಯಾದ ಮಾಹಿತಿ ಜೊತೆಗೆ ಆಧಾರ್ ಕಾರ್ಡನ್ನು ಸರಿಮಾಡಿಕೊಂಡಿದ್ದರು ಆಗ ಕೇವಲ 25 ರೂಪಾಯಿಯ ಜೊತೆ ನವೀಕರಣ ಮಾಡಿಸಿಕೊಳ್ಳಬಹುದಿತ್ತು. ಆದರೆ ಈಗ ಅದನ್ನು ಕೂಡ ಸಂಪೂರ್ಣ ಉಚಿತ ಮಾಡಲಾಗಿದೆ.
ಹೆಸರು, ವಿಳಾಸ, ಮೊಬೈಲ್ ನಂಬರ್ ಅಥವಾ ಇನ್ನಿತರ ಕಾರಣಗಳಿಗಾಗಿ ಆಧಾರ್ ಕಾರ್ಡ್ ಅಪ್ಡೇಟ್ ಆಗಿರುತ್ತದೆ. ಈ ಯಾವುದೇ ಕಾರಣ ಇಲ್ಲದೆ ಇದುವರೆಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಇದ್ದವರು ನೀವು ಆಧಾರ್ ಕಾರ್ಡ್ ಪಡೆದುಕೊಂಡು ಹತ್ತು ವರ್ಷಗಳಾಗಿದ್ದರೆ ತಪ್ಪದೆ ನವೀಕರಣ ಮಾಡಿಸಲೇಬೇಕು, ಇದು ಕಡ್ಡಾಯವಾಗಿದೆ.
ಭಾರತೀಯ ಎಲ್ಲಾ ನಾಗರಿಕರು ಕೂಡ ಈ ಉಪಯೋಗ ಪಡೆದುಕೊಳ್ಳಲಿ ಎನ್ನುವ ಕಾರಣಕ್ಕಾಗಿ ಇದನ್ನು ಉಚಿತ ಕೂಡ ಮಾಡಲಾಗಿದೆ. ಆದರೆ ಆಧಾರ್ ಕೇಂದಕ್ಕೆ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್ ನವೀಕರಿಸಿದರೆ ಆ ಸಮಯದಲ್ಲಿ 50 ರೂಪಾಯಿಗಳನ್ನು ಮಾತ್ರ ಶುಲ್ಕವನ್ನಾಗಿ ನೀವು ಪಾವತಿ ಮಾಡಬೇಕಾಗುತ್ತದೆ. ಆಧಾರ್ ಕಾರ್ಡ್ ಅನ್ನು ಈ ಕ್ರಮದ ಮೂಲಕ ನವೀಕರಿಸಬಹುದು.
UIDAI ನ ಅಧಿಕೃತ ವೆಬ್ಸೈಟ್ ಆದ https://myaadhaar.uidai.gov.in ಗೆ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯ ಮೂಲಕ ಲಾಗಿನ್ ಆಗಿ ಆಗ OTP ಬರುತ್ತದೆ, ಅದನ್ನು ಹಾಕಿ ಡಾಕ್ಯುಮೆಂಟ್ ನವೀಕರಣದ ಮೇಲೆ ಕ್ಲಿಕ್ ಮಾಡಿ. ನಿಮ್ಮ ವಿವರಗಳನ್ನೆಲ್ಲ ಚೆಕ್ ಮಾಡಿ ನವೀಕರಣ ಮಾಡುವ ಆಪ್ಷನ್ ನಿಂದ ಮುಂದುವರೆಯಿರಿ. ಸದ್ಯಕ್ಕೆ ಈಗ ಇದು ಭಾರತದ ಎಲ್ಲಾ ಪ್ರಜೆಗಳಿಗೂ ಉಚಿತವಾಗಿತ್ತು UIDAI ಕೊಟ್ಟಿರುವ ಅವಧಿ ಮುಗಿದ ಬಳಿಕ ಇದಕ್ಕೂ ಶುಲ್ಕ ವಿಧಿಸುವ ಸಾಧ್ಯತೆಗಳು ಇದೆ. ಆದ್ದರಿಂದ ಆದಷ್ಟು ಬೇಗ ನಿಮ್ಮ ಆಧಾರ್ ಕಾರ್ಡ್ ಹಳೆಯದಾಗಿದ್ದರೆ ಕೂಡಲೇ ಅಪ್ಡೇಟ್ ಮಾಡಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.
UIDAI makes online document update in Aadhaar free of cost; to benefit millions of residents. This service is free on myAadhaar portal for 3months — from March 15 to June 14, 2023.
Details: https://t.co/8KSeXtGcr0#Aadhaar #uidai #DocumentUpdate #free #onlinedocumentupdate pic.twitter.com/gaIGxVc01O
— Aadhaar (@UIDAI) March 16, 2023