ಆಸ್ತಿ ವರ್ಗಾವಣೆ ವಿಷಯದಲ್ಲಿ ಹಕ್ಕು ಬಿಡುಗಡೆ ಪತ್ರ ಅಥವಾ ರಿಲೀಸ್ ಡೀಡ್ ಎನ್ನುವುದು ಹೆಚ್ಚು ಚಲಾವಣೆ ಆಗುತ್ತಿರುತ್ತದೆ. ಒಂದು ಕುಟುಂಬದಲ್ಲಿರುವ ಮಹಿಳೆಯು ತನ್ನ ಪಾಲಿಗೆ ಬರಬೇಕಾದ ಆಸ್ತಿಯ ಹಕ್ಕನ್ನು, ಕುಟುಂಬದ ಇತರರ ಪಾಲಿಗೆ ಬಿಟ್ಟು ಕೊಟ್ಟು ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ರಿಜಿಸ್ಟರ್ ಮಾಡುವುದಕ್ಕೆ ರಿಲೀಸ್ ಡೇಟ್ ಅಥವಾ ಹಕ್ಕು ಬಿಡುಗಡೆ ಎನ್ನುತ್ತಾರೆ.
ಉದಾಹರಣೆ ಸಮೇತ ಹೇಳುವುದಾದರೆ ಒಂದು ಕುಟುಂಬದಲ್ಲಿ ಒಬ್ಬ ತಂದೆಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬ ಮಗ ಹಾಗೂ ಒಬ್ಬ ಮಗಳು ಎಂದಿಟ್ಟುಕೊಳ್ಳೋಣ. ತಂದೆಯ ಆಸ್ತಿ ಭಾಗವಾದ ಸಮಯದಲ್ಲಿ ಇಬ್ಬರು ಮಕ್ಕಳಿಗೂ ಅದು ಭಾಗವಾಗಿರುತ್ತದೆ. ಆಗ ಹೆಣ್ಣು ಮಗಳು ತನ್ನ ಪಾಲಿನ ಅಸ್ತಿಯನ್ನು ತನ್ನ ಸಹೋದರನಿಗೆ ಕೊಡುವ ಮನಸಿದ್ದಾಗ ಹಕ್ಕು ಬಿಡುಗಡೆ ಪತ್ರದ ಮೂಲಕ ಬಿಟ್ಟುಕೊಡಬಹುದು.
ಈ ರೀತಿ ಹಕ್ಕು ಬಿಡುಗಡೆ ಎರಡು ರೀತಿಯಲ್ಲಿ ನಡೆಯುತ್ತದೆ. ರಿಲೀಸ್ ಡೀಡ್ ಮಾಡಿ ತಮ್ಮ ಪಾಲಿಗೆ ಬರಬೇಕಾದ ಆಸ್ತಿಯನ್ನು ಸಹೋದರನಿಗೆ ಹಕ್ಕು ಬಿಡುಗಡೆ ಪತ್ರದ ಮೂಲಕ ಬಿಡುಗಡೆ ಮಾಡುವಾಗ ಯಾವ ಅಪೇಕ್ಷೆ ಇಲ್ಲದೆ ಕೂಡ ಅದನ್ನು ಮಾಡಿಕೊಡಬಹುದು ಅಥವಾ ಪರಸ್ಪರ ಒಪ್ಪಂದದ ಮೂಲಕ ಈ ಹಕ್ಕು ಬಿಡುಗಡೆ ಪತ್ರ ಬರೆಸುವ ಸಮಯದಲ್ಲಿ ಬೇರೆ ಏನಾದರೂ ಪಡೆದುಕೊಂಡು ಆ ಪಾಲಿನ ಆಸ್ತಿಯ ಮೇಲೆ ತನಗೆ ಹಕ್ಕಿಲ್ಲ ಎಂದು ಹಕ್ಕು ಬಿಡುಗಡೆ ಪತ್ರ ಮಾಡಿ ಕೊಡಬಹುದು.
ಈ ರೀತಿ ಹಕ್ಕು ಬಿಡುಗಡೆ ಪತ್ರವನ್ನು ಒಬ್ಬ ಸಹೋದರಿಯು ತನ್ನ ಸಹೋದರನಿಗೆ ಬಿಟ್ಟುಕೊಡಲು ಮಾತ್ರವಲ್ಲದೆ ಒಂದು ಕುಟುಂಬದಲ್ಲಿ ತಂದೆ ಆಸ್ತಿ ಬಿಡುಗಡೆ ಆದಾಗ ಅಕ್ಕ ತಮ್ಮಂದಿರು ಅಥವಾ ಅಣ್ಣ ತಂಗಿ ಅಥವಾ ಅಕ್ಕ-ತಂಗಿ ಈ ರೀತಿ ಯಾರು ಯಾರಿಗೆ ಬೇಕಾದರೂ ರಿಲೀಸ್ ಡೀಡ್ ಮಾಡಿ ಆ ಪಾಲಿನ ಆಸ್ತಿಯ ಮೇಲಿರುವ ಹಕ್ಕನ್ನು ಬಿಟ್ಟು ಕೊಡಬಹುದು.
ನಮ್ಮ ದೇಶದಲ್ಲಿ ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಕೂಡ ಸಮಾನವಾದ ಅಧಿಕಾರ ಹಾಗೂ ಹಕ್ಕು ಇದ್ದರೂ ಕೂಡ ನಮ್ಮ ದೇಶದ ಹೆಣ್ಣು ಮಕ್ಕಳ ಇನ್ನೂ ಪುರಾತನ ಪದ್ಧತಿಯನ್ನು ಪಾಲಿಸುತ್ತಿದ್ದಾರೆ. ತನ್ನ ತವರು ಮನೆ ಚೆನ್ನಾಗಿರಬೇಕು ಎನ್ನುವ ಕಾರಣಕ್ಕಾಗಿ ತಮ್ಮ ಆಸ್ತಿಯ ಹಕ್ಕನ್ನು ಹಕ್ಕು ಬಿಡುಗಡೆ ಪತ್ರದ ಮೂಲಕ ತಮ್ಮ ಸಹೋದರರಿಗೆ ಬಿಟ್ಟುಕೊಡುತ್ತಿದ್ದಾರೆ. ಈ ರೀತಿ ಅವರು ನಿರ್ಧಾರ ಮಾಡಲು ಕೆಲವು ನೈತಿಕ ಕಾರ್ಯಗಳು ಇವೆ.
ಯಾಕೆಂದರೆ ಹೆಣ್ಣು ಮಕ್ಕಳನ್ನು ಮದುವೆ ಮಾಡುವ ಸಂದರ್ಭದಲ್ಲಿ ಸಾಕಷ್ಟು ಖರ್ಚು ಮಾಡಲಾಗಿರುತ್ತದೆ, ಅದ್ದೂರಿಯಾಗಿ ಮಕ್ಕಳನ್ನು ಧಾರೆ ಎರೆದು ಕೊಡಲಾಗಿರುತ್ತದೆ. ಜೊತೆಗೆ ಮದುವೆಯಾದ ಮಗಳ ತವರು ಮನೆಯ ಜವಾಬ್ದಾರಿಯನ್ನು ತಂದೆ ಮನೆಯವರು ಅಥವಾ ಸಹೋದರರು ಹೊತ್ತುಕೊಂಡಿರುತ್ತಾರೆ. ಮದುವೆ ಆದ ಮೇಲೆ ಆ ಹೆಣ್ಣು ಮಗಳು ತನ್ನ ತಂದೆ ತಾಯಿಯನ್ನು ಕೂಡ ತನ್ನ ಜೊತೆ ಗಂಡನ ಮನೆಗೆ ಕರೆದುಕೊಂಡು ಹೋಗಿ ಸಾಕುವುದು ಕಷ್ಟದ ಮಾತು.
ಯಾವಾಗಲೂ ನಮ್ಮ ದೇಶದಲ್ಲಿ ಗಂಡು ಮಕ್ಕಳೇ ನೈತಿಕವಾಗಿ ತಂದೆ ತಾಯಿಯ ಸಾಕುವ ಜವಾಬ್ದಾರಿಯನ್ನು ಹೊತ್ತುಕೊಂಡಿರುತ್ತಾರೆ. ಇದನ್ನೆಲ್ಲ ನೋಡಿ ತಮ್ಮ ಸಹೋದರರಿಗೆ ತಮ್ಮ ಪಾಲಿನ ಆಸ್ತಿಯನ್ನು ಬಿಟ್ಟು ಕೊಡುತ್ತಿದ್ದಾರೆ. ಭಾರತದಲ್ಲಿ 80% ನಿರ್ಧಾರ ಇದೇ ರೀತಿ ಇದೆ. ಈ ರೀತಿ ದೇಶದಾದ್ಯಂತ ಪ್ರಚಲಿತದಲ್ಲಿರುವ ಈ ಹಕ್ಕು ಬಿಡುಗಡೆ ಪತ್ರವನ್ನು ಮಾಡಿಸುವ ಪ್ರಕ್ರಿಯೆ ಹೇಗೆ ಎನ್ನುವ ವಿಚಾರ ಮತ್ತು ಈ ಕುರಿತಾದ ಇನ್ನು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.