ಸಾಮಾನ್ಯ ವರ್ಗದ ಕುಟುಂಬದವರಿಂದ ಹಿಡಿದು ಶ್ರೀಮಂತರವರಿಗೆ ಎಲ್ಲಾ ಯುವಕರು ವಯಸ್ಸಿಗೆ ಬರುತ್ತಿದ್ದಂತೆ ಆಸೆ ಪಡುವ ಒಂದು ವಸ್ತು ಎಂದರೆ ಅದು ಬೈಕ್. ಎಂತದವರಿಗೆ ಆದರೂ ಕೂಡ ಬೈಕ್ ಎಂದರೆ ಒಂದು ರೀತಿಯ ಕ್ರೇಜ್ ಅಲ್ಲದೆ ಹಲವರಿಗೆ ಇದು ತಮ್ಮ ಅವಶ್ಯಕತೆ ಕೂಡ ಹೌದು. ದೂರದ ಕಛೇರಿಗಳಿಗೆ ಅಥವಾ ಕಾಲೇಜುಗಳಿಗೆ ಹೋಗಲು ಪ್ರತಿದಿನ ಬಸ್ ಕಾಯಲು ಆಗದ ಕಾರಣ.
ಜೊತೆಗೆ ತಮ್ಮ ವ್ಯಾಪಾರ ವ್ಯವಹಾರಗಳ ಕಾರಣಕ್ಕೆ ಪ್ರತಿದಿನ ಸಂಚಾರ ಮಾಡಬೇಕು ಎಂದರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಮಯ ಸರಿ ಹೊಂದುವುದಿಲ್ಲ ಎನ್ನುವ ಕಾರಣಕ್ಕೆ ಮತ್ತಿತರ ಕಾರಣಗಳಿಗಾಗಿ ದ್ವಿಚಕ್ರ ವಾಹನಗಳ ಮೊರೆ ಹೋಗುವುದು ಮಾಮೂಲು. ಆದರೆ ಈಗಿನ ಕಾಲದಲ್ಲಿ ದ್ವಿಚಕ್ರ ವಾಹನಗಳ ಖರೀದಿ ಅಷ್ಟು ಸುಲಭ ಅಲ್ಲ.
ಹೆಚ್ಚು ಕಡಿಮೆ ಎಲ್ಲಾ ದ್ವಿ ಚಕ್ರ ವಾಹನಗಳ ಬೆಲೆಯೂ ಕೂಡ ಲಕ್ಷದ ಗಡಿಗೆ ಹತ್ತಿರವಿದೆ ಅಥವಾ ದಾಟಿದೆ ಎಂದು ಹೇಳಬಹುದು. ಒಮ್ಮೆ ಬೈಕ್ ಖರೀದಿಯಾದ ನಂತರ ನಿಲ್ಲದೆ ಹತ್ತಾರು ಲೈಸೆನ್ಸ್, ಟ್ಯಾಕ್ಸ್, ಪ್ರತಿದಿನ ಹಾಕಿಸಬೇಕಾದ ಇಂಧನವಾದ ಪೆಟ್ರೋಲು ಮುಂತಾದ ಬೆಲೆ ಕೂಡ ಬೈಕ್ ಖರೀದಿಸಲು ಮಿಡ್ಲ್ ಕ್ಲಾಸ್ ಮಂದಿ ಹಿಂದೂ ಮುಂದು ನೋಡುವಂತೆ ಮಾಡಿದೆ.
ಇವುಗಳಿಂದ ಜನ ರೋಸಿ ಹೋಗಿರುವ ಜನ ಸದ್ಯಕ್ಕೀಗ ಎಲೆಕ್ಟ್ರಿಕಲ್ ಬೈಕ್ ಗಳ ಮೊರೆ ಹೋಗಿದ್ದಾರೆ. ಆದರೆ ಅವುಗಳು ಕೂಡ ಬೆಲೆಯಲ್ಲಿ ಮಾಧ್ಯಮವರ್ಗದವರಿಗೆ ಎಟುಕದ ಎತ್ತರದಲ್ಲಿದೆ. ಅನೇಕ ಬ್ಯಾಂಕ್ಗಳು ಸಾಲ ಸೌಲಭ್ಯ ಕೊಟ್ಟು EMI ಅಲ್ಲಿ ಬೈಕ್ ಗಳನ್ನು ಖರೀದಿಸುವ ಅವಕಾಶ ಮಾಡಿಕೊಟ್ಟಿದೆ. ಇದರಿಂದ ಸ್ವಿಗ್ಗಿ, ಜೋಮೊಟೊ ಮುಂತಾದ ಸ್ಟಾರ್ಟಪ್ ಕಂಪನಿಗಳಿಗೆ ಕೆಲಸಕ್ಕೆ ಸೇರುವವರ ಪಾಲಿಗೆ ಸಾಕಷ್ಟು ಅನುಕೂಲವಾಗಿದೆ.
ಆದರೆ ಅವುಗಳ ಡೌನ್ ಪೇಮೆಂಟ್ ಗಳು ಕೂಡ ಅವರ ತಿಂಗಳ ಸಂಬಳಕ್ಕಿಂತ ಹೆಚ್ಚಿನ ಮೊತ್ತದಲ್ಲಿ ಇರುವುದರಿಂದ ಅಂದು ಕೊಂಡ ತಕ್ಷಣ ಬೈಕ್ ಖರೀದಿಸುವುದು ಸುಲಭವಲ್ಲ. ಆದರೆ ಇದೀಗ ಬೈಕ್ ಪ್ರಿಯರ ಪಾಲಿಗೆ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ 5,000 ರೂ.ಪಾವತಿ ಮಾಡಿ ಮನೆಗೆ ಬೈಕ್ ತಂದು ನಿಲ್ಲಿಸಬಹುದು. Hero HF Delux ಬೈಕ್ ಅನ್ನು ನೀವು 5000 ರೂ.ಗೆ ಕರಗಿಸಬಹುದು. ಇದು ನಿಮಗೆ ಆಶ್ಚರ್ಯ ಎನಿಸಬಹುದು ಆದರೆ ಇದರ ಸಂಪೂರ್ಣ ವಿವರಕ್ಕಾಗಿ ತಪ್ಪದೇ ಅಂಕಣವನ್ನು ಕೊನೆ ತನಕ ಓದಿ.
ಈ ಹೀರೋ HF ಡಿಲಕ್ಸ್ ಮೂಲ ರೂಂಪಾತರದ ಬೆಲೆ 60,000ಕ್ಕೂ ಅಧಿಕವಿದೆ. ಈ ಬೆಲೆಯು ಈಗ ಕಿಕ್ ಸ್ಟಾರ್ಟ್ ಡ್ರಮ್ ಅಲಾಯ್ ವೀಲ್ ಆಗಿ ರೂಪಾಂತರವಾಗಿದೆ. ಈ ರೂಪಾಂತರವಾಗಿರುವ ಹೀರೋ HF ಡಿಲಕ್ಸ್ ಬೈಕ್ ಅನ್ನು ನೀವು ಸುಲಭವಾಗಿ EMI ನಲ್ಲಿ ಖರೀದಿಸಬಹುದು. ಇದಕ್ಕೆ ಡೌನ್ ಪೇಮೆಂಟ್ 5000 ಕಟ್ಟಿದರೆ ಸಾಕು. 9.30% ಬಡ್ಡಿ ದರದಲ್ಲಿ 3 ವರ್ಷಗಳ ಅವಧಿಗೆ ಸಾಲ ಸೌಲಭ್ಯ ಸಿಗಲಿದೆ. ಪ್ರತಿ ತಿಂಗಳ EMI 2,120 ರೂ. ಬೀಳಲಿದೆ.
ಈ ಬೈಕ್ ನ ಮತ್ತಷ್ಟು ವೈಶಿಷ್ಟ್ಯಗಳೇನೆಂದರೆ 97.2 CC, 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಇದು ಕಿಕ್ ಸ್ಟಾರ್ಟ್ ಮತ್ತು ಸೆಲ್ಫ್ ಸ್ಟಾರ್ಟ್ ಎರಡು ಆವೃತ್ತಿಯಲ್ಲೂ ಸಹ ಸಿಗುತ್ತದೆ. ಇದಕ್ಕೆ i3S ತಂತ್ರಜ್ಞಾನ ಅಳವಡಿಸಿರುವುದರಿಂದ 9% ಇಂಧನವನ್ನು ಉಳಿಸುತ್ತದೆ. ಹೀರೋ, ಹೋಂಡಾ, ಬಜಾಜ್ ಟಿವಿಎಸ್, ರಾಯಲ್ ಎನ್ಫೀಲ್ಡ್ ಈ ರೀತಿ ಟಾಪ್ ಟೆನ್ ಬೈಕ್ ಲಿಸ್ಟ್ ಅಲ್ಲಿ ಹೀರೋ HF ಡಿಲಕ್ಸ್ ಇದುವರೆಗೆ ಮೂರನೇ ಸ್ಥಾನದಲ್ಲಿದ್ದ ಹೋಂಡಾ ಆಕ್ಟಿವಾವನ್ನು ಹಿಂದಿಕ್ಕಿ ತಾನು ಮೂರನೇ ಸ್ಥಾನ ಪಡೆದಿದೆ.