ಚಿನ್ನ ಎಂದರೆ ಎಲ್ಲರ ಚಿತ್ತವು ಕೂಡ ಆಕರ್ಷಿತವಾಗುತ್ತದೆ. ಅದರಲ್ಲೂ ಭಾರತೀಯರಿಗೆ ಚಿನ್ನ ಎಂದರೆ ಅದೊಂದು ಪ್ರತಿಷ್ಠೆ. ಭಾರತೀಯರ ಮಹಿಳೆಯರಿಗೆ ಚಿನ್ನಕ್ಕಿಂತ ಸಂತೋಷ ಕೊಡುವ ಮತ್ತೊಂದು ಅಂಶ ಇಲ್ಲ ಎಂದು ಬೇಕಿದ್ದರೂ ಹೇಳಬಹುದು. ಮನೆಯಲ್ಲಿ ಎಷ್ಟೇ ಒಡವೆಗಳು ಇದ್ದರೂ ಕೂಡ ಬೆಲೆ ಕಮ್ಮಿಯಾಗಿದೆ ಎನ್ನುವ ಕಾರಣಕ್ಕೋ ಅಥವಾ ಹಬ್ಬ ಹರಿದಿನ ಎನ್ನುವ ವಿಶೇಷಕ್ಕೂ ಅಥವಾ ಹೊಸ ಡಿಸೈನ್ ಟ್ರೆಂಡಿಂಗ್ ನಲ್ಲಿದೆ ಎನ್ನುವ ಕಾರಣಕ್ಕೋ ಮತ್ತಷ್ಟು ಚಿನ್ನದ ಒಡವೆಗಳನ್ನು ಖರೀದಿಸಿ ಹಾಕಿಕೊಳ್ಳಲು ಹಾತೊರೆಯುತ್ತಿರುತ್ತಾರೆ.
ಚಿನ್ನ ಅಲಂಕಾರಕ್ಕೆ ಮಾತ್ರ ಅಲ್ಲದೆ ಆಸ್ತಿಯಾಗಿ ಕೂಡ ಈಗ ಮಾನ್ಯವಾಗಿದೆ. ಚಿನ್ನವನ್ನು ಒಂದು ಉತ್ತಮ ಭದ್ರತೆಯ ಹೂಡಿಕೆಯಾಗಿ ನೋಡಲಾಗುತ್ತಿದೆ. ನಮ್ಮ ದೇಶದಲ್ಲಿ ಬಡವರು, ಸಾಮಾನ್ಯರು, ಶ್ರೀಮಂತರು ಎನ್ನುವ ಭೇದವಿಲ್ಲದೆ ಎಲ್ಲರೂ ಸಹ ಚಿನ್ನದ ಮೇಲೆ ಆಸೆ ಪಡುತ್ತಾರೆ. ಆದ್ದರಿಂದ ಒಬ್ಬ ಮನುಷ್ಯ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು ಅಥವಾ ಒಂದು ಕುಟುಂಬಕ್ಕೆ ಚಿನ್ನ ಇಟ್ಟುಕೊಳ್ಳಲು ಎಷ್ಟು ನಿರ್ಬಂಧ ಇದೆ ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಲೇಬೇಕು.
ಯಾಕೆಂದರೆ 1968ರಲ್ಲಿಯೇ ಚಿನ್ನದ ನಿರ್ಬಂಧಕ್ಕೆ ಸಂಬಂಧಪಟ್ಟ ಹಾಗೆ ಚಿನ್ನ ನಿಯಂತ್ರಣ ಕಾಯ್ದೆ ಬಂದಿತ್ತು. ಆ ಕಾಯ್ದೆ ಪ್ರಕಾರ ಯಾರು ಕೂಡ ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಚಿನ್ನ ಇಟ್ಟುಕೊಳ್ಳುವಂತಿರಲಿಲ್ಲ. ಆದರೆ ಬಹಳ ಕಡಿಮೆ ಸಮಯದಲ್ಲಿಯೇ ಅಂದರೆ 1991ರಲ್ಲಿಯೇ ಈ ಕಾಯ್ದೆಯನ್ನು ರದ್ದು ಕೂಡ ಪಡಿಸಲಾಯಿತು. ಭಾರತದಲ್ಲಿ ಸರ್ಕಾರವು ಚಿನ್ನ ಇಟ್ಟುಕೊಳ್ಳಲು ಯಾವುದೇ ರೀತಿಯ ಮಿತಿ ವಿಧಿಸಿಲ್ಲ, ಭಾರತೀಯ ಸರ್ಕಾರವು ಈ ಬಗ್ಗೆ ಯಾವುದೇ ನಿರ್ಬಂಧ ಕೂಡ ಹೇರಿಲ್ಲ ಆದರೆ ಹೆಚ್ಚಿನ ಚಿನ್ನ ಇಟ್ಟುಕೊಳ್ಳುವವರಿಗೆ CBDT ಯ ಕೆಲ ಶರತ್ತುಗಳು ಅನ್ವಯ ಆಗುತ್ತದೆ.
ಭಾರತದಲ್ಲಿ ಒಂದು ಕುಟುಂಬ ಎಷ್ಟು ಗ್ರಾಂ ಅಥವಾ ಕೆಜಿ ಚಿನ್ನ ಬೇಕಾದರೂ ಇಟ್ಟುಕೊಳ್ಳಬಹುದು ಆದರೆ ಐಟಿ ದಾಳಿ ಆದ ಸಮಯದಲ್ಲಿ ಅದಕ್ಕೆ ಸಂಬಂಧಪಟ್ಟ ಹಾಗೆ ಪುರಾವೆ ಕೊಡಬೇಕಾಗುತ್ತದೆ. ಇದಕ್ಕಾಗಿ ಕೆಲವಾರು ನಿಯಮಗಳು ಇವೆ ಅವುಗಳನ್ನು ನೋಡುವುದಾದರೆ ಸರ್ಕಾರ ಹೇಳಿರುವ ಪ್ರಕಾರ ಅವರ ಬಳಿ ಇರುವ ಚಿನ್ನಕ್ಕೆ ಮಾನ್ಯವಾದ ಮೂಲ ಮತ್ತು ಸಂಬಂಧಿಸಿದ ದಾಖಲೆಗಳನ್ನು ಮಾಲಿಕರು ಇಟ್ಟುಕೊಂಡಿರಬೇಕು.
ಅದಾಗಿಯೂ ಆದಾಯ ತೆರಿಗೆ ಇಲಾಖೆ ದಾಳಿಯಾದಾಗ ಆಸ್ತಿ ವಶಪಡಿಸಿಕೊಳ್ಳುವ ಸಮಯದಲ್ಲಿ ಒಂದು ನಿರ್ದಿಷ್ಟ ಮೊತ್ತದ ಬಂಗಾರದ ಆಭರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತಿಲ್ಲ ಎಂದು ಸಹಾ ನಿಯಮವಿದೆ. ಈ ಬಗ್ಗೆ ಒಮ್ಮೆ ಸಂದರ್ಶನದಲ್ಲಿ ಟ್ರೇಡ್ ಮಾರ್ಕ್ ಅಧ್ಯಕ್ಷ ವಿಜಯ್ ಸಿಂಘಾನಿಯ ಅವರೇ ತಿಳಿಸಿದ್ದರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವ ಮಾರ್ಗಸೂಚಿಗಳ ಪ್ರಕಾರ ಒಬ್ಬ ವಿವಾಹಿತ ಮಹಿಳೆ 500 ಗ್ರಾಂ ಮತ್ತು ಅವಿವಾಹಿತ ಮಹಿಳೆ 250 ಗ್ರಾಂ ಚಿನ್ನಗಳನ್ನು ಯಾವುದೇ ದಾಖಲೆ ಪತ್ರಗಳಿಲ್ಲದೆ ಇಟ್ಟುಕೊಳ್ಳಬಹುದು.
ಇದು ಪುರುಷರಿಗೂ ಕೂಡ ಅನ್ವಯವಾಗುತ್ತದೆ. ಈ ನಿಯಮಗಳ ಪ್ರಕಾರ ಕುಟುಂಬದ ಪ್ರತಿಯೊಬ್ಬ ಪುರುಷ ಆತ ವಿವಾಹಿತನಾಗಿದ್ದರು ಅವಿವಾಹಿತನಾಗಿದ್ದರು 100 ಗ್ರಾಂ ಗಳಷ್ಟು ಚಿನ್ನವನ್ನು ಯಾವುದೇ ದಾಖಲೆ ಪತ್ರಗಳು ಇಲ್ಲದೆ ಇಟ್ಟುಕೊಳ್ಳಬಹುದು ಅಷ್ಟೇ. ಇದಕ್ಕಿಂತ ಹೆಚ್ಚಿನ ಮೊತ್ತದ ಚಿನ್ನವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದ ಪಕ್ಷದಲ್ಲಿ ಅದಕ್ಕೆ ಸಂಬಂಧಿಸಿದ ಮೂಲ ಹಾಗೂ ದಾಖಲೆ ಪತ್ರಗಳನ್ನು ಆ ಸಂದರ್ಭದಲ್ಲಿ ತೋರಿಸಬೇಕು. ಇಲ್ಲವಾದಲ್ಲಿ ಸರ್ಕಾರ ಅದನ್ನು ಮುಟ್ಟುಕೋಲು ಹಾಕಿಕೊಳ್ಳುತ್ತದೆ. ಸರ್ಕಾರದ ಈ ನಿಯಮದ ಬಗ್ಗೆ ನಿಮ್ಮ ಅನಿಸಿಕೆ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.