BPL ಕಾರ್ಡ್ ಇದ್ದವರಿಗೆ ಸಿಹಿ ಸುದ್ದಿ, ಇನ್ಮುಂದೆ ರೇಷನ್ ಜೊತೆ ಈ ಹೊಸ ವಸ್ತುಗಳು ಕೂಡ ಉಚಿತವಾಗಿ ಸಿಗಲಿದೆ.

 

WhatsApp Group Join Now
Telegram Group Join Now

ನಮ್ಮ ದೇಶ ಬಡಜನರು ಹೆಚ್ಚಾಗಿ ಇರುವ ದೇಶ ಇನ್ನೂ ಅಭಿವೃದ್ಧಿಶೀಲ ದೇಶವಾಗಿರುವ ನಮ್ಮ ದೇಶದಲ್ಲಿ ಸಾಕಷ್ಟು ಜನ ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ. ಒಂದು ಹೋತ್ತಿನ ಊಟಕ್ಕೂ ಕೂಡ ಪರದಾಡುವ ಪರಿಸ್ಥಿತಿ ಇನ್ನೂ ದೇಶದ ಹಲವು ಕಡೆ ಇದೆ. ಅವರ ಪಾಲಿಗೆ ಒಪ್ಪತ್ತಿನ ಹೊಟ್ಟೆ ತುಂಬಿಸುವ ಕೆಲಸವನ್ನು ದೇಶದಲ್ಲಿ ಯಾರು ಸಹ ಹಸಿವಿನಿಂದ ಬಳಲಬಾರದು ಎನ್ನುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಪಡಿತರ ಚೀಟಿ ವ್ಯವಸ್ಥೆ ಮೂಲಕ ಈ ರೀತಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಉಚಿತ ಪಡಿತರದ ವ್ಯವಸ್ಥೆ ಮಾಡಿಕೊಟ್ಟಿವೆ.

ಕೆಲವೊಮ್ಮೆ ಕೇಂದ್ರ ಸರ್ಕಾರವು ಪಡಿತರ ಚೀಟಿ ದಾರರಿಗೆ ಹೊಸ ಹೊಸ ಮಾರ್ಗಸೂಚಿ ತಂದು ಹೆಚ್ಚುವರಿ ಆದ ಪಡಿತರ ಅಥವಾ ಕೆಲವು ವಸ್ತುಗಳ ಸೇರ್ಪಡೆ ಮಾಡಿದೆ. ರಾಜ್ಯ ಸರ್ಕಾರಕ್ಕೂ ಕೂಡ ಪಡಿತರ ಚೀಟಿಯ ಜವಾಬ್ದಾರಿ ಇರುವುದರಿಂದ ಉಚಿತ ಪಡಿತರ ವ್ಯವಸ್ಥೆಯಲ್ಲಿ ಹಸಿವು ಮುಕ್ತ ಕರ್ನಾಟಕ ಮಾಡಬೇಕು ಎನ್ನುವ ಉದ್ದೇಶದಿಂದ ಸಾಧ್ಯವಾದಷ್ಟು ರಾಜ್ಯ ಸರ್ಕಾರವೂ ಕೂಡ ಬಡತನ ರೇಖೆಗಿಂತ ಹಾಗೆ ಇರುವವರಿಗೆ ಅಕ್ಕಿ, ರಾಗಿ, ಗೋಧಿ, ಸಕ್ಕರೆ, ಉಪ್ಪ, ಎಣ್ಣೆ ಮುಂತಾದ ಸಾಮಗ್ರಿಗಳನ್ನು ನೀಡಿ ಬಡಜನರಿಗೆ ಸಹಾಯ ಮಾಡುತ್ತಿದೆ.

ನಮ್ಮ ದೇಶದಲ್ಲಿಯೇ ಕೋಟ್ಯಾಂತರ ಪಡಿತರ ಚೀಟಿ ದಾರರು ಈ ರೀತಿ ಸರ್ಕಾರದಿಂದ ಕೊಡುವ ಪಡಿತರ ವಸ್ತುಗಳ ಮೇಲೆಯೇ ಅವಲಂಬಿತರಾಗಿದ್ದಾರೆ. ದಿನನಿತ್ಯದ ಆಹಾರ ತಯಾರಿಕೆಯಲ್ಲಿ ಈ ಪದಾರ್ಥಗಳನ್ನು ಬಳಸುತ್ತಿರುವ ಮಂದಿ ಪೌಷ್ಟಿಕಾಂಶದ ಕೊರತೆಯಿಂದ ನರಳುತ್ತಿರುವ ಅಂಶ ಬೆಳಕಿಗೆ ಬಂದಿದೆ. ಇದನ್ನು ಮನಗಂಡ ಸರ್ಕಾರ ಈ ಬಾರಿ ಇದರಲ್ಲಿ ಮತ್ತೊಂದು ಹೊಸ ರೀತಿಯ ಬದಲಾವಣೆ ತಂದಿದೆ.

ಪೌಷ್ಟಿಕಾಂಶದ ಕೊರತೆಯಿಂದ ಮಹಿಳಾ ಹಾಗೂ ಮಕ್ಕಳ ಆರೋಗ್ಯದಲ್ಲಿ ಬೀರುವ ಗಂಭೀರ ಪರಿಣಾಮದ ಬಗ್ಗೆ ಎಲ್ಲರಿಗೂ ಅರಿವಿದೆ. ಹಾಗಾಗಿ ನಾವು ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶ ಯಥೇಚ್ಛವಾಗಿರುವುದು ಮುಖ್ಯ. ಆದರೆ ಸರ್ಕಾರದ ಪಡಿತರವನ್ನೇ ಅವಲಂಬಿಸಿರುವ ಜನತೆಗೆ ಪೌಷ್ಟಿಕಾಂಶಯುಕ್ತ ಆಹಾರದ ವಿತರಣೆ ಆಗಲಿಲ್ಲ ಎಂದರೆ ಅವರು ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಾರೆ ಎಂದು ಈಗಾಗಲೇ ಇಂತಹದೊಂದು ಪರಿಣಾಮದ ಎಚ್ಚರಿಕೆ ಪಡೆದಿರುವ ಮಾನ್ಯ ಸರ್ಕಾರಗಳು ತಕ್ಷಣವೇ ಈ ಕಡೆ ಗಮನಹರಿಸುತ್ತಿವೆ.

ಆದ ಕಾರಣಕ್ಕಾಗಿ ಇನ್ನು ಮುಂದೆ ಪಡಿತರ ವ್ಯವಸ್ಥೆಯಲ್ಲಿ ಕೊಡುವ ಸಾಮಾನ್ಯ ಅಕ್ಕಿಯ ಬದಲಾಗಿ ಫರ್ಟಿಲೈಟ್ ಅಕ್ಕಿಯನ್ನು ಕೊಡುವ ನಿರ್ಧಾರಕ್ಕೆ ಬಂದಿವೆ. ಸಾಮಾನ್ಯ ಅಕ್ಕಿಯಲ್ಲಿ ಸಾರಾಂಶ ಕಡಿಮೆ ಇದ್ದು ಇದನ್ನು ತಿನ್ನುವುದರಿಂದ ವ್ಯಕ್ತಿಯೊಬ್ಬನಿಗೆ ಬೇಕಾದ ಸಾಮರ್ಥ್ಯ ಸಿಗುತ್ತಿಲ್ಲ ಆದ್ದರಿಂದ ಅವರಿಗೆ ಪೌಷ್ಟಿಕಾಂಶದ ಕೊರತೆ ಉಂಟಾಗುತ್ತಿದೆ ಇನ್ನು ಮುಂದೆ ಹಾಗಾಗಬಾರದು ಎನ್ನುವ ಕಾರಣದಿಂದ ಉತ್ತಮ ಗುಣಮಟ್ಟದ ಅಕ್ಕಿಯನ್ನು ನೀಡಲು ಸರ್ಕಾರಗಳು ನಿರ್ಧರಿಸಿದೆ.

ಇದು ಕೇಂದ್ರ ಸರ್ಕಾರದ ನಿರ್ಧಾರವಾಗಿದ್ದು ಈಗಾಗಲೇ ಉತ್ತರಖಂಡ ರಾಜ್ಯದಲ್ಲಿ ಹರಿದ್ವಾರ ನಗರದಲ್ಲಿ ಈ ಪ್ರಯೋಗ ನಡೆಸಲಾಗಿದೆ. ಉತ್ತರ ಭಾರತದ ಅತ್ಯಂತ ಹಲವು ಕಡೆ ಈ ವ್ಯವಸ್ಥೆ ಏಪ್ರಿಲ್ ಇಂದಲೇ ಜಾರಿಗೆ ತರಲಾಗುತ್ತದೆ. ಶೀಘ್ರದಲ್ಲಿಯೇ ದಕ್ಷಿಣದ ಕಡೆ ಕೂಡ ಇದು ಮುಂದುವರೆಯಲಿದ್ದು ಇನ್ನು ಮುಂದೆ ಬಿಪಿಎಲ್ ಕಾರ್ಡ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಬಡತನ ರೇಖೆಗಿಂತ ಕಡಿಮೆ ಇರುವ ಜನರಿಗೆ ಸರ್ಕಾರದಿಂದ ಈ ಫರ್ಟಿಲೈಟ್ ಅಕ್ಕಿ ವಿತರಣೆಯ ಸೌಲಭ್ಯ ಸಿಗಲಿದೆ. ಸರ್ಕಾರದ ಈ ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now