ಸದ್ಯಕ್ಕೀಗ ನಡೆಯುತ್ತಿರುವುದು ಡಿಜಿಟಲ್ ಯುಗ. ಡಿಜಿಟಲ್ ಯುಗದ ಈ ಕಾಲದಲ್ಲಿ ಎಲ್ಲ ವ್ಯವಹಾರಗಳು ಕೂಡ ಹೆಚ್ಚಾಗಿ ಆನ್ಲೈನ್ ಅಲ್ಲಿಗೆ ನಡೆಯುತ್ತಿರುತ್ತವೆ. ಯಾವುದೇ ಯೋಜನೆಗೆ ಅರ್ಜಿ ಹಾಕುವುದು ಅಥವಾ ಯಾವುದೇ ವಸ್ತುವನ್ನು ಖರೀದಿಸುವುದು ಸೇರಿದಂತೆ ಊಟ ಆರ್ಡರ್ ಮಾಡುವುದರಿಂದ ಹಿಡಿದು ಬ್ಯಾಂಕ್ ವಹಿವಾಟಿನ ತನಕ ಈಗ ಎಲ್ಲವೂ ಸಹ ಆನ್ಲೈನ್ ಅಲ್ಲಿಯೇ ನಡೆಯುತ್ತಿದೆ.
ಈ ರೀತಿ ಆನ್ಲೈನ್ ಅಲ್ಲಿ ನೆಟ್ ಬ್ಯಾಂಕಿಂಗ್ ಮೂಲಕ ಅಥವಾ ಯುಪಿಐ ಅಪ್ಲಿಕೇಶನ್ ಗಳ ಮೂಲಕ ಖಾತೆಯಿಂದ ಖಾತೆಗೆ ಹಣ ವರ್ಗಾವಣೆ ಮಾಡುವಾಗ ಸಾಕಷ್ಟು ಅಚಾತುರ್ಯಗಳು ಕೂಡ ನಡೆಯುತ್ತವೆ. ಕೆಲವೊಮ್ಮೆ ನಾವೇ ನಮ್ಮ ಕೈಯಾರೆ ಕೆಲವು ತಪ್ಪುಗಳನ್ನು ಮಾಡಿ ತಪ್ಪಾದ ಅಕೌಂಟಿಗೆ ಹಣ ವರ್ಗಾವಣೆ ಮಾಡಿಬಿಟ್ಟಿರುತ್ತೇವೆ. ಆಗ ಅದು ವಾಪಸ್ ಬರುತ್ತದೆ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಲು ಅಂಕಣವನ್ನು ಪೂರ್ತಿಯಾಗಿ ಓದಿ.
ಕೆಲವೊಮ್ಮೆ ಈ ರೀತಿ ಆಗುವುದು ಸಹಜ. ಒಂದು ವೇಳೆ ನಾವು ನಡೆಸಿರುವ ವಹಿವಾಟು ಸರಿಯಾಗಿದ್ದು ಟೆಕ್ನಿಕಲ್ ಇಶ್ಯೂಸ್ ಆಗಿದ್ದಾಗ ಕಂಪನಿ ಕೊಡುವ ಕಾಲಾವಕಾಶದ ಒಳಗೆ ಹಣ ಮರಳಿ ನಮ್ಮ ಖಾತೆ ಸೇರುತ್ತದೆ. ಆದರೆ ನಾವೇ ತಪ್ಪಾಗಿ ಹಣ ವರ್ಗಾವಣೆ ಮಾಡಿದರೆ ನಮ್ಮ ಖಾತೆಯಿಂದ ವರ್ಗಾವಣೆ ಆದ ಹಣ ನಾವು ಕಳಿಸಬೇಕಾದ ಅಕೌಂಟ್ ನಂಬರ್ ಬದಲಾಗಿ ಬೇರೆ ಅಕೌಂಟ್ ಸೇರಬಹುದು ಆಗ ಅದನ್ನು ಮರಳಿ ಪಡೆಯಲು ಬಹಳ ಕಷ್ಟವಾಗಬಹುದು.
ಪರಿಚಿತರಾಗಿದ್ದರೆ ಸಹಜವಾಗಿ ಕೇಳಿ ಪಡೆಯಬಹುದು ಆದರೆ ಅಕೌಂಟ್ ನಂಬರ್ ನಮೂದಿಸಿ ಆನ್ಲೈನ್ ಮೂಲಕ ಬೇರೆ ಅಕೌಂಟಿಗೆ ವರ್ಗಾವಣೆ ಮಾಡುವಾಗ ಒಂದು ಸಂಖ್ಯೆ ಹೆಚ್ಚು ಕಮ್ಮಿ ಆದರೂ ಅದು ಬೇರೆಯವರ ಖಾತೆ ಸೇರುತ್ತದೆ ಆಗ ಅದನ್ನು ಮರಳಿ ಪಡೆಯುವುದು ಸ್ವಲ್ಪ ಸಮಸ್ಯೆಯೇ.
ನೀವು ಈ ರೀತಿಯ ಕ್ರಮಗಳನ್ನು ಅನುಸರಿಸಿ ಆಗ ನಿಮ್ಮ ಖಾತೆಯಿಂದ ತಪ್ಪಾದ ಖಾತೆಗೆ ವರ್ಗಾವಣೆ ಆದ ಹಣ ಮರಳಿ ನಿಮ್ಮ ಖಾತೆ ಸೇರುತ್ತದೆ. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ಶೇರ್ ಮಾಡಿ ವಿಷಯ ಎಲ್ಲರಿಗೂ ತಿಳಿಯುವಂತೆ ಮಾಡಿ.
● ಒಂದು ವೇಳೆ ನೀವು ಹಣ ವರ್ಗಾವಣೆ ಮಾಡಿದ ಬ್ಯಾಂಕ್ ಖಾತೆ ಸಂಖ್ಯೆ ಅಮಾನ್ಯವಾಗಿದ್ದರೆ ಅಂದರೆ ಅದು ತಪ್ಪಾದ ವಿಳಾಸ ಆಗಿ ಆ ರೀತಿಯ ಅಕೌಂಟ್ ನಂಬರ್ ಯಾರು ಹೊಂದಿಲ್ಲ ಎಂದರೆ ಆ ಪ್ರಕ್ರಿಯೆ ಜರುಗುವುದಿಲ್ಲ. ಆಗ ಈಝಿಯಾಗಿ ನಿಮ್ಮ ಅಕೌಂಟಿಗೆ ಹಣ ಜಮೆ ಆಗುತ್ತದೆ.
● ಬೇರೆಯವರ ಅಕೌಂಟಿದ್ದು ಅವರಿಗೆ ಹಣ ಹೋಗಿಬಿಟ್ಟಿದ್ದರೆ ತಕ್ಷಣವೇ ಕಸ್ಟಮರ್ ಕೇರ್ ನಂಬರ್ ಗೆ ಸಂಪರ್ಕಿಸಿ ನಡೆದ ವಿವರವನ್ನೆಲ್ಲಾ ಹೇಳಿ.
● ವರ್ಗಾವಣೆಯಾದ ದಿನಾಂಕ, ಸಮಯ, ವರ್ಗಾವಣೆ ಮಾಡಿದ ಖಾತೆ ಸಂಖ್ಯೆ, ನಿಮ್ಮ ಖಾತೆ ಸಂಖ್ಯೆ ಈ ಎಲ್ಲ ವಿವರಗಳನ್ನು ಮೂಲಕ ಇ-ಮೇಲ್ ಮೂಲಕ ನೀಡಿ ನಿಮ್ಮ ಬ್ಯಾಂಕಿಗೆ ತಪ್ಪದೇ ವರದಿ ನೀಡಿ.
● ಬೇರೆಯವರ ಖಾತೆಗೆ ತಪ್ಪಾಗಿ ವರ್ಗಾವಣೆ ಆಗಿರುವುದರಿಂದ ಆ ಖಾತೆಯ ಬ್ರಾಂಚ್ ಗೂ ಕೂಡ ವರದಿ ನೀಡಿ ಎಲ್ಲದರ ವಿವರ ಕೊಡಿ.
● ಇದೆಲ್ಲಾ ಆದಮೇಲೆ ಬ್ಯಾಂಕ್ ಸಿಬ್ಬಂದಿ ಹೇಳುವ ಇನ್ನಷ್ಟು ಕ್ರಮಗಳನ್ನು ಅನುಸರಿಸಿ ಆ ಪ್ರಕಾರ ನಡೆದರೆ ನಿಮ್ಮ ಖಾತೆಯಿಂದ ತಪ್ಪಾಗಿ ಬೇರೆ ಖಾತೆಗೆ ವರ್ಗಾವಣೆ ಆದ ಹಣ ಖಂಡಿತವಾಗಿಯೂ ಮರಳಿ ನಿಮ್ಮ ಖಾತೆಗೆ ಬರುತ್ತದೆ.