ಸರ್ಕಾರದಿಂದ ಬಿಗ್ ನ್ಯೂಸ್ ರೈತರಿಗೆ ಬೆಳೆ ವಿಮೆ ಜೊತೆ 14ನೇ ಕಂತಿನ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಹಣ ಕೂಡ ಜಮೆ.

 

WhatsApp Group Join Now
Telegram Group Join Now

ದೇಶದ ರೈತರಿಗೆ ಸರ್ಕಾರದ ಕಡೆಯಿಂದ ಕಿಸಾನ್ ಸಮ್ಮನ್ ಯೋಜನೆ ಕುರಿತಂತೆ ಮಹತ್ವದ ಸುದ್ದಿ ಸಿಕ್ಕಿದೆ. ಅದರಲ್ಲೂ ಕರ್ನಾಟಕದ ಜನತೆಗೆ ಈ ಬಾರಿ ಡಬಲ್ ಧಮಾಕ ಯಾಕೆಂದರೆ 2022 – 23ನೇ ಸಾಲಿನಲ್ಲಿ ಅನೇಕ ರೈತರು ಮುಂಗಾರು ಹಂಗಾಮಿನ ಬೆಳೆ ವಿಮೆ ಮಾಡಿಸಿದ್ದರು. ಅನೇಕ ಕಡೆ ಪ್ರಕೃತಿ ವಿಕೋಪದ ಕಾರಣದಿಂದಾಗಿ ಬೆಳೆ ಹಾನಿ ಆಗಿದ್ದ ಪರಿಣಾಮ ಪಿಎಂ ಫಸಲ್ ಭೀಮಾ ಯೋಜನೆಯ ಬೆಳೆ ವಿಮೆ ಖರೀದಿಸಿದ್ದ ರೈತರು ಅರ್ಜಿ ಸಲ್ಲಿಸಿ ಸಹಾಯ ಎದುರು ನೋಡುತ್ತಿದ್ದರು. ಅವರ ಪಾಲಿಗೀಗ ಗುಡ್ ನ್ಯೂಸ್ ಸಿಕ್ಕಿದೆ. ಅದೇನೆಂದರೆ ಕರ್ನಾಟಕ ರಾಜ್ಯದ ಅನೇಕ ಜಿಲ್ಲೆಯ ರೈತರುಗಳಿಗೆ ಫಸಲ್ ಭೀಮಾ ಯೋಜನೆ ಬೆಳೆ ವಿಮೆ ಹಣ ಜಮೆ ಆಗಿದೆ.

ಮೊದಲನೇ ಹಂತದ ಮುಂಗಾರು ಹಂಗಾಮಿನ 2022 – 23ನೇ ಸಾಲಿನ ಬೆಳೆವಿಮೆ ಯಾವ್ಯಾವ ಜಿಲ್ಲೆಯ ರೈತರಿಗೆ ಎಷ್ಟು ಬಿಡುಗಡೆ ಆಗಿದೆ ಎಂದು ನೋಡುವುದಾದರೆ ಗದಗ ಜಿಲ್ಲೆಯಲ್ಲಿ 36,793 ರೈತರಿಗೆ 93.22 ಕೋಟಿ, ಹಾಸನ ಜಿಲ್ಲೆಯಲ್ಲಿ 27,177 ರೈತರಿಗೆ 22.37 ಕೋಟಿ, ಹಾವೇರಿ ಜಿಲ್ಲೆಯ 50,197 ರೈತರಿಗೆ 57.39 ಕೋಟಿ, ಕೊಪ್ಪಳ ಜಿಲ್ಲೆಯ 33,293 ರೈತರಿಗೆ 29.26 ಕೋಟಿ, ರಾಯಚೂರು ಜಿಲ್ಲೆಯ 25,908 ರೈತರಿಗೆ 34.67 ಕೋಟಿ, ಯಾದಗಿರಿ ಜಿಲ್ಲೆಯ 1,811 ರೈತರಿಗೆ 2.44 ಕೋಟಿ, ಬಳ್ಳಾರಿ ಜಿಲ್ಲೆಯ 8,334 ರೈತರಿಗೆ 8.43 ಕೋಟಿ, ಕೋಲಾರ ಜಿಲ್ಲೆಯ 1,054 ರೈತರಿಗೆ 2.03 ಕೋಟಿ ಆಯಾ ಬೆಳಗಳಿಗೆ ಅನುಸಾರವಾಗಿ ಬೆಳೆ ವಿಮೆ ಹಣ ಬಿಡುಗಡೆ ಆಗಿದೆ.

ಇನ್ನುಳಿದ ಜಿಲ್ಲೆಯ ರೈತರಿಗೂ ಕೂಡ ಶೀಘ್ರದಲ್ಲಿಯೇ ಬೆಳೆ ವಿಮೆ ಜಮೆ ಆಗುವುದು ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ತಿಳಿಸಿದ್ದಾರೆ.ಬೆಳೆ ಹಾನಿಯಿಂದ ಕಂಗೆಟ್ಟು ಹೋಗಿದ್ದ ರೈತರು ಸರ್ಕಾರದ ಈ ಸಹಾಯ ಹಸ್ತದಿಂದ ಸುಧಾರಿಸಿಕೊಳ್ಳುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದ ರೈತರ ಪರವಾದ ಎಲ್ಲಾ ಯೋಜನೆಗಳು ಕೂಡ ರೈತರ ಪಾಲಿಗೆ ವರದಾನವಾಗಿದ್ದು, ಈಗ ದೇಶದಾದ್ಯಂತ ಪಿಎಂ ಫಸಲ್ ಭೀಮಾ ಯೋಜನೆಯು ಹೆಸರುವಾಸಿಕೆಯಾಗಿದೆ.

ಇದರ ಜೊತೆಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯು ಈಗಾಗಲೇ ಕೋಟ್ಯಾಂತರ ಆಶಾಕಿರಣ ವಾಗಿದ್ದು ಇದುವರೆಗೆ 13 ಕಂತಿನ ಹಣವನ್ನು ರೈತರು ಪಡೆದಿದ್ದು 14ನೇ ಕಂತಿನ ಹಣಕ್ಕೆ ಎದುರು ನೋಡುತ್ತಿದ್ದಾರೆ. ಅದರಂತೆ ಸರ್ಕಾರವು ಕೂಡ 14ನೇ ಕಂತಿನ ಹಣ ಬಿಡುಗಡೆಗೆ ಯೋಜನೆ ಸಿದ್ಧಪಡಿಸಿದೆ. ಆದರೆ ಈ ಬಾರಿ ಇದರಲ್ಲಿ ಭಾರಿ ಮಾರ್ಪಾಡು ಆಗಲಿದೆ. ಏಕೆಂದರೆ 12ನೇ ಹಣವನ್ನು ಪಡೆದಿದ್ದ ಅನೇಕ ಮಂದಿ 13ನೇ ಕಂತಿನ ಹಣದಿಂದ ವಂಚಿತರಾಗಿದ್ದಾರೆ. ಇದಕ್ಕೆಲ್ಲಾ ಕಾರಣ ರೈತರಿಗೆ ಕೊಟ್ಟಿರುವ ಮಾಹಿತಿಯಲ್ಲಿ ಹೊಂದಾಣಿಕೆ ಆಗದಿರುವುದು.

ಪಿಎಂ ಕಿಸನ್ ಪೋರ್ಟಲ್ ಅಲ್ಲಿ ನೊಂದಾಯಿಸಿಕೊಂಡಿದ್ದ 13ನೇ ಹಣ ಪಡೆದ 12 ಕೋಟಿ ರೈತರಲ್ಲಿ 14ನೇ ಕಂತಿನ ಹಣ ಪಡೆಯಲು 8.69 ಕೋಟಿ ರೈತರಷ್ಟೇ ಅರ್ಹರು ಎನ್ನುವ ಮಾಹಿತಿಯನ್ನು ಕೃಷಿ ಇಲಾಖೆ, ಹೊರ ಹಾಕಿದೆ. ರೈತರ ಪಟ್ಟಿಯಿಂದ ನಕಲಿ ಹಾಗೂ ಅನರ್ಹ ರೈತರನ್ನು ತೆಗೆದುಹಾಕಿ ಪರೀಷ್ಕೃತ ಪಟ್ಟಿಯಲ್ಲಿರುವ ರೈತರಿಗಷ್ಟೇ 14ನೇ ಕಂತಿನ ಹಣ ಶೀಘ್ರದಲ್ಲಿಯೇ ಜಮಾ ಆಗಲಿದೆಯಂತೆ. ಈ ಹಿಂದಿನ ಕಂತಿನ ಹಣ ಪಡೆದ 3.39 ಕೋಟಿ ರೈತರು 14ನೇ ದಿನ ಫಲಾನುಭವಿಗಳ ಲಿಸ್ಟ್ ಇಂದ ಹೊರಬೀಳಲಿದ್ದಾರೆ. ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚಲು ಕೃಷಿ ಪತ್ರಗಳ ಭೌತಿಕ ಪರಿಶೀಲನೆ, ಇ-ಕೆವೈಸಿ ಇಂತಹ ಕಟ್ಟುನಿಟ್ಟುಗಳ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಈ ಬಗ್ಗೆ ಅಭಿಯಾನ ಜಾಗೃತವಾದಂತೆ ಪ್ರತಿಕಂತಿಗೂ ಫಲಾನುಭವಿಗಳ ಸಂಖ್ಯೆ ಕಡಿಮೆ ಆಗುತ್ತಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now