ಮೊಬೈಲ್ ಶಾಪ್ ಬ್ಯುಸಿನೆಸ್ ಮಾಡ್ಬೇಕು ಅನ್ಕೊಂಡಿದ್ದೀರಾ.? ಒಂದು ಫೋನ್ ಮಾರಾಟವಾದ್ರೆ ಎಷ್ಟು ಲಾಭ ಸಿಗುತ್ತೆ ಗೊತ್ತಾ.?

 

WhatsApp Group Join Now
Telegram Group Join Now

ಕಾಲ ಬದಲಾಗದಂತೆಲ್ಲ ಮನುಷ್ಯ ತಂತ್ರಜ್ಞಾನವನ್ನು ಬದಲಾಯಿಸಿದ್ದಾನೆ. ಇಂದು ಜಗತ್ತಿನ ಅತಿ ಹೆಚ್ಚು ಬೇಡಿಕೆ ವಸ್ತು ಮೊಬೈಲ್ ಎಂದರೆ ತಪ್ಪಾಗುವುದಿಲ್ಲ. ದಿನ ಬೆಳಗ್ಗೆ ನಾವು ಏಳುವಾಗಲಿಂದ ಹಿಡಿದು ನಮ್ಮ ಸಂಪೂರ್ಣ ದಿನ ನಿತ್ಯದ ಚಟುವಟಿಕೆಗಳೆಲ್ಲವೂ ಕೂಡ ಇದರ ಮೇಲೆ ಡಿಪೆಂಡ್ ಆಗಿಬಿಟ್ಟಿದೆ. ಶಾಪಿಂಗ್ ಮಾಡುವುದು, ಆಹಾರ ಪದಾರ್ಥಗಳನ್ನು ಆರ್ಡರ್ ಮಾಡುವುದು, ವಾಹನಗಳನ್ನು ಬುಕ್ ಮಾಡುವುದು ಜೊತೆಗೆ ಕಂಪನಿ ಕೆಲಸ ಮಾಡುವುದಕ್ಕೂ ಕೂಡ ಮೊಬೈಲ್ ಬೇಕು.

ಮೊಬೈಲ್ ಎನ್ನುವ ಒಂದು ಅಸ್ತ್ರ ನೂರಾರು ವಿಷಯಗಳ ಜಾಗವನ್ನು ಆಕ್ರಮಿಸಿಕೊಂಡು ಬಿಟ್ಟಿದೆ. ಇಂದು ನಮಗೆ ಕ್ಯಾಲೆಂಡರ್, ದಿಕ್ಸೂಚಿ, ಕ್ಯಾಮೆರಾ, ರೇಡಿಯೋ, ಮ್ಯೂಸಿಕ್ ಪ್ಲೇಯರ್, ಸ್ಟಾಪ್ ವಾಚ್, ಡೈರಿ, ಟೆಲಿಫೋನ್, ಅಂಚೆ ಪತ್ರ, ಕಂಪ್ಯೂಟರ್ ಇದ್ಯಾವುದೂ ಕೂಡ ಬೇಡ ಮೊಬೈಲ್ ಒಂದೇ ಇದೆಲ್ಲದರ ಜಾಗ ತುಂಬಿದಂತೆ. ಹಾಗಾಗಿ ಮೊಬೈಲ್ ಆಧಾರಿತ ಬಿಸಿನೆಸ್ ಮಾಡಿದರೆ ಅವರು ಬಿಲೇನಿಯರ್ಗಳು ಆಗುವುದರಲ್ಲಿ ಅನುಮಾನವಿಲ್ಲ.

ಇತ್ತೀಚೆಗೆ ಜನ ಸ್ವಂತ ದುಡಿಮೆ ಮೇಲೆ ಹೆಚ್ಚು ಡಿಪೆಂಡ್ ಆಗುತ್ತಿದ್ದಾರೆ. ಕಚೇರಿ ಕೆಲಸಕ್ಕಿಂತ ಬಿಸಿನೆಸ್ ಮಾಡುವ ಕಡೆ ಆಸಕ್ತಿ ತೋರುತ್ತಿದ್ದಾರೆ. ಮಾಸಾಂತ್ಯದಲ್ಲಿ ಬರುವ ವೇತನ ಕಾಯುವುದಕಿಂತ ಪ್ರತಿನಿತ್ಯ ಕೂಡ ದುಡ್ಡು ನೋಡಬೇಕು ಎಂದು ಬಯಸುತ್ತಿದ್ದಾರೆ. ಅವರೆಲ್ಲ ಆರಿಸಿಕೊಳ್ಳುವುದು ಬಿಜಿನೆಸ್. ಬಿಸಿನೆಸ್ ಮಾಡುವವರಿಗೆ ಮೇಲಿನ ಎಲ್ಲಾ ಕಾರಣಗಳಿಂದ ಮೊಬೈಲ್ ಬ್ಯುಸಿನೆಸ್ ಮಾಡುವುದೇ ಉತ್ತಮ ಆದಾಯ ತರುವ ಬಿಸಿನೆಸ್ ಎಂದು ಅನಿಸಿರಬಹುದು. ಆದರೆ, ಅದಕ್ಕೂ ಮುನ್ನ ಅದರಿಂದ ಬರುವ ಆದಾಯ ಎಷ್ಟರಬಹುದು ಎನ್ನುವುದರ ಖಚಿತ ಮಾಹಿತಿಯನ್ನು ತಿಳಿದುಕೊಂಡು ಆರಂಭಿಸುವುದು ಉತ್ತಮ.

ಆದರೆ, ಈ ಬ್ಯುಸಿನೆಸ್ ಎಲ್ಲರ ಕೈ ಹಿಡಿಯುವುದಿಲ್ಲ. ಬಹುತೇಕರು ಅಂಗಡಿಗಳನ್ನು ಇಟ್ಟುಕೊಂಡು ಏಳಿಗೆಯನ್ನು ಕಾಣುತ್ತಾರೆ. ಅದರಲ್ಲಿಯೂ ಮೊಬೈಲ್ ಶಾಪ್ ಅವರ ವಿಚಾರದಲ್ಲಿ ಕೇಳುವುದೇ ಬೇಡ. ಹೌದು, ಕಣ್ಣು ಬಿಟ್ಟರೆ ಎಲ್ಲೆಲ್ಲಿಯೂ ಮೊಬೈಲ್ ಶಾಪ್ ಗಳು ಕಾಣಸಿಗುತ್ತದೆ. ಒಂದು ಮೊಬೈಲ್ ಫೋನ್ ಗಳನ್ನು ಮಾರಾಟ ಮಾಡಿ ಲಾಭ ಗಳಿಸುತ್ತಾರೆ ಎಂದು ಅನೇಕರು ಭಾವಿಸಿರುತ್ತಾರೆ.

ಯಾಕೆಂದರೆ ಮೊಬೈಲ್ ಅಂಗಡಿ ಆದಾಯ ಪ್ರತಿ ಅಂಗಡಿಗೆ ಭಿನ್ನ ಆಗಿರುತ್ತದೆ. ಇದರ ಬಿಸಿನೆಸ್ ಒಂದೇ ರೀತಿ ಇರುವುದಿಲ್ಲ. ಕೆಲವರು ಸ್ವಂತ ಬಂಡವಾಳ ಹೂಡಿ ಚಿಕ್ಕದಾದ ಮೊಬೈಲ್ ಅಂಗಡಿ ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವರು ದೊಡ್ಡ ದೊಡ್ಡ ಮೊಬೈಲ್ ಕಂಪನಿಗಳ ಜೊತೆ ಸೇರಿ ಮೊಬೈಲ್ ಶೋರೂಮ್ ಓಪನ್ ಮಾಡಿರುತ್ತಾರೆ.

ಹಾಗಾಗಿ, ಮೊಬೈಲ್ ಅಂಗಡಿಯಿಂದ ಎಷ್ಟು ಬಿಸಿನೆಸ್ ಮಾಡಬಹುದು ಎನ್ನುವುದು ನಾವು ಯಾವ ರೀತಿಯ ಮೊಬೈಲ್ ಅಂಗಡಿ ತೆರೆಯುತ್ತಿದ್ದೇವೆ ಮತ್ತು ಅಲ್ಲಿ ನಾವು ಯಾವ ಮಾಡೆಲ್ ಗಳ ಮೊಬೈಲ್ ಅನ್ನು ಸೇಲ್ ಮಾಡುತ್ತೇವೆ ಎನ್ನುವುದರ ಮೇಲೆ ಆಧಾರವಾಗಿರುತ್ತದೆ. ಹಾಗಾದ್ರೆ, ಒಂದು ಮೊಬೈಲ್ ಮಾರಾಟವಾದಾಗ ಗಳಿಸುವ ಲಾಭದ ಬಗ್ಗೆ ಮಾಹಿತಿ ಇಲ್ಲಿದೆ.

ಮೊಬೈಲ್ ಅಂಗಡಿಯವರ ಆದಾಯ ಎಷ್ಟಿರಬಹುದು?
ಯಾವುದೇ ಮೊಬೈಲ್ ಅಂಗಡಿಯವರ ಗಳಿಕೆಯು ಮೊಬೈಲ್ ಕಮಿಷನ್, ಆ ಮೊಬೈಲ್‌ನ ಕಂಪನಿ, ಅದರ ಮಾದರಿ ಮತ್ತು ಅಂಗಡಿಯ ಪ್ರಕಾರದ ಮೇಲೆ ಅವಲಂಬಿತರಾಗಿರುತ್ತದೆ. ಅಂಗಡಿಯವನು ಕಂಪನಿಯ ಏಜೆನ್ಸಿಯನ್ನ ತೆಗೆದುಕೊಂಡು ಬ್ಯುಸಿನೆಸ್ ಮಾಡುತ್ತಿದ್ದರೆ, ಲಾಭವು ಬೇರೆಯಾಗಿರುತ್ತದೆ. ಸಣ್ಣ ಮೊಬೈಲ್ ಶಾಪ್ ಹೊಂದಿದವರ ಆದಾಯವು ಭಿನ್ನವಾಗಿರುತ್ತದೆ. ಹೀಗಾಗಿ, ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ ಆದಾಯದಲ್ಲಿ ವ್ಯತ್ಯಾಸವನ್ನು ಕಾಣಬಹುದು.

ಹೀಗಾಗಿ ಮೊಬೈಲ್ ಅಂಗಡಿ ಇಟ್ಟುಕೊಂಡವರು ಇಷ್ಟೇ ಲಾಭ ಗಳಿಸುತ್ತಾರೆ ಎಂದು ಹೇಳಲು ಅಸಾಧ್ಯ. ಹೌದು, ಒಂದು ಮೊಬೈಲ್ ಅನ್ನು 10,000 ರೂ.ಗೆ ಮಾರಾಟ ಮಾಡಿದಾಗ, ಅವರು 400-500 ರೂ.ಗಳನ್ನ ಉಳಿಸುತ್ತಾರೆ. ಮೊಬೈಲ್ ಬೆಲೆ ದುಬಾರಿಯಾದಾಗೆ ಉಳಿಸುವ ಹಣವು ಹೆಚ್ಚಾಗುತ್ತದೆ. ಹೀಗಾಗಿ, ಮೊಬೈಲ್ ಶಾಪ್ ಇಟ್ಟುಕೊಂಡರೆ ಲಾಭವು ಆಗಬಹುದು, ನಷ್ಟವು ಆಗಬಹುದು. ಇದರ ಬಗ್ಗೆ ಚಿಂತಿಸದೇ ಧೈರ್ಯ ಮಾಡುವವರು ಈ ವ್ಯಾಪಾರ ಮಾಡಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now