ಆಧಾರ್ ಕಾರ್ಡ್ ಹೊಂದಿರುವವರಿಗೆ ಇಲ್ಲಿದೆ ಪ್ರಮುಖ ಮಾಹಿತಿ. ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರವಯ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಅದರ ಪ್ರಕಾರ, ಈ ಒಂದು ಕೆಲ ಮಾಡದಿದ್ದರೆ ನಿಮ್ಮ ಆಧಾರ್ ಕಾರ್ಡ್ ಅನ್ನು ಬಂದ್ ಮಾಡಲಾಗುವುದು. ಇದನ್ನು ತಪ್ಪಿಸಲು ಸರ್ಕಾರ ಆಧಾರ್ ಕಾರ್ಡ್ ಹೊಂದಿರುವವರಿಗೆ ತಮ್ಮ ಆಧಾರ್ ಕಾರ್ಡ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ನವೀಕರಿಸುವ ಅವಕಾಶ ಕಲ್ಪಿಸಿಕೊಟ್ಟಿದೆ.
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಜೂನ್ 14 ರವರೆಗೆ ಆಧಾರ್‌ಗಾಗಿ ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಅಪ್‌ಡೇಟ್ ಮಾಡುವ ಸೌಲಭ್ಯವನ್ನು ಉಚಿತವಾಗಿ ಮಾಡಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ಬುಧವಾರ ತಿಳಿಸಿದೆ. ಮಾರ್ಚ್ 15 ರಿಂದ ಜೂನ್ 14 ರವರೆಗೆ ಈ ಉಚಿತ ಸೌಲಭ್ಯಕ್ಕೆ ಅವಕಾಶ ನೀಡಲಾಗಿದೆ. ಈ ಹಿಂದೆ, ಆಧಾರ್ ಪೋರ್ಟಲ್‌ನಲ್ಲಿ ತಮ್ಮ ದಾಖಲೆಗಳನ್ನು ನವೀಕರಿಸಲು ನಿವಾಸಿಗಳು 50 ರೂಪಾಯಿಗಳನ್ನು ಪಾವತಿಸಬೇಕಾಗಿತ್ತು.
ನೀವು ಈ ರೀತಿ ಮಾಡದಿದ್ದರೆ ನಿಮ್ಮ ಆಧಾರ್ ಕಾರ್ಡ್ ಅನ್ನು ಜೂನ್ 14 ನಂತರ ಬಂದ್ ಮಾಡಲಾಗುತ್ತದೆ ಎಂದು ನಿರ್ಧಿರಿಸಿದೆ ಮತ್ತು ನೀವು ಅನೇಕ ಸರ್ಕಾರಿ ಸೇವೆಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಈ ನಿಯಮ ಜಾರಿಗೆ ತರುವ ಉದ್ದೇಶವೇನು? ಆಧಾರ್ ಕಾರ್ಡ್ ಅನ್ನು ಉಳಿಸಿಕೊಳ್ಳವುದು ಹೇಗೆ? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ ತಿಳಿದುಕೊಳ್ಳಿ.
ನೀವು ಆಧಾರ್ ಕಾರ್ಡ್ ಹೊಂದಿದ್ದರೆ ಮತ್ತು ನೀವು ಅದನ್ನು ಕಳೆದ 10 ವರ್ಷಗಳಿಂದ ಅಂದರೆ, 10 ವರ್ಷಗಳ ಹಿಂದೆ ನವೀಕರಿಸದಿದ್ದರೆ ಮತ್ತು ನೀವು ನಡುವೆ ಏನನ್ನೂ ನವೀಕರಿಸದಿದ್ದರೆ ಅದು ನಿಮಗೆ ಚಿಂತೆಯ ವಿಷಯವಾಗಿದೆ. ಏಕೆಂದರೆ, UIDAI ಯಾರ ಆಧಾರ್ ಕಾರ್ಡ್ ಮುಗಿದಿದೆ ಎಂದು ತಿಳಿಸುವ ಅಧಿಸೂಚನೆಯನ್ನು ಹೊರಡಿಸಿದೆ. 10 ವರ್ಷಳ ಹಿಂದೆ ಮಾಡಿಸಿದ್ದು ಮತ್ತು ಒಮ್ಮೆಯೂ ನವೀಕರಿಸಲಾಗಿಲ್ಲವೆಂದರೆ ಎಲ್ಲಾ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸುವುದು ಅವಶ್ಯಕವಾಗಿದೆ.
ಜೂನ್ 14 ರವರೆಗೆ ಉಚಿತವಾಗಿ ದಾಖಲೆಗಳನ್ನು ಅಪ್‌ಡೇಟ್ ಮಾಡಬಹುದು
ಹೌದು, ಜೂನ್ 14 ರವರೆಗೆ ಆನ್‌ಲೈನ್‌ನಲ್ಲಿ ಆಧಾರ್ ಡಾಕ್ಯುಮೆಂಟ್ ಅಪ್‌ಡೇಟ್ ಸೌಲಭ್ಯವನ್ನು ಉಚಿತವಾಗಿ ಮಾಡಬಹುದು. ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಈ ಬದಲಾವಣೆಯನ್ನು ಮಾಡಲಾಗಿದೆ. myAadhaar ಪೋರ್ಟಲ್‌ನಲ್ಲಿ ಉಚಿತ ಡಾಕ್ಯುಮೆಂಟ್ ಅಪ್‌ಡೇಟ್ ಸೌಲಭ್ಯದ ಲಾಭವನ್ನು ಪಡೆಯಲು UIDAI ಭಾರತೀಯರನ್ನು ಒತ್ತಾಯಿಸುತ್ತಿದೆ.
ಜೂನ್ 14, 2023 ರೊಳಗೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸದಿದ್ದರೆ, ನೀವು ಅದರಿಂದ ವಂಚಿತರಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ನೀವು ಅನೇಕ ಸರ್ಕಾರಿ ಸೇವೆಗಳ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನೀವು ಜೂನ್ 14 ರೊಳಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಬಹುದು. ಈ ಸೇವೆಯು ಮಾರ್ಚ್ 15 ರಿಂದ ಪ್ರಾರಂಭವಾಗಿದೆ.
ಯುಐಡಿಎಐ ನೀಡಿದ ಕಾಲಮಿತಿಯೊಳಗೆ ನಿಮ್ಮ ಹಳೆಯ ಆಧಾರ್ ಕಾರ್ಡ್ ಅನ್ನು ನೀವು ನವೀಕರಿಸದಿದ್ದರೆ, ನೀವು ಅನೇಕ ಸರ್ಕಾರಿ ಯೋಜನೆಗಳು, ಬ್ಯಾಂಕಿಂಗ್ ಸೇವೆಗಳು, ಹಣಕಾಸು ಸೇವೆಗಳು ಇತ್ಯಾದಿಗಳಿಂದ ವಂಚಿತರಾಗಬಹುದು.
ನಿಮ್ಮ ಆಧಾರ್ ಅನ್ನು ಏಕೆ ನವೀಕರಿಸಬೇಕು?
ಯುಐಡಿಎಐ (UIDAI) ಭಾರತೀಯರು ತಮ್ಮ ವಿವರಗಳನ್ನು ಮರು ಪರಿಶೀಲಿಸಲು ಐಡಿ ಪುರಾವೆ ಮತ್ತು ವಿಳಾಸ ಪುರಾವೆ (POI / POA) ದಾಖಲೆಗಳನ್ನು ಅಪ್‌ಲೋಡ್ ಮಾಡಲು ಕೇಳುತ್ತಿದೆ. ವಿಶೇಷವಾಗಿ ನಿಮ್ಮ ಆಧಾರ್ ಅನ್ನು 10 ವರ್ಷಗಳ ಹಿಂದೆ ನೀಡಿದ್ದರೆ ಮತ್ತು ಎಂದಿಗೂ ನವೀಕರಿಸದಿದ್ದರೆ, ಇದು ಜೀವನವನ್ನು ಸುಲಭಗೊಳಿಸಲು, ಉತ್ತಮ ಸೇವೆ ನೀಡಲು ಸಹಾಯ ಮಾಡುತ್ತದೆ ಎಂದು ಸರ್ಕಾರ ಹೇಳುತ್ತದೆ.