ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಎಲ್ಲಾ ವರ್ಗದ ಜನತೆಗಾಗಿ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಕೇಂದ್ರ ಸರ್ಕಾರದ ವತಿಯಿಂದ ದೇಶದ ಎಲ್ಲಾ ಜನತೆಗೂ ನೀಡಲಾಗಿರುವ ಈ ಯೋಜನೆಗಳಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಇರುವಂತಹ ಯೋಜನೆ ಈ ಶ್ರಮ ಕಾರ್ಡ್ ಯೋಜನೆ. ದುಡಿಯುವ ವರ್ಗದ ಪ್ರತಿಯೊಬ್ಬ ಕಾರ್ಮಿಕರು ಸಹ ಇ-ಶ್ರಮ್ ಕಾರ್ಡ್ ಹೊಂದಬೇಕು. ಇ-ಶ್ರಮ್ ಕಾರ್ಡ್ ಹೊಂದುವುದರಿಂದ ಅವರಿಗೆ ಸಾಕಷ್ಟು ಲಾಭಗಳಿವೆ.
ಈ ಶ್ರಮ ಕಾರ್ಡ್ ಯೋಜನೆ ಬಂದು ಸಾಕಷ್ಟು ವರ್ಷಗಳು ಆಗಿದ್ದರೂ ಕೂಡ ನಮ್ಮ ದೇಶದಲ್ಲಿ ಇನ್ನೂ ಇದರ ಮಾಹಿತಿ ಕೊರತೆ ಇದೆ. ಹಾಗಾಗಿ ಅರ್ಹತೆ ಇದ್ದರೂ ಅನೇಕರು ಇ-ಶ್ರಮ್ ಕಾರ್ಡ್ ಹೊಂದಿದದವರಿಗೆ ಸಿಗುತ್ತಿರುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇ-ಶ್ರಮ್ ಕಾರ್ಡ್ ಹೊಂದಿರವರಿಗೆ ಸಿಗುವ ಸೌಲಭ್ಯಗಳಲ್ಲಿ 60 ವರ್ಷ ಆದ ಬಳಿಕ ಸಿಗುವ ಪಿಂಚಣಿ ಸೌಲಭ್ಯ ಕೂಡ ಒಂದು. ನೀವೇನಾದರೂ ಇ-ಶ್ರಮ್ ಕಾಡು ಹೊಂದಿದ್ದರೆ 18 ವರ್ಷದಿಂದ 45 ವರ್ಷದ ಒಳಗಿದ್ದರೆ ಖಂಡಿತವಾಗಿ ನಿಮಗೆ 60 ವರ್ಷ ಆದ ಬಳಿಕ ಪ್ರತಿ ತಿಂಗಳು 3000 ಪಿಂಚಣಿ ರೂಪದಲ್ಲಿ ಸಹಾಯಧನ ಸಿಗುತ್ತದೆ.
ನಿಮ್ಮ ಸಂಧ್ಯಾ ಜೀವನದ ಕಾಲ ನೆಮ್ಮದಿಯಿಂದ ಕಳೆಯಲು ಆ ಹಣ ಸಹಾಯ ಆಗುತ್ತದೆ. ಯಾಕೆಂದರೆ ದುಡಿಯುವ ಶ್ರಮಿಕ ವರ್ಗವು ವಯಸ್ಸಾದಂತೆ ಅವಕಾಶಗಳಿದ್ದರೂ ಕೆಲಸ ಮಾಡುವ ಸಾಮರ್ಥ್ಯ ಕಳೆದುಕೊಂಡಿರುತ್ತದೆ. ಹಾಗಾಗಿ ಹಣವಿರುವ ಸಮಯದಲ್ಲಿಯೇ ಒಂದು ಭದ್ರತೆ ಇರುವ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾ ಬಂದರೆ ನಂತರ ನಿಮ್ಮ ಭವಿಷ್ಯದಲ್ಲಿ ಅದು ಸಹಾಯಕ್ಕೆ ಬರುತ್ತದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಇ-ಶ್ರಮ್ ಕಾರ್ಡ್ ಮೂಲಕ ಇಂತಹ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಚಿಂತಿಸಿದೆ.
ಅಸಂಘಟಿತ ವಲಯದ ಇ-ಶ್ರಮ್ ಕಾರ್ಡ್ ಹೊಂದಿರುವ ಸಹಸ್ರಾರು ಕಾರ್ಮಿಕರು ಈಗಾಗಲೇ ಇದಕ್ಕೆ ಹೂಡಿಕೆ ಕೂಡ ಮಾಡುತ್ತಾ ಬಂದಿದ್ದಾರೆ. ನೀವು 18 ವರ್ಷದಿಂದ 45 ವರ್ಷದ ಒಳಗಿನವರಾಗಿದ್ದರೆ, ನೀವು ಇ-ಶ್ರಮ ಕಾರ್ಡ್ ನ 3000 ಪಿಂಚಣಿ ಯ ಪಾಲಿಸಿ ಖರೀದಿಸಬಹುದು. ಇ-ಶ್ರಮ್ ಕಾರ್ಡ್ ಅಫಿಷಿಯಲ್ ವೆಬ್ ಸೈಟ್ ಗೆ ಭೇಟಿ ಕೊಟ್ಟು ಪೆನ್ಷನ್ ಫೋರ್ 3,000 ರುಪೀಸ್ ಮನ್ ಧನ್ ಡಾಟ್ ಮೇಲೆ ಕ್ಲಿಕ್ ಮಾಡಿ ಇದರ ಮುಂದಿನ ಹಂತಗಳನ್ನು ಪೂರೈಸಿರಬೇಕು.
ಜೊತೆಗೆ ಪ್ರತಿ ತಿಂಗಳು ನಿಮ್ಮ ಆದಾಯದಲ್ಲಿ ಒಂದಿಷ್ಟು ವಂತಿಗೆಯನ್ನು ಪಾವತಿಸುತ್ತಾ ಬರಬೇಕು. ಒಂದು ಕನಿಷ್ಠ ಮೊತ್ತದ ಹಣವನ್ನಾದರೂ ಪ್ರತಿ ತಿಂಗಳು ಇದರಲ್ಲೂ ಉಳಿಸುತ್ತ ಬರಬೇಕು. ನಂತರ ನಿಮಗೆ 60 ವರ್ಷಗಳು ತುಂಬಿದ ಬಳಿಕ ಸರ್ಕಾರದಿಂದ ಹೆಚ್ಚಿನ ಬಡ್ಡಿ ದರ ಸೇರಿ ಗರಿಷ್ಠ 3,000 ತನಕ ಪೆನ್ಶನ್ ಸಿಗಲಿದೆ. ಒಂದು ವೇಳೆ ಈ ಪಾಲಿಸಿ ಖರೀದಿಸಿದವರು ಮರಣ ಹೊಂದಿದ ಪಕ್ಷದಲ್ಲಿ ಅವರ ಪತಿ ಅಥವಾ ಪತ್ನಿಗೆ ಆ ಮೊತ್ತದ ಅರ್ಧ ಹಣ ಹೋಗುತ್ತದೆ.
ESIC, EPFO, NPO ಸೌಲಭ್ಯ ಹೊಂದಿರುವ ಕಾರ್ಮಿಕರಿಗೆ ಈ ಯೋಜನೆಯ ಫಲಾನುಭವಿಗಳ ಆಗಲು ಸಾಧ್ಯವಿಲ್ಲ ಮತ್ತು ಅವರು ಇ- ಶ್ರಮ್ ಕಾರ್ಡ್ ಹೊಂದಲು ಕೂಡ ಸಾಧ್ಯವಿಲ್ಲ. ಈ ಇ-ಶ್ರಮ್ ಕಾರ್ಡ್ ಬಗ್ಗೆ ಹಾಗೂ ಈ ಪೆನ್ಷನ್ ಯೋಜನೆ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.