ಭಾರತೀಯ ಅಂಚೆ ಕಚೇರಿಯು ತನ್ನಲ್ಲಿ ಹೂಡಿಕೆ ಮಾಡುವ ಗ್ರಾಹಕರಿಗಾಗಿ ಹಲವು ಯೋಚನೆಗಳನ್ನು ಜಾರಿಗೆ ತಂದಿದೆ. ಸುಕನ್ಯಾ ಸಮೃದ್ಧಿ ಅಂತಹ ಯೋಜನೆಯಿಂದ ಹಿಡಿದು ಪ್ರಧಾನಮಂತ್ರಿ ಮಂತ್ಲಿ ಇನ್ಕಮ್ ಸ್ಕೀಮ್ ತನಕ ಸಾಕಷ್ಟು ಯೋಜನೆಗಳು ಜಾರಿಯಲ್ಲಿ ಇದ್ದು, ಪ್ರತಿ ಯೋಜನೆಗೂ ವಿಶೇಷವಾದ ಬಡ್ಡಿದರ ಸಿಗುತ್ತದೆ. ಇದರಲ್ಲಿ ಕೆಲವೊಂದು ಸ್ಕೀಮ್ ಗಳನ್ನು ಪ್ರತ್ಯೇಕವಾಗಿ ಹೆಣ್ಣು ಮಕ್ಕಳಿಗಾಗಿಯೇ ಮತ್ತು ಹಿರಿಯ ನಾಗರಿಕರಿಗಾಗಿಯೇ ಮಾಡಲಾಗಿದೆ.
ಅಂಚೆ ಕಚೇರಿಯು ತನ್ನ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಹಣಕ್ಕೆ ನಿಶ್ಚಿತವಾದ ಬಡ್ಡಿ ಹಣವನ್ನು ಕೊಡುವುದರ ಜೊತೆಗೆ ಗ್ರಾಹಕರ ಹಣಕ್ಕೆ ಭದ್ರತೆಯನ್ನು ಕೊಡುತ್ತದೆ. ನಿಮ್ಮ ಹಣಕ್ಕೆ ಸರ್ಕಾರವೇ ಗ್ಯಾರಂಟಿ ಆಗುವುದರಿಂದ ಈ ಅಂಚೆ ಕಚೇರಿ ಯೋಜನೆಗಳಲ್ಲಿ ನೀವು ಹಣ ಹೂಡಿಕೆ ಮಾಡಿ ನೆಮ್ಮದಿಯಾಗಿ ಜೀವನ ಕಳೆಯಬಹುದು.
ಈ ರೀತಿ ಪೋಸ್ಟ್ ಆಫೀಸ್ ಅಲ್ಲಿ ಇನ್ವೆಸ್ಟ್ ಮಾಡಲು ಆಸಕ್ತಿ ಇರುವವರಿಗೆ ವಿಶೇಷವಾದ ಯೋಚನೆಗಳು ಇವೆ. ಸದ್ಯಕ್ಕೀಗ ಹೂಡಿಕೆ ಮಾಡುವವರಿಗೆ ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ (MIS) ಒಂದು ಬೆಸ್ಟ್ ಯೋಜನೆ ಆಗಿದೆ. ಈ ವರ್ಷ ಕೇಂದ್ರ ಸರ್ಕಾರದಿಂದ ಬಜೆಟ್ ಮಂಡಣೆಯಾದ ಸಂದರ್ಭದಲ್ಲಿ ಈ ಸ್ಕೀಮ್ ನ ಬಡ್ಡಿ ದರವನ್ನು ಸಹ ಬದಲಾಯಿಸಲಾಗಿದೆ ಮತ್ತು ಹೂಡಿಕೆ ಮಾಡಬಹುದಾದ ಗರಿಷ್ಠ ಮೊತ್ತವನ್ನು ಕೂಡ ಹೆಚ್ಚಿಸಲಾಗಿದೆ.
ಈ ಯೋಜನೆ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಹೆಚ್ಚಿನ ವಿವರ ಬೇಕಾಗಿದ್ದಲ್ಲಿ ಹತ್ತಿರದಲ್ಲಿರುವ ಅಂಚೆ ಕಚೇರಿ ಠಾಣೆಗೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು.
ಯೋಜನೆಯ ಹೆಸರು:- ಮಂತ್ಲಿ ಇನ್ಕಮ್ ಸ್ಕೀಮ್ (MIS).
ಬಡ್ಡಿದರ:- 7.1% ವಾರ್ಷಿಕವಾಗಿ.
ಹೂಡಿಕೆಯ ಮಿತಿ:-
● ಕನಿಷ್ಠ 1500 ರೂಗಳನ್ನು ಹೂಡಿಕೆ ಮಾಡಬಹುದು.
● ಗರಿಷ್ಠವಾಗಿ ಒಬ್ಬ ಖಾತೆದಾರರು 9 ಲಕ್ಷದವರೆಗೆ ಹೂಡಿಕೆ ಮಾಡಬಹುದು.
● ಜಂಟಿ ಖಾತೆದಾರರು 15ಲಕ್ಷದವರೆಗೆ ಹೂಡಿಕೆ ಮಾಡಬಹುದು.
● ಒಂದೇ ಬಾರಿಗೆ ಒಟ್ಟು ಮೊತ್ತವನ್ನು ಡೆಪಾಸಿಟ್ ಮಾಡಿದರೆ ಪ್ರತಿ ತಿಂಗಳು ಕೂಡ ನಿಮ್ಮ ಹೂಡಿಕೆಗೆ ಅನುಸಾರವಾದ ಬಡ್ಡಿ ಹಣವು ಪೋಸ್ಟ್ ಆಫೀಸಿನ ನಿಮ್ಮ ಉಳಿತಾಯ ಖಾತೆಗೆ ಬರುತ್ತದೆ ಅಥವಾ ಪ್ರತಿ ತಿಂಗಳು ಕೂಡ ಮನಿ ಆರ್ಡರ್ ಮೂಲಕ ನಿಮ್ಮ ವಿಳಾಸಕ್ಕೆ ಹಣ ಬರುವ ಆಯ್ಕೆಯನ್ನು ಆಯ್ದುಕೊಳ್ಳಬಹುದು.
ಮೆಚ್ಯುರಿಟಿ ಅವಧಿ:- ಐದು ವರ್ಷಗಳು.
● ಐದು ವರ್ಷಗಳು ತುಂಬುವ ತನಕ ಪ್ರತಿ ತಿಂಗಳು ಕೂಡ ನಿಮ್ಮ ಅಕೌಂಟಿಗೆ ಬಡ್ಡಿ ಹಣವು ಕ್ರೆಡಿಟ್ ಆಗುತ್ತಿರುತ್ತದೆ.
ವಯಸ್ಸಿನ ಮಿತಿ:- ಯಾವುದೇ ರೀತಿಯ ವಯಸ್ಸಿನ ಮಿತಿ ಇರುವುದಿಲ್ಲ ಯಾವುದೇ ವಯಸ್ಸಿನವರು ಕೂಡ ಖಾತೆ ತೆರೆದು ಈ ಸ್ಕೀಮ್ ಆರಂಭಿಸಬಹುದು.
ಇನ್ನಿತರ ಪ್ರಮುಖ ಅಂಶಗಳು:-
● ಈ ಸ್ಕೀಮಿನ ಮೆಚುರಿಟಿ ಅವಧಿ 5 ವರ್ಷಗಳಿರುವುದರಿಂದ ಐದು ವರ್ಷಕ್ಕೂ ಮುನ್ನ ನೀವು ಠೇವಣೆ ಇಟ್ಟ ಹಣವನ್ನು ಹಿಂಪಡೆಯುವುದಾದರೆ 1-3 ವರ್ಷದ ಒಳಗೆ ಹಿಂಪಡೆದರೆ 2% ಪೆನಾಲ್ಟಿ ಬೀಳುತ್ತದೆ.
ಒಂದು ವೇಳೆ ನೀವೇನಾದರೂ ಈ ಸ್ಕೀಮ್ ಆರಂಭಿಸಿದ 3-5 ವರ್ಷದ ಒಳಗೆ ಹಣ ವಿತ್ ಡ್ರಾ ಮಾಡಿಕೊಳ್ಳುವುದಾದರೆ ನೀವು ಠೇವಣಿ ಇಟ್ಟ ಹಣದ ಮೇಲೆ 1% ಪೆನಾಲ್ಟಿ ಬೀಳುತ್ತದೆ.
● ನಾಮಿನಿ ವ್ಯವಸ್ಥೆಯು ಸಹ ಇದ್ದು ಈ ಸ್ಕೀಮ್ ಮಾಡಿಸಿದವರು ತಪ್ಪದೆ ನಾಮಿನಿ ಕೂಡ ಮಾಡಿಸಬೇಕು. ಒಂದು ವೇಳೆ ಖಾತೆದಾರರು ಮರಣ ಹೊಂದಿದ ಪಕ್ಷದಲ್ಲಿ ಅವರು ನಾಮಿನಿ ಮಾಡಿದ ಸದಸ್ಯರಿಗೆ ಠೇವಣಿ ಇಟ್ಟ ಹಣ ಹಾಗೂ ಬಡ್ಡಿ ಹಣ ಹೋಗುತ್ತದೆ.