ಪ್ಯಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಆಗಬೇಕು ಎನ್ನುವುದು ಸರ್ಕಾರದ ಕಡ್ಡಾಯ ನಿಯಮ. 2017 ರಲ್ಲಿಯೇ ಈ ರೀತಿ ಒಂದು ಆದೇಶ ಆದಾಯ ತೆರಿಗೆ ಇಲಾಖೆಯಿಂದ ಬಂದಿದ್ದರು ಕೂಡ ಜನ ಅದರ ಬಗ್ಗೆ ಹೆಚ್ಚು ಗಮನ ಹರಿಸಲಿಲ್ಲ. ಮೂರು ವರ್ಷಗಳ ಕಾಲ ಇದಕ್ಕೆ ಉಚಿತವಾಗಿ ಅವಕಾಶ ಮಾಡಿಕೊಡಲಾಗಿತ್ತು, ಆದರೆ ಸಹ ಹೆಚ್ಚಿನ ಜನರಿಗೆ ಇದರ ಮಾಹಿತಿ ಕೊರತೆ ಇತ್ತು. ಅಂತ್ಯದಲ್ಲಿ ಸರ್ಕಾರ ನಿಯಮವನ್ನು ಇನ್ನಷ್ಟು ಬಿಗಿಗೊಳಿಸಿ ಮಾರ್ಚ್ 31, 2024ರ ಒಳಗೆ ಕಡ್ಡಾಯವಾಗಿ ಎಲ್ಲಾ ಪ್ಯಾನ್ ಕಾರ್ಡ್ ಬಳಕೆದಾರರು ಸಹ ತಮ್ಮ ಆಧಾರ್ ಸಂಖ್ಯೆಯನ್ನು ಪಾನ್ ಕಾರ್ಡ್ ಜೊತೆ ಲಿಂಕ್ ಮಾಡಬೇಕು ಅದು ಕೂಡ 1000.ರೂ ದಂಡ ಸಮೇತವಾಗಿ ಎಂದು ಹೇಳಿತ್ತು.
ಒಂದು ವೇಳೆ ಈ ಬಾರಿ ಕೂಡ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದಲ್ಲಿ ಅಂತವರ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ನಂತರ 10,000ರೂ ದಂಡ ತೆತ್ತು ಪಾನ್ ಕಾರ್ಡ್ ಪಡೆಯಬೇಕಾಗುತ್ತದೆ. ಇದಲ್ಲದೆ ನೀವು ಬ್ಯಾಂಕಿನ ಹಣಕಾಸಿನ ವ್ಯವಹಾರಗಳು ಮಾಡಲು ತೊಂದರೆ ಆಗುತ್ತದೆ ಎಂದು ಎಚ್ಚರಿಸಿತ್ತು. ಇದಾದ ಬಳಿಕ ಮಾರ್ಚ್ ತಿಂಗಳ ಅಂತ್ಯದಲ್ಲಿ ಜನ ಇದರ ಬಗ್ಗೆ ಬಹಳ ಗಂಭೀರವಾಗಿ ಸಿಡಿದೆದ್ದರು, ಇನ್ನೂ ಸಹ ನಮಗೆ ವಿಷ್ಯ ಗೊತ್ತಿರಲಿಲ್ಲ ಎಂದು ಹಾಗೂ ದಂಡದ ಮೊತ್ತ ಹೆಚ್ಚಾಯ್ತು ಎಂದು ಕೆಲವರು ಜನ ಆಕ್ರೋಶಗೊಂಡರೆ, ಇನ್ನು ಕೆಲವರು ಅಂತಿಮ ದಿನಗಳಲ್ಲಿ ಸರ್ವರ್ ಸಮಸ್ಯೆ ಆಗಿದೆ ಇನ್ನು ಹೆಚ್ಚಿನ ಸಮಯ ಬೇಕು ಎಂದು ಕೇಳಿದ್ದರು.
ಸರ್ಕಾರ ಜನಸಾಮಾನ್ಯರ ಅಳಲನ್ನು ಮತ್ತೊಮ್ಮೆ ಒಪ್ಪಿಕೊಂಡು ಅಂತಿಮ ಕಾಲಾವಕಾಶವಾಗಿ ಜುಲೈ 31ರ ಕೊನೆಯ ಅವಕಾಶ ಕೊಟ್ಟಿದೆ. ಈಗಲೂ ಸಹ ಮಾನ್ಯ ವಿತ್ತ ಸಚಿವೆ ನಿರ್ಮಲ ಸೀತರಾಮನ್ ಅವರು ಮತ್ತೊಮ್ಮೆ ಸುದ್ದಿಗೋಷ್ಠಿ ನಡೆಸಿ ಇದೇ ವಿಷಯವನ್ನು ಹೇಳಿದ್ದಾರೆ. ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಹೋದಲ್ಲಿ ಅವರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ದಂಡ ತೆರಬೇಕಾಗುತ್ತದೆ ಅಥವಾ ಮುಂದೆ ಇದಕ್ಕೆ ಅವಕಾಶಗಳು ಸಿಗದೇ ಇರಬಹುದು.
ಆದ್ದರಿಂದ ತಪ್ಪದೇ ಎಲ್ಲರೂ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಎಂದು ಹೇಳಿದ್ದರು. ಇದಾದ ಬಳಿಕ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಪ್ಯಾನ್ ಮತ್ತು ಆಧಾರ್ ಲಿಂಕ್ ಕುರಿತು ಸಾಕಷ್ಟು ವಿಷಯಗಳು ಪ್ರಸ್ತಾಪ ಆದವು. ಇವುಗಳಲ್ಲಿ ಊಹಾಪೋಹಗಳಿಗೆ ಕಡಿಮೆ ಇರಲಿಲ್ಲ. ಈಗ ಅಂತಹದೆ ಮತ್ತೊಂದು ಸುದ್ದಿ ಎಲ್ಲೆಡೆ ಚರ್ಚೆಯಾಗುತ್ತಿದೆ. ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದಲ್ಲಿ ಅಂತವರ ಬ್ಯಾಂಕ್ ಖಾತೆ ಬ್ಲಾಕ್ ಆಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ, ಸರ್ಕಾರದ ಈ ರೀತಿ ಆದೇಶ ಹೊರಡಿಸಿದೆ ಎನ್ನುವ ಮಾತುಗಳು ಜೋರಾಗಿದೆ.
ಆದರೆ ಸರ್ಕಾರ ಯಾವುದೇ ಸಮಯದಲ್ಲೂ ಸಹ ಇಂತಹ ಘೋಷಣೆಯನ್ನು ಹೇಳಿಲ್ಲ. ಪ್ಯಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡುವುದರಿಂದ ತೆರಿಗೆ ವಂಚನೆಗಾರರನ್ನು ಸುಲಭವಾಗಿ ಗುರುತಿಸಬಹುದು ಎನ್ನುವುದಷ್ಟೇ ಸರ್ಕಾರದ ಆಶಯ. ಆದರೆ ಪ್ರಕ್ರಿಯೆಯನ್ನು ಶೀಘ್ರಗೊಳಿಸುವ ಕಾರಣ ಕೆಲ ನಿಯಮಗಳನ್ನು ಹೇರಿದೆ ಅಷ್ಟೇ.
ಪ್ಯಾನ್ ಜೊತೆ ಆಧಾರ್ ಕಾರ್ಡ್ ಲಿಂಕ್ ಆಗದೆ ಹೋದಲ್ಲಿ ನೀವು ಸರ್ಕಾರದ ಯೋಜನೆಗಳಿಂದ ಸಹಾಯಧನಗಳಿಂದ ವಂಚಿತರಾಗಬಹುದು ಮತ್ತು ನಿಮ್ಮ ತೆರಿಗೆ ಪಾವತಿ ಸಮಯದಲ್ಲಿ ತೊಂದರೆಯಾಗಬಹುದು. ಪಾನ್ ಕಾರ್ಡ್ ನಿಷ್ಕೀಯಗೊಳ್ಳುವುದರಿಂದ ಪ್ಯಾನ್ ಕಾರ್ಡ್ ಬಳಸುವ ಎಲ್ಲಾ ಚಟುವಟಿಕೆಗಳಿಗೂ ತೊಂದರೆ ಆಗಬಹುದು ಆದ್ದರಿಂದ ಪ್ರತಿಯೊಬ್ಬ ಭಾರತೀಯನು ಜೂನ್ 30ರ ಒಳಗೆ ಸರ್ಕಾರ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲೇ ಬೇಕಾಗಿರೋದು ಆತನ ಜವಾಬ್ದಾರಿ.