ಗಂಗಾ ಕಲ್ಯಾಣ ಉಚಿತ ಬೋರ್ವೆಲ್ ಯೋಜನೆಗೆ ಅರ್ಜಿ ಅಹ್ವಾನ ಯಾವೆಲ್ಲಾ ರೈತರು ಅರ್ಹರು.? ಬೇಕಾಗುವ ದಾಖಲೆಗಳೇನು.! ಫಲಾನುಭವಿಗಳ ಆಯ್ಕೆ ಹೇಗೆ ಆಗುತ್ತದೆ ನೋಡಿ.!

 

WhatsApp Group Join Now
Telegram Group Join Now

ಸರ್ಕಾರವು ರೈತರಿಗಾಗಿ ಅನೇಕ ಯೋಜನೆಗಳನ್ನು ಈವರೆಗೆ ಜಾರಿಗೆ ತಂದಿದೆ. ಸರ್ಕಾರ ಜಾರಿಗೆ ತಂದ ಯೋಜನೆಗಳಿಗೆ ಸರ್ಕಾರದ ಹಲವು ಇಲಾಖೆಗಳು ಮತ್ತು ನಿಗಮಗಳು ಕೈಜೋಡಿಸಿ ಅದನ್ನು ಕಾರ್ಯರೂಪಕ್ಕೆ ತಂದಿದೆ. ಈಗಾಗಲೇ ರಾಜ್ಯದಾದ್ಯಂತ ಜನಪ್ರಿಯವಾಗಿರುವ ಅನೇಕ ಯೋಜನೆಗಳಲ್ಲಿ ಗಂಗಾ ಕಲ್ಯಾಣ ಎನ್ನುವ ಯೋಜನೆ ಕೂಡ ಒಂದು. ಈ ಯೋಜನೆ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಜಮೀನಿನಲ್ಲಿ ಸರ್ಕಾರದ ನೆರವಿನಿಂದ ಕೊಳವೆಬಾವಿ ಕೊರೆಸಿ ಮಳೆ ಆಶ್ರಿತ ಭೂಮಿಯನ್ನು ತೋಟಗಾರಿಕಾ ಭೂಮಿಯಾಗಿ ಬದಲಾಯಿಸಿಕೊಳ್ಳಬಹುದು.

ಸರ್ಕಾರ ರೈತರು ಈ ರೀತಿ ಹೆಚ್ಚು ಬೆಳೆಗಳನ್ನು ಬೆಳೆಯಲು ಅನುಕೂಲ ಆಗಲಿ ಆ ಮೂಲಕ ಅವರ ಆದಾಯ ಹೆಚ್ಚಾಗುವುದರ ಜೊತೆಗೆ ಆಹಾರ ಉತ್ಪಾದನೆಯೂ ಹೆಚ್ಚಾಗಲಿ ಎನ್ನುವ ಕಾರಣದಿಂದಾಗಿ ಈ ಯೋಜನೆಗೆ ಬೆಂಬಲ ನೀಡುತ್ತಾ ಬಂದಿದೆ. ಆದರೆ ಈ ಯೋಜನೆ ಬಗ್ಗೆ ರಾಜ್ಯದ ಅನೇಕರಿಗೆ ಮಾಹಿತಿ ಕೊರತೆ ಆದ್ದರಿಂದ ಈ ಲೇಖನದಲ್ಲಿ ಇದರ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ.

ಗಂಗಾ ಕಲ್ಯಾಣ ಯೋಜನೆಯಿಂದ ಸಿಗುವ ಪ್ರಯೋಜನಗಳು:-

● ಇದು ರೈತರಿಗಾಗಿ ಇರುವ ಉಚಿತ ಬೋರ್ವೆಲ್ ಯೋಚನೆಯಾಗಿದ್ದು, ಈ ಯೋಜನೆಯಿಂದ ಬಡ ರೈತರು ನೀರಾವರಿ ಸೌಲಭ್ಯ ಪಡೆಯಬಹುದು
● ಸರ್ಕಾರದಿಂದ ಘಟಕ ವೆಚ್ಚಕ್ಕಾಗಿ ಸಬ್ಸಿಡಿ ರೂಪದ ಸಾಲ ಸೌಲಭ್ಯ ಇದೆ.
● ಅಂತರ್ಜಲ ಕಡಿಮೆಯಾಗಿರುವ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳ ರೈತರಿಗೆ 4 ಲಕ್ಷದವರೆಗೆ ಸಾಲ ಸೌಲಭ್ಯವಿದ್ದು ಇದರಲ್ಲಿ 3.5 ಲಕ್ಷ ಸಹಾಯಧನ ಮತ್ತು 4% ಬಡ್ಡಿಯಲ್ಲಿ 50,000 ಸಾಲವಾಗಿರುತ್ತದೆ.
● ಇತರ ಜಿಲ್ಲೆಯ ರೈತರುಗಳಿಗೆ 2 ಲಕ್ಷ ಸೌಲಭ್ಯವಿದ್ದು, 1.5 ಲಕ್ಷ ಸಹಾಯಧನವಾಗಿರುತ್ತದೆ ಮತ್ತು 4% ಬಡ್ಡಿಯಲ್ಲಿ 50,000 ಸಾಲ ಕಟ್ಟಬೇಕಾಗುತ್ತದೆ.

ಈ ಸೌಲಭ್ಯ ಪಡೆಯಲು ರೈತರಿಗೆ ವಿಧಿಸಿರುವ ಮಾನದಂಡಗಳು:-

● ಕರ್ನಾಟಕ ರಾಜ್ಯದ ರೈತರಾಗಿರಬೇಕು, ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.
● ಕನಿಷ್ಠ 1.2 ಎಕರೆ, ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು.
● ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ರೈತರುಗಳು ಕನಿಷ್ಠ 1 ಎಕರೆ ಭೂಮಿ ಹೊಂದಿದ್ದರೂ ಪ್ರಯೋಜನ ಪಡೆಯಬಹುದು.
● ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೌಕರಿಯಲ್ಲಿರಬಾರದು, ಹಾಗೆಯೇ ಸಮುದಾಯಕ್ಕೆ ನಿಗದಿತವಾಗಿರುವ ಯೋಜನೆಗಳ ಪ್ರಯೋಜನ ಪಡೆದಿದ್ದ ಕುಟುಂಬ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಬೇಕಾಗುವ ದಾಖಲೆಗಳು:-

● ಆಧಾರ್ ಕಾರ್ಡ್
● ರೇಷನ್ ಕಾರ್ಡ್
● ಸಣ್ಣ ಹಾಗೂ ಅತಿ ಸಣ್ಣ ರೈತ ದೃಢೀಕರಣ ಪತ್ರ
● ರೈತರ FID ಸಂಖ್ಯೆ
● ಜಮೀನಿನ ಪಹಣಿ

ಈ ಕೆಳಗಿನ ಜಾತಿ ಮತ್ತು ಸಮುದಾಯಕ್ಕೆ ಸೇರಿದ ರೈತರಿಗೆ ಪ್ರಯೋಜನ ಸಿಗಲಿದೆ:

● ಹಿಂದುಳಿದ ವರ್ಗದ ರೈತರು
● ಅಲ್ಪಸಂಖ್ಯಾತ ವರ್ಗದ ರೈತರು
● ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರು
● ಲಿಂಗಾಯತ ಸಮುದಾಯದ ರೈತರು
● ವಿಶ್ವಕರ್ಮ ಸಮುದಾಯದ ರೈತರು
● ಉಪ್ಪಾರ ಸಮುದಾಯದ ರೈತರು
● ಆದಿ ಜಾಂಬವ ಸಮುದಾಯದ ರೈತರು
● ಅಂಬಿಗ ಸಮುದಾಯದ ರೈತರು
● ಭೋವಿ ಸಮುದಾಯದ ರೈತರು
● ಸವಿತಾ ಸಮಾಜದ ರೈತರು
● ಮಡಿವಾಳ ಸಮುದಾಯದ ರೈತರು

ಅರ್ಜಿ ಸಲ್ಲಿಸುವ ವಿಧಾನ:-

ಗ್ರಾಮ ಒಂದು ಬೆಂಗಳೂರು ಮತ್ತು CSC ಕೇಂದ್ರಗಳಿಗೆ ಹೋಗಿ ಕೇಳಲಾಗಿರುವ ಅಗತ್ಯ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬಹುದು.

ಆಯ್ಕೆ ವಿಧಾನ:-

ಆನ್ಲೈನಲ್ಲಿ ಸಲ್ಲಿಕೆಯಾದ ಎಲ್ಲಾ ಅಪ್ಲಿಕೇಶನ್ ಗಳು ಶಾಸಕರ ನೇತೃತ್ವದ ತಾಲೂಕು ಸಮಿತಿಗೆ ಸಲ್ಲಿಕೆಯಾಗುತ್ತದೆ. ನಂತರ ಸಮಿತಿಯು ಸಂಬಂಧಿಸಿದ ಇಲಾಖೆಯ ಪ್ರಸ್ತಾವನೆಗೆ ಕಳುಹಿಸುತ್ತದೆ. ಅಂತಿಮವಾಗಿ ಅಲ್ಲಿ ಪಟ್ಟಿ ಬಿಡುಗಡೆ ಆಗುತ್ತದೆ.

ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ:-

ವೆಬ್ಸೈಟ್ ವಿಳಾಸ –
● https://kmvstdcl.karnataka.gov.in/info
ganga+kalyana+scheme/en
● ಮೊಬೈಲ್ ಸಂಖ್ಯೆ – 080 – 22864720

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now