ಆನ್‌ಲೈನ್‌ ಮೂಲಕ ಸುಲಭವಾಗಿ ವಾಸಸ್ಥಳ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ.? ಇಲ್ಲಿದೆ ಮಾಹಿತಿ

 

WhatsApp Group Join Now
Telegram Group Join Now

ಪ್ರಸ್ತುತ ಸರ್ಕಾರ ಬಹುತೇಕ ಎಲ್ಲ ಸೇವೆಗಳನ್ನು ಆನ್‌ಲೈನ್‌ ವ್ಯಾಪ್ತಿಗೆ ತಂದಿದೆ. ಈ ನಿಟ್ಟಿನಲ್ಲಿ ಜನರು ಅಗತ್ಯ ಸೇವೆಗಳ ಪ್ರಮಾಣ ಪತ್ರಗಳನ್ನು ಆನ್‌ಲೈನ್‌ ಮೂಲಕ ಸುಲಭವಾಗಿ ಪಡೆಯಬಹುದಾಗಿದೆ. ಹೀಗಾಗಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹಾಗೂ ನಿವಾಸಿ/ವಾಸಸ್ಥಳ ದೃಢೀಕರಣ ಪತ್ರಗಳನ್ನು ಆನ್‌ಲೈನ್‌ ಮೂಲಕವೇ ಪಡೆಯಬಹುದಾಗಿದ್ದು, ಜನರು ನಾಡ ಕಛೇರಿಯಲ್ಲಿ ಅಲೆದಾಡುವ ಅಗತ್ಯವಿಲ್ಲ.

ಹೌದು, ಸರ್ಕಾರದ ಕೆಲವು ಸೌಲಭ್ಯಗಳ ಪಡೆಯುವಿಕೆಗೆ ಹಾಗೂ ಇತರೆ ಅಗತ್ಯ ಕೆಲಸಗಳಿಗೆ ಅರ್ಜಿದಾರರು ವಾಸಸ್ಥಳ ದೃಢೀಕರಣ ಪತ್ರ ನೀಡಬೇಕಿರುತ್ತದೆ. ಜನರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ವಾಸಸ್ಥಳ ದೃಢೀಕರಣ ಪತ್ರವನ್ನು ಪಡೆಯಬಹುದು. ಹಾಗಾದರೆ, ಆನ್‌ಲೈನ್‌ ಮೂಲಕ ವಾಸಸ್ಥಳ ದೃಢೀಕರಣ ಪತ್ರ ಪಡೆಯುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿ…

ಆನ್‌ಲೈನ್‌ನಲ್ಲಿ ವಾಸಸ್ಥಳ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

* ಮೊದಲು ʻಭೂಮಿʼ ವೆಬ್‌ಸೈಟ್‌ಗೆ ಭೇಟಿ ನೀಡಿ.
* ಲಾಗ್‌ ಇನ್‌ ಐಡಿ ಹಾಗೂ ಪಾಸ್‌ವರ್ಡ್‌ ನಮೂದಿಸಿ.
* ನಂತ್ರ ಲಾಗ್‌ ಇನ್‌ ಮೇಲೆ ಕ್ಲಿಕ್‌ ಮಾಡಿ.
* ಇಲ್ಲಿ ಕೆಳಗೆ ಕಾಣುವ ʻನಾಡ ಕಚೇರಿ ಸರ್ವಿಸಸ್‌ʼ ಮೇಲೆ ಕ್ಲಿಕ್‌ ಮಾಡಿ. ಇದೊಂದು ನಾಡ ಕಚೇರಿ ವೆಬ್‌ಸೈಟ್‌ ಆಗಿದೆ.
* ಇಲ್ಲಿ ʻresidential certificateʼ ಮೇಲೆ ಕ್ಲಿಕ್‌ ಮಾಡಿ.
* ನಂತ್ರ ವಾಸಸ್ಥಳ ಪ್ರಮಾಣ ಪತ್ರದ ಮೇಲೆ ಕ್ಲಿಕ್‌ ಮಾಡಿ.
* ಇಲ್ಲಿ ರೇಷನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಎರಡರಲ್ಲಿ ಒಂದು ನಂಬರ್‌ ನಮೂದಿಸಿ, ʻಗೋʼ ಎಂಬುದರ ಮೇಲೆ ಕ್ಲಿಕ್‌ ಮಾಡಿ.

* ಇಲಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ರೂರಲ್‌ ಅಥವಾ ಅರ್ಬನ್‌‌, ವಾರ್ಡ್ ಅನ್ನು ಸೆಲೆಕ್ಟ್‌ ಮಾಡಿಕೊಳ್ಳಬೇಕಾಗುತ್ತದೆ.
* ನಂತ್ರ, ನಿಮಗೆ ಸರ್ಟಿಫಿಕೇಟ್‌ ಇಂಗ್ಲೀಷ್‌ ಅಥವಾ ಕನ್ನಡದಲ್ಲಿ ಬೇಕಾದರೆ ಭಾಷೆಯನ್ನು ಸೆಲೆಕ್ಟ್‌ ಮಾಡಿಕೊಳ್ಳಿ.
* ಇಲ್ಲಿ ಕೆಳಗೆ ಅಪ್ಲಿಕೆಂಟ್‌ ಅಂತಾ ಇರುತ್ತದೆ. ಇಲ್ಲಿ ನಿಮ್ಮ ಮನೆಯ ಎಲ್ಲಾ ಸದಸ್ಯರ ಹೆಸರು ಇರುತ್ತದೆ.
* ಇಲ್ಲಿ ಯಾರ ಹೆಸರಲ್ಲಿ ವಾಸಸ್ಥಳ ದೃಢೀಕರಣ ಪತ್ರ ಬೇಕೋ ಅವರ ಹೆಸರನ್ನು ಕ್ಲಿಕ್‌ ಮಾಡಿ.

* ನಂತ್ರ, ಆ ವ್ಯಕ್ತಿಯ ತಂದೆ ಅಥವಾ ಗಂಡನ ಹೆಸರು ಕ್ಲಿಕ್‌ ಮಾಡಿ.
* ಇದೆಲ್ಲಾ ಮುಗಿದ ನಂತ್ರ ಸರ್ಚ್‌ ಮೇಲೆ ಕ್ಲಿಕ್‌ ಮಾಡಿ. ಎಲ್ಲವೂ ಸರಿ ಇದ್ರೆ ಮಾತ್ರ ನಿಮ್ಮ ವಾಸಸ್ಥಳ ದೃಢೀಕರಣ ಪತ್ರ ನಿಮಗೆ ಸಿಗಲಿದೆ.
* ಕೊನೆಯಲ್ಲಿ ಡ್ರಾಪ್‌ ವೀವ್‌ ಮೇಲೆ ಕಲಿಕ್‌ ಮಾಡಿದ್ರೆ, ನಿಮ್ಮ ವಾಸಸ್ಥಳ ದೃಢೀಕರಣ ಪತ್ರ ಸಿದ್ಧವಾಗಿರುವ ಪುಟ ನಿಮ್ಮ ಕಣ್ಣ ಮುಂದೆ ಬರಲಿದೆ.
* ಕೊನೆಯಲ್ಲಿ 40 ರೂ. ಪಾವತಿಸಿದ ನಂತ್ರ, ನಿಮ್ಮ ವಾಸಸ್ಥಳ ದೃಢೀಕರಣ ಪತ್ರ ನಿಮ್ಮ ಕೈ ಸೇರಲಿದೆ.

ವಾಸಸ್ಥಳ ದೃಢೀಕರಣ ಪತ್ರಕ್ಕಾಗಿ ಬೇಕಾಗುವ ಅಗತ್ಯ ದಾಖಲೆಗಳು‌ ನೀವು ಅಧಿಕೃತ ವೆಬ್‌ಸೈಟ್ ಮೂಲಕ ನಿವಾಸ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೆ ಈ ಕೆಳಗಿನ ದಾಖಲೆಗಳು ಅಗತ್ಯವಿರುತ್ತವೆ.

* ಆಧಾರ್ ಕಾರ್ಡ್
* ಅರ್ಜಿ ಪತ್ರ
* ಮೊಬೈಲ್ ನಂಬರ್
* ಆದಾಯ ಪುರಾವೆ
* ಪಟ್ವಾರಿ / ಸರ್ಪಂಚ್ ಬಿಡುಗಡೆ ಮಾಡಿದ ವರದಿ
* ರೇಷನ್ ಕಾರ್ಡ್

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now