Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಪ್ರಸ್ತುತ ಸರ್ಕಾರ ಬಹುತೇಕ ಎಲ್ಲ ಸೇವೆಗಳನ್ನು ಆನ್ಲೈನ್ ವ್ಯಾಪ್ತಿಗೆ ತಂದಿದೆ. ಈ ನಿಟ್ಟಿನಲ್ಲಿ ಜನರು ಅಗತ್ಯ ಸೇವೆಗಳ ಪ್ರಮಾಣ ಪತ್ರಗಳನ್ನು ಆನ್ಲೈನ್ ಮೂಲಕ ಸುಲಭವಾಗಿ ಪಡೆಯಬಹುದಾಗಿದೆ. ಹೀಗಾಗಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹಾಗೂ ನಿವಾಸಿ/ವಾಸಸ್ಥಳ ದೃಢೀಕರಣ ಪತ್ರಗಳನ್ನು ಆನ್ಲೈನ್ ಮೂಲಕವೇ ಪಡೆಯಬಹುದಾಗಿದ್ದು, ಜನರು ನಾಡ ಕಛೇರಿಯಲ್ಲಿ ಅಲೆದಾಡುವ ಅಗತ್ಯವಿಲ್ಲ.
ಹೌದು, ಸರ್ಕಾರದ ಕೆಲವು ಸೌಲಭ್ಯಗಳ ಪಡೆಯುವಿಕೆಗೆ ಹಾಗೂ ಇತರೆ ಅಗತ್ಯ ಕೆಲಸಗಳಿಗೆ ಅರ್ಜಿದಾರರು ವಾಸಸ್ಥಳ ದೃಢೀಕರಣ ಪತ್ರ ನೀಡಬೇಕಿರುತ್ತದೆ. ಜನರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಈ ವಾಸಸ್ಥಳ ದೃಢೀಕರಣ ಪತ್ರವನ್ನು ಪಡೆಯಬಹುದು. ಹಾಗಾದರೆ, ಆನ್ಲೈನ್ ಮೂಲಕ ವಾಸಸ್ಥಳ ದೃಢೀಕರಣ ಪತ್ರ ಪಡೆಯುವುದು ಹೇಗೆ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿ…
ಆನ್ಲೈನ್ನಲ್ಲಿ ವಾಸಸ್ಥಳ ದೃಢೀಕರಣ ಪತ್ರಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
* ಮೊದಲು ʻಭೂಮಿʼ ವೆಬ್ಸೈಟ್ಗೆ ಭೇಟಿ ನೀಡಿ.
* ಲಾಗ್ ಇನ್ ಐಡಿ ಹಾಗೂ ಪಾಸ್ವರ್ಡ್ ನಮೂದಿಸಿ.
* ನಂತ್ರ ಲಾಗ್ ಇನ್ ಮೇಲೆ ಕ್ಲಿಕ್ ಮಾಡಿ.
* ಇಲ್ಲಿ ಕೆಳಗೆ ಕಾಣುವ ʻನಾಡ ಕಚೇರಿ ಸರ್ವಿಸಸ್ʼ ಮೇಲೆ ಕ್ಲಿಕ್ ಮಾಡಿ. ಇದೊಂದು ನಾಡ ಕಚೇರಿ ವೆಬ್ಸೈಟ್ ಆಗಿದೆ.
* ಇಲ್ಲಿ ʻresidential certificateʼ ಮೇಲೆ ಕ್ಲಿಕ್ ಮಾಡಿ.
* ನಂತ್ರ ವಾಸಸ್ಥಳ ಪ್ರಮಾಣ ಪತ್ರದ ಮೇಲೆ ಕ್ಲಿಕ್ ಮಾಡಿ.
* ಇಲ್ಲಿ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಎರಡರಲ್ಲಿ ಒಂದು ನಂಬರ್ ನಮೂದಿಸಿ, ʻಗೋʼ ಎಂಬುದರ ಮೇಲೆ ಕ್ಲಿಕ್ ಮಾಡಿ.
* ಇಲಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ರೂರಲ್ ಅಥವಾ ಅರ್ಬನ್, ವಾರ್ಡ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ.
* ನಂತ್ರ, ನಿಮಗೆ ಸರ್ಟಿಫಿಕೇಟ್ ಇಂಗ್ಲೀಷ್ ಅಥವಾ ಕನ್ನಡದಲ್ಲಿ ಬೇಕಾದರೆ ಭಾಷೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.
* ಇಲ್ಲಿ ಕೆಳಗೆ ಅಪ್ಲಿಕೆಂಟ್ ಅಂತಾ ಇರುತ್ತದೆ. ಇಲ್ಲಿ ನಿಮ್ಮ ಮನೆಯ ಎಲ್ಲಾ ಸದಸ್ಯರ ಹೆಸರು ಇರುತ್ತದೆ.
* ಇಲ್ಲಿ ಯಾರ ಹೆಸರಲ್ಲಿ ವಾಸಸ್ಥಳ ದೃಢೀಕರಣ ಪತ್ರ ಬೇಕೋ ಅವರ ಹೆಸರನ್ನು ಕ್ಲಿಕ್ ಮಾಡಿ.
* ನಂತ್ರ, ಆ ವ್ಯಕ್ತಿಯ ತಂದೆ ಅಥವಾ ಗಂಡನ ಹೆಸರು ಕ್ಲಿಕ್ ಮಾಡಿ.
* ಇದೆಲ್ಲಾ ಮುಗಿದ ನಂತ್ರ ಸರ್ಚ್ ಮೇಲೆ ಕ್ಲಿಕ್ ಮಾಡಿ. ಎಲ್ಲವೂ ಸರಿ ಇದ್ರೆ ಮಾತ್ರ ನಿಮ್ಮ ವಾಸಸ್ಥಳ ದೃಢೀಕರಣ ಪತ್ರ ನಿಮಗೆ ಸಿಗಲಿದೆ.
* ಕೊನೆಯಲ್ಲಿ ಡ್ರಾಪ್ ವೀವ್ ಮೇಲೆ ಕಲಿಕ್ ಮಾಡಿದ್ರೆ, ನಿಮ್ಮ ವಾಸಸ್ಥಳ ದೃಢೀಕರಣ ಪತ್ರ ಸಿದ್ಧವಾಗಿರುವ ಪುಟ ನಿಮ್ಮ ಕಣ್ಣ ಮುಂದೆ ಬರಲಿದೆ.
* ಕೊನೆಯಲ್ಲಿ 40 ರೂ. ಪಾವತಿಸಿದ ನಂತ್ರ, ನಿಮ್ಮ ವಾಸಸ್ಥಳ ದೃಢೀಕರಣ ಪತ್ರ ನಿಮ್ಮ ಕೈ ಸೇರಲಿದೆ.
ವಾಸಸ್ಥಳ ದೃಢೀಕರಣ ಪತ್ರಕ್ಕಾಗಿ ಬೇಕಾಗುವ ಅಗತ್ಯ ದಾಖಲೆಗಳು ನೀವು ಅಧಿಕೃತ ವೆಬ್ಸೈಟ್ ಮೂಲಕ ನಿವಾಸ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೆ ಈ ಕೆಳಗಿನ ದಾಖಲೆಗಳು ಅಗತ್ಯವಿರುತ್ತವೆ.
* ಆಧಾರ್ ಕಾರ್ಡ್
* ಅರ್ಜಿ ಪತ್ರ
* ಮೊಬೈಲ್ ನಂಬರ್
* ಆದಾಯ ಪುರಾವೆ
* ಪಟ್ವಾರಿ / ಸರ್ಪಂಚ್ ಬಿಡುಗಡೆ ಮಾಡಿದ ವರದಿ
* ರೇಷನ್ ಕಾರ್ಡ್