ಗೃಹಿಣಿಯರಿಗೆ ಅನುಕೂಲವಾಗುವಂತಹ ಕೆಲವು ಟಿಪ್ಸ್ ಗಳು ಹೀಗಿವೆ ನೋಡಿ.!

 

WhatsApp Group Join Now
Telegram Group Join Now

ಗೃಹಿಣಿಯರಿಗೆ ಮನೆಯಲ್ಲಿ ಸಾಕಷ್ಟು ಮನೆ ಕೆಲಸಗಳು ಇರುತ್ತದೆ. ಮನೆಯ ಎಲ್ಲಾ ವಸ್ತುಗಳ ನಿರ್ವಹಣೆ ಕೂಡ ಅವರ ಜವಾಬ್ದಾರಿ ಆಗಿರುತ್ತದೆ. ಅಡುಗೆ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಎಲ್ಲಾ ಸಾಮಗ್ರಿಗಳನ್ನು ಕೈಗೆ ಸಿಗುವಂತೆ ಸರಿಯಾಗಿ ಜೋಡಿಸಿಕೊಳ್ಳುವುದು ಜೊತೆಗೆ ಅವು ಹಾಳಾಗಿದೆಯಾ ಖಾಲಿಯಾಗಿದೆಯಾ ಎಂದು ನಿರ್ವಹಣೆ ಮಾಡುವುದು ಇದೆಲ್ಲವೂ ಅವರದ್ದೇ ಜವಾಬ್ದಾರಿ.

ಅದು ಮಾತ್ರ ಅಲ್ಲದೆ ವಾರ್ಡೋಬ್ ಅಲ್ಲಿರುವ ಬಟ್ಟೆಗಳ ವ್ಯವಸ್ಥಿತ ಜೋಡಣೆ, ಅವುಗಳ ವಿಂಗಡನೆ ಮತ್ತು ಮನೆ ಸದಸ್ಯರು ಕೇಳಿದಾಗ ಅವರನ್ನು ಸಂಬಾಳಿಸಿ ಅವರಿಗೆ ಸಮಯಕ್ಕೆ ಸರಿಯಾಗಿ ಕೇಳಿದ ಬಟ್ಟೆಗಳನ್ನು ಕೊಡುವುದು ಜೊತೆಗೆ ಬೆಲೆಬಾಳುವ ಬಟ್ಟೆಗಳಾಗಿದ್ದರೆ ಅವುಗಳು ಹಾಳಾಗದಂತೆ ನೋಡಿಕೊಳ್ಳುವುದು, ಮನೆಗೆ ಹೊಸ ವಸ್ತುಗಳನ್ನು ತಂದಾಗ ಹಳೆ ವಸ್ತುಗಳ ಜಾಗ ಖಾಲಿ ಮಾಡಿಸುವುದು ಇನ್ನು ಮುಂತಾದ ಅನೇಕ ಕೆಲಸಗಳು ಇರುತ್ತವೆ.

ಈ ಪಟ್ಟಿ ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲ. ಹಾಗಾಗಿ ಗೃಹಿಣಿಯರಿಗೆ ಮನೆಯಲ್ಲಿ ಏನು ಕೆಲಸ ಇರುತ್ತದೆ ಎಂದು ಪ್ರಶ್ನೆ ಮಾಡುವಂತಿಲ್ಲ. ಎಷ್ಟು ಮಾಡಿದರೂ ಮುಗಿಯದಷ್ಟು ಕೆಲಸಗಳು ಮನೆಯಲ್ಲಿ ಇರುತ್ತದೆ. ಆದರೆ ಈ ಅಂಕಣದಲ್ಲಿ ನಾವು ಮನೆಯಲ್ಲಿರುವ ಗೃಹಿಣಿಯರಿಗೆ ತಮ್ಮ ದಿನನಿತ್ಯದ ಕೆಲಸಗಳಲ್ಲಿ ಬಹಳ ಬೇಗ ಪರಿಣಾಮಕಾರಿಯಾಗಿ ಕೆಲಸ ಮುಗಿವಂತೆ ಸಹಾಯ ಮಾಡುವ ಕಾರಣ ಕೆಲ ಟಿಪ್ಸ್ ಗಳನ್ನು ನೀಡುತ್ತಿದ್ದೇವೆ.

ನೀವು ಈ ಟಿಪ್ಸ್ ಗಳನ್ನು ಫಾಲೋ ಮಾಡಿ ನಿಮ್ಮ ಕೆಲಸ ಸ್ವಚ್ಛವಾಗಿ ಮತ್ತು ಬೇಗ ಆಗುವ ಹಾಗೆ ಮಾಡಿಕೊಳ್ಳಿ. ಮೊದಲಿಗೆ ಮಹಿಳೆಯರಿಗೆ ಇಷ್ಟವಾದ ರೇಷ್ಮೆ ಸೀರೆಗಳ ಬಗ್ಗೆ ಹೇಳುತ್ತಿದ್ದೇವೆ. ರೇಷ್ಮೆ ಸೀರೆಗಳನ್ನು ಅಥವಾ ಬೆಲೆ ಬಾಳುವ ಸೀರೆಗಳನ್ನು ಪದೇಪದೇ ನೀರಿನಲ್ಲಿ ಹಾಕಿ ವಾಶ್ ಮಾಡುವಂತಿಲ್ಲ. ಬೇಕಾದರೆ ಮೂರು ನಾಲ್ಕು ಬಾರಿ ಧರಿಸಿದ ನಂತರ ಅವುಗಳನ್ನು ವಾಶ್ ಮಾಡಬಹುದು.

ಆದರೆ ಒಂದು ಬಾರಿ ತೋರಿಸಿದಂತೆ ಅದರಲ್ಲಿ ಪೆನ್ ಕಲೆ ಅಥವಾ ಕಾಫಿ ಕಲೆ ಅಥವಾ ಎಣ್ಣೆ ಕಲೆ ಈ ರೀತಿ ಆದಾಗ ಪೂರ್ತಿ ಸೀರೆ ವಾಶ್ ಮಾಡುವ ಬದಲು ಅದನ್ನು ಫೋಲ್ಡ್ ಮಾಡಿ ಇಟ್ಟುಕೊಳ್ಳಿ, ಮೊದಲ ಮಡಿಕೆಯಲ್ಲಿ ಕಲೆ ಕಾಣುವ ರೀತಿ ಇಟ್ಟುಕೊಳ್ಳಿ. ಅದರ ಮೊದಲ ಮಡಕೆ ಕೆಳಗೆ ಒಂದು ಅಗಲವಾದ ಬಟ್ಟಲನ್ನು ಇಡಿ, ಈಗ ಆ ಕಲೆಯ ಮೇಲೆ ಡೆಟೋಲ್ ಹಾಕಿ ಕೈಯಿಂದ ಉಜ್ಜಿ ಮತ್ತು ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಆ ಕಲೆ ಮೇಲೆ ಹಾಕಿ ಆಶ್ಚರ್ಯ ಪಡುವ ರೀತಿ ಕಲೆ ಮಾಯವಾಗಿರುತ್ತದೆ.

ಹಾಗೆ ರೇಷ್ಮೆ ಸೀರೆಗಳನ್ನು ಮಡಚಿ ಇಡುವಾಗ ಒಂದೇ ಫೋಲ್ಡಿಂಗ್ ಅಲ್ಲಿ ಹಲವು ದಿನಗಳವರೆಗೆ ಇಡಬಾರದು, ತಿಂಗಳಿಗೊಮ್ಮೆ ಬದಲಾಯಿಸುತ್ತಿರಬೇಕು.ಇದರಿಂದ ಸೀರೆ ಕಟ್ ಆಗುವುದು ತಪ್ಪುತ್ತದೆ. ಮನೆಗೆ ತರುವ ರೇಷನ್ ಅಕ್ಕಿಯಲ್ಲಿ ಬಹಳ ಬೇಗ ಕಪ್ಪು ಹುಳುಗಳು ಹಾಗೂ ಇರುವೆಗಳು ಸೇರಿಸಿಕೊಳ್ಳುತ್ತವೆ. ಅದನ್ನು ಕ್ಲೀನ್ ಮಾಡಲು ಬಹಳ ಸಮಯ ಬೇಕಾಗುತ್ತದೆ. ಬೇಗ ಕ ಕೆಲಸ ಆಗಲು ಒಂದು ಚೀಲದ ಮೇಲೆ ಎಲ್ಲಾ ಅಕ್ಕಿಯನ್ನು ಹರಡಬೇಕು ಲೆಕ್ಕ ಇಟ್ಟುಕೊಂಡು ಬೆಂಕಿಕಡ್ಡಿಗಳನ್ನು ಅದರ ಒಳಗೆ ಇಡಬೇಕು.

ಇದಾದ ಒಂದು ಗಂಟೆ ಒಳಗೆ ಎಲ್ಲಾ ಇರುವೆಗಳು ಹಾಗೂ ಹುಳಗಳು ಕೂಡ ಮದ್ದಿನ ವಾಸನೆಗೆ ಹೋಗುತ್ತವೆ, ಆಗ ಲೆಕ್ಕ ಮಾಡಿ ಹಾಕಿಟ್ಟಿದ್ದಷ್ಟು ಬೆಂಕಿಕಡ್ಡಿಗಳನ್ನು ವಾಪಾಸ್ ತೆಗೆದುಕೊಂಡು ಅದನ್ನು ಒಂದು ಡಬ್ಬಕ್ಕೆ ಹಾಕಿ ಶೇಖರಿಸಿ ಇಟ್ಟುಕೊಳ್ಳಬಹುದು. ಆ ಸಮಯದಲ್ಲಿ ಸಹ ಖಾಲಿಯಾದ ಇಂಗಿನ ಡಬ್ಬದಲ್ಲಿ ಸ್ವಲ್ಪ ಇಂಗು ಉಳಿಸಿ ಅದನ್ನು ಅಕ್ಕಿ ಒಳಗೆ ಹಾಕಿ ಡಬ್ಬದಲ್ಲಿ ಇಡಬೇಕು.

ಹೊಸ ಪೊರಕೆ ತಂದಾಗ ಅದರಲ್ಲಿ ಬಹಳ ದಿನದವರೆಗೆ ಧೂಳು ಉದುರುತ್ತಿರುತ್ತದೆ ಆಗ ನೀವು ಧೂಳನು ಒಂದೇ ಸಾರಿ ತೆಗಿಯಬೇಕು ಎಂದರೆ ಬಾಚಣಿಕೆಯಿಂದ ಅದನ್ನು ಬಾಚಿ ಉದುರಿಸಬೇಕು. ನಂತರ ನೀರಿಗೆ ಹಾಕಿ ಒಂದು ಬಾರಿ ತೊಳೆದು ಒಣಗಿಸಿ ಬಳಸುವುದರಿಂದ ಪದೇಪದೇ ಈ ರೀತಿ ಧೂಳು ಉದುರುವುದು ಕಡಿಮೆ ಆಗುತ್ತದೆ. ಇಂತಹ ಹಲವು ಉಪಾಯಗಳ ಬಗ್ಗೆ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now