ಕೇಂದ್ರ ಸರ್ಕಾರವು ಮೋಟರು ವಾಹನಗಳ ಕಾಯ್ದೆಯನ್ನು ಪದೇಪದೇ ಪರಿಷ್ಕರಿಸುತ್ತಿರುತ್ತದೆ. ಈಗಾಗಲೇ ಮೋಟಾರ್ ವಾಹನಗಳ ಸಂಚಾರದ ಕುರಿತಂತೆ ಸಾಕಷ್ಟು ನಿಯಮಗಳನ್ನು ಹೇರಿರುವ ಕೇಂದ್ರ ಸರ್ಕಾರವು ಮತ್ತೊಮ್ಮೆ ಖಾಸಗಿ ವಾಹನಗಳನ್ನು ಹೊಂದಿರುವ ಮಾಲೀಕರಿಗೆ ಶಾಕ್ ನೀಡಿದೆ. ಡೀಸೆಲ್ ಮೂಲಕ ಚಾಲಿತವಾಗುವ ವಾಹನಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸಿದೆ ಇದು ಜಾರಿಯಾದಲ್ಲಿ ಯಾವುದೇ ಡೀಸೆಲ್ ಆಧಾರಿತ ವಾಹನಗಳು ರಸ್ತೆಯಲ್ಲಿ ಓಡಾಡುವಂತಿಲ್ಲ.
ಕೇಂದ್ರ ಇಂಧನ ಸಚಿವಾಲಯದ ಕ ಹೊಸ ನಿಯಮ ಎಲ್ಲರನ್ನು ಗಾಬರಿಗೊಳಿಸಿದೆ. ಆದರೆ ಈಗ ದೇಶದಾದ್ಯಂತ ಅನೇಕರು ಡೀಸೆಲ್ ಆಧಾರಿತ ವಾಹನವನ್ನು ಖರೀದಿ ಮಾಡಿದ್ದಾರೆ. ಈ ನಿಯಮ ಹೇರಿಕೆ ಆದರೆ ಎನ್ನುವ ಆತಂಕದಲ್ಲಿ ಅವರಿದ್ದಾರೆ. ಆದರೆ ಈ ಬಗ್ಗೆ ಕೇಂದ್ರ ಇಂಧನ ಸಚಿವಾಲಯದ ಅಧಿಕೃತ ವೆಬ್ಸೈಟ್ ಅಲ್ಲಿ ಪ್ರಸ್ತಾಪವಾಗಿರುವ ವಿವರ ಸ್ಪಷ್ಟವಾಗಿ ಈ ರೀತಿ ಇದೆ.
ಕೇಂದ್ರ ಇಂಧನ ಸಚಿವಾಲಯದ ಈ ಚಿಂತನೆಗೆ ಮುಖ್ಯ ಕಾರಣ ಅನಿಲ ಹೊರಸೂಸುವಿಕೆಯನ್ನು ತಡೆಗಟ್ಟುವುದು. ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿರುವ ಸರ್ಕಾರವು ಈ ಕಾರಣಕ್ಕಾಗಿ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಮಾಲಿನ್ಯ ಪೀಡಿತ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಡೀಸೆಲ್ ಆಧಾರಿತ ವಾಹನಗಳ ಬಳಕೆ ಬದಲು ವಿದ್ಯುತ್ ಗ್ಯಾಸ್ ಆಧಾರಿತ ವಾಹನಗಳನ್ನೇ ಬಳಸಬೇಕು ಎಂದು ಕೇಂದ್ರ ಇಂಧನ ಸಚಿವಾಲಯ ಸಮಿತಿ ಶಿಫಾರಸು ಮಾಡಿದೆ. 2030ರ ವೇಳೆಗೆ ಎಲೆಕ್ಟ್ರಿಕಲ್ ವಾಹನಗಳು ಹೊರತುಪಡಿಸಿ ಯಾವುದೇ ಇಂಧನ ಆಧಾರಿತ ಸಿಟಿ ಬಸ್ ಗಳ ಬಳಕೆ ಇರಬಾರದು. ಅದಕ್ಕಾಗಿ 2024 ರಿಂದಲೆ ನಗರ ಸಾರಿಗೆ ಡೀಸೆಲ್ ಬಸ್ ಗಳನ್ನು ಸಂಚಾರ ನಿಲ್ಲಬೇಕು ಎಂದು ಆಜ್ಞಾಪಿಸಿದೆ.
ಮಾಜಿ ಇಂಧನ ಸಚಿವಾಲಯದ ಕಾರ್ಯದರ್ಶಿ ತರುಣ್ ಕಪೂರ್ ನೇತೃತ್ವದ ಇಂಧನ ಪರಿವರ್ತನಾ ಸಲಹಾ ಸಮಿತಿಯ ಈ ಶಿಫಾರಸನ್ನು ಜಾರಿಗೆ ತರಲು ಪೆಟ್ರೋಲಿಯಂ ಸಚಿವಾಲಯ ಕೇಂದ್ರ ಕ್ಯಾಬಿನೆಟ್ ಅನುಮೋದನೆಯನ್ನು ಪಡೆಯುತ್ತದೆ ಎನ್ನುವುದನ್ನು ಕೂಡ ವೆಬ್ಸೈಟ್ ವರದಿಯಲ್ಲಿ ತಿಳಿಸಲಾಗಿದೆ. ಸಂಸ್ಕರಿಸಿ ಬಳಸಲಾದ ಇಂಧನಗಳ ಬಳಕೆಯಲ್ಲಿ ಡೀಸೆಲ್ ಅನ್ನು ಐದನೇ ಎರಡರಷ್ಟು ಬಳಸಲಾಗುತ್ತಿದೆ. ಅದರಲ್ಲೂ ಕೂಡ ಸಾರಿಗೆ ವಲಯದಲ್ಲಿ 80%ರಷ್ಟು ಬಳಕೆ ಆಗುತ್ತಿದೆ. ಇದರ ಬೇಡಿಕೆಯನ್ನು ತಗ್ಗಿಸಲು ಮತ್ತು ಇದರಿಂದ ಮಾಲಿನ್ಯ ಆಗುವುದನ್ನು ತಡೆಗಟ್ಟಲು ಇಂಥಹದೊಂದು ಮಹತ್ವದ ತೀರ್ಮಾನಕ್ಕೆ ಬರಲಾಗಿದ್ದು 2024 ರಿಂದಲೇ ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಕಲ್ ವಾಹನಗಳನ್ನು ನೋಂದಣಿ ಮಾಡಬೇಕು, ಜೊತೆಗೆ ವಿದ್ಯುತ್ ಮತ್ತು ಗ್ಯಾಸ್ ಮೂಲಕ ನಡೆಯುವ ಸರಕು ಸಾಗಣೆ ರೈಲು ಮತ್ತು ಅನ್ಯ ಚಾಲಿತ ಟ್ರಕ್ ಗಳ ಮಾಡಬೇಕು ಎಂದು ಸಚಿವಾಲಯ ಸಮಿತಿ ಶಿಫಾರಸು ಮಾಡಿದೆ.
ರೈಲ್ವೆ ವಲಯವನ್ನು ಇನ್ನು ಎರಡೇ ವರ್ಷಗಳಿಗೆ ಸಂಪೂರ್ಣವಾಗಿ ವಿದ್ಯುತ್ ಚಾಲಿತ ಮಾಡಬೇಕು ಎನ್ನುವುದು ಸಮಿತಿಯ ಆಶಯವಾಗಿದೆ. ಇದಷ್ಟೇ ಅಲ್ಲದೆ ದೂರದ ಪ್ರಯಾಣಕ್ಕೆ ಬಳಸುವ ಬಸ್ ಗಳಲ್ಲೂ ಕೂಡ ಈ ರೀತಿ ವಿದ್ಯುತ್ ಚಾಲಿತ ಬಸ್ ಗಳ ಬಳಕೆ ಹೆಚ್ಚಾಗಬೇಕು ಎನ್ನುವ ಆಸಕ್ತಿಯನ್ನು ಹೊಂದಿದೆ. 2020 ಮತ್ತು 2050ರ ನಡುವೆ ಬೇಡಿಕೆಯು ಶೇಕಡಾ 9.78 ರಷ್ಟು ಏರಿಕೆ ಆಗಬಹುದೆಂಬ ನಿರೀಕ್ಷೆ ಇರುವುದರಿಂದ ಭೂಮಿ ಅಡಿಯಲ್ಲಿ ಅನಿಲ ಸಂಗ್ರಹಗಾರವನ್ನು ನಿರ್ಮಿಸಲು ಭಾರತ ಪ್ರಯತ್ನ ಮಾಡಬೇಕು ಇದಕ್ಕಾಗಿ ಇರುವ ಎಲ್ಲ ಮೂಲಗಳನ್ನು ಬಳಸಿಕೊಳ್ಳಬೇಕು ಎನ್ನುವ ಸಲಹೆಗಳು ಕೂಡ ನೀಡಿದೆ. ಇವೆಲ್ಲದರಿಂದ ಶೀಘ್ರವಾಗಿ ವಿದ್ಯುತ್ ಚಾಲಿತ ವಾಹನಗಳ ಬಳಕೆ ಹೆಚ್ಚಾಗುವುದು ಖಚಿತ ಎನ್ನಬಹುದು.