ಸಾಲ ಬೇಕಂದ್ರೆ ನಮಗೆ ಮೊದಲು ನೆನಪಾಗೋದು ಬ್ಯಾಂಕ್ಗಳು. ಇವು ಸಕಾಲಕ್ಕೆ ಸಾಲ ನೀಡುತ್ತವೆ. ಇನ್ನೂ, ಇಲ್ಲಿ ಸಾಲ ಪಡೆದವರ ಅದೃಷ್ಟ ಚೆನ್ನಾಗಿದ್ರೆ, ಆ ಸಾಲ ಮನ್ನಾ ಕೂಡ ಆಗುತ್ತದೆ. ಇದೀಗ ಬ್ಯಾಂಕ್ವೊಂದು ತನ್ನಲ್ಲಿ ಗೃಹ ಸಾಲ ಪಡೆದವರ ಸಾಲ ಮನ್ನಾ ಮಾಡಿದೆ. ಅದೇ ದೇಶದ ಅತಿದೊಡ್ಡ ಬ್ಯಾಂಕ್ ಎಸ್ಬಿಐ (SBI) ಬ್ಯಾಂಕ್. SBI ಬ್ಯಾಂಕ್ ಜನರಿಗೆ ಹಲವಾರು ರೀತಿಯ ಸೇವೆಗಳನ್ನು ಒದಗಿಸುತ್ತಿದೆ. ಬ್ಯಾಂಕ್ atm ಹಿಂಪಡೆಯುವಿಕೆಗಳು, ಆನ್ ಲೈನ್ ಬ್ಯಾಂಕಿಂಗ್ ಸೇವೆಗಳು, ಠೇವಣಿಗಳು, ಸಾಲಗಳಂತಹ ವಿವಿಧ ರೀತಿಯ ಸೇವೆಗಳನ್ನ ನೀಡುತ್ತದೆ.
ಬ್ಯಾಂಕುಗಳ ಆದಾಯದ ಮುಖ್ಯ ಮೂಲವೆಂದರೆ ಸಾಲ. ದೇಶದ ಅತಿ ದೊಡ್ಡ ಬ್ಯಾಂಕ್ ಆಗಿ ಮುಂದುವರಿದಿರುವ SBI ಇತ್ತೀಚೆಗೆ ಸಾಲಗಾರರಿಗೆ ಸಿಹಿಸುದ್ದಿ ನೀಡಿದೆ. ಹೌದು, ಗ್ರಾಹಕರಿಗೆ ಬಡ್ಡಿದರದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಹಬ್ಬ-ಹರಿದಿನಗಳ ಹಿನ್ನೆಲೆಯಲ್ಲಿ ಬ್ಯಾಂಕ್ ಈ ಸೌಲಭ್ಯ ಕಲ್ಪಿಸಿದೆ. ಆದ್ದರಿಂದ, ಸಾಲವನ್ನು ತೆಗೆದುಕೊಳ್ಳುವ ಆಲೋಚನೆಯಲ್ಲಿರುವವರು ಈ ಕೊಡುಗೆಯ ಲಾಭವನ್ನು ಪಡೆಯಬಹುದು.
ನೀವು SBI ಗೃಹ ಸಾಲವನ್ನು ತೆಗೆದುಕೊಂಡರೆ, ಪ್ರಕ್ರಿಯೆ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. ಇದು SBI ನಿಯಮಿತ ಮತ್ತು ಟಾಪ್ ಅಪ್ ಹೋಮ್ ಲೋನ್ಗಳಿಗೆ ಅನ್ವಯಿಸುತ್ತದೆ. ಆದರೆ, ಇಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬೇಕೆಂದರೆ CIBIL ಸ್ಕೋರ್ ಉತ್ತಮವಾಗಿರಬೇಕು. ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರುವವರು ಮಾತ್ರ ರಿಯಾಯಿತಿ ಪ್ರಯೋಜನಗಳನ್ನು ಪಡೆಯುತ್ತಾರೆ. ಬ್ಯಾಂಕುಗಳು ಸಾಮಾನ್ಯವಾಗಿ ಕಡಿಮೆ ಬಡ್ಡಿಗೆ ಠೇವಣಿಗಳನ್ನ ಸ್ವೀಕರಿಸುತ್ತವೆ ಮತ್ತು ಹೆಚ್ಚಿನ ಬಡ್ಡಿಗೆ ಗ್ರಾಹಕರಿಗೆ ನೀಡುತ್ತವೆ. ಎಸ್ಬಿಐ ಕೂಡ ಇದಕ್ಕೆ ಹೊರತಾಗಿಲ್ಲ.
ಎಸ್ಬಿಐ ಗ್ರಾಹಕರಿಗೆ ವಿವಿಧ ರೀತಿಯ ಸಾಲಗಳನ್ನು ನೀಡುತ್ತದೆ. ಗೃಹ ಸಾಲಗಳು ಇದರಲ್ಲಿ ಪ್ರಮುಖವಾಗಿದೆ. ಇವು ದೊಡ್ಡ ಮೊತ್ತಗಳಾಗಿವೆ. ಆದರೆ ಈ ಬ್ಯಾಂಕ್ ಗೃಹ ಸಾಲವನ್ನು ಗಮನಿಸಿದರೆ, ಕಳೆದ ಐದು ವರ್ಷಗಳಲ್ಲಿ ಇಎಂಐ ಕಟ್ಟದೇ ಸುಸ್ತಿದಾರರ ಸಂಖ್ಯೆ ಹೆಚ್ಚಿದೆ. ಹಣಕಾಸು ವರ್ಷ 2018-19 ರಿಂದ 2022-23 ರವರೆಗೆ ಎಸ್ಬಿಐನಲ್ಲಿ ಸುಮಾರು 113603 ಜನರು ತಮ್ಮ ಇ ಎಂ ಐ ಸಾಲವನ್ನು ಸರಿಯಾಗಿ ಪಾವತಿಸುತ್ತಿಲ್ಲ. ಆದರೆ, ಈ ಖಾತೆಗಳು ಡೀಫಾಲ್ಟ್ ಆಗಿವೆ. ಇವುಗಳ ಮೌಲ್ಯ ಒಟ್ಟು ರೂ. 7655 ಕೋಟಿ. ಕೊರೊನಾ ಸೇರಿದಂತೆ ಇತರ ಹಲವು ಅಂಶಗಳು ಇದಕ್ಕೆ ಕಾರಣವೆಂದು ಹೇಳಬಹುದು.
ಎಸ್ಬಿಐನಿಂದ ಗೃಹ ಸಾಲ ಮನ್ನಾ
ಎಸ್ಬಿಐ ಈ ಅವಧಿಯಲ್ಲಿ ಸುಮಾರು 2178 ಕೋಟಿ ಮೌಲ್ಯದ 45,168 ಗೃಹ ಸಾಲ ಖಾತೆಗಳನ್ನ ವಜಾ ಮಾಡಿದ್ದು, ಆರ್ಟಿಐನಲ್ಲಿ ಈ ವಿಷಯ ಬಹಿರಂಗವಾಗಿದೆ. ಆರ್ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್, ಆರ್ಟಿಐ ಕಾಯ್ದೆಯಡಿ ಈ ವಿಷಯಗಳನ್ನ ಕೇಳಿದ್ದಾರೆ. ಅವರ ಪ್ರಕಾರ, ಸ್ಟೇಟ್ ಬ್ಯಾಂಕ್ 2018-19ರಲ್ಲಿ 237 ಕೋಟಿ, 2019-20ರಲ್ಲಿ 192 ಕೋಟಿ, 2020-21ರಲ್ಲಿ 410 ಕೋಟಿ, 2021-22ರಲ್ಲಿ 642 ಕೋಟಿ, 2022-23ರಲ್ಲಿ 697 ಕೋಟಿ ಗೃಹ ಸಾಲ ಮನ್ನಾ ಮಾಡಲಾಗಿದೆ.
SBI ಗೃಹ ಸಾಲಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅವರ ಗೃಹ ಸಾಲಗಳಿಗೆ ಲಾಭದಾಯಕ ಬಡ್ಡಿದರಗಳನ್ನು ನೀಡುತ್ತದೆ ಮತ್ತು ಅವುಗಳು 8.55% ರಷ್ಟು ಕಡಿಮೆ ಪ್ರಾರಂಭವಾಗುತ್ತವೆ. ಈ ಸಾಲಗಳ ಅವಧಿಯು 30 ವರ್ಷಗಳವರೆಗೆ ಇರುತ್ತದೆ. ನೀವು SBI ಗೃಹ ಸಾಲದ ಬಡ್ಡಿ ದರದ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಸಾಲದ ಮೊತ್ತಕ್ಕೆ ಕನ್ಸಾಲಿಡೇಟೆಡ್ ಪ್ರೊಸೆಸಿಂಗ್ ಶುಲ್ಕವನ್ನು ಹೊಂದಿದೆ ಮತ್ತು ಇದು ಸಾಮಾನ್ಯ ಸೇವಾ ತೆರಿಗೆಗೆ ಒಳಪಟ್ಟಿರುತ್ತದೆ.
ಸಾಲದ ಮೊತ್ತವು ಆಸ್ತಿಯ ವೆಚ್ಚದ 90% ವರೆಗೆ ಇರಬಹುದು. ರಕ್ಷಣಾ ಸಿಬ್ಬಂದಿ, ಸಂಬಳ ಪಡೆಯದ ಉದ್ಯೋಗಿಗಳು, ಸರ್ಕಾರಿ ನೌಕರರು, ಹಸಿರು ಮನೆಗಳನ್ನು ಖರೀದಿಸುವ ಅರ್ಜಿದಾರರು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ವ್ಯಕ್ತಿಗಳಿಗೆ ವಿಶೇಷ ಗೃಹ ಸಾಲ ಉತ್ಪನ್ನಗಳನ್ನು ಎಸ್ಬಿಐ ನೀಡುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಬರುವ ಕೆಲವು ಇತರ ಅನುಕೂಲಗಳು ಮಹಿಳಾ ಸಾಲಗಾರರಿಗೆ 0.05% ಬಡ್ಡಿದರದ ರಿಯಾಯಿತಿಗಳು, ಓವರ್ಡ್ರಾಫ್ಟ್ಗಳು, ಬ್ಯಾಲೆನ್ಸ್ ಸೌಲಭ್ಯಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಿವೆ.