ಭಾರತದ ಮನೆಗಳಿಗೂ ಹಾಗೂ ಅಮೆರಿಕದ ಮನೆಗಳಿಗೂ ಇರುವ ವ್ಯತ್ಯಾಸ ಏನು ಗೊತ್ತಾ.?

 

WhatsApp Group Join Now
Telegram Group Join Now

ನಮ್ಮ ಭಾರತದ ಹಾಗೂ ಅಮೆರಿಕಾದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ನಮ್ಮ ನಡೆ ನುಡಿ ಆಚಾರ ವಿಚಾರ ನಮ್ಮ ಆಹಾರ ಪದ್ಧತಿ ಇಲ್ಲಿನ ಜನಜೀವನ ಸೇರಿ ರಾಜಕೀಯ ವಿಚಾರ ಸಿನಿಮಾ ಇಂಡಸ್ಟ್ರಿ ಈ ರೀತಿ ಯಾವುದನ್ನೇ ನೋಡಿದರು ಒಂದಕ್ಕೊಂದು ತದ್ವಿರುದ್ಧ ಎಂದೇ ಹೇಳಬಹುದು. ಹಗಲು ರಾತ್ರಿಗಳ ಸಮಯದಲ್ಲಿ ಮಾತ್ರ ಒಂದಕ್ಕೊಂದು ವಿರುದ್ಧವಾಗಿರದೆ ಜೀವನಶೈಲಿ ಕೂಡ ವಿರುದ್ದವಾಗಿದೆ. ಇದನ್ನೇ ಸಹ ನಾವು ಇಂಡಿಯನ್ ಲೈಫ್ ಸ್ಟೈಲ್ ಅಮೆರಿಕನ್ ಲೈಫ್ ಸ್ಟೈಲ್ ಎಂದು ಕರೆಯುವುದು.

ಈ ಲೈಫ್ ಸ್ಟೈಲ್ ಹೀಗಿರುವುದರಿಂದ ಇದು ಪ್ರತಿಯೊಂದರ ಮೇಲೂ ಕೂಡ ಪ್ರಭಾವ ಬೀರುತ್ತದೆ. ಅವರ ಉದ್ಯೋಗಗಳು, ಉದ್ಯೋಗ ಮಾಡುವ ರೀತಿ, ಪಡೆಯುವ ವೇತನ, ತಿನ್ನುವ ಆಹಾರ, ಅದನ್ನು ಬೆಳೆಯುವ ಕೃಷಿ ವಿಧಾನ, ಅವರು ವಾಸಿಸುವ ಮನೆ, ಸಾಕುವ ಪ್ರಾಣಿ, ಅವರ ವೀಕೆಂಡ್ ಪ್ಲಾನ್, ಅವರ ಕುಟುಂಬಗಳು ಸಂಬಂಧಗಳು ಹೀಗೆ ಎಲ್ಲವೂ ಕೂಡ ವಿಭಿನ್ನವೇ.

ಜನರು ಅಮೆರಿಕದ ಬಗ್ಗೆ ಮಾತನಾಡುವುದನ್ನು ಕೇಳಿದ್ದೇವೆ. ಸಿನಿಮಾಗಳ ಮೂಲಕ ಕೂಡ ಅಮೆರಿಕದ ಬದುಕು ಹೇಗಿರುತ್ತೇವೆ ಎನ್ನುವುದನ್ನು ಸ್ವಲ್ಪ ಕಂಡಿದ್ದೇವೆ. ಯಾರಾದರೂ ಈ ರೀತಿ ಅಮೆರಿಕಾ ಎಂದು ಹೇಳಿದ ತಕ್ಷಣವೇ ಎಲ್ಲರ ಕಿವಿಗಳೂ ಕೂಡ ನೆಟ್ಟಗಾಗುತ್ತವೆ. ಈ ಒಂದು ರೀತಿಯ ಕುತೂಹಲವನ್ನು ಉಳಿಸಿಕೊಂಡಿರುವ ದೂರದ ಅಮೆರಿಕ ದೇಶದ ಬಗ್ಗೆ ಏನೇ ವಿಷಯ ಇದ್ದರೂ ಕೂಡ ಅದರ ಮೇಲೆ ಭಾರತೀಯರಿಗೆ ಆಸಕ್ತಿ ಹೆಚ್ಚು.

ಅದಕ್ಕಾಗಿ ಈ ಅಂಕಣದಲ್ಲಿ ಅಮೆರಿಕಾದ ಮನೆಗಳು ಹಾಗೂ ಭಾರತದ ಮನೆಗಳಿಗೂ ಇರುವ ವ್ಯತ್ಯಾಸದ ಬಗ್ಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದರಲ್ಲಿ ಭಾರತೀಯರ ಮೈಂಡ್ ಸೆಟ್ ಹಾಗೂ ಅಮೆರಿಕಾದ ಮೈಂಡ್ ಸೆಟ್ ಹೇಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬಹುದು.

ಯಾವುದು ಬೆಸ್ಟ್ ಎಂದು ಕಂಪೇರ್ ಆಡಲು ಸಾಧ್ಯವಿಲ್ಲ. ಯಾಕೆಂದರೆ ಪ್ರತಿಯೊಂದಕ್ಕೂ ಕೂಡ ಅದರದ್ದೆ ಆದ ಅಡ್ವಾನ್ಟೇಜ್ ಮತ್ತು ಡಿಸ್ ಅಡ್ವಾನ್ಟೇಜ್ ಗಳು ಲಾಭ ಹಾಗೂ ನಷ್ಟಗಳು ಇದ್ದೇ ಇದೆ. ಇವುಗಳ ಬಗ್ಗೆ ಹೇಳುತ್ತಾ ಹೋದರೆ ದೊಡ್ಡಪಟ್ಟಿಯನ್ನೇ ಕೊಡಬಹುದು. ಅದರಲ್ಲಿ ಕೆಲ ಪ್ರಮುಖ ವ್ಯತ್ತಾಸಗಳ ಬಗ್ಗೆ ಹೇಳುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

ನಾವು ಭಾರತೀಯರ ಸ್ವಿಚ್ ಬೋರ್ಡ್ ನೋಡಿದಾಗ ಅಲ್ಲಿ ಹಲವು ಸ್ವಿಚ್ಗಳು ಮತ್ತು ಸಾಕೆಟ್ಗಳು ಇರುವುದನ್ನು ನೋಡಿದ್ದೇವೆ. ಒಂದು ಸ್ವಿಚ್ ಬೋರ್ಡ್ ಅಲ್ಲಿ ಮೂರಕ್ಕಿಂತ ಹೆಚ್ಚು ಸಾಕೆಟ್ ಇರುವುದನ್ನು ಕೂಡ ನಾವು ಭಾರತದಲ್ಲಿ ನೋಡಬಹುದು. ಹೆಚ್ಚಾಗಿ ನಮ್ಮಲ್ಲಿ ಸ್ವಿಚ್ ಬೋರ್ಡ್ ಗಳುಎತ್ತರದಲ್ಲಿ ಇರುತ್ತದೆ ಆದರೆ ಅಮೇರಿಕಾದಲ್ಲಿ ಈ ರೀತಿ ಇರುವುದಿಲ್ಲ.

ಅಮೆರಿಕದ ಸ್ವಿಚ್ ಬೋರ್ಡ್ ಗಳು ಫ್ಲೋರಿಗೆ ಹತ್ತಿರವಾಗಿರುತ್ತವೆ. ಅಲ್ಲದೆ ಅವರ ಸಾಕೆಟ್ ಪಕ್ಕ ಯಾವುದೇ ಸ್ವಿಚ್ ಇರುವುದಿಲ್ಲ. ಮೇನ್ ಸ್ವಿಚ್ ಇಂದಲೇ ಇವುಗಳನ್ನು ಕಂಟ್ರೋಲ್ ಮಾಡುತ್ತಿರುತ್ತಾರೆ. ಸ್ಯಾಕೆಟ್ಗೇ ಪ್ಲಗ್ ಹಾಕಿ ನೀವು ನೇರವಾಗಿ ವಿದ್ಯುತ್ ಉಪಯೋಗಿಸಬಹುದು. ಅಮೆರಿಕಗಳಲ್ಲಿ ಎಷ್ಟು ದೊಡ್ಡ ಮನೆಯಾಗಿದ್ದರು ಹೆಚ್ಚೆಂದರೆ ಎರಡು ಅಥವಾ ಮೂರು ಸ್ವಿಚ್ ಗಳನ್ನು ಕಾಣಬಹುದು.

ಇನ್ನು ಮನೆಗೆ ಹಾಕಿಸುವ ಫ್ಲೋರ್ ಟೈಲ್ಸ್ ಮತ್ತು ಕಾರ್ಪೆಟ್ ವಿಚಾರದಲ್ಲಿ ಕೂಡ ಭಾರತೀಯರ ಇಂಟರೆಸ್ಟ್ ಹಾಗೂ ಅಮೆರಿಕದಲ್ಲಿ ಇಂಟರೆಸ್ಟ್ ಬೇರೆ ರೀತಿ ಇದೆ. ಇದರೊಂದಿಗೆ ಮನೆ ಒಂದು ವಿಷಯಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಭಿನ್ನ ಅಭಿಪ್ರಾಯಗಳಿರುವುದನ್ನು ಕಾಣಬಹುದು. ಇದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now