ನಿಮ್ಮ ಗ್ರಾಮದಲ್ಲಿ ಯಾವ ಪಕ್ಷಕ್ಕೆ ಎಷ್ಟು ವೋಟ್ ಬಿದ್ದಿದೆ ಎಂದು ನಿಮ್ಮ ಮೊಬೈಲ್ ಮೂಲಕವೇ ತಿಳಿದುಕೊಳ್ಳಬಹುದು ನೋಡಿ.!

 

WhatsApp Group Join Now
Telegram Group Join Now

ಅಂತಿಮವಾಗಿ ಮೇ 13 2023 ರಂದು ಕರ್ನಾಟಕ ರಾಜ್ಯದಲ್ಲಿ ರಂಗೇರಿದ್ದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಕಾಂಗ್ರೆಸ್ ಪಕ್ಷವು ಬಹುಮತ ಬೆಂಬಲದೊಂದಿಗೆ ಈ ವರ್ಷ ರಾಜ್ಯ ರಾಜಕಾರಣದ ಅಧಿಕಾರದ ಚುಕ್ಕಾಣಿ ಹಿಡಿದು ಗದ್ದಿಗೆ ಸೇರಿದೆ. ಕಳೆದ ಎರಡು ತಿಂಗಳದ್ದು ಒಂದು ಲೆಕ್ಕ ಆಗಿದ್ದರೆ ಮೇ 10 ರಿಂದ 13 ನೇ ತಾರೀಖಿನ ತನಕ ಜನರಿಗಿದ್ದ ಕುತೂಹಲವೇ ಒಂದು ಲೆಕ್ಕ ಆಗಿತ್ತು. ಈಗ ಅಂತಿಮವಾಗಿ ರಾಜ್ಯವು ಕೈ ತೆಕ್ಕೆಗೆ ಬಿದ್ದಿದೆ.

ಆದರೂ ಸಹ ತಮ್ಮ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಯಾವ ಯಾವ ಪಕ್ಷ ಎಷ್ಟು ಮತದೊಂದಿಗೆ ಜಯಭೇರಿ ಬಾರಿಸಿದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇದೆ. ಅದಕ್ಕಾಗಿ ಈ ಅಂಕಣದಲ್ಲಿ ಪ್ರತಿಯೊಬ್ಬರಿಗೂ ಅವರವರ ವಿಧಾನಸಭಾ ಕ್ಷೇತ್ರ ಅಥವಾ ಅವರ ಕುತೂಹಲದ ವಿಧಾನಸಭಾ ಕ್ಷೇತ್ರದ ರಿಸಲ್ಟ್ ಹೇಳಿಕೊಳ್ಳುವ ವಿಧಾನವನ್ನು ತಿಳಿಸಿಕೊಡುತ್ತಿದ್ದೇವೆ.

ಯಾವ ಪಕ್ಷ ಎಷ್ಟು ಮತ ಗಟ್ಟಿಸಿಕೊಂಡಿದ್ದೆ ಮತ್ತು ಯಾರು ಎಷ್ಟು ಅಂತರದಲ್ಲಿ ಗೆದ್ದಿದ್ದಾರೆ ಹಾಗೂ ಪಕ್ಷದಿಂದ ಪಕ್ಷಕ್ಕೆ ಎಷ್ಟು ಮತಗಳ ಅಂತರವಿದೆ ಯಾವೆಲ್ಲಾ ಪಕ್ಷದಿಂದ ಯಾವೆಲ್ಲಾ ಸ್ಪರ್ಧಿಗಳು ಸ್ಪರ್ಧಿಸಿದ್ದರೂ, ನೋಟಾ ಓಟುಗಳು ಎಷ್ಟು ಬಿದ್ದಿದೆ ಮತ್ತು ಇಂಡಿಪೆಂಡೆಂಟ್ ಅಭ್ಯರ್ಥಿಗಳಿಗೆ ಹಾಗೂ ಹೊಸ ಪಕ್ಷ ಕಟ್ಟಿದ ಅಭ್ಯರ್ಥಿಗಳಿಗೆ ಎಷ್ಟು ಜನ ಮತ ನೀಡಿ ಸಪೋರ್ಟ್ ಮಾಡಿದ್ದಾರೆ ಎಂದು ಮೊಬೈಲ್ ಮೂಲಕ ತಿಳಿದುಕೊಳ್ಳುವ ಅನುಕೂಲತೆಯನ್ನು ಮಾಡಿಕೊಡಲಾಗಿದೆ.

ಇಂದು ಮೊಬೈಲ್ ಎನ್ನುವ ಅಂತರ್ಜಾಲ ಸಂಪರ್ಕ ಹೊಂದಿದ ನೆಟ್ವರ್ಕ್ ಇಂದ ಜಗತ್ತಿನ ಮೂಲೆ ಮೂಲೆಗಳ ಆಗುಹೋಗುಗಳನ್ನು ಕೂಡ ತಿಳಿದುಕೊಳ್ಳಬಹುದು. ಆದ್ದರಿಂದ ನಮ್ಮ ರಾಜ್ಯದ ಮತ್ತು ನಮ್ಮ ಕ್ಷೇತ್ರದ ಚುನಾವಣೆ ಫಲಿತಾಂಶವನ್ನು ಕೂಡ ಮೊಬೈಲ್ ಮೂಲಕ ತಿಳಿದುಕೊಳ್ಳಬಹುದಾದಂತಹ ಒಂದು ಅನುಕೂಲತೆಯನ್ನು ಸಹ ಭಾರತದ ಚುನಾವಣಾ ಆಯೋಗ ತನ್ನ ವೆಬ್ಸೈಟ್ ಅಲ್ಲಿ ನೀಡಿದೆ.

ನಾವು ಈಗ ಹೇಳುವ ಈ ಕ್ರಮಗಳನ್ನು ಅನುಸರಿಸುವುದರಿಂದ ನೀವು ನಿಮ್ಮ ಕ್ಷೇತ್ರದ ಅಥವಾ ಕರ್ನಾಟಕದ 224 ಕ್ಷೇತ್ರಗಳಲ್ಲಿ ಯಾವುದೇ ಕ್ಷೇತ್ರದ ಫಲಿತಾಂಶ ಏನು ಆಗಿದೆ ಮತ್ತು ಎಲ್ಲಿ ಎಲ್ಲಿ ಯಾರು ಲೀಡ್ ಅಲ್ಲಿ ಗೆದ್ದಿದ್ದಾರೆ ಎನ್ನುವ ಎಲ್ಲಾ ವಿವರಗಳನ್ನು ನಿಮ್ಮ ಮೊಬೈಲ್ ಸ್ಕ್ರೀನ್ ನೋಡಿಯೇ ತಿಳಿದುಕೊಳ್ಳಬಹುದು.

● ನಿಮ್ಮ ಮೊಬೈಲ್ ಫೋನ್ನಲ್ಲಿ ಗೂಗಲ್ ಬ್ರೌಸರ್ ಗೆ ಹೋಗಿ results.eci.gov.in 2023 karnataka ಎಂದು ಸರ್ಚ್ ಮಾಡಿ.
● ಸ್ಕ್ರೋಲ್ ಮಾಡುತ್ತಾ ಹೋದಾಗ ECI results ಎನ್ನುವ ಲಿಂಕ್ ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ ಎಲೆಕ್ಷನ್ ರಿಸಲ್ಟ್ ಫೋರ್ಟಲ್ ಎನ್ನುವ ಪೇಜ್ ಕಾಣುತ್ತದೆ.
● ಜನರಲ್ ಎಲೆಕ್ಷನ್ ಟು ಅಸೆಂಬ್ಲಿ ಕಾನ್ಸಿಟೆನ್ಸಿ ಮೇ 2023 ಎನ್ನುವುದರ ಮೇಲೆ ಕ್ಲಿಕ್ ಮಾಡಿ.

● ಮೊದಲಿಗೆ ಒಂದು ಪೈ ಚಾರ್ಟ್ ಕಾಣುತ್ತದೆ ಅದು ಫಿಲ್ ಆದಮೇಲೆ ಚಾಟ್ ವೈಸ್ ಕೂಡ ನೀವು ನೋಡುವ ಆಪ್ಷನ್ ಸಿಗುತ್ತದೆ.
● ಆ ಚಾರ್ಟ್ ಅಲ್ಲಿ ಸರ್ಚ್ ಬಾರ್ ಇರುತ್ತದೆ ಅದರಲ್ಲಿ ನಿಮ್ಮ ವಿಧಾನಸಭಾ ಕ್ಷೇತ್ರದ ಹೆಸರನ್ನು ಸೆಲೆಕ್ಟ್ ಮಾಡಿ ನಿಮ್ಮ ವಿಧಾನಸಭಾ ಕ್ಷೇತ್ರದ ರಿಸಲ್ಟ್ ಅನ್ನು ನೋಡಬಹುದು.
● ಎಲ್ಲ ರೌಂಡ್ಗಳ ಫಲಿತಾಂಶದಲ್ಲೂ ಕೂಡ ಪ್ರತಿ ರೌಂಡ್ ಅಲ್ಲಿ ಎಷ್ಟಾಗಿತ್ತು ಎನ್ನುವುದನ್ನು ನೋಡಲು ಆಪ್ಷನ್ ಗಳು ಇವೆ. ಅದನ್ನು ಕ್ಲಿಕ್ ಮಾಡುವ ಮೂಲಕ ಯಾವ ರೌಂಡಲ್ಲಿ ಎಷ್ಟು ಮತಗಳ ಹಿನ್ನಡೆ ಮತ್ತು ಮುನ್ನಡೆ ಇತ್ತು ಎನ್ನುವುದನ್ನು ಕೂಡ ತಿಳಿದುಕೊಳ್ಳಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now