ಕರ್ನಾಟಕದಲ್ಲಿರುವ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಸಿಹಿ ಸುದ್ದಿ. ಭಾರತೀಯ ಅಂಚೆ ಇಲಾಖೆಯಿಂದ ಪೋಸ್ಟ್ ಆಫೀಸ್ ಲೈಫ್ ಇನ್ಸೂರೆನ್ಸ್ ಏಜೆಂಟ್ 2023 ನೇಮಕಾತಿ ನಡೆಯುತ್ತಿದೆ. ಯಾವುದೇ ಪರೀಕ್ಷೆ ಇಲ್ಲದೆ ಅಭ್ಯರ್ಥಿಗಳು ಈ ಹುದ್ದೆಗಳಿಗೆ ನೇರವಾಗಿ ಆಯ್ಕೆ ಆಗಬಹುದಾಗಿದೆ. ಇದಕ್ಕಾಗಿ ಇಲಾಖೆ ವತಿಯಿಂದಲೇ ಅಧಿಕೃತ ಅಧಿಸೂಚನೆ ಬಿಡುಗಡೆ ಆಗಿದ್ದು ವಯಸ್ಸಿನ ಮಿತಿಯಲ್ಲೂ ಕೂಡ ಬಾರಿ ಸಡಿಲಿಕೆ ಇದೆ. ಕರ್ನಾಟಕದಲ್ಲಿರುವ ಎಲ್ಲಾ ಪುರುಷ ಮತ್ತು ಮಹಿಳಾ ಆಸಕ್ತ ಅಭ್ಯರ್ಥಿಗಳು ಕೂಡ ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಅಂಕಣದಲ್ಲಿ ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಅಧಿಸೂಚನೆಯಲ್ಲಿರುವ ಪ್ರಮುಖ ಅಂಶಗಳಾದ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಬೇಕಾಗುವ ಪ್ರಮುಖ ದಾಖಲೆಗಳು, ಅರ್ಜಿ ಸಲ್ಲಿಸಲು ಇರುವ ಕಡೇ ದಿನಾಂಕ, ಉದ್ಯೋಗ ಸ್ಥಳ ಮತ್ತು ಹುದ್ದೆಯ ವಿವರದ ಕುರಿತ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಂಡು ಹೆಚ್ಚಿನ ಉದ್ಯೋಗ ಆಕಾಂಕ್ಷಿಗಳಿಗೆ ಈ ಮಾಹಿತಿ ತಲುಪುವಂತೆ ಮಾಡಿ.
ಇಲಾಖೆ:- ಭಾರತೀಯ ಅಂಚೆ ಇಲಾಖೆ.
ನೇಮಕಾತಿ:- ಪೋಸ್ಟ್ ಆಫೀಸ್ ಲೈಫ್ ಇನ್ಸೂರೆನ್ಸ್ ಏಜೆಂಟ್ ನೇಮಕಾತಿ 2023.
ಉದ್ಯಮ:- ಅಂಚೆ ಕಚೇರಿ ಜೀವ ವಿಮೆ (ಭಾರತ ಸರ್ಕಾರ).
ಕೆಲಸದ ಸ್ಥಳ:- ಉತ್ತರ ಕನ್ನಡ.
ಹುದ್ದೆಯ ಹೆಸರು:- ಜೀವ ವಿಮಾ ಏಜೆಂಟ್.
ಹುದ್ದೆಗಳ ಸಂಖ್ಯೆ:- ಹಲವು ಹುದ್ದೆಗಳು.
ಶೈಕ್ಷಣಿಕ ವಿದ್ಯಾರ್ಹತೆ:-
● ಅಂಚೆ ಇಲಾಖೆಯ ನೇಮಕಾತಿ ಅನುಸೂಚನೆಯ ಪ್ರಕಾರ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ SSLC, PUC ಅಥವಾ ತತ್ಸಮಾನ ತರಗತಿ ಉತ್ತೀರ್ಣವಾಗಿರುವವರು ಅರ್ಜಿ ಸಲ್ಲಿಸಬಹುದು.
● ಕೆಲಸದ ಅನುಭವ ಹೊಂದಿರುವ ಅವಶ್ಯಕತೆ ಇರುವುದಿಲ್ಲ.
ವಯಸ್ಸಿನ ಮಿತಿ:-
● ಕನಿಷ್ಠ 18 ವರ್ಷಗಳು
● ಗರಿಷ್ಠ 60 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:- ಆಫ್ಲೈನ್ ಮೂಲಕ…
● ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೊನೆ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು
● ಅರ್ಜಿ ನಮೂನೆಗಳನ್ನು dokarwar.ka@indiapost.gov.in ವೆಬ್ಸೈಟ್ ಅಲ್ಲಿ ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿಕೊಂಡು ಪಡೆದುಕೊಳ್ಳಬಹುದು.
● ಹತ್ತಿರದಲ್ಲಿರುವ ಅಂಚೆಠಾಣೆಗೆ ಭೇಟಿ ಕೊಟ್ಟು ಅರ್ಜಿ ಫಾರಂ ಅನ್ನು ಪಡೆಯಬಹುದು.
● ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಸ್ವಯಂ ಧೃಡೀಕರಿಸಿದ ದಾಖಲೆಗಳ ಪ್ರತಿ ಜೊತೆ ಕಡೆ ದಿನಾಂಕದ ಒಳಗಾಗಿ ಕಾರವಾರ ಅಂಚೆ ಕಚೇರಿ ಇಲಾಖೆಗೆ ತಲುಪಿಸಬೇಕು.
ಹೆಚ್ಚಿನ ಮಾಹಿತಿಗಾಗಿ ವಿಳಾಸ:-
● ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಂಚೆ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು.
● ಅಥವಾ ಹತ್ತಿರದಲ್ಲಿರುವ ಅಂಚೆಕಛೇರಿ ಸಿಬ್ಬಂದಿಗಳನ್ನು ವಿಚಾರಿಸಬಹುದು.
● do.karwar.ka@indiapost.gov.in ಗೆ ಭೇಟಿ ಕೊಟ್ಟು ತಿಳಿದುಕೊಳ್ಳಬಹುದು.
● ಕಾರವಾರ ಬ್ರಾಂಚಿನ ದೂರವಾಣಿ ಸಂಖ್ಯೆ 08382 – 221431 ಗೆ ಕರೆ ಮಾಡಿ ವಿಚಾರಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:-
● ಇತ್ತೀಚಿನ ಭಾವಚಿತ್ರವನ್ನು ಅಂಟಿಸಿ ಭರ್ತಿ ಮಾಡಿದ ಅರ್ಜಿ ಫಾರಂ.
● ಆಧಾರ್ ಕಾರ್ಡ್ ಪ್ರತಿ
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳ ಪ್ರತಿ.
● ಇನ್ನಿತರ ಯಾವುದೇ ಪ್ರಮುಖ ದಾಖಲೆಗಳು ಇದ್ದಲ್ಲಿ ಅದರ ಪ್ರತಿಗಳನ್ನು ಸಹ ಲಗತ್ತಿಸಬಹುದು.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 17.05.2023.
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 02.06.2023.