ಕಾಂಗ್ರೆಸ್ ನಾ ಉಚಿತ ವಿದ್ಯುತ್ 200 ಯೂನಿಟ್ ಭಾಗ್ಯ ಯಾರಿಗೆ ಎಲ್ಲರಿಗೂ ಸಿಗಲ್ಲ. ಹಾಗಾದ್ರೆ ಯಾರಿಗೆ ಸಿಗುತ್ತೆ ಯಾರಿಗೆ ಸಿಗಲ್ಲ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.!

 

ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆಯಲ್ಲಿ ಕಾಂಗ್ರೆಸ್ ಪಕ್ಷವು ಪದೇಪದೇ ತಮ್ಮ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದರೆ ಕರ್ನಾಟಕ ಎಲ್ಲಾ ಜನರಿಗೂ ಅನ್ವಯವಾಗುವಂತೆ ಐದು ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿತ್ತು. ಕಾಂಗ್ರೆಸ್ ಪಕ್ಷವು ಚುನಾವಣೆ ಪ್ರಚಾರ ಪ್ರಣಾಳಿಕೆಯಲ್ಲಿ ಬಳಸಿದ್ದ ಆ 5 ಗ್ಯಾರಂಟಿ ಕಾರ್ಡ್ ಗಳು ಟ್ರಂಪ್ ಕಾರ್ಡುಗಳಾಗಿ ಬಳಕೆಯಾಗಿ ಜನಮತ ಸೆಳೆಯಲು ಅನುಕೂಲ ಮಾಡಿತು.

ಅಂತಿಮವಾಗಿ ಈಗ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಕರ್ನಾಟಕದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇನ್ನು ಐದು ವರ್ಷಗಳವರೆಗೂ ಕಾಂಗ್ರೆಸ್ ಸರ್ಕಾರವೇ ಕರ್ನಾಟಕದಲ್ಲಿ ಆಳ್ವಿಕೆ ನಡೆಸಲಿದೆ. ಈಗ ಜನಸಾಮಾನ್ಯರಿಗೆ ಪಕ್ಷ ನೀಡಿದ ಆಶ್ವಾಸನೆಗಳಾದ ಆ ಐದು ಯೋಜನೆಗಳನ್ನು ಯಾವಾಗ ಜಾರಿಗೆ ತರುತ್ತದೆ ಎಂದು ಜನರು ಆಸೆ ಕಣ್ಣುಗಳಿಂದ ನೋಡುತ್ತಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗದ ನಾಯಕ ಸಿದ್ದರಾಮಯ್ಯ ಅವರು ಚುನಾವಣೆ ಪ್ರಚಾರದ ವೇಳೆ ಗ್ಯಾರೆಂಟಿ ಕಾಡುಗಳ ಬಗ್ಗೆ ಪ್ರತಿ ವೇದಿಕೆಯಲ್ಲಿಯೂ ಮಾತನಾಡಿದ್ದರು. ಯಾವುದೇ ಬೆಲೆಯನ್ನು ತೆತ್ತು ಬೇಕಾದರೂ ಖಂಡಿತವಾಗಿಯೂ ಈ ಯೋಜನೆಗಳನ್ನು ಕರ್ನಾಟಕದಲ್ಲಿ ಜಾರಿಗೆ ತರುತ್ತಿದ್ದೇವೆ ಎನ್ನುವ ಹೇಳಿಕೆ ನೀಡಿದ್ದರು.

ಈ ಐದು ಗ್ಯಾರಂಟಿ ಕಾರ್ಡ್ ಗಳಲ್ಲಿ ಮೊದಲನೇ ಗ್ಯಾರಂಟಿ ಯೋಜನೆ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಕರ್ನಾಟಕದ ಎಲ್ಲಾ ಕುಟುಂಬಗಳಿಗೂ 200 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಕೊಡುವುದಾಗಿ ಘೋಷಣೆ ಮಾಡಿತ್ತು. ವಿಧಾನಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷದ ಪರ ಬಂದ ದಿನದಿಂದಲೂ ಕೂಡ ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಈ ಯೋಜನೆಗಳ ಬಗ್ಗೆ ಜನಸಾಮಾನ್ಯರು ಹೆಚ್ಚು ಪ್ರಶ್ನೆ ಮಾಡುತ್ತಿದ್ದಾರೆ.

ಜೊತೆಗೆ ನಾವು ಈ ತಿಂಗಳಿಂದ ಕರೆಂಟ್ ಬಿಲ್ ಕಟ್ಟುವುದಿಲ್ಲ, ಮತ ನೀಡಿದ್ದೇವೆ ಉಚಿತವಾಗಿ ಕೊಡುವುದಾಗಿ ಹೇಳಿದ್ದ ನಿಮ್ಮ ಮಾತು ಉಳಿಸಿಕೊಳ್ಳಿ ಎಂದು ಕೇಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಈಗ ವಿಶ್ವಾಸವನ್ನು ಉಳಿಸಿಕೊಳ್ಳಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ಆದರೆ ಸರ್ಕಾರ ಇದರ ಬಗ್ಗೆ ಕೆಲ ನಿಯಮಗಳನ್ನು ಹೇರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಕಾಂಗ್ರೆಸ್ ಪಕ್ಷದ ಮತ್ತೊಬ್ಬ ಪ್ರಭಾವಿ ನಾಯಕರಾದ ಜಿ ಪರಮೇಶ್ವರ್ ಅವರು ಸಹ ಇದರ ಬಗ್ಗೆ ಮಾತನಾಡಿ ಎಲ್ಲರಿಗೂ ಉಚಿತವಾಗಿ ಕೊಡುವುದರಿಂದ ವಂಚನೆ ಯಾಗಬಹುದು ಯೋಜನೆ ಸರಿಯಾದ ರೀತಿಯಲ್ಲಿ ಎಲ್ಲರನ್ನು ತಲುಪುವುದಿಲ್ಲ ಹಾಗಾಗಿ ಕೆಲ ನಿಯಮಗಳನ್ನು ಹೇರಲೇಬೇಕಾಗುತ್ತದೆ ಎನ್ನುವುದನ್ನು ಒಪ್ಪಿಕೊಂಡಿರುವುದರಿಂದ BPL ಕಾರ್ಡ್ ಮತ್ತು AAY ಕಾರ್ಡುಗಳನ್ನು ಹೊಂದಿರುವ ಬಡತನ ರೇಖೆಗಿಂತ ಕಡಿಮೆ ಇರುವ ಕುಟುಂಬಗಳಿಗೆ ಈ ರೀತಿ ವಿದ್ಯುತ್ ಉಚಿತವಾಗಿ ಸಿಗಬಹುದೇನೋ ಅನ್ನುವ ಊಹಾಪೋಹಗಳು ಹರಿದಾಡುತ್ತಿವೆ.

ಜೊತೆಗೆ ಈ ಕುರಿತು ಇರುವ ಮತ್ತೊಂದು ಗೊಂದಲ ಎಂದರೆ ಸರ್ಕಾರವು 200 ಯೂನಿಟ್ ವಿದ್ಯುತ್ ಬಳಸುವವರಿಗೆ ಉಚಿತ ಎಂದು ಹೇಳಿತ್ತು. ಒಂದು ವೇಳೆ 200 ಯೂನಿಟ್ ಕ್ಕಿಂತ ಹೆಚ್ಚು ವಿದ್ಯುತ್ ಬಳಸಿದ ಕುಟುಂಬಗಳಿಗೆ 200 ಯೂನಿಟ್ ಬಿಟ್ಟು ಹೆಚ್ಚಿನ ಬಳಕೆಗೆ ಮಾತ್ರ ಚಾರ್ಜ್ ಮಾಡಲಿದೆಯಾ ಅಥವಾ 200 ಯೂನಿಟ್ ವಿದ್ಯುತ್ ಬಳಸುವವರಿಗೆ ಮಾತ್ರ ಈ ಉಚಿತ ಗ್ಯಾರಂಟಿ ಕಾರ್ಡ್ ಫಲಾನುಭವಿಗಳಾಗುವ ಅವಕಾಶ ಸಿಗಲಿದೆಯೋ ಎನ್ನುವುದರ ಬಗ್ಗೆಯೂ ಕೂಡ ಸರ್ಕಾರದಿಂದ ಸ್ಪಷ್ಟನೆ ಸಿಕ್ಕಿಲ್ಲ.

ಸರ್ಕಾರ ರಚನೆ ಆದ ಮೇಲೆ ಮೊದಲ ಕ್ಯಾಬಿನೆಟ್ ಅಲ್ಲಿಯೇ ಇದರ ಬಗ್ಗೆ ಆದೇಶ ಬರುತ್ತದೆ ಎನ್ನುವ ಸ್ಪಷ್ಟತೆ ಸಿಕ್ಕಿರುವುದರಿಂದ ಇನ್ನೂ ಕೆಲವೇ ದಿನಗಳನ್ನು ಕಾದು ನೋಡಿದರೆ ಕಾಂಗ್ರೆಸ್ ಸರ್ಕಾರ ಈ ಗೃಹ ಜ್ಯೋತಿ ಯೋಜನೆಗಳಿಗೆ ರೂಪಿಸುವ ರೂಪರೇಷೆಗಳು ಏನು, ಹೇರುವ ನಿಯಮಗಳು ಏನು ಎನ್ನುವುದು ಜನಸಾಮಾನ್ಯರಿಗೆ ಸ್ಪಷ್ಟವಾಗಿ ತಿಳಿಯಲಿದೆ. ಅಲ್ಲಿಯವರೆಗೂ ಕೂಡ ತಾಳ್ಮೆಯಿಂದ ಕಾಯೋಣ.

Leave a Comment

%d bloggers like this: