5 ನಿಮಿಷದಲ್ಲಿ ರೇಷನ್ ಕಾರ್ಡ್ ಗೆ ಹೊಸ ಸದಸ್ಯರ ಹೆಸರನ್ನು ಸೇರಿಸುವ ವಿಧಾನ.!

 

WhatsApp Group Join Now
Telegram Group Join Now

ಸರ್ಕಾರದಿಂದ ಸಿಗುವ ವಿದ್ಯಾರ್ಥಿ ವೇತನವನ್ನಾಗಲಿ ಅಥವಾ ವೈದ್ಯಕೀಯ ವೆಚ್ಚದಲ್ಲಿ ನೀಡುವ ವಿನಾಯಿತಿಗಾಗಲಿ ಅಥವಾ ರೈತರಿಗೆ ಸಿಗುವ ಯೋಜನೆಗಳ ಫಲಾನುಭವಿಗಳಾಗುವುದಕ್ಕಾಗಲಿ ಪ್ರತಿಯೊಂದುಕ್ಕೂ ಕೂಡ ರೇಷನ್ ಕಾರ್ಡ್ ಒಂದು ಅಗತ್ಯ ದಾಖಲೆಯಾಗಿ ಬೇಕೇ ಬೇಕು. ಈ ರೀತಿ ರೇಷನ್ ಕಾರ್ಡ್ ಅನ್ನು ಮಾಡಿಸಿದ ಮೇಲೆ ಅನಿವಾರ್ಯ ಪರಿಸ್ಥಿತಿಗಳಲ್ಲಿ ಕೆಲವೊಮ್ಮೆ ತಿದ್ದುಪಡಿಗಳನ್ನು ಮಾಡಿಸಬೇಕಾಗುತ್ತದೆ.

ಅಥವಾ ಕುಟುಂಬದ ರೇಷನ್ ಕಾರ್ಡಿಗೆ ಮತ್ತೊಬ್ಬರ ಹೆಸರನ್ನು ಸೇರ್ಪಡೆ ಮಾಡುವಂತಹ ಪರಿಸ್ಥಿತಿ ಬರುತ್ತದೆ. ಮಗನಿಗೆ ಮದುವೆಯಾಗಿ ಆತನ ಪತ್ನಿ ಹೆಸರನ್ನು ಸೇರಿಸುವ ಸಂದರ್ಭ ಮತ್ತು ಮಕ್ಕಳಾದ ಸಂದರ್ಭದಲ್ಲಿ ಮಕ್ಕಳ ಹೆಸರನ್ನು ಸೇರಿಸುವ ಸಂದರ್ಭ ಬರುತ್ತದೆ. ಆಗ ಯಾವ ರೀತಿ ಸುಲಭ ವಿಧಾನದಲ್ಲಿ ಈ ಪ್ರಕ್ರಿಯೆ ಪೂರ್ತಿಗೊಳಿಸಬಹುದು ಎನ್ನುವುದನ್ನು ಈ ಅಂಕಣದಲ್ಲಿ ಹೇಳಿಕೊಡುತ್ತಿದ್ದೇವೆ.

● ಮೊದಲಿಗೆ ಕ್ರೋಮ್ ಬ್ರೌಸರ್ ಓಪನ್ ಮಾಡಿಕೊಳ್ಳಬೇಕು. ಜೊತೆಗೆ AC ಹಾಗೂ ಬಯೋಮೆಟ್ರಿಕ್ ಡಿವೈಸ್ ನಿಮ್ಮೊಡನೆ ಇರಬೇಕು.
● ಕ್ರೋಮ್ ಬ್ರೌಸರ್ ಅಲ್ಲಿ ರೇಷನ್ ಕಾರ್ಡ್ ಕರ್ನಾಟಕ ಎಂದು ಟೈಪ್ ಮಾಡಿದರೆ ಈ ಸರ್ವಿಸಸ್ ಸಿಗುತ್ತದೆ. ಒಂದು ವೇಳೆ ಸಿಗದೇ ಇದ್ದಲ್ಲಿ ಡಿಪಾರ್ಟ್ಮೆಂಟ್ ಆಫ್ ಫುಡ್ ಎನ್ನುವುದನ್ನು ಕ್ಲಿಕ್ ಮಾಡಿ ನಂತರ ಈ ಸರ್ವಿಸ್ ಆಪ್ಶನ್ ಅನ್ನು ಆಯ್ಕೆ ಮಾಡಬೇಕು.
● ಎಡ ಭಾಗದಲ್ಲಿ ಕೆಲಸ ಸರ್ವಿಸ್ ಗಳ ಲಿಸ್ಟ್ ಇರುತ್ತದೆ. ಅದರಲ್ಲಿ ಇ-ರೇಷನ್ ಕಾರ್ಡ್ ಎನ್ನುವುದನ್ನು ಸೆಲೆಕ್ಟ್ ಮಾಡಿ. ಕೊನೆಯಲ್ಲಿ ಅಮೆಂಟ್ಮೆಂಟ್ ರಿಕ್ವೆಸ್ಟ್ ಎಂದಿರುತ್ತದೆ ಅದನ್ನು ಕ್ಲಿಕ್ ಕೊಡಿ.

● ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿ ಮತ್ತು ನಿಮಗೆ ಯಾವ ಭಾಷೆಯಲ್ಲಿ ಬೇಕು ಅದನ್ನು ಕನ್ನಡ ಅಥವಾ ಇಂಗ್ಲೀಷ್ ಆಪ್ಷನ್ ಇರುತ್ತದೆ ಸೆಲೆಕ್ಟ್ ಮಾಡಿ.
● ಪಡಿತರ ಚೀಟಿ ಸಂಖ್ಯೆ ಎನ್ನುವ ಕಾಲಮ್ ಇರುತ್ತದೆ ಅದರಲ್ಲಿ ನಿಮ್ಮ ಪಡಿತರ ಚೀಟಿಯಲ್ಲಿರುವ RD ಸಂಖ್ಯೆಯನ್ನು ಹಾಕಿ ಮುಂದೆ ಎಂದು ಕ್ಲಿಕ್ ಮಾಡಿದಾಗ ಪಡಿತರ ಚೀಟಿಯಲ್ಲಿ ಇರುವ ಎಲ್ಲ ಸದಸ್ಯರ ಹೆಸರು ತೋರುತ್ತದೆ.
● ಸದಸ್ಯರ ಹೆಸರಿನಲ್ಲಿ ಒಬ್ಬ ಹೆಸರ ಹೆಸರನ್ನು ಸೆಲೆಕ್ಟ್ ಮಾಡಿ ಅವರ ಬಯೋಮೆಟ್ರಿಕ್ ಮಾಹಿತಿ ತೆಗೆದುಕೊಳ್ಳಬೇಕಾಗುತ್ತದೆ.

ಅದಕ್ಕೂ ಮುನ್ನ ಒಂದು ಕ್ಯಾಪ್ಚ ಇರುತ್ತದೆ ಅದನ್ನು ಎಂಟ್ರಿ ಮಾಡಿ ನಂತರ ಬಯೋಮೆಟ್ರಿಕ್ ಮಾಹಿತಿಯನ್ನು ಸಬ್ಮಿಟ್ ಮಾಡಿದಾಗ ಪರಿಶೀಲನೆ ನಡೆದು ಅವರ ಮಾಹಿತಿಯ ವಿವರ ಪೇಜ್ ಮೇಲೆ ಕಾಣುತ್ತದೆ ಯಾವ ಅಂಗಡಿಯಲ್ಲಿ ಇವರ ಪಡಿತರ ಚೀಟಿ ಇದೆ., ಯಾವ ಗ್ರಾಮ ಎಂಬೆಲ್ಲಾ ವಿವರ ಬರುತ್ತದೆ.
● ಕೆಳಗೆ ನಾಲ್ಕು ಆಪ್ಶನ್ ಗಳು ಇರುತ್ತದೆ. ರೇಷನ್ ಕಾರ್ಡ್ ಗೆ ಹೊಸ ಸದಸ್ಯರ ಸೇರ್ಪಡೆ, ಸದಸ್ಯರ ಹೆಸರನ್ನು ತೆಗೆದು ಹಾಕುವುದು, ವಿಳಾಸ ಬದಲಾವಣೆ ಮತ್ತು ರೇಷನ್ ಕಾರ್ಡ್ ಅಪ್ಡೇಟ್ ಆಪ್ಷನ್ ಗಳು ಇರುತ್ತವೆ.

● ಇದರಲ್ಲಿ ನೀವು ಹೊಸ ಸದಸ್ಯರ ಹೆಸರನ್ನು ಸೇರ್ಪಡೆ ಮಾಡಬೇಕಾಗಿರುವುದರಿಂದ ಅದೇ ಆಪ್ಷನ್ ಅನ್ನು ಕ್ಲಿಕ್ ಮಾಡಿ.
● ಆರು ವರ್ಷದ ಒಳಗಿರುವ ಮಕ್ಕಳ ಸೇರ್ಪಡೆ ಗಾಗಿ ಪ್ರತ್ಯೇಕ ಆಪ್ಷನ್ ಮತ್ತು ಅದಕ್ಕಿಂತ ಮೇಲಿನ ವಯಸ್ಸಿನ ಸದಸ್ಯರಿಗೆ ಸೇರ್ಪಡೆಗೆ ಪ್ರತ್ಯೇಕವಾದ ಆಪ್ಷನ್ ಇರುತ್ತದೆ. ಸರಿಯಾದ ಆಯ್ಕೆಯನ್ನು ಭರ್ತಿ ಮಾಡಿ.

● ಆಪ್ಷನ್ಗಳಲ್ಲಿ ಅವರ ಕುರಿತಾದ ವೈಯಕ್ತಿಕ ವಿವರಗಳು ಮತ್ತು ಇದಕ್ಕೆ ಸಂಬಂಧಪಟ್ಟ ಹಾಗೆ ಕೇಳಲಾಗುವ ದಾಖಲೆಗಳ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಮತ್ತು ಅವರ ಬಯೋಮೆಟ್ರಿಕ್ ಮಾಹಿತಿಯನ್ನು ಕೂಡ ನೀಡುವ ಮೂಲಕ ಆನ್ಲೈನ್ ಅಲ್ಲಿಯೇ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now