ಮೀಟರ್ ಬಾಕ್ಸ್ ನೋಡಿ ಪ್ರತಿದಿನ ನಾವು ಎಷ್ಟು ಯೂನಿಟ್ ವಿದ್ಯುತ್ ಬಳಸುತ್ತಿದ್ದೇವೆ ಎಂದು ಲೆಕ್ಕ ಹಾಕುವುದು ಹೇಗೆ ಗೊತ್ತಾ.?

 

WhatsApp Group Join Now
Telegram Group Join Now

ನಾವು ಪ್ರತಿದಿನ ಬಳಸುವ ಎಲ್ಲ ವಸ್ತುಗಳ ಲೆಕ್ಕಾಚಾರ ಇಡುತ್ತೇವೆ. ನಾವು ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯುತ್ತೇವೆ, ನಮ್ಮ ಮನೆಗೆ ದಿನಕ್ಕೆ ಎಷ್ಟು ಲೀಟರ್ ಹಾಲು ತರಬೇಕು, ಒಂದು ತಿಂಗಳಿಗೆ ನಮ್ಮ ಮನೆಗೆ ಎಷ್ಟು ರೇಷನ್ ಖರ್ಚಾಗುತ್ತದೆ, ಗಾಡಿಗೆ ಪೆಟ್ರೋಲ್ ಎಷ್ಟು ಹಾಕಿಸಬೇಕು, ಹೀಗೆ ಪ್ರತಿಯೊಬ್ಬರ ಲೆಕ್ಕ ಹಾಕುವ ನಾವು ಪ್ರತಿದಿನವೂ ತಪ್ಪದೇ ಬರುವ ವಿದ್ಯುತ್ ಬಿಲ್ ಬಗ್ಗೆ ನಿರ್ಲಕ್ಷ ವಹಿಸುತ್ತೇವೆ.

ಆದ್ದರಿಂದಲೇ ತಿಂಗಳಿಗೆ ಒಂದೊಂದು ರೀತಿಯ ವಿದ್ಯುತ್ ಬಿಲ್ ನಮಗೆ ಬರುತ್ತದೆ. ನಾವು ಪ್ರತಿದಿನ ಎಷ್ಟು ಯೂನಿಟ್ ವಿದ್ಯುತ್ ಬಳಸುತ್ತೇವೆ ಎಂದರೆ ತಕ್ಷಣವೇ ನಮಗೆ ಲೆಕ್ಕ ಹೇಳಲು ಬರುವುದಿಲ್ಲ. ಯಾಕೆಂದರೆ ನಾವು ಇದರ ಬಗ್ಗೆ ಗಮನವೇ ಕೊಟ್ಟಿರಲಿಲ್ಲ. ಒಂದು ಅಂದಾಜಿಗೆ ನಮ್ಮ ತಿಂಗಳಿಗೆ ಇಷ್ಟರಿಂದ ಇಷ್ಟು ವಿದ್ಯುತ್ ಬಿಲ್ ಬರುತ್ತದೆ ಎಂದು ಹೇಳುತ್ತೇವೆ ಹೊರತು ಆ ವಿದ್ಯುತ್ ಬಿಲ್ ನಾವು ಎಷ್ಟು ಯೂನಿಟ್ ಬಳಸಿದ್ದರಿಂದ ಬಂದಿದೆ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳುವ ಗೋಜಿಗೆ ನಾವು ಹೋಗಿರುವುದಿಲ್ಲ.

ಈಗ ಕಾಂಗ್ರೆಸ್ ಸರ್ಕಾರ ಹೇಳಿರುವ ಗೃಹಜ್ಯೋತಿ ಯೋಜನೆ ಬಗ್ಗೆ ಕೇಳಿದ ನಂತರ ಎಲ್ಲರೂ ಸಹ ತಮ್ಮ ಮನೆಯಲ್ಲಿ ಎಷ್ಟೆಷ್ಟು ಯೂನಿಟ್ ವಿದ್ಯುತ್ ಬಳಸುತ್ತಾರೆ ಎನ್ನುವುದನ್ನು ಲೆಕ್ಕ ಹಾಕಲು ಕುಳಿತಿದ್ದಾರೆ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದರೆ ಮೊದಲನೇ ಗ್ಯಾರಂಟಿ ಕಾರ್ಡ್ ಆಗಿ ಗೃಹಜ್ಯೋತಿ ಯೋಜನೆ ಅಡಿ ಪ್ರತಿ ಕುಟುಂಬಕ್ಕೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಟ್ಟು ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವುದಾಗಿ ಹೇಳಿತ್ತು.

ಈಗ ಕೊಟ್ಟಿದ್ದ ಮಾತಿಗೆ ಬದ್ಧವಾಗಿ ನಡೆದುಕೊಂಡು ತಮ್ಮದು ನೋಡಿದಂತೆ ನಡೆಯುವ ಸರ್ಕಾರ ಎಂದು ಹೇಳಿ ಅದಕ್ಕೆ ಆದೇಶ ಪತ್ರವನ್ನು ಕೂಡ ಹೊರಡಿಸಿದೆ. ಹಾಗಾಗಿ ಎಲ್ಲರೂ ತಾವು ಎಷ್ಟು ವಿದ್ಯುತ್ ಖರ್ಚು ಮಾಡುತ್ತೇವೆ ಎನ್ನುವುದರ ಬಗ್ಗೆ ಗಮನ ಹರಿಸುತ್ತಿದ್ದಾರೆ.

ನಾವು ನಮ್ಮ ಹಳೆಯ ಕರೆಂಟ್ ಬಿಲ್ ತೆಗೆದುಕೊಂಡು ನೋಡಿದರೆ ಹಿಂದಿನ ತಿಂಗಳು ನಾವು ಎಷ್ಟು ಯೂನಿಟ್ ವಿದ್ಯುತ್ ಖರ್ಚು ಮಾಡಿದ್ದೆವು ಎನ್ನುವ ಲೆಕ್ಕ ನಮಗೆ ಸಿಗುತ್ತದೆ. ಅದು ಮಾತ್ರ ಅಲ್ಲದೆ ಮೀಟರ್ ಬಾಕ್ಸ್ ನೋಡಿ ಕೂಡ ನಾವು ಎಷ್ಟು ವಿದ್ಯುತ್ ಖರ್ಚು ಮಾಡಿದ್ದೇವೆ ಎನ್ನುವುದನ್ನು, ಪ್ರತಿದಿನ ಎಷ್ಟು ಯೂನಿಟ್ ವಿದ್ಯುತ್ ಖರ್ಚಾಗುತ್ತಿದೆ ಎನ್ನುವುದನ್ನು ಕೂಡ ಸುಲಭವಾಗಿ ತಿಳಿದುಕೊಳ್ಳಬಹುದು.

ಹಿಂದೆಲ್ಲಾ ಮೀಟರ್ ಬಾಕ್ಸ್ ಅಲ್ಲಿ ವೀಲ್ ರೂಪದಲ್ಲಿ ವಿದ್ಯುತ್ ರೀಡ್ ಆಗುವುದು ನೋಡುತ್ತಿದ್ದೆವು. ಈಗ ಎಲ್ಲವೂ ಡಿಜಿಟಲ್ ಮಯ ಆಗಿರುವುದರಿಂದ ಈಗ ಡಿಜಿಟಲ್ ರೂಪದಲ್ಲಿದೆ. ಕರೆಂಟ್ ಎಷ್ಟು ಬಳಕೆ ಆಗುತ್ತಿದೆ ಎನ್ನುವುದರ ಸ್ಪಷ್ಟ ಲೆಕ್ಕ ಸಿಗುತ್ತದೆ. ಒಂದು ಐದು ನಿಮಿಷ ಮೀಟರ್ ಬಾಕ್ಸ್ ಎದುರು ನಿಂತು ಅದರಲ್ಲಿ ಬರುವ ಸಂಖ್ಯೆಗಳನ್ನು ಗಮನಿಸಿದರೆ ಅಂದಿನ ದಿನಾಂಕ ಏನು ಎನ್ನುವುದು ಮೀಟರ್ ಬಾಕ್ಸ್ ಮೇಲೆ ಸಂಖ್ಯೆಗಳಲ್ಲಿ ಕಾಣುತ್ತದೆ.

ನಂತರ ಎಷ್ಟು ಆಂಪರ್ ಎನ್ನುವುದು ಕೂಡ A ಎನ್ನುವ ಸಿಂಬಲ್ ಅಲ್ಲಿ ಕಾಣಿಸುತ್ತದೆ ನಂತರ Kw/h ಇದರ ಜೊತೆಗೆ ಸಂಖ್ಯೆ ಬರುತ್ತದೆ. ಅದು ಪ್ರತಿಕ್ಷಣಕ್ಕೂ ಕೂಡ ಬದಲಾಗುತ್ತದೆ ಇದು ನಾವು ಬಳಸುವ ವಿದ್ಯುತ್ ಲೆಕ್ಕ ಆಗಿದೆ ಇದರ ಆಧಾರದ ಮೇಲೆ ನಾವು ಪ್ರತಿದಿನವೂ ಎಷ್ಟು ವಿದ್ಯುತ್ ಬಳಸುತ್ತಿದ್ದೇವೆ ತಿಂಗಳಿಗೆ ಅದು ಎಷ್ಟು ಯೂನಿಟ್ ಆಗುತ್ತದೆ ಎಂದು ಲೆಕ್ಕ ಹಾಕಬಹುದು. ಪ್ರತಿದಿನವೂ ಕೂಡ ದಿನಾಂಕ ಬದಲಾಗುತ್ತಿದ್ದಂತೆ ಸಂಖ್ಯೆಯು ಕೂಡ ಹೊಸದಾಗಿ ಆರಂಭ ಆಗುತ್ತದೆ. ಕೊನೆಯಲ್ಲಿ ತಿಂಗಳ ಅಂತ್ಯದಲ್ಲಿ ಎಲ್ಲವನ್ನು ಒಟ್ಟಾರೆಯಾಗಿ ಲೆಕ್ಕ ಹಾಕಿ ನಮಗೆ ಕರೆಂಟ್ ಬಿಲ್ ಕೊಡುತ್ತಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now