ಪೋಸ್ಟ್ ಆಫೀಸ್ ಈ ಸ್ಕೀಮ್ ಗಳಲ್ಲಿ ಒಂದು ಬಾರಿ ಹಣ ಡೆಪಾಸಿಟ್ ಮಾಡಿ ಸಾಕು ಡಬಲ್ ದುಡ್ಡು ಬರುತ್ತೆ.!

 

WhatsApp Group Join Now
Telegram Group Join Now

ಪ್ರಸ್ತುತವಾಗಿ ಭಾರತೀಯ ನಾಗರಿಕರಿಗೆ ಅತಿ ಹೆಚ್ಚು ಬಡ್ಡಿದರವನ್ನು ನೀಡುವಂತಹ ಒಂದು ಯೋಜನೆ ಎಂದರೆ ಅಂಚೆ ಕಚೇರಿಯಲ್ಲಿರುವ ಕಿಸಾನ್ ವಿಕಾಸ್ ಪತ್ರ ಮತ್ತು ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆಗಳು. ಇವುಗಳಲ್ಲಿ ಹಣ ಹೂಡಿಕೆ ಮಾಡುವುದರಿಂದ ಅತಿ ಬೇಗ ನಿಮ್ಮ ಹಣ ಡಬಲ್ ಆಗುತ್ತದೆ ಅದರಿಂದ ಈ ಅಂಕಣದಲ್ಲಿ ಪ್ರಸ್ತುತವಾಗಿ ಈಗ ಈ ಯೋಜನೆಗಳಲ್ಲಿ ಎಷ್ಟು ಬಡ್ಡಿದರ ನೀಡಲಾಗುತ್ತಿದೆ.

ಯಾವ ವರ್ಷಕ್ಕೆ ಹಣ ಡಬಲ್ ಆಗುತ್ತದೆ ಮತ್ತು ಇದನ್ನು ಖರೀದಿಸಲು ಇರಬೇಕಾದ ಅರ್ಹತೆಗಳೇನು, ದಾಖಲೆ ಪತ್ರಗಳೇನು, ಹೇಗೆ ಖರೀದಿ ಮಾಡಬೇಕು ಮತ್ತು ಎಷ್ಟು ಹಣ ಹೂಡಿಕೆ ಮಾಡಬೇಕು ಎನ್ನುವ ವಿವರಗಳನ್ನು ತಿಳಿಸುತ್ತಿದ್ದೇವೆ.

● ಕಿಸಾನ್ ವಿಕಾಸ್ ಪತ್ರ KVC ಈ ಸ್ಕೀಮ್ ಅಲ್ಲಿ ಪ್ರಸ್ತುತವಾಗಿ 6.9% ಪರ್ಸೆಂಟ್ ಬಡ್ಡಿದರವಿದೆ. ನ್ಯಾಷನಲ್ ಸೇವಿಂಗ್ ಸ್ಕೀಮ್ NSC 6.8% ಬಡ್ಡಿದರವಿದೆ.
● ಈ ಎರಡು ಯೋಜನೆಗಳಲ್ಲೂ ಸಹ ಕನಿಷ್ಠ 1,000 ರೂಪಾಯಿಯಿಂದ ಹಣವನ್ನು ಹೂಡಿಕೆ ಮಾಡಬಹುದು, ಗರಿಷ್ಠ ಯಾವುದೇ ಮಿತಿ ಇಲ್ಲ. ಆದರೆ ಎರಡು ಸ್ಕೀಮ್ ಗಳಲ್ಲೂ ಕೂಡ ಒಂದೇ ಬಾರಿಗೆ ಹಣವನ್ನು ಡೆಪಾಸಿಟ್ ಮಾಡಬೇಕು.

● KVC ಸ್ಕೀಮಿನ ಮೆಚ್ಯುರಿಟಿ ಅವಧಿ 10 ವರ್ಷ ಮತ್ತು 4 ತಿಂಗಳುಗಳು, NSC ಸ್ಕೀಮಿನ ಮೆಚ್ಯುರಿಟಿ ಅವಧಿಗಳು 5 ವರ್ಷಗಳು.
● ಈ ಎರಡು ಯೋಜನೆಗಳನ್ನು ಖರೀದಿಸಿದವರಿಗೂ ಕೂಡ ನಾಮಿನಿ ಫೆಸಿಲಿಟಿ ಇದೆ ಹಾಗೂ ಎರಡು ಯೋಜನೆಗಳ ಮೇಲೂ ಕೂಡ ನೀವು ಸಾಲ ಸೌಲಭ್ಯ ಪಡೆಯಬಹುದು.

● ಈ ಎರಡು ಯೋಜನೆಗಳನ್ನು ಕೂಡ ಅಂಚೆ ಕಚೇರಿಯಲ್ಲಿಯೇ ಖರೀದಿಸಬೇಕು ಮತ್ತು ಇದನ್ನು ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ಟ್ರಾನ್ಸ್ಫರ್ ಕೂಡ ಮಾಡಿಕೊಳ್ಳಬಹುದು.
● ಎರಡು ಯೋಚನೆಗಳನ್ನು ಖರೀದಿಸಲು ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ನೀವು ಒಬ್ಬರೇ ಖರೀದಿಸಬಹುದು ಅಥವಾ ಜಂಟಿಯಾಗಿ ಅಥವಾ ಮೈನರ್ ಇದ್ದರೆ ಅವರ ಹೆಸರಿನಲ್ಲಿಯೂ ಸಹ ಖರೀದಿಸಬಹುದು.

● ಈ ಎರಡು ಯೋಜನೆಗಳನ್ನು ಖರೀದಿಸಲು ಕೆಲ ಅಗತ್ಯ ದಾಖಲೆಗಳನ್ನು ಕೊಡಬೇಕು.
1. ವೈಯಕ್ತಿಕ ಗುರುತಿಗಾಗಿ ಒಂದು ಗುರುತಿನ ಚೀಟಿ
2. ವಿಳಾಸ ಪುರಾವೆ
3. ಇತ್ತೀಚಿನ ಭಾವಚಿತ್ರ
4. ನೀವು ಡೆಪಾಸಿಟ್ ಮಾಡುವ ಮೊತ್ತದ ಹಣ.

● ಈ ಎರಡು ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು.
● KVP ಸ್ಕೀಮ್ ಕಲಿಸಿ 10,000 ಡೆಪಾಸಿಟ್ ಮಾಡಿದರೆ ಅದರ ಮೆಚ್ಯುರಿಟಿ ಅವಧಿ ಮುಗಿದ ಮೇಲೆ ನಿಮಗೆ 20,000 ಹಣ ಸಿಗಲಿದೆ.
NSC ಸ್ಕೀಮ್ ಅಲ್ಲಿ 10,000 ಡೆಪಾಸಿಟ್ ಅದರ ಮೆಚ್ಯುರಿಟಿ ಪೀರಿಯಡ್ ಮುಗಿದ ಮೇಲೆ 13,895 ರೂ. ಸಿಗಲಿದೆ.

● KVP ಸ್ಕೀಮ್ ಅಲ್ಲಿ 50,000 ಡೆಪೋಸಿಟ್ ಮಾಡಿದರೆ ಅದರ ಮೆಚುರಿಟಿ ಅವಧಿಯಾದ ಹತ್ತು ವರ್ಷ ನಾಲ್ಕು ತಿಂಗಳು ಮುಗಿದ ನಂತರ ನಿಮಗೆ 1 ಲಕ್ಷ ಹಣ ಸಿಗಲಿದೆ. NSC ನಿಮ್ಮಲ್ಲಿ 50,000 ಹಣ ಡೆಪಾಸಿಟ್ ಮಾಡಿದರೆ ಅದರ ಮೆಚುರಿಟಿ ಅವಧಿ ಆದ ಐದು ವರ್ಷಗಳ ಮುಗಿದ ನಂತರ 69,475 ರೂ ಸಿಗಲಿದೆ.

ಅತಿ ಶೀಘ್ರವಾಗಿ ಹಣವನ್ನು ಡಬಲ್ ಮಾಡಿಕೊಳ್ಳಬೇಕು ಎಂದು ಬಯಸುವವರು ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣವು 10 ವರ್ಷ 4 ತಿಂಗಳಲ್ಲಿ ಡಬಲ್ ಆಗುತ್ತದೆ ಮತ್ತು ಅಂಚೆ ಕಚೇರಿಯಲ್ಲಿ ಈ ಹಣವನ್ನು ಹೂಡಿಕೆ ಮಾಡುವುದರಿಂದ ಹಣಕ್ಕೆ ಅಷ್ಟೇ ಭದ್ರತೆ ಕೂಡ ಇರುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now