ಫ್ರೀ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಆಹ್ವಾನ ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

 

ಈಗ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ, ಎಲ್ಲಾ ಕ್ಷೇತ್ರವು ಆನ್ಲೈನ್ ಆಗುತ್ತಿರುವ ಕಾರಣ ಈಗ ಎಲ್ಲಾ ಕೆಲಸಗಳು ಸ್ಕ್ರೀನ್ ಮೇಲೆ ನಡೆಯುತ್ತಿದೆ. ಶಾಲೆಗಳಲ್ಲಿ ನಡೆಯುವ ತರಗತಿಗಳು, ವಿಧ್ಯಾರ್ಥಿಗಳಿಗೆ ಕೊಡುವ ಹೋಮ್ ವರ್ಕ್ ಗಳು ಹಾಗೂ ಉದ್ಯೋಗ, ನಾವು ಯಾವುದೇ ಸರ್ಕಾರಿ ಯೋಜನೆಗಳನ್ನು ಪಡೆಯಲು ಅರ್ಜಿ ಹಾಕುವುದು ಅಥವಾ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕುವುದು ಹೀಗೆ ಪ್ರತಿಯೊಂದು ಕೂಡ ಲ್ಯಾಪ್ಟಾಪ್ ಮೂಲಕ ನಡೆಯುತ್ತಿದೆ.

ಹಾಗಾಗಿ ವಿದ್ಯಾರ್ಥಿಗಳಿಗೂ ಕೂಡ ಈಗ ಲ್ಯಾಪ್ಟಾಪ್ ಒಂದು ಅವಶ್ಯಕತೆ ಸಾಮಗ್ರಿ ಆಗಿ ಹೋಗಿದೆ. ಹೇಗೆ ಪಠ್ಯ ಪುಸ್ತಕವು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಗತ್ಯ ಹಾಗೆಯೇ ಲ್ಯಾಪ್ಟಾಪ್ ಕೂಡ ಎನ್ನುವ ಮಟ್ಟಕ್ಕೆ ಇಂದು ತಂತ್ರಜ್ಞಾನ ಶಿಕ್ಷಣ ಕ್ಷೇತ್ರವನ್ನು ಕೂಡ ಆವರಿಸಿದೆ. ಹಾಗಾಗಿ ಸರ್ಕಾರವು ಇದನ್ನು ಮನಗಂಡು ಲ್ಯಾಪ್ಟಾಪ್ ಖರೀದಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ಇಂತಹ ಅವಕಾಶದಿಂದ ವಂಚಿತರಾಗಬಾರದು ಎನ್ನುವುದನ್ನು ಅರಿತು ಸರ್ಕಾರದಿಂದಲೇ ಉಚಿತವಾಗಿ ಲ್ಯಾಪ್ಟಾಪ್ ನೀಡುತ್ತಿದೆ.

ಸರ್ಕಾರದ ಈ ಲ್ಯಾಪ್ಟಾಪ್ ಪಡೆಯಲು ವಿದ್ಯಾರ್ಥಿಗಳು ಕರ್ನಾಟಕ ಫ್ರೀ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸರ್ಕಾರವು ಅವರಿಗೆ ಲ್ಯಾಪ್ಟಾಪ್ ಅನ್ನು ನೀಡುತ್ತದೆ. ಹಾಗಾಗಿ ಈ ಅಂಕಣದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಕರ್ನಾಟಕ ಸರ್ಕಾರದ ಈ ಲ್ಯಾಪ್ಟಾಪ್ ಯೋಚನೆ ಬಗ್ಗೆ ಕೆಲವು ಪ್ರಮುಖ ಅಂಶಗಳನ್ನು ತಿಳಿಸುತ್ತಿದ್ದೇವೆ.

ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸುವ ವಿಳಾಸ ಮತ್ತು ಇರಬೇಕಾದ ಅರ್ಹತಾ ಮಾನದಂಡಗಳು ಏನೇನು ಜೊತೆಗೆ ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ, ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವ ವಿಷಯವನ್ನು ತಿಳಿಸಿ ಕೊಡುತ್ತಿದ್ದೇವೆ. ಈ ಉಪಯುಕ್ತ ಮಾಹಿತಿಯ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಈ ಮಾಹಿತಿಯನ್ನು ಹಂಚಿಕೊಂಡು ಹೆಚ್ಚಿನ ವಿದ್ಯಾರ್ಥಿಗಳಿಗೆ ಕರ್ನಾಟಕ ಫ್ರೀ ಲ್ಯಾಪ್ಟಾಪ್ ಯೋಜನೆ ಪ್ರಯೋಜನ ಸಿಗಲು ನೆರವಾಗಿ.

ಯೋಜನೇಯ ಹೆಸರು:- ಕರ್ನಾಟಕ ಫ್ರೀ ಲ್ಯಾಪ್ಟಾಪ್ ಯೋಜನೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಇರಬೇಕಾದ ಅರ್ಹತೆಗಳು:-
● ಕರ್ನಾಟಕದ ನಿವಾಸಿಗಳಾಗಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
● ವಿದ್ಯಾರ್ಥಿಗಳು ಕರ್ನಾಟಕದಲ್ಲಿಯೇ ವಿದ್ಯಾಭ್ಯಾಸ ಮಾಡಿರಬೇಕು.
● 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು.
● ದ್ವಿತೀಯ ಪಿಯುಸಿ ಉತ್ತೀರ್ಣರಾಗಿ ಮುಂದಿನ ವಿದ್ಯಾಭ್ಯಾಸ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳಿಗೆ ಮಾತ್ರ ಈ ಯೋಜನೆಯ ಫಲಾನುಭವಿಗಳಾಗುವ ಅರ್ಹತೆ ಇರುತ್ತದೆ.

ಕರ್ನಾಟಕ ಫ್ರೀ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:-
● ಅಭ್ಯರ್ಥಿಗಳು ಕರ್ನಾಟಕದಲ್ಲಿ ವಾಸವಿದ್ದಾರೆ ಎನ್ನುವ ದೃಢೀಕರಣಕ್ಕಾಗಿ ವಾಸಸ್ಥಳ ಧೃಡೀಕರಣಪತ್ರ ನೀಡಬೇಕು.
● ವಿದ್ಯಾರ್ಥಿಯ ಆಧಾರ್ ಕಾರ್ಡ್
● ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಬ್ಯಾಂಕ್ ಪಾಸ್ ಬುಕ್
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ದ್ವಿತೀಯ ಪಿಯುಸಿ ಅಂಕಪಟ್ಟಿ
● ದ್ವಿತೀಯ ಪಿಯುಸಿ ಉತ್ತೀರ್ಣವಾದ ಬಳಿಕ ಮುಂದಿನ ತರಗತಿಗೆ ದಾಖಲಾಗಿರುವ ರಿಸಿಪ್ಟ್
● ಪಾಸ್ಪೋರ್ಟ್ ಸೈಜ್ ಫೋಟೋ
● ಮೊಬೈಲ್ ಸಂಖ್ಯೆ.

ಅರ್ಜಿ ಸಲ್ಲಿಸುವ ವಿಧಾನ:-
● ಕರ್ನಾಟಕ ಸರ್ಕಾರ ನೀಡುತ್ತಿರುವ ಈ ಉಚಿತ ಕರ್ನಾಟಕ ಫ್ರೀ ಲ್ಯಾಪ್ಟಾಪ್ ಯೋಜನೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಇದಕ್ಕಾಗಿ ಸರ್ಕಾರ ನಿಗದಿಪಡಿಸಿರುವ ವೆಬ್ಸೈಟ್ ಹೋಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
● ಅರ್ಜಿ ಫಾರಂ ಭರ್ತಿ ಮಾಡಿ ಕೇಳಲಾಗಿರುವ ಎಲ್ಲಾ ಅಗತ್ಯ ದಾಖಲೆಗಳನ್ನು ಕೂಡ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಆಯ್ಕೆ ಆಗುವ ಅಭ್ಯರ್ಥಿಗಳನ್ನು ಸಂಪರ್ಕಿಸಿ ಅಧಿಕಾರಿಗಳು ಈ ಫ್ರೀ ಲ್ಯಾಪ್ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಲ್ಯಾಪ್ಟಾಪ್ ವಿತರಣೆ ಮಾಡುತ್ತಾರೆ.

Leave a Comment

%d bloggers like this: