ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ನೀಡಿಕೆ ಕೂಡಲೇ ಅರ್ಜಿ ಸಲ್ಲಿಸಿ.

 

ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಮಹಿಳೆಯರಿಗೆ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ದೇಶದ ಎಲ್ಲಾ ಮಹಿಳೆಯರು ಕೂಡ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎನ್ನುವ ಉದ್ದೇಶದಿಂದ ಅನೇಕ ಯೋಜನೆಗಳನ್ನು ರೂಪಿಸಿ ಸರ್ಕಾರದಿಂದ ಸಬ್ಸಿಡಿ ರೂಪದ ಸಾಲ ಸಹಾಯಧನ ಕೊಟ್ಟು ಪ್ರೋತ್ಸಾಹಿಸುತ್ತಿರುವ ಪ್ರಧಾನ ಮಂತ್ರಿಗಳು ಈಗ ಉಚಿತ ಹೊಲಿಗೆ ಯಂತ್ರ ನೀಡುವ ನಿರ್ಧಾರ ಮಾಡಿದ್ದಾರೆ.

ಈ ಉಚಿತ ಹೊಲಿಗೆ ಯಂತ್ರ ಪಡೆಯುವುದರ ಮೂಲಕ ಹೆಚ್ಚಿನ ವಿದ್ಯಾಭ್ಯಾಸ ಪಡೆಯದ ಮಹಿಳೆಯರು ತರಬೇತಿಗಳನ್ನು ಪಡೆದು ಮನೆಯಲ್ಲಿ ಕುಳಿತು ಉದ್ಯೋಗ ಮಾಡಿ ಕುಟುಂಬವನ್ನು ಸಲಹುವುದರ ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿಯ ಭಾಗವಾಗಬಹುದು. ಈ ಯೋಜನೆಯಲ್ಲಿ ಭಾರತದ ಎಲ್ಲಾ ರಾಜ್ಯಗಳಿಗೂ ಕೂಡ 50,000 ಉಚಿತ ಹೊಲಿಗೆ ಯಂತ್ರಗಳನ್ನು ಕೇಂದ್ರ ಸರ್ಕಾರ ವಿತರಣೆ ಮಾಡುತ್ತಿದೆ.

ಕರ್ನಾಟಕ ರಾಜ್ಯದ ಮಹಿಳೆಯರು ಕೂಡ ಈಗ ನಾವು ಹೇಳುವ ಈ ನಿಯಮಾವಳಿಗಳ ಪ್ರಕಾರ ಅರ್ಜಿ ಸಲ್ಲಿಸಿ ಈ ಉಚಿತ ಹೋಲಿಕೆ ಯಂತ್ರವನ್ನು ಪಡೆಯಬಹುದು. ಅದಕ್ಕಾಗಿ ಕೆಲ ಅರ್ಹತಾ ಮಾನದಂಡಗಳಿವೆ. ಅವುಗಳ ಬಗ್ಗೆ ಪೂರ್ತಿಯಾಗಿ ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

ಪಿಎಂ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಅರ್ಜಿ ಸಲ್ಲಿಸಲು ಕೇಳಲಾಗುವ ಅರ್ಹತೆಗಳು:-
● ಆಯಾ ರಾಜ್ಯದಲ್ಲಿ ಪ್ರತ್ಯೇಕವಾಗಿ ವಿತರಣೆ ಮಾಡುವ ವ್ಯವಸ್ಥೆ ಇರುವುದರಿಂದ ಆಯಾ ರಾಜ್ಯದ ಮಹಿಳೆಯರಿಗೆ ಅಷ್ಟೇ ಅರ್ಜಿ ಸಲ್ಲಿಸಲು ಅವಕಾಶ.
● ಮಹಿಳೆಯರು ಕನಿಷ್ಠ 20 ವರ್ಷದಿಂದ ಗರಿಷ್ಠ 40 ವರ್ಷದ ವಯೋಮಾನದವರಾಗಿರಬೇಕು.
● ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರಿಗೆ ಮೊದಲ ಆದ್ಯತೆ. ಹಾಗಾಗಿ ಉದ್ಯೋಗಸ್ಥ ಮಹಿಳೆಯರಾಗಿದ್ದರೆ ವಾರ್ಷಿಕ ಆದಾಯ 12000 ಮೀರಿರಬಾರದು.
● ವಿಧವೆಯರು ಮತ್ತು ಅಂಗವಿಕಲ ಮಹಿಳೆಯರು ಕೂಡ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲೆಗಳು:-
● ಮಹಿಳೆಯ ಆಧಾರ್ ಕಾರ್ಡ್
● ವಯಸ್ಸಿನ ಪ್ರಮಾಣ ಪತ್ರ
● ಆದಾಯ ಪ್ರಮಾಣ ಪತ್ರ
● ಗುರುತಿನ ಚೀಟಿ
● ಅಂಗವಿಕಲರಾಗಿದ್ದರೆ ಅಂಗವಿಕಲ ವೈದ್ಯಕೀಯ ಪ್ರಮಾಣ ಪತ್ರ
● ಮಹಿಳೆ ವಿಧವೆಯಾಗಿದ್ದರೆ ನಿಗರ್ತಿಕ ವಿಧವೆ ಪ್ರಮಾಣ ಪತ್ರ.
● ಸಮುದಾಯ ಪ್ರಮಾಣ ಪತ್ರ
● ಸಕ್ರಿಯವಾಗಿರುವ ಮೊಬೈಲ್ ಸಂಖ್ಯೆ
● ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು.

ಅರ್ಜಿ ಸಲ್ಲಿಸುವ ವಿಧಾನ:-
● ಆನ್ಲೈನ್ ಮತ್ತು ಆಫ್ಲೈನ್ ಎರಡು ವಿಧದಲ್ಲೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
● ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆಗೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳು ಹತ್ತಿರದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಭೇಟಿ ಕೊಟ್ಟು ಈ ಯೋಜನೆಗಾಗಿ ಇರುವ ಅರ್ಜಿ ಫಾರಂ ಅನ್ನು ಪಡೆಯಬೇಕು.

● ಅರ್ಜಿ ಫಾರಂ ಅಲ್ಲಿ ವೈಯಕ್ತಿಕ ವಿವರಗಳನ್ನು ಸರಿಯಾದ ರೀತಿಯಲ್ಲಿ ಫಿಲ್ ಮಾಡಬೇಕು ಮತ್ತು ಹೊಲಿಗೆ ತರಬೇತಿ ಪಡೆದಿರುವ ಬಗ್ಗೆ ಮತ್ತು ಹಿಂದೆ ಯಾವುದಾದರೂ ಯೋಜನೆಗಳಲ್ಲಿ ಉಚಿತ ಹೊಲಿಗೆ ಯಂತ್ರ ಪಡೆದಿರುವದರ ಬಗ್ಗೆ ಪ್ರಶ್ನೆಗಳಿರುತ್ತವೆ ಅದರಲ್ಲಿ ಸರಿಯಾದ ಮಾಹಿತಿಯನ್ನು ಟಿಕ್ ಮಾಡಬೇಕು.
● ಮೇಲೆ ಕೇಳಲಾದ ಎಲ್ಲಾ ದಾಖಲೆಗಳನ್ನು ಕೂಡ ಅರ್ಜಿ ಫಾರಂ ಜೊತೆ ಲಗತ್ತಿಸಿ ಸಹಿ ಮಾಡಿ ಅಧಿಕಾರಿಗಳಿಗೆ ಸಲ್ಲಿಸಬೇಕು.
● ಅಧಿಕಾರಿಗಳು ಪರಿಶೀಲನೆ ನಡೆಸಿ ಅರ್ಹ ಆಕಾಂಕ್ಷಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಿದ್ದಾರೆ.

● ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಫಾರಂ ಭರ್ತಿ ಮಾಡಿ ಎಲ್ಲಾ ಡಾಕುಮೆಂಟ್‌ಗಳ ಸಾಫ್ಟ್ ಕಾಪಿಯನ್ನು ಅಪ್ಲೋಡ್ ಮಾಡಬೇಕು.
● ಅರ್ಜಿ ಸಲ್ಲಿಕೆ ಪೂರ್ತಿಗೊಂಡ ಮೇಲೆ ಅಧಿಕಾರಿಗಳು ಪರಿಶೀಲನೆ ನಡೆಸಿ ಅರ್ಹರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡುತ್ತಾರೆ.

Leave a Comment

%d bloggers like this: