ಕರ್ನಾಟಕ ವಿಧಾನಸಭಾ ಚುನಾವಣೆ 2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತ ಪಡೆಯುವ ಮೂಲಕ ಸರ್ಕಾರ ರಚಿಸಿದೆ. ಮಾನ್ಯ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಏರಿದ್ದಾರೆ ಮತ್ತು ತಮ್ಮ ಸಚಿವ ಸಂಪುಟವನ್ನು ಕೂಡ ವಿಸ್ತರಿಸಿದ್ದಾರೆ. ಇದೀಗ ಕಾಂಗ್ರೆಸ್ ಸರ್ಕಾರಕ್ಕೆ ಚುನಾವಣಾ ಪ್ರಚಾರದ ವೇಳೆ ಕೊಟ್ಟಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರಲು ಸಮಯ.
ಯಾವ ಬೆಲೆಯನ್ನಾದರೂ ತೆತ್ತು ಕಡ್ಡಾಯವಾಗಿ ಐದಕ್ಕೆ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ತಾತ್ವಿಕ ಆದೇಶ ಪತ್ರವೂ ಕೂಡ ಹೊರಡಿಸಿರುವ ಕಾಂಗ್ರೆಸ್ ಸರ್ಕಾರವು ಇದರ ಜೊತೆಗೆ ಹಲವು ಗ್ಯಾರಂಟಿಯೇತರ ಯೋಜನೆಗಳನ್ನು ಕೂಡ ಜಾರಿಗೆ ತಂದು ಕರ್ನಾಟಕದ ಎಲ್ಲ ವರ್ಗದ ನಾಗರಿಕರಿಗೂ ಕೂಡ ಸಿಹಿ ಸುದ್ದಿ ನೀಡಿದೆ.
ಕೆಲ ದಿನಗಳ ಹಿಂದಷ್ಟೇ ಇಂದಿರಾ ಕ್ಯಾಂಟೀನ್ ಮತ್ತೆ ಓಪನ್ ಮಾಡುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು ಬಿಜೆಪಿ ಸರ್ಕಾರವು ಇಂದಿರಾ ಕ್ಯಾಂಟೀನ್ ಯೋಜನೆಯನ್ನು ನಿರ್ಲಕ್ಷ ಮಾಡಿತ್ತು, ಆದರೆ ಹಸಿವು ಮುಕ್ತ ಕರ್ನಾಟಕ ಮಾಡುವ ಉದ್ದೇಶದಿಂದ ಬಡ ಜನರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಶುಚಿಯಾದ ಆಹಾರ ಕೊಡುವ ದೆಸೆಯಿಂದ ಇದನ್ನು ಮುಂದುವರಿಸುತ್ತೇವೆ ಎಂದು ಇಂದಿರಾ ಕ್ಯಾಂಟೀನ್ ಯೋಜನೆಗೆ ಪುನಶ್ಚೇತನ ಗೊಳಿಸುವುದಾಗಿ ಹೇಳಿದ್ದಾರೆ.
ಇದರ ಜೊತೆಗೆ ಶಾಲೆಗೆ ಹೋಗುವ ಮಕ್ಕಳಿಗೂ ಕೂಡ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಂದ ಸಿಹಿ ಸುದ್ದಿ ಸಿಕ್ಕಿದೆ. ಬಿಜೆಪಿ ಸರ್ಕಾರ ಇದ್ದಾಗ ಕಳೆದ ವರ್ಷ ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳು ಮತ್ತು ಸಮವಸ್ತ್ರವು ಸರಿಯಾಗಿ ವಿತರಣೆ ಆಗದೆ ಹೈಕೋರ್ಟ್ ಇಂದ ಛೀಮಾರಿ ಹಾಕಿಸಿಕೊಂಡಿತ್ತು.
ಈ ಬಾರಿ ಹಾಗಾಗದೆ ಇರಲಿ ಎನ್ನುವ ಕಾರಣಕ್ಕೆ ಎಚ್ಚೆತ್ತುಕೊಂಡಿರುವ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. 2023-24 ನೇ ಸಾಲಿನ ಶೈಕ್ಷಣಿಕ ವರ್ಷವು ಆರಂಭಗೊಂಡಿದ್ದು ಶಾಲಾ ತರಗತಿಗಳು ಕೂಡ ಆರಂಭವಾಗುತ್ತದೆ. ಆದ್ದರಿಂದ ಶಾಲೆ ಶುರುವಾದ ಮೊದಲ ದಿನದಲ್ಲಿಯೇ ಒಂದರಿಂದ 10ನೇ ತರಗತಿಯವರೆಗೆ ಎಲ್ಲ ಮಕ್ಕಳಿಗೂ ಕೂಡ ಅವರ ಪಠ್ಯಪುಸ್ತಕಗಳು ಹಾಗೂ ಉಚಿತ ಸಮವಸ್ತ್ರವನ್ನು ವಿತರಣೆ ಮಾಡಲು ಸರ್ಕಾರವು ಆದೇಶ ಹೊರಡಿಸಿದೆ.
ಇದರ ಜೊತೆಗೆ ಬಿಸಿ ಊಟದ ವ್ಯವಸ್ಥೆಯನ್ನು ಕೂಡ ಸರಿಯಾಗಿ ನಿರ್ವಹಿಸಲು ಎಚ್ಚರಿಸಿದ ಸರ್ಕಾರ ಬಡ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಮಾಡಿದೆ. ಬಿಜೆಪಿ ಸರ್ಕಾರವು ಉಚಿತ ಸೈಕಲ್ ವಿತರಣೆ ಯೋಜನೆಯನ್ನು ಜಾರಿಗೆ ತಂದಿದ್ದರೂ ಕೂಡ ಬಜೆಟ್ ಇಲ್ಲ ಎನ್ನುವ ಕಾರಣಕ್ಕಾಗಿ ಕೆಲವು ವರ್ಷಗಳ ಕಾಲ ಇದನ್ನು ಸ್ಥಗಿತಗೊಳಿಸಿತ್ತು. ಕಾಂಗ್ರೆಸ್ ಸರ್ಕಾರವು ವರ್ಷದಲ್ಲಿ 8ನೇ ತರಗತಿ ಓದುವ ಮಕ್ಕಳಿಗೆ ಖಂಡಿತವಾಗಿ ಸೈಕಲ್ ವಿತರಣೆ ಮಾಡುವುದಾಗಿ ಒಪ್ಪಿಕೊಂಡಿದೆ.
ಜೊತೆಗೆ 1 ರಿಂದ 10ನೇ ತರಗತಿ ಮತ್ತು ಪಿಯುಸಿ ಪದವಿ ಸ್ನಾತಕೋತ್ತರ ಪದವಿ ಓದುತ್ತಿರುವವರು ಸ್ಕಾಲರ್ಶಿಪ್ ಅಪ್ಲೈ ಮಾಡಿಲ್ಲ ಎಂದರೆ SSP ಪೋರ್ಟಲ್ ಮೂಲಕ ಅಥವಾ ಕಾರ್ಮಿಕರ ಕಾರ್ಡ್ ಹೊಂದಿರುವಂತಹ ಪೋಷಕರ ಮಕ್ಕಳುಗಳು ಸೇವಾ ಸಿಂಧು ಪೋರ್ಟಲ್ ಮೂಲಕ ತಮ್ಮ ತಮ್ಮ ಸ್ಕಾಲರ್ಶಿಪ್ ಗಳಿಗೆ ಅಪ್ಲೈ ಮಾಡಲು ಸರ್ಕಾರ ಅನುಮತಿ ಕೊಟ್ಟಿದೆ. ಆದ್ದರಿಂದ ಈ ಉಪಯುಕ್ತ ಮಾಹಿತಿಯನ್ನು ಈ ಕೂಡಲೇ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು, ಅರ್ಹರಿಗೆ ಈ ಯೋಜನೆಯ ಅನುಕೂಲತೆ ಸಿಗುವಲ್ಲಿ ನೆರವಾಗಿ.