5 ಎಕರೆಯೊಳಗೆ ಭೂಮಿ ಹೊಂದಿರುವ ರೈತರಿಗೆ ಸಿಗಲಿದೆ ಪ್ರತೀ ತಿಂಗಳು 3000 ರೂಪಾಯಿ.! ಇದನ್ನು ಪಡೆಯುವುದು ಹೇಗೆ ಗೊತ್ತಾ.?

 

WhatsApp Group Join Now
Telegram Group Join Now

ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಕೇಂದ್ರ ಸರ್ಕಾರ ಹಲವು ಮಹತ್ವದ ಯೋಜನೆಗಳನ್ನು ಆರಂಭಿಸಿದೆ. ಈಗಾಗಲೇ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ರೈತರಿಗೆ ವಾರ್ಷಿಕ 6000 ರೂ. ನೀಡುತ್ತದೆ, ಅಂದರೆ, ವರ್ಷದಲ್ಲಿ 3 ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದೆ.

ಈ ಯೋಜನೆಯ ಜತೆಗೆ ರೈತರ ಆರ್ಥಿಕ ಸಹಾಯಕ್ಕಾಗಿ ಮತ್ತು ವೃದ್ಧಾಪ್ಯವನ್ನು ಸುರಕ್ಷಿತವಾಗಿರಿಸಲು ಸರ್ಕಾರವು ಪಿಎಂ ಕಿಸಾನ್ ಮಂದನ್ ಯೋಜನೆ’ಯನ್ನೂ ಆರಂಭಿಸಿದೆ. ರೈತರಿಗೂ ಕೂಡ ಪಿಂಚಣಿ ಸೌಲಭ್ಯ ನೀಡುವ ಮುಖ್ಯ ಉದ್ದೇಶದೊಂದಿಗೆ ಈ ಯೋಜನೆ ಆರಂಭಿಸಲಾಗಿದೆ. ಇಲ್ಲಿ 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಈ ಯೋಜನೆಯ ಮೂಲಕ ಪ್ರತೀ ತಿಂಗಳೂ 3000 ರೂ. ನೀಡಲಾಗುತ್ತದೆ.

ರೈತರಿಗೆ ಖಚಿತ ಪಿಂಚಣಿ ಸಿಗಲಿದೆ

ಪ್ರಧಾನಮಂತ್ರಿ ಕಿಸಾನ್ ಮಂದನ್ ಯೋಜನೆಯಡಿ ರೈತರಿಗೆ 60 ವರ್ಷಗಳ ನಂತರ ಪಿಂಚಣಿ ನೀಡಲಾಗುವುದು. ವಿಶೇಷವೆಂದರೆ ನೀವು ಪಿಎಂ ಕಿಸಾನ್‌ನಲ್ಲಿ ಖಾತೆದಾರರಾಗಿದ್ದರೆ, ನಿಮಗೆ ಯಾವುದೇ ದಾಖಲೆಗಳ ಅಗತ್ಯವಿರುವುದಿಲ್ಲ. ಪಿಎಂ ಕಿಸಾನ್ ಮನ್ಧನ್ ಯೋಜನೆಯಲ್ಲಿ ನಿಮ್ಮ ನೇರ ನೋಂದಣಿಯನ್ನು ಸಹ ಮಾಡಲಾಗುತ್ತದೆ. ಈ ಯೋಜನೆಯ ಅನೇಕ ಉತ್ತಮ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳಿವೆ.

ಏನಿದು ಪಿಎಂ ಕಿಸಾನ್ ಮಾಂದನ್ ಯೋಜನೆ

ಪಿಎಂ ಕಿಸಾನ್ ಮಂದನ್ ಯೋಜನೆ(PM Kisan Maan Dhan Pension Scheme)ಯ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, 60 ವರ್ಷ ವಯಸ್ಸಿನ ನಂತರ ಈ ಯೋಜನೆಯಡಿ ರೈತರಿಗೆ ಪಿಂಚಣಿ ಸೌಲಭ್ಯವಿದೆ. ಅಂದರೆ, ರೈತರ ವೃದ್ದಾಪ್ಯ ಕಾಪಾಡಲು ಸರ್ಕಾರ ಈ ಯೋಜನೆ ಆರಂಭಿಸಿದೆ. 18 ವರ್ಷದಿಂದ 40 ವರ್ಷದವರೆಗಿನ ಯಾವುದೇ ರೈತರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 60 ವರ್ಷ ತುಂಬಿದ ನಂತರ ರೈತರು ಮಾಸಿಕ 3000 ರೂ.ವರೆಗೆ ಪಿಂಚಣಿ ಪಡೆಯುತ್ತಾರೆ.

ಮಂದನ್ ಯೋಜನೆಗೆ ಅಗತ್ಯವಿರುವ ದಾಖಲೆಗಳು

1. ಆಧಾರ್ ಕಾರ್ಡ್
2. ಗುರುತಿನ ಚೀಟಿ
3. ವಯಸ್ಸಿನ ಪ್ರಮಾಣಪತ್ರ
4. ಆದಾಯ ಪ್ರಮಾಣಪತ್ರ
5. ಕ್ಷೇತ್ರದ ಖಸ್ರಾ ಖತೌನಿ
6. ಬ್ಯಾಂಕ್ ಖಾತೆ ಪಾಸ್‌ಬುಕ್
7. ಮೊಬೈಲ್ ಸಂಖ್ಯೆ
8. ಪಾಸ್‌ಪೋರ್ಟ್ ಗಾತ್ರದ ಫೋಟೋ

ಕುಟುಂಬ ಪಿಂಚಣಿ ಒದಗಿಸುವುದು

ಈ ಯೋಜನೆಯಡಿಯಲ್ಲಿ, ನೋಂದಾಯಿತ ರೈತರು(Farmers) 60 ವರ್ಷ ವಯಸ್ಸಿನ ನಂತರ ವಯಸ್ಸಿನ ಪ್ರಕಾರ ಮಾಸಿಕ ಹೂಡಿಕೆಯ ಮೇಲೆ ಕನಿಷ್ಠ 3000 ರೂ. ಅಥವಾ ವರ್ಷಕ್ಕೆ ರೂ 36,000 ಪಿಂಚಣಿ ಪಡೆಯುತ್ತಾರೆ. ಇದಕ್ಕಾಗಿ ರೈತರು ಮಾಸಿಕ 55 ರೂ.ನಿಂದ 200 ರೂ.ವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಪಿಎಂ ಕಿಸಾನ್ ಮಂದನ್ ನಲ್ಲಿ ಕುಟುಂಬ ಪಿಂಚಣಿ ಸೌಲಭ್ಯವೂ ಇದೆ. ಖಾತೆದಾರನ ಮರಣದ ನಂತರ, ಅವನ ಸಂಗಾತಿಯು ಶೇ.50ರಷ್ಟು ಪಿಂಚಣಿ ಪಡೆಯುತ್ತಾರೆ. ಕುಟುಂಬ ಪಿಂಚಣಿಯಲ್ಲಿ ಸಂಗಾತಿಯನ್ನು ಮಾತ್ರ ಸೇರಿಸಲಾಗುತ್ತದೆ.

ಪಿಎಂ ಕಿಸಾನ್ ಸಮ್ಮಾನ್‌ ನಿಧಿ ಫಲಾನುಭವಿಗೆ ಹೇಗೆ ಪ್ರಯೋಜನ?

* ಎರಡು ಹೆಕ್ಟರ್ ಅಥವಾ ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.
ಯೋಜನೆಗೆ ಸೇರಲ್ಪಡುವ ರೈತನ ವಯಸ್ಸು 18 ವರ್ಷದಿಂದ 40 ವರ್ಷದ ಒಳಗಿರಬೇಕು.
* ವಯಸ್ಸಿಗೆ ಅನುಗುಣವಾಗಿ ಸರ್ಕಾರವು ಪ್ರೀಮಿಯಂಗಳನ್ನು ನಿಗದಿಪಡಿಸಿದೆ.
* ವಯಸ್ಸಿಗೆ ಅನುಗುಣವಾಗಿ ಸರ್ಕಾರ ಸೂಚಿಸಿದಷ್ಟು ಮೊತ್ತವನ್ನು 60 ವರ್ಷದವರೆಗೆ ಪ್ರತಿ ತಿಂಗಳು ಕೂಡ ಪ್ರೀಮಿಯಂ ಆಗಿ ಪಾವತಿ ಮಾಡಿಕೊಂಡು ಬರಬೇಕು.

* 60 ವರ್ಷ ತುಂಬಿದ ಬಳಿಕ ಪ್ರತಿ ತಿಂಗಳು 3000 ಪಿಂಚಣಿಯು ರೈತನಿಗೆ ಸಿಗುತ್ತದೆ. ಒಂದು ವೇಳೆ ಮಧ್ಯದಲ್ಲಿ ರೈತರು ಮೃತಪಟ್ಟಲ್ಲಿ ಪತ್ನಿ ಯೋಜನೆಯ ಮುಂದುವರಿಸಿಕೊಂಡು ಹೋಗಬಹುದು.
* ಪಿಂಚಣಿ ಪಡೆಯುವ ವೇಳೆಯಲ್ಲಿ ರೈತ ಪಟ್ಟರೆ ಆಗ ಕುಟುಂಬ ಪಿಂಚಣಿಯಾಗಿ ಆತನ ಪತ್ನಿಗೆ 1500 ರೂ. ಪಿಂಚಣಿ ಅವರು ಇರುವವರೆಗೂ ಸಿಗುತ್ತದೆ.

* ಈ ಯೋಜನೆಯನ್ನು ಖರೀದಿಸಲು ರೈತನು ಹತ್ತಿರದಲ್ಲಿರುವ ಯಾವುದಾದರೂ ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ಕೊಟ್ಟು ಇದಕ್ಕಾಗಿ ಕೇಳುವ ದಾಖಲೆಗಳನ್ನು ಸಲ್ಲಿಸಿದರೆ ಸಾಕು. ನಿಮ್ಮ ಹೆಸರಿನಲ್ಲಿ ಈ ಯೋಜನೆಯನ್ನು ಖರೀದಿಸಬಹುದು ಮತ್ತು ಪ್ರತಿ ತಿಂಗಳು ಯೋಜನೆಯ ಪ್ರೀಮಿಯಂ ಹಣವು ನಿಮ್ಮ ಖಾತೆಯಿಂದ ಕಡಿತಗೊಳ್ಳುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now