ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ವಿಧಾನ.! ಈ ದಿನಾಂಕದೋಳಗೆ ಅಪ್ಡೇಟ್ ಮಾಡಿದ್ರೆ ಉಚಿತ ಇಲ್ಲದಿದ್ರೆ ದಂಡ ಕಟ್ಟ ಬೇಕಾಗುತ್ತೆ.!

 

ಭಾರತದಲ್ಲಿ ಕಾಲಕಾಲಕ್ಕೆ ಅನುಗುಣವಾಗಿ ಒಂದು ಸದ್ದುದ್ದೇಶಕ್ಕಾಗಿ ನಿಯಮಗಳು ಬದಲಾಗುತ್ತಾ ಇರುತ್ತವೆ. ಅಂತೆಯೇ ಆಧಾರ್ ಕಾರ್ಡ್ ಎನ್ನುವ ಗುರುತಿನ ಚೀಟಿ ಭಾರತದಲ್ಲಿ ಕಡ್ಡಾಯವಲದಿದ್ದರೂ ಅನಿವಾರ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈಗಷ್ಟೇ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಎಷ್ಟು ಅನಿವಾರ್ಯವಾಯಿತು ಎನ್ನುವ ಅನುಭವ ಭಾರತದಾತ್ಯಂತ ಎಲ್ಲರಿಗೂ ಆಗಿದೆ.

ಈಗ ಅದೇ ರೀತಿ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸುವ ಸಮಯ ಬಂದಿದೆ. UIDAI ಇದಕ್ಕಾಗಿ ಒಂದು ಸುತ್ತೋಲೆಯನ್ನು ಹೊರಡಿಸಿ ಭಾರತದ ನಾಗರಿಕರಿಗೆ ಮಾಹಿತಿಯನ್ನು ತಿಳಿಸಿದೆ. ನೀವು ಈಗ ಇದನ್ನು ಉಚಿತವಾಗಿ ಮಾಡಿಕೊಳ್ಳಲು ಅವಕಾಶವನ್ನು ಕೂಡ ಸಂಸ್ಥೆ ನೀಡಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಅಂದರೆ UIDAI ಆಧಾರ್ ಕಾರ್ಡ್ ಮಾಡಿಸಿ ಹತ್ತು ವರ್ಷಗಳಾದರೂ ಕೂಡ.

ಯಾವುದೇ ರೀತಿಯ ಅಪ್ಡೇಟ್ ಮಾಡಿಸದ ಒಂದು ಬಾರಿ ಕೂಡ ಆಧಾರ್ ಕಾರ್ಡ್ ಅಲ್ಲಿರುವ ಮಾಹಿತಿಯನ್ನು ತಿದ್ದುಪಡಿ ಮಾಡಿಸಿರದ ನಾಗರಿಕರಿಗೆ ನಿಮ್ಮ ಆಧಾರ್ ಕಾರ್ಡಿನ ಅಸ್ತಿತ್ವಕ್ಕಾಗಿ ಡೆಮೋಗ್ರಾಫಿಕ್ ಮಾಹಿತಿಗಳಾದ ಪ್ರೂಫ್ ಆಫ್ ಐಡೆಂಟಿಟಿ ಮತ್ತು ಪ್ರೂಫ್ ಆಫ್ ಅಡ್ರೆಸ್ ಅನ್ನು ಉಚಿತವಾಗಿ ಕೊನೆ ದಿನಾಂಕದವರೆಗೆ ಅಪ್ಡೇಟ್ ಮಾಡಿಸಿ.

ಮಾರ್ಚ್ 15ರಿಂದ ಜೂನ್ 14ರ ವರೆಗೆ ಆನ್ಲೈನ್ ಅಲ್ಲಿ myaadhar.uidai.gov.in ವೆಬ್ ಸೈಟ್ ಗೆ ಭೇಟಿ ಕೊಡುವ ಮೂಲಕ ಅಪ್ಡೇಟ್ ಮಾಡಿಸಬಹುದು ಎನ್ನುವ ಅಂಶವನ್ನು ತಿಳಿಸಿದೆ. ಒಂದು ವೇಳೆ ಈ ಕಾಲಾವಧಿ ಮುಗಿದರೆ ಪಾನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಸಮಯದಲ್ಲಿ ಆದಂತೆಯೇ ದಂಡ ಬೀಳುವ ಸಾಧ್ಯತೆಗಳು ಕೂಡ ಇವೆ. ಹಾಗಾಗಿ ಯಾರು ಇದುವರೆಗೆ 10 ವರ್ಷದಿಂದ ಒಮ್ಮೆ ಕೂಡ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಲ್ಲ ಈ ಕೂಡಲೇ ಮಾಡಿಸಿ ನಿಮ್ಮ PC ಅಥವಾ ಮೊಬೈಲ್ ಮೂಲಕ ಕೂಡ ಈ ವಿಧಾನಗಳನ್ನು ಅನುಸರಿಸಿ ಇದನ್ನು ಮಾಡಬಹುದು.

● ಮೊದಲಿಗೆ ಈ ಮೇಲೆ ತಿಳಿಸಲಾದ ವೆಬ್ಸೈಟ್ UIDAI ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಡಿ.
● ವೆಬ್ಸೈಟ್ ಓಪನ್ ಆದಮೇಲೆ ಲಾಗಿನ್ ಒಪ್ಶನ್ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಸಂಖ್ಯೆಯನ್ನು ಕೇಳುತ್ತದೆ ಆಧಾರ್ ಸಂಖ್ಯೆ ಮತ್ತು ತೋರಿಸಲಾಗುವ ಕ್ಯಾಪ್ಚಾ ಕೂಡ ಎಂಟ್ರಿ ಮಾಡಿ, OTPಗೆ ರಿಕ್ವೆಸ್ಟ್ ಕೊಡಿ, OTP ಎಂಟ್ರಿ ಮಾಡುವ ಮೂಲಕ ಲಾಗಿನ್ ಆಗಿ.

● ಲಾಗಿನ್ ಆದಮೇಲೆ ಒಂದು ಡ್ಯಾಶ್ ಬೋರ್ಡ್ ಕಾಣುತ್ತದೆ ಆ ಡ್ಯಾಶ್ ಬೋರ್ಡ್ ಅನ್ನು ಸ್ಕ್ರೋಲ್ ಮಾಡಿದರೆ ಕೊನೆ ಆಪ್ಶನ್ ಆಗಿ ಡಾಕ್ಯೂಮೆಂಟ್ ಅಪ್ಡೇಟ್ ಎನ್ನುವ ಆಪ್ಷನ್ ಕಾಣುತ್ತದೆ.
● ಅದರಲ್ಲಿಯೇ ಪ್ರೂಫ್ ಆಫ್ ಐಡೆಂಟಿಟಿ ಮತ್ತು ಪ್ರೂಫ್ ಆಫ್ ಅಡ್ರೆಸ್ ಡಾಕುಮೆಂಟ್ ಅಪ್ಡೇಟ್ ಎಂದು ಬರೆದಿರುತ್ತದೆ. ಜೊತೆಗೆ ಮೊದಲು ಈ ಸರ್ವಿಸ್ಗೆ ರೂ.50 ಶುಲ್ಕ ಪಾವತಿಸಬೇಕಾಗಿತ್ತು, ಆದರೆ 14.06.2023ರ ವರೆಗೆ ಉಚಿತವಾಗಿ ಈ ಡಾಕ್ಯುಮೆಂಟ್ ಗಳನ್ನು ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಿಕೊಡಲಾಗದೆ. ಇದನ್ನು ಸಹ ಅದರ ಮೇಲೆ ಬರೆದಿರುತ್ತದೆ.

● ಡಾಕುಮೆಂಟ್ ಅಪ್ಡೇಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಮುಂದಿನ ಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿ. ನಿಮ್ಮ ಡಾಕ್ಯುಮೆಂಟ್ ಅಪ್ಲೋಡ್ ಮಾಡಿಕೊಳ್ಳಿ ಅಥವಾ ವಿವರವಾಗಿ ಈ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

%d bloggers like this: