ಚೆಕ್‌ ಮೇಲೆ 2 ಗೆರೆಯನ್ನು ಏಕೆ ಎಳೆಯಲಾಗುತ್ತದೆ ಗೊತ್ತ.? ಚೆಕ್ ಉಪಯೋಗಿಸುವ ಪ್ರತಿಯೊಬ್ಬರು ಕೂಡ ಇದನ್ನು ತಿಳಿದುಕೊಳ್ಳಿ

ಸರಕು ಅಥವಾ ಸೇವೆಗಳ ವಿನಿಮಯಕ್ಕೆ ಹಣ ಒಂದು ಪ್ರಮುಖ, ಪ್ರಭಾವಿ ಮತ್ತು ಅವಶ್ಯಕ ಮಾಧ್ಯಮ. ಪುರಾತನ ಕಾಲದಲ್ಲಿ ವಿನಿಮಯ ಪದ್ಧತಿ (ಬಾರ್ಟರ್ ಸಿಸ್ಟಮ್) ಅನುಸರಿಸುತ್ತಿದ್ದರು. ಕಾಲ ಗತಿಸಿದಂತೆ ಚಿನ್ನ ಬೆಳ್ಳಿ ಮುಂತಾದ ಲೋಹದ ನಾಣ್ಯಗಳ ಬಳಕೆ ಆರಂಭವಾಯಿತು. ತರುವಾಯ ಕಾಗದದ ಕರೆನ್ಸಿಗಳು ಚಲಾವಣೆಗೆ ಬಂದವು.

WhatsApp Group Join Now
Telegram Group Join Now

ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಮನಿ ಅಂದರೆ ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳ ಬಳಕೆ ಸರ್ವೇ ಸಾಮಾನ್ಯವಾಯಿತು. ಇಂದು ಸಾಮಾನ್ಯ ಜನರಿಗೂ ಇದರ ಬಳಕೆ ತಿಳಿದಿದೆ. ಇಂದಿನ ಆಧುನಿಕ ಸಮಾಜದಲ್ಲಿ ಬ್ಯಾಂಕಿಂಗ್ ಸೇವೆ ಬಳಸಿಕೊಳ್ಳದ ವ್ಯಾಪಾರ ವ್ಯವಹಾರಗಳನ್ನು ಊಹಿಸಿಕೊಳ್ಳುವುದೂ ಕಷ್ಟ. ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಚೆಕ್‌ಗಳದ್ದು ಪ್ರಮುಖ ಪಾತ್ರ. ದೊಡ್ಡ ದೊಡ್ಡ ಮೊತ್ತದ ಬಹುಪಾಲು ವ್ಯವಹಾರಗಳು ನಡೆಯುವುದು ಚೆಕ್‌ಗಳ ಮೂಲಕವೇ.

ಇತ್ತೀಚಿನ ದಿನಗಳಲ್ಲಿ ಅನೇಕ ರೀತಿಯ ಆನ್ಲೈನ್ ವಹಿವಾಟುಗಳು ಹೆಚ್ಚಾಗಿವೆ. ಯುಪಿಐ ಪಾವತಿಗಳು ಹೆಚ್ಚಾಗಿ ಬಳಸುದರಿಂದ ಬ್ಯಾಂಕ್ ಗಳಿಗೆ ಭೇಟಿ ನೀಡುವ ಕೆಲಸ ತಪ್ಪಿದೆ. ಇನ್ನು ಈ ಹಿಂದೆ ಬ್ಯಾಂಕ್ ಗಳಲ್ಲಿ ಚೆಕ್‌ಗಳ ಮೂಲಕ ವಹಿವಾಟುಗಳು ನಡೆಯುತ್ತಿದ್ದವು.
ಇತ್ತೀಚಿಗೆ ಚೆಕ್ ಬಳಸುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಇದೀಗ ಫೋನ್ ಪೇ, ಗೂಗಲ್ ಪೇ, ಪೆಟಿಎಂ ಸೇರಿದಂತೆ ಇನ್ನು ಅನೇಕ ರೀತಿಯ ಯುಪಿಐ ಪ್ಲಾಟ್ ಫಾರ್ಮ್ ಗಳ ಮೂಲಕ ಹಣವನ್ನು ಪಾವತಿಸಬಹುದಾಗಿದೆ.

ಆದರೂ ದೊಡ್ಡ ಮೊತ್ತದ ವಹಿವಾಟುಗಳಿಗೆ ಈಗಲೂ ಕೂಡ ಚೆಕ್ ಗಳನ್ನೂ ಬಳಸುತ್ತಾದೆ. ಚೆಕ್ ಬಳಸುವಲ್ಲಿ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕು. ಇದೀಗ ಚೆಕ್ ನಲ್ಲಿ ಬಳಸುವ ಎರಡು ಅಡ್ಡ ಗೆರೆಗಳ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ. ಈ ಚೆಕ್‌ಗಳ ಬಳಕೆ ಸಾಮಾನ್ಯ ಜನರಿಗೂ ತಿಳಿದಿರುವ ಸಂದರ್ಭದಲ್ಲಿಯೂ ವಿದ್ಯಾವಂತರೂ, ಶಿಕ್ಷಿತರೂ ಕೆಲವೊಮ್ಮೆ ಚೆಕ್‌ನಲ್ಲಿ ಮಾಹಿತಿಯನ್ನು ಸರಿಯಾಗಿ ಬರೆಯಲು, ಬರೆದಂತಹ ಚೆಕ್ಕಿನ ಜೊತೆ ಚಲನ್ ಲಗ್ಗತ್ತಿಸಿ ವ್ಯವಹರಿಸಲು ಬರದೆ ಬ್ಯಾಂಕ್‌ಗಳಲ್ಲಿ ಹೆಣಗಾಡುವುದನ್ನು ನಾವು ಆಗಾಗ ಕಾಣುತ್ತಿರುತ್ತೇವೆ.

ಚೆಕ್ ಸೌಲಭ್ಯ ಪಡೆಯಲು ಸಾಮಾನ್ಯವಾಗಿ ನಮ್ಮ ಖಾತೆಯಲ್ಲಿ 1,000 ರೂ. ಕನಿಷ್ಠ ಶುಲ್ಕ ಯಾವಾಗಲು ಕಾಯ್ದುಕೊಳ್ಳಬೇಕು (ಮಿನಿಮಮ್ ಬ್ಯಾಲನ್ಸ್). ಚೆಕ್ ಅನ್ನು ಬಳಸುವವರು ಬಹುಮುಖ್ಯವಾಗಿ ನಾಲ್ಕು ಸಂಗತಿಗಳ ಬಗ್ಗೆ ಗಮನ ಕೊಡುವುದು ಅವಶ್ಯಕ. ಸ್ಪಷ್ಟ ದಿನಾಂಕ, ಹಣ ಪಡೆಯಬೇಕಾದವರ ಮಾಹಿತಿ, ಹಣದ ಮೌಲ್ಯ ಅಕ್ಷರ ಮತ್ತು ಅಂಕಿಗಳಲ್ಲಿ ಹಾಗೂ ಸಹಿ ಇರುವುದು ಮುಖ್ಯವಾಗಿದೆ. ಇನ್ನೂ, ಇದರ ಮೇಲೆ ಎರಡು ಗೆರೆಗಳನ್ನೂ ಬರೆಯಾಗುತ್ತದೆ. ಅದ್ಯಾಕೆ ಅಂತಾ ಇಲ್ಲಿ ನೋಡೋಣ ಬನ್ನಿ…

ಚೆಕ್ ಮೇಲೆ ಎರಡು ಗೆರೆಯನ್ನು ಏಕೆ ಎಳೆಯಲಾಗುತ್ತದೆ?
ಚೆಕ್ ಬಳಕೆಯಲ್ಲಿ ಕೂಡ ಸಾಕಷ್ಟು ನಿಯಮಗಳಿವೆ. ಚೆಕ್ ಬಳಸುವಲ್ಲಿ ಯಾವುದೇ ರೀತಿಯ ಸಣ್ಣ ತಪ್ಪಾದರೂ ಸಹ ಬಾರಿ ಪ್ರಮಾಣದ ನಷ್ಟವನ್ನು ಅನುಭವಿಸಬೇಕಾಗುತ್ತದೆ. ಬ್ಯಾಂಕ್ ನೀಡುವ ಚೆಕ್ ನಲ್ಲಿ ಖಾತೆದಾರರ ವೈಯಕ್ತಿಕ ವಿವರವನ್ನು ನಮೂದಿಸಲು ಸ್ಥಳಾವಕಾಶವನ್ನು ನೀಡಲಾಗುತ್ತದೆ. ಇನ್ನು ಚೆಕ್ ನಲ್ಲಿ ಎಡ ಭಾಗದಲ್ಲಿ ಮೇಲಿನ ಸಾಲಿನಲ್ಲಿ ಎರಡು ಗೆರೆಗಳನ್ನು ಎಳೆಯಲಾಗುತ್ತದೆ. ಚೆಕ್ ನಲ್ಲಿ ಎರಡು ಗೆರೆಗಳಿರಲು ಮುಖ್ಯ ಕಾರವಿದೆ.

ಚೆಕ್ ನಲ್ಲಿರುವ ಎರಡು ಸಾಲುಗಳು ಪಾವತಿ ಮಾಡಬೇಕಾದ ಸ್ಥಿತಿಯಾಗಿದೆ. ಈ ಸಾಲಿನ ಅರ್ಥ ಖಾತೆ ಪಾವತಿದಾರರ ಚೆಕ್ ಈ ಎರಡು ಸಾಲುಗಳ ಮೂಲಕ ಹಣ ಪಾವತಿದಾರರ ಖಾತೆಗೆ ಹೋಗುತ್ತದೆ ಈ ಎರಡು ಸಾಲುಗಳನ್ನು ದಾಟಿದ ನಂತರ, ಈ ಚೆಕ್ ಅನ್ನು ನಗದು ಮಾಡಲಾಗುವುದಿಲ್ಲ. ಯಾರ ಹೆಸರಿಗೆ ಚೆಕ್ ಡ್ರಾ ಆಗಿತ್ತದೆಯೋ ಅವರ ಖಾತೆಗೆ ಮಾತ್ರ ಹಣ ಸೇರುತ್ತದೆ ಬಳಕೆದಾರರ ಸುರಕ್ಷತೆಗಾಗಿ ಇದನ್ನು ಇರಿಸಲಾಗಿದೆ ಎಂಬ ಅರ್ಥವನ್ನು ಸೂಚಿಸುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now