ಪಿಂಚಣಿ ಆರ್ಡರ್ ಕಾಪಿಯನ್ನು ಮನೆಯಲ್ಲಿಯೇ ಕುಳಿತುಕೊಂಡು ಮೂರೇ ದಿನದ ಒಳಗೆ ಪಡೆದುಕೊಳ್ಳಬಹುದು ಹೇಗೆ ಗೊತ್ತಾ.?

 

ಕರ್ನಾಟಕದಲ್ಲಿ ವಿಧವೆ ಮಹಿಳೆಯರಿಗೆ, ಹಿರಿಯ ನಾಗರಿಕರಿಗೆ, ದೇವದಾಸಿಯರಿಗೆ ಹಾಗೂ ಅಂಗವಿಕಲರಿಗೆ ಸರ್ಕಾರದಿಂದ ಪಿಂಚಣಿ ಹಣ ಬರುತ್ತದೆ. ಈ ಪಿಂಚಣಿಯನ್ನು ಪಡೆಯಲು ಹಿಂದೆಲ್ಲಾ ಫಲಾನುಭವಿಗಳು ನಾಡಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬೇಕಾಗಿತ್ತು. ಕಛೇರಿಯಿಂದ ಕಛೇರಿಗೆ ಅಲೆಯಬೇಕಾಗಿತ್ತು. ಜೊತೆಗೆ ಇದು ವಿಳಂಬವು ಸಹ ಆಗುತ್ತಿತ್ತು.

ಆ ಪ್ರಕ್ರಿಯೆ ಮುಗಿದ ಮೇಲೆ ಅವರಿಗೆ ಒಂದು ಆರ್ಡರ್ ಕಾಪಿ ಸಿಗುತ್ತಿತ್ತು. ಇದಾದ ಮೇಲೆ ಪ್ರತಿ ತಿಂಗಳೂ ಕೂಡ ಸರ್ಕಾರದಿಂದ ಅವರಿಗೆ ಪಿಂಚಣಿ ಹಣ ಹೋಗುತ್ತಿತ್ತು. ಆದರೆ ಈಗ ಎಲ್ಲಾ ಪ್ರಕ್ರಿಯೆಗಳು ಕೂಡ ಆನ್ಲೈನ್ ನಲ್ಲಿ ನಡೆಯುತ್ತಿರುವುದರಿಂದ ಈ ಕೆಲಸವನ್ನು ಸಹ ನೀವು ಮನೆಯಲ್ಲೇ ಕುಳಿತು ಮಾಡಬಹುದು. ನೀವು ಇಂದು ಕರೆ ಮಾಡುವ ಮೂಲಕವೇ ಇದಕ್ಕೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು.

ಬಹಳ ಸರಳವಾದ ವಿಧಾನದಲ್ಲಿ ನೀವೇ ಅರ್ಜಿ ಸಲ್ಲಿಸಬಹುದು. ಇದಾದ ಬಳಿಕ 72 ಗಂಟೆಗಳಲ್ಲಿ ನಿಮ್ಮ ಅರ್ಜಿಯ ಪರಿಶೀಲನೆ ಅಧಿಕಾರಿಗಳಿಂದ ನಡೆದು ಆರ್ಡರ್ ಕಾಪಿ ಅಂದರೆ ಆದೇಶ ಪತ್ರವು ಕೂಡ ಕೈ ಸೇರುತ್ತದೆ. ಕೇವಲ ಮೂರು ದಿನದ ಒಳಗೆ ಸಂಪೂರ್ಣ ಪ್ರಕ್ರಿಯೆಯೇ ಮುಗಿಯುತ್ತದೆ. ಇದು ಹೇಗೆ ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಈ ಅಂಕಣವನ್ನು ಪೂರ್ತಿಯಾಗಿ ಓದುವುದರಿಂದ ಹೇಗೆ ನೀವು ಆನ್ಲೈನ್ ಅಲ್ಲಿ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು.

ಹೇಗೆ ಕರೆ ಮಾಡಬೇಕು, ಯಾವ ನಂಬರಿಗೆ ಕರೆ ಮಾಡಬೇಕು, ಕರೆ ಮಾಡಿದಾಗ ಅವರು ಏನೆಲ್ಲಾ ದಾಖಲೆಗಳನ್ನು ಕೇಳುತ್ತಾರೆ ಮತ್ತು ಈ ಅರ್ಜಿಗಳ ಪರಿಶೀಲನೆ ಯಾರಿಂದ ನಡೆಯುತ್ತದೆ? ಯಾವಾಗ ನಡೆಯುತ್ತದೆ? ಎನ್ನುವ ಎಲ್ಲಾ ಮಾಹಿತಿಯು ಕೂಡ ತಿಳಿಸುತ್ತಿದ್ದೇವೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈ ರೀತಿ ಇರುತ್ತದೆ:-
● 155245 ಇದು ಪಿಂಚಣಿಗೆ ಅರ್ಜಿ ಸಲ್ಲಿಸುವವರಿಗೆ ಸರ್ಕಾರ ತೆರೆದಿರುವ ಸಹಾಯವಾಣಿ ಈ ನಂಬರಿಗೆ ಕರೆ ಮಾಡಿ ನಿಮ್ಮ ಅರ್ಜಿಯನ್ನು ಸಲ್ಲಿಸಬೇಕು.
● ಆ ಕರೆಯಲ್ಲಿ ನಿಮ್ಮ ಕೆಲ ವಿವರಗಳನ್ನು ಕೇಳುತ್ತಾರೆ. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ರೇಷನ್ ಕಾರ್ಡ್ RD ಸಂಖ್ಯೆ ಮತ್ತು ವಿಳಾಸವನ್ನು ಕೂಡ ಕೇಳುತ್ತಾರೆ ಇವುಗಳನ್ನೆಲ್ಲ ಸರಿಯಾಗಿ ಹೇಳಬೇಕು.

● ನೀವು ಕರೆ ಮಾಡಿರುವ ಪ್ರಕ್ರಿಯ ಪೂರ್ತಿಗೊಂಡ ಮೇಲೆ ಅರ್ಜಿ ಸಲ್ಲಿಕೆ ಸರಿಯಾಗಿ ಆಗಿದ್ದರೆ ಒಂದು ಆಕ್ನಾಲಜಿಮೆಂಟ್ ನಂಬರ್ ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶದಲ್ಲಿ ಬರುತ್ತದೆ ಅದರ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
● ಕರೆ ಮಾಡಿ ನಿಮ್ಮ ವಿನಂತಿಯನ್ನು ಸಲ್ಲಿಸಿದ ನಂತರ ಆಯಾ ವಿಭಾಗದ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆ ಬಾಗಿಲಿಗೆ ಭೇಟಿಯಾಗಿ ಅವರ ಬಳಿ ಇರುವ ಮೊಬೈಲ್ ಆಪ್ ಮೂಲಕ ಅರ್ಜಿದಾರರ ಮಾಹಿತಿಯನ್ನು ಸಂಗ್ರಹಿಸುತ್ತಾರೆ.

● ದಾಖಲೆಗಳಾಗಿ ನೀವು ನಿಮ್ಮ ಆಧಾರ್ ಕಾರ್ಡ್ , ಬ್ಯಾಂಕ್ ಅಥವಾ ಅಂಚೆ ಕಚೇರಿಯ ಪಾಸ್ ಬುಕ್, ವಯಸ್ಸು ಹಾಗೂ ವಿಳಾಸಕ್ಕೆ ಸಂಬಂಧಪಟ್ಟ ಪುರಾವೆಯಾಗಿ ವೋಟರ್ ಐಡಿ ಮತ್ತು ಪಡಿತರ ಚೀಟಿ ಇವುಗಳನ್ನು ನೀಡಬೇಕು.
● ಗ್ರಾಮ ಲೆಕ್ಕಾಧಿಕಾರಿಗಳು ಆ ಆಪ್ ಮೂಲಕ ಅರ್ಜಿದಾರರ ಫೋಟೋವನ್ನು ಕೂಡ ಸೆರೆ ಹಿಡಿಯುತ್ತಾರೆ.

● ಕಂದಾಯ ಇಲಾಖೆಯಿಂದ ಪರಿಶೀಲನೆ ನಡೆದು ಫಲಾನುಭವಿಗಳು ಅರ್ಹರಾಗಿದ್ದರೆ ನಾಡಕಛೇರಿಯ ಉಪನೋಂದಣಿ ವಿಭಾಗಕ್ಕೆ ಅರ್ಜಿಯನ್ನು ಕಳುಹಿಸಿಕೊಡುತ್ತಾರೆ.
● ಅಂತಿಮವಾಗಿ ಉಪತಹಶೀಲ್ದಾರರುಗಳು ಬಂದಿರುವ ಕಡಿತವನ್ನು ಪರಿಶೀಲಿಸಿ ಅನುಮೋದಿಸಿದರೆ ಆ ಕಾರ್ಯ ಪೂರ್ತಿಗೊಳ್ಳುತ್ತದೆ.
● ತದನಂತರ ನಿಮ್ಮ ಪೆನ್ಷನ್ ಆರ್ಡರ್ ಕಾಪಿಯನ್ನು ನಿಮ್ಮ ಗ್ರಾಮ ಲೆಕ್ಕಾಧಿಕಾರಿಗಳು ನಿಮ್ಮ ಮನೆಗೆ ಬಂದು ಕೊಡುತ್ತಾರೆ.

Leave a Comment

%d bloggers like this: