ಇಂದಿನ ಲೇಖನದಲ್ಲಿ ಶಕ್ತಿ ಉಚಿತ ಬಸ್ ಪಾಸ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಮಹಿಳೆಯರಿಗೆ ಸರ್ಕಾರದ ವತಿಯಿಂದ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಒದಗಿಸಲಾಗಿದೆ. ಇಂದಿನಿಂದ ಉಚಿತವಾಗಿ ಬಸ್ಸುಗಳಲ್ಲಿ ಓಡಾಡಲು ಶಕ್ತಿ ಬಸ್ ಪಾಸುಗಳನ್ನು ಪಡೆಯಬೇಕು. ಈ ಬಸ್ ಪಾಸುಗಳಿಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?, ಇದಕ್ಕೆ ಬೇಕಾದ ದಾಖಲೆಗಳು ಯಾವುವು?, ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಕೊನೆವರೆಗೂ ಮಿಸ್ ಮಾಡದೇ ಓದಿ…
ಕರ್ನಾಟಕ ಸರ್ಕಾರವು ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ಸೇವೆಗಾಗಿ ಎಲ್ಲಾ ಬಸ್‌ಗಳನ್ನು ಪಟ್ಟಿ ಮಾಡಿದೆ ಮತ್ತು ಸೇವೆಯನ್ನು ಪಡೆಯಲು ಬಯಸುವ ಎಲ್ಲಾ ಮಹಿಳೆಯರು ಈ ಯೋಜನೆಯಡಿಯಲ್ಲಿ “ಶಕ್ತಿ ಸ್ಮಾರ್ಟ್ ಕಾರ್ಡ್” ಗೆ ಅರ್ಜಿ ಸಲ್ಲಿಸಬೇಕು ಎಂದು ಹೇಳಿದೆ. ಇದೇ ಸಮಯದಲ್ಲಿ ಸರ್ಕಾರವು ಬಸ್ ನಲ್ಲಿ ಮಹಿಳೆಯರಿಗೆ ಪ್ರಯಾಣಿಸಲು ಶಕ್ತಿ ಉಚಿತ ಬಸ್ ಪಾಸ್ ಗಳನ್ನು ವಿತರಿಸಲು ಮುಂದಾಗಿದೆ. ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣವನ್ನು ಮಾಡಲು ಈ ಬಸ್ ಪಾಸ್ ಕಡ್ಡಾಯವಾಗಿದೆ. ಈ ಶಕ್ತಿ ಯೋಜನೆಯು ಸ್ತ್ರೀ ಸಬಲೀಕರಣದ ಮೂಲಕ ಸಮಸಮಾಜದತ್ತ ಹೆಜ್ಜೆಯನ್ನು ಇಡುವ ಉದ್ದೇಶವನ್ನು ಹೊಂದಿದೆ.
ಸಾರಿಗೆ ನಿಗಮದ ನಾಲ್ಕು ಸಂಸ್ಥೆಗಳ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಸಂಚಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಾಲ್ಕು ಸಂಸ್ಥೆಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಆದರೆ,ಕೆಲವು ಷರತ್ತುಗಳನ್ನು ಅನ್ವಯಿಸಲಾಗಿದೆ. ರಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ನಾಲ್ಕು ನಿಗಮಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC), ಬೆ೦ಗಳೂರು ಮಹಾನಗರ ಸಾರಿಗೆ ಸ೦ಸ್ಥೆ (BMTC), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸ೦ಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಸಾರಿಗೆಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು.
ಶಕ್ತಿ ಸ್ಮಾರ್ಟ್ ಕಾರ್ಡ್ ದೊರೆಯುವವರೆಗೆ ಉಚಿತ ಪ್ರಯಾಣ ಹೇಗೆ?
ಶಕ್ತಿ ಸ್ಮಾರ್ಟ್‌ಕಾರ್ಡ್ ಅನ್ನು ವಿತರಿಸುವವರೆಗೆ ಭಾರತ ಸರ್ಕಾರ/ ಕರ್ನಾಟಕ ಸರ್ಕಾರದ ಇಲಾಖೆ / ಸರ್ಕಾರಿ ಸ್ವಾಮ್ಯದ ಕಛೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಉಚಿತ ಟಿಕೆಟ್ ವಿತರಿಸುವ ಸ೦ದರ್ಭದಲ್ಲಿ ತೋರಿಸಬೇಕು.
ಅರ್ಜಿಯನ್ನು ಎಲ್ಲಿ ಸಲ್ಲಿಸುವುದು?
ಈ ಯೋಜನೆಯಡಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ತಗಲುವ ವೆಚ್ಚವನ್ನು ಸರ್ಕಾರದಿಂದ ಶೂನ್ಯ ಟಿಕೆಟ್ ಅಥವಾ ಸ್ಮಾರ್ಟ್ ಕಾರ್ಡ್ ದತ್ತಾಂಶವನ್ನು ಆಧರಿಸಿ ಬರಿಸಲಾಗುವುದು. ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು, ಶಕ್ತಿ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸುವ ಪ್ರಕ್ರಿಯೆಯನ್ನು ಮುಂದಿನ ಮೂರು ತಿಂಗಳೊಳಗಾಗಿ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.
ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸುವವರೆಗೆ ಕೇಂದ್ರ, ರಾಜ್ಯ ಸರ್ಕಾರದ ಇಲಾಖೆ, ಸರ್ಕಾರಿ ಸ್ವಾಮ್ಯದ ಕಚೇರಿಗಳಿಂದ ವಿತರಿಸಿರುವ ಭಾವಚಿತ್ರ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿಗಳನ್ನು ಶೂನ್ಯ ಟಿಕೆಟ್ ವಿತರಿಸುವ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ. ಹಾಗಾಗಿ ಎಲ್ಲ ಜನಸಾಮಾನ್ಯರು ಸೇವಾ ಸಿಂಧುಗಳಿಗೆ ತೆರಳಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ನಂತರ ಉಚಿತ ಸ್ಮಾರ್ಟ್ ಕಾರ್ಡ್ ಅಥವಾ ಪಾಸ್ಗಳನ್ನು ಪಡೆದು ಬಸ್ಸುಗಳಲ್ಲಿ ಪ್ರಾಣಿಸಬಹುದಾಗಿದೆ.
ಯಾವ್ಯಾವ ದಾಖಲೆಗಳು ಬೇಕು
ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣಿಸಲು ಅರ್ಜಿಯನ್ನು ಸಲ್ಲಿಸಲು ಗುರುತಿನ ಚೀಟಿ ಹಾಗೂ ವಾಸದ ವಿಳಾಸವಿರುವ ಗುರುತಿನ ಚೀಟಿ ಮತ್ತು ಭಾವಚಿತ್ರವು ಬೇಕಾಗಿರುತ್ತದೆ.
ಈ ಮೇಲಿನ ವಿಧಾನವನ್ನು ಅನುಸರಿಸಿ ಬಸ್ ಪಾಸ್ ಅಥವಾ ಸ್ಮಾರ್ಟ್ ಕಾರ್ಡ್ ಗಳನ್ನು ಪಡೆದುಕೊಂಡು ಎಲ್ಲಾ ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣವನ್ನು ಬಳಸಬಹುದು.