ಪಿಂಚಣಿ ಪಡೆಯುವವರೇ ಇಲ್ಲಿದೆ ನಿಮಗೆ ಪ್ರಮುಖ ಮಾಹಿತಿ… ಜೂನ್‌ 15ರೊಳಗೆ ಈ ಕೆಲಸ ಮಾಡದಿದ್ರೆ ನಿಮಗೆ ಸಿಗೋದಿಲ್ಲ ಪಿಂಚಣಿ ಹಣ.!

ಬ್ಯಾಂಕ್ ಖಾತೆಗಳು, ಮೊಬೈಲ್ ಸಂಖ್ಯೆಗಳು, ಪಾಸ್‌ಪೋರ್ಟ್‌ಗಳು ಮತ್ತು ಇತರ ದಾಖಲೆಗಳೊಂದಿಗೆ ಆಧಾರ್ ಕಾರ್ಡ್‌ ಅನ್ನು ಲಿಂಕ್ ಮಾಡುವ ಪ್ರಾಮುಖ್ಯತೆಯು ಹೆಚ್ಚಿದೆ. ಏಕೆಂದರೆ, ಎಲ್ಲಾ ಸರ್ಕಾರಿ ಅನುದಾನಿತ ಯೋಜನೆಗಳು ಮತ್ತು ಪ್ರಯೋಜನಗಳು ಅದರಿಂದ ಬೇರೂರಿವೆ.

ಸರ್ಕಾರದ ವೃದ್ದಾಪ್ಯ, ಅಂಗವಿಕಲ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಮತ್ತು ಇತರೆ ಮಾಸಿಕ ಪಿಂಚಣಿ ಪಡೆಯುವವವರು ಜೂ. 15ರೊಳಗೆ ಪಿಂಚಣಿ ಜಮಾ ಆಗುವ ಬ್ಯಾಂಕ್‌ ಅಥವಾ ಅಂಚೆ ಕಚೇರಿ ಹೋಗಿ ತಪ್ಪದೇ ಆಧಾರ್‌ ಕಾರ್ಡ್‌ ಅನ್ನು ನಂಬರ್‌ ಲಿಂಕ್‌ ಮಾಡಿಸಬೇಕು ಎಂದು ತಹಶೀಲ್ದಾರ್ ಕೆ.ಗುರುಬಸವರಾಜ ತಿಳಿಸಿದ್ದಾರೆ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೇ ಇರುವವರಿಗೆ(NPCI Not Mapped, NPCI inactive), ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರ ತಾಳೆ ಆಗದಿದ್ದಲ್ಲಿ, ಆಧಾರ್ ಕಾರ್ಡ್ ನಿಷ್ಕ್ರಿಯವಾಗಿದರಿಂದ (invalid Aadhar, inactive aadhar) ಈ ಎಲ್ಲಾ ತಾಂತ್ರಿಕ ಕಾರಣಗಳಿಂದ ರಾಜ್ಯದಲ್ಲಿ ಅನೇಕ ಜನರಿಗೆ ಪ್ರತಿ ತಿಂಗಳು ನೇರವಾಗಿ ಫಲಾನುಭವಿ ಖಾತೆಗೆ ಜಮಾ ಅಗುತ್ತಿದ್ದ ವೃದ್ದಾಪ್ಯ ವೇತನ ಅಂಗವಿಕಲ ವಿಧವಾ, ಸಂಧ್ಯಾ ಸುರಕ್ಷಾ ,ಮನಸ್ವಿನಿ, ಮೈತ್ರಿ ಮತ್ತು ಇತರೆ ಮಾಸಿಕ ಪಿಂಚಣಿಯನ್ನು ಸಂಬಂಧಪಟ್ಟ ಇಲಾಖೆಯಿಂದ ಫಲಾನುಭವಿ ಖಾತೆಗೆ ವರ್ಗಾಹಿಸಲು ಸಾಧ್ಯವಾಗಿರುವುದಿಲ್ಲ.

ಕೆಲ ತಾಂತ್ರಿಕ ಕಾರಣದಿಂದ ಆಧಾರ್ ನಂಬರ್‌ ಬ್ಯಾಂಕ್‌ ಖಾತೆಯೊಂದಿಗೆ ಲಿಂಕ್‌ ಆಗಿರುವುದಿಲ್ಲ. ಅಂತಹ ಆಗಿರದ ಫಲಾನುಭವಿಗಳ ಪಟ್ಟಿ ಅಂಚೆ ಕಚೇರಿ ಹಾಗೂ ಗ್ರಾಮದ ಆಡಳಿತಾಧಿಕಾರಿ ಬಳಿ ಸಿಗುತ್ತದೆ. ಬ್ಯಾಂಕ್‌ ಖಾತೆಗೆ, ಎನ್‌ಪಿಸಿಐಗೆ ಆಧಾರ್ ನಂಬರ್‌ ಲಿಂಕ್‌ ಆಗಿಲ್ಲ, ಆಧಾರ್ ನಂಬರ್‌ ಚಾಲ್ತಿಯಲ್ಲಿ ಇಲ್ಲ ಎಂಬ ಮೂರು ರೀತಿಯ ಪಟ್ಟಿ ಇರುತ್ತದೆ. ಕೂಡಲೇ ಆಧಾರ್‌ ಲಿಂಕ್‌ ಮಾಡಿಸಬೇಕು. ತಪ್ಪಿದ್ದಲ್ಲಿ ಸರ್ಕಾರದಿಂದ ಬರುವ ಪಿಂಚಣಿ ಪಡೆದುಕೊಳ್ಳಲು ತೊಂದರೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಒಮ್ಮೆ ನಿಮ್ಮ ಭಾಗದ ಗ್ರಾಮ ಚಾವಡಿ ಭೇಟಿ ಮಾಡಿ ಅಲ್ಲಿ ಒಟ್ಟು ಮೂರು ರೀತಿಯ ಪಟ್ಟಿ ಲಬ್ಯವಿದ್ದು ಬ್ಯಾಂಕ್‌ ಖಾತೆಗೆ ಆಧಾರ ನಂಬರ ಲಿಂಕ್ ಆಗಿಲ್ಲ, ಮತ್ತು N P C I ಗೆ ಆಧಾರ ನಂಬರ ಲಿಂಕ್ ಆಗಿಲ್ಲ,ಆಧಾರ ನಂಬರ ಚಾಲ್ತಿ ಇಲ್ಲ . ಅನ್ನುವ 3 ರೀತಿಯ ಪಟ್ಟಿ ಇರುತ್ತದೆ ಇಲ್ಲಿ ನಿಮಗೆ ನಿಮ್ಮ ಅರ್ಜಿ ಸ್ಥಿತಿ ಕುರಿತು ಸಂಫೂರ್ಣ ಮಾಹಿತಿ ಸಿಗುತ್ತದೆ.

ನೀವು ಕಡ್ಡಾಯವಾಗಿ ದಿನಾಂಕ 15-06-2023 ರ ಒಳಗೆ ನಿಮ್ಮ ಪಿಂಚಣಿ ಜಮಾ ಆಗುವ ಬ್ಯಾಂಕಿಗೆ / ಪೋಸ್ಟ್ ಆಫೀಸಿಗೆ ಹೋಗಿ ಆಧಾರ್ ಲಿಂಕ್ ಮಾಡಿಸಲೇಬೇಕು, ತಪ್ಪಿದಲ್ಲಿ ಸರ್ಕಾರದಿಂದ ಬರುವ ಪಿಂಚಣಿ ತಾವು ಪಡೆದುಕೊಳ್ಳಲು ತೊಂದರೆ ಆಗುತ್ತದೆ. ಈ ವಿಧಾನ ಅನುಸರಿಸಿ ಮಾಸಿಕ ಪಿಂಚಣಿ ಅರ್ಜಿ ಸ್ಥಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಬವುದು.

https://mahitikanaja.karnataka.gov.in ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿ ಕಣಜ ಜಾಲಾತಾಣ ಭೇಟಿ ಮಾಡಬೇಕು. ನಂತರ ಇಲ್ಲಿ ಗ್ರಾಮೀಣ/ನಗರ ಎರಡು ಆಯ್ಕೆಯಲ್ಲಿ ನಿಮ್ಮ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ, ತದನಂತರದಲ್ಲಿ ನಿಮ್ಮ ಜಿಲ್ಲೆ,ತಾಲ್ಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಗ್ರಾಮದ ಮಾಸಿಕ ಪಿಂಚಣಿದಾರರ ಅರ್ಜಿದಾರರ ಸ್ಥಿತಿ ಗೋಚರಿಸುತ್ತದೆ ಇಲ್ಲಿ ಪಿಂಚಣಿ ಅನುಮತಿ ದಿನಾಂಕ, ಪಿಂಚಣಿ ಮೊತ್ತ, ಇತ್ಯಾದಿ ವಿವರವನ್ನು ನೋಡಬವುದು,ಅರ್ಜಿ ಸ್ಥಿತಿ ತಿಳಿಯಲು “ಪಿಂಚಣಿ ವಿವರಗಳು” ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

Leave a Comment

%d bloggers like this: