ಕೇಂದ್ರ ಸರ್ಕಾರದಿಂದ ರೈತ ಮಹಿಳೆಯರಿಗಾಗಿ ಬಂಪರ್ ಆಫರ್ ಪ್ರತಿ ತಿಂಗಳು ಸಿಗಲಿದೆ 5000 ಸಾವಿರ ರೂಪಾಯಿ.!

 

ಹೊಸ ಯೋಜನೆಯೊಂದಕ್ಕೆ ಕೇಂದ್ರ ಸರ್ಕಾರವು ಚಾಲನೆ ನೀಡಿದ್ದು ಇದರಿಂದ ಮಹಿಳೆಯರು ಹಣ ಸಹಾಯವನ್ನು ಪಡೆದುಕೊಳ್ಳಬಹುದು. ಈ ಬರಹದಲ್ಲಿ ನಾವು ಮಹಿಳಾ ಕಿಸಾನ್ ಸಮ್ಮಾನ್ ಯೋಜನೆಯ ಮುಖಾಂತರ ಮಹಿಳೆಯರು ಹೇಗೆ ಹಣವನ್ನು ಪಡೆದುಕೊಳ್ಳಬಹುದು? ಅರ್ಜಿಯನ್ನು ಸಲ್ಲಿಸುವುದು ಹೇಗೆ? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳು ಯಾವುವು? ಹೀಗೆ ಮಹಿಳಾ ಕಿಸಾನ್ ಸಮ್ಮಾನ್ ಯೋಜನೆಯ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.

ರಾಜ್ಯ ಸರ್ಕಾರವು ಕುಟುಂಬದ ನಿರ್ವಹಣೆಗಾಗಿ ಆರ್ಥಿಕ ಸಹಾಯವನ್ನು ಮಾಡುವ ನಿಟ್ಟಿನಲ್ಲಿ ಮನೆಯ ಯಜಮಾನಿಯ ಖಾತೆಗೆ ಮಾಸಿಕ ರೂಪಾಯಿ ಎರಡು ಸಾವಿರವನ್ನು ನೀಡುವ ಕುರಿತು ಅಧಿಕೃತ ಘೋಷಣೆಯನ್ನು ಈಗಾಗಲೇ ಹೊರಡಿಸಿದೆ. ಇದೀಗ ಕೇಂದ್ರ ಸರ್ಕಾರವು ದೇಶದ ಮಹಿಳೆಯರ ಹಿತದೃಷ್ಟಿಯಿಂದ ಧನ ಸಹಾಯ ಮಾಡಲು ಮುಂದಾಗಿದ್ದು, ಮಹಿಳಾ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿದೆ.

ಉಳಿತಾಯವು ಒಂದು ಆದಾಯ ಎಂಬ ತತ್ವವನ್ನು ಆಧರಿಸಿ, ಕೇಂದ್ರ ಸರ್ಕಾರವು ಸ್ತ್ರೀ ಸಬಲೀಕರಣದ ಅಸ್ತ್ರವನ್ನು ಹಿಡಿದು ಮಹಿಳಾ ಕಿಸಾನ್ ಸಲ್ಮಾನ್ ಉಳಿತಾಯ ಪತ್ರ ಯೋಜನೆಗೆ ನಾಂದಿ ಹಾಡಿದೆ. ಈಗಾಗಲೇ ಬಾಗಲಕೋಟೆಯಲ್ಲಿ ಉತ್ತಮ ಪ್ರತಿಕ್ರಿಯೆಯು ದೊರೆತಿದ್ದು, ಈ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿರುವಂತಹ ಅಂಚೆ ಕಚೇರಿಗೆ ಮಹಿಳೆಯರು ಗುಂಪಾಗಿ ಬರುತ್ತಿದ್ದು, ಧನಾತ್ಮಕ ಚಿಂತನೆಯಲ್ಲಿ ಮಹಿಳೆಯರು ಕೈಜೋಡಿಸಿದ್ದಾರೆ ಎಂದು ತಿಳಿದು ಬಂದಿದೆ.

‘ಆರ್ಥಿಕ ಸ್ವಾವಲಂಬನೆಯೊಂದಿಗೆ, ಸುರಕ್ಷಿತ ಉಳಿತಾಯ’ ಎಂದೆ ಹೆಸರಾಗಿರುವ ಮಹಿಳಾ ಕಿಸಾನ್ ಸನ್ಮಾನ ಯೋಜನೆಯು ಕೇಂದ್ರದಿಂದ 2023ರ ಅವಧಿಯಲ್ಲಿಯೇ ಜಾರಿಗೆ ಬಂದಿದೆ. ಇದೀಗ ಈ ಯೋಜನೆಯ ಬಾಗಲಕೋಟೆಯ ಅನೇಕ ಮನೆ ಮಹಿಳೆಯರಿಗೆ ತಲುಪಿದ್ದು, ಕಳೆದ ಮೇ ತಿಂಗಳಿನಿಂದ ವ್ಯಾಪಕ ಸ್ಪಂದನವು ದೊರೆತಿದ್ದು, ಇದರಿಂದ ಹೊಸದೊಂದು ಅಭಿಯಾನವನ್ನೇ ನಡೆಸಿ ಇನ್ನಷ್ಟು ಮಹಿಳೆಯರಿಗೆ ಈ ಯೋಜನೆಯ ಲಾಭವು ದೊರಕುವಂತೆ ಮಾಡಲು ನಿರ್ಧರಿಸಿದೆ.

ಪ್ರತಿ ತಾಲೂಕಿನಲ್ಲಿ ಒಂದು ಹಳ್ಳಿಯನ್ನು ಈ ಯೋಜನೆಗಾಗಿ ಆಯ್ದುಕೊಂಡು ಆ ಹಳ್ಳಿಯಲ್ಲಿ ಕನಿಷ್ಠ ನೂರು ಖಾತೆಗಳನ್ನು ತೆರೆಯುವ ಉದ್ದೇಶದಿಂದ ಅಂಚೆ ಕಚೇರಿಯು ಮೇಳವನ್ನು ನಡೆಸಲು ಮುಂದಾಗಿದೆ. ಈ ಯೋಜನೆಯಲ್ಲಿ ಮಹಿಳೆಯರು ಎರಡು ವರ್ಷದ ಅವಧಿಗೆ ಠೇವಣಿ ಇಡಲು ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ ಮೊತ್ತ ರೂಪಾಯಿ ಒಂದು ಸಾವಿರದಿಂದ ಗರಿಷ್ಠ ಎರಡು ಲಕ್ಷ ರೂಪಾಯಿವರೆಗೆ ಉಳಿತಾಯವಾಗಿ ಇಡಬಹುದು.

ವಿಶೇಷವೆಂದರೆ ಶೇಕಡ 7.5 ರಷ್ಟು ಆಕರ್ಷಕ ಬಡ್ಡಿಯು ದೊರೆಯಲಿದೆ. ಎರಡು ವರ್ಷದ ನಂತರ ಹಣವನ್ನು ವಾಪಸ್ ಪಡೆಯಬಹುದಾಗಿದೆ. ಒಬ್ಬ ಮಹಿಳೆಯ ಹೆಸರಿನಲ್ಲಿ ಒಂದು ಖಾತೆಯನ್ನು ತೆರೆಯಲು ಅವಕಾಶವಿದ್ದು ಇನ್ನೊಂದು ಠೇವಣಿಯನ್ನು ಇಡಬೇಕಾದ ಅನಿವಾರ್ಯದಲ್ಲಿ ಮೂರು ತಿಂಗಳ ನಂತರ ಕೂಡಿಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್ಥಿಕ ತೊಂದರೆ ಉಂಟಾಗಿ ಎರಡು ವರ್ಷದ ಅವಧಿ ಒಳಗೆ ಹಣವನ್ನು ಹಿಂಪಡೆಯಲು ಮಹಿಳೆಯರು ಬಯಸಿದರೆ, ಅದಕ್ಕೊಂದು ವ್ಯವಸ್ಥೆಯನ್ನು ಮಾಡಲಾಗಿದೆ. ಅದೇನೆಂದರೆ ಒಂದು ವರ್ಷದ ಬಳಿಕ ಅಗತ್ಯವಿದ್ದಲ್ಲಿ, ಉಳಿತಾಯ ಖಾತೆಯ ಗರಿಷ್ಠ ಶೇಕಡ 40ರಷ್ಟು ಹಣವನ್ನು ಒಂದು ಬಾರಿ ಪಡೆದುಕೊಳ್ಳುವ ನಿಯಮವನ್ನು ಯೋಜನೆಯಲ್ಲಿ ಅಳವಡಿಸಲಾಗಿದೆ. ಇನ್ನು ಆರೋಗ್ಯದ ಸಮಸ್ಯೆ ಉಂಟಾಗಿದ್ದಲ್ಲಿ ಖಾತೆಯನ್ನು ಅಕಾಲಿಕ ಅನಿವಾರ್ಯತೆಯಿಂದ ಮುಚ್ಚುವ ಅವಕಾಶವಿದೆ.

ಅಲ್ಲದೆ ಮಹಿಳೆಯರು ಅಸಲಿನ ಜೊತೆಗೆ ಯೋಜನೆಯ ತಿಳಿಸಿದ ಯೋಗ್ಯ ಬಡ್ಡಿಯೊಂದಿಗೆ ಹಣವನ್ನು ಪಡೆದು ಖಾತೆಯನ್ನು ಮುಚ್ಚಬಹುದು. ಮಹಿಳೆಯರ ನೆರವಿನ ಉದ್ದೇಶವನ್ನು ಹೊಂದಿದ ಈ ಯೋಜನೆಯನ್ನು ಅತಿ ಹೆಚ್ಚು ಮಂದಿಗೆ ತಿಳಿಸುವ ನಿಟ್ಟಿನಲ್ಲಿ ಅಭಿಯಾನವು ಪ್ರಾರಂಭವಾಗಿದೆ. ಅಲ್ಲದೆ ಈ ಯೋಜನೆಯ ಎಲ್ಲಾ ಉಪಯೋಗಗಳನ್ನು ವಿವರಿಸುವ ಕರಪತ್ರವನ್ನು ಸಹ ಬಾಗಲಕೋಟೆಯಲ್ಲಿ ವಿತರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಸ್ನೇಹಿತರೆ, ರಾಜ್ಯದ ಎಲ್ಲಾ ರೈತ ಮಹಿಳೆಯರಿಗೂ ವಿಷಯ ತಲುಪುವವರೆಗೂ ಈ ಲೇಖನವನ್ನು ಹಂಚಿಕೊಳ್ಳಿ.

 

Leave a Comment

%d bloggers like this: