ಅರಣ್ಯ ಇಲಾಖೆಯಲ್ಲಿ ಹುದ್ದೆಗಳು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ. ವೇತನ 69,100

 

WhatsApp Group Join Now
Telegram Group Join Now

ಭಾರತದಾತ್ಯಂತ ಎಲ್ಲಾ ಉದ್ಯೋಗ ಆಕಾಂಕ್ಷಿಗಳಿಗೂ ಕೂಡ ಸಿಹಿ ಸುದ್ದಿ. ಯಾಕೆಂದರೆ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ಅರಣ್ಯ ಇಲಾಖೆಯಲ್ಲಿ ಸಾವಿರಕ್ಕೂ ಹೆಚ್ಚು ಅರಣ್ಯ ರಕ್ಷಕ ಹುದ್ದೆಗಳು ಖಾಲಿಯಿದ್ದು ಈ ಹುದ್ದೆಗಳಿಗೆ ಭಾರತದ ಎಲ್ಲಾ ಪುರುಷ ಮತ್ತು ಮಹಿಳಾ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆಗಳನ್ನು ಎದುರಿಸಿ ಉದ್ಯೋಗ ಪಡೆಯಬಹುದಾಗಿದೆ.

ಇದಕ್ಕಾಗಿ ಅರಣ್ಯ ಇಲಾಖೆಯಿಂದ ಅಧಿಕೃತ ಅಧಿಸೂಚನೆ ಅಧಿಸೂಚನೆಯಲ್ಲಿರುವ ಪ್ರಮುಖ ಅಂಶಗಳನ್ನು ಓದಿ ಅರ್ಥೈಸಿಕೊಂಡು ಅರ್ಹತೆ ಇದ್ದವರು ಅರ್ಜಿ ಸಲ್ಲಿಸಬೇಕು ಎಂದು ಕೇಳಲಾಗಿದೆ. ಅದಕ್ಕಾಗಿ ಈ ಅಂಕಣದಲ್ಲೂ ಕೂಡ ಅರ್ಜಿ ಸಲ್ಲಿಸುವವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕೆಲವು ಪ್ರಮುಖ ವಿಷಯಗಳನ್ನು ತಿಳಿಸುತಿದ್ದೇವೆ.

ಹೆಚ್ಚಿನ ಮಾಹಿತಿ ಬೇಕಾದಲ್ಲಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಮಾಹಿತಿ ಪಡೆದುಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

ಇಲಾಖೆ:- ಭಾರತೀಯ ಅರಣ್ಯ ಇಲಾಖೆ
ಒಟ್ಟು ಹುದ್ದೆಗಳ ಸಂಖ್ಯೆ:- 1484
ಹುದ್ದೆ ಹೆಸರು:- ಅರಣ್ಯ ರಕ್ಷಕರು.
ವೇತನ ಶ್ರೇಣಿ:- 5,200 ರಿಂದ 20,700 ರವರೆಗೆ ಮಾಸಿಕವಾಗಿ…

ಶೈಕ್ಷಣಿಕ ವಿದ್ಯಾರ್ಹತೆ:-
ಹುದ್ದೆಗಳಿಗೆ ಅನುಸಾರವಾಗಿ 10ನೇ ತರಗತಿ, ದ್ವಿತೀಯ ಪಿಯುಸಿ ಮತ್ತು ಪದವಿ ಹಾಗೂ ತತ್ಸಮಾನ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ:-
● ಕನಿಷ್ಠ 18 ವರ್ಷಗಳು
● ಗರಿಷ್ಠ 40 ವರ್ಷಗಳು

ವಯೋಮಿತಿ ಸಡಿಲಿಕೆ:-
● SC/ST ಅಭ್ಯರ್ಥಿಗಳಿಗೆ 5 ವರ್ಷಗಳು.
● OBC ಅಭ್ಯರ್ಥಿಗಳಿಗೆ 3 ವರ್ಷಗಳು.

ಅರ್ಜಿ ಶುಲ್ಕ:-
● UR/ ಸಾಮಾನ್ಯ/ OBC ಇತರ ರಾಜ್ಯದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 350ರೂ.
● SC/ST ಮಹಿಳಾ ಅಭ್ಯರ್ಥಿಗಳಿಗೆ 250ರೂ.
ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಬ್ಯಾಂಕ್ ಚಲನ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬಹುದು.

ಆಯ್ಕೆ ವಿಧಾನ:-
● ಲಿಖಿತ ಪರೀಕ್ಷೆ
● ದೈಹಿಕ ಪರೀಕ್ಷೆ
● ನೇರ ಸಂದರ್ಶನ
● ಡಾಕುಮೆಂಟ್ ಪರಿಶೀಲನೆ

ದೈಹಿಕ ಪರೀಕ್ಷೆ ಕುರಿತು ಕೆಲ ಮಾಹಿತಿ:-
● ಪುರುಷ ಅಭ್ಯರ್ಥಿಗೆ ಕನಿಷ್ಠ ಎತ್ತರ 163cm
ಮಹಿಳಾ ಅಭ್ಯರ್ಥಿಗೆ 150cm
● ಉತ್ತರ ಭಾರತ ವಲಯದ ಪುರುಷ ಅಭ್ಯರ್ಥಿಗಳಿಗೆ 152 ಸೆಂಟಿಮೀಟರ್, ಮಹಿಳಾ ಅಭ್ಯರ್ಥಿಗಳಿಗೆ 145cm
● ಪುರುಷ ಅಭ್ಯರ್ಥಿಗಳು 200 ಮೀಟರ್ ವೇಗವನ್ನು 24.50 ಸೆಕೆಂಡ್ ನಲ್ಲಿ ಮತ್ತು ಮಹಿಳಾ ಅಭ್ಯರ್ಥಿಗಳು 200 ಮೀಟರ್ ವೇಗವನ್ನು 28.50 ಸೆಕೆಂಡ್ ನಲ್ಲಿ ಓಡಬೇಕು.
● 800 ಮೀಟರ್ ವೇಗವನ್ನು ಪುರುಷ ಅಭ್ಯರ್ಥಿಗಳು 2.10 ನಿಮಿಷಗಳಲ್ಲಿ ಮತ್ತು ಮಹಿಳಾ ಅಭ್ಯರ್ಥಿಗಳು 3 ನಿಮಿಷಗಳಲ್ಲಿ ಓಡಬೇಕು.
ಈ ರನ್ನಿಂಗ್ ರೇಸ್ ಗೆ 25 ಅಂಕಗಳು ಇರುತ್ತದೆ.

ಕೇಳದಾಗುವ ಪ್ರಮುಖ ದಾಖಲೆಗಳು:-
● ಶೈಕ್ಷಣಿಕ ಪ್ರಮಾಣ ಪತ್ರಗಳು
● ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಅಥವಾ ಸರ್ಕಾರ ನೀಡಿರುವ ಯಾವುದಾದರೂ ಒಂದು ಗುರುತಿನ ಚೀಟಿ.
● ಜನ್ಮ ದಿನಾಂಕ ಪುರಾವೆಗಾಗಿ ಜನನ ಪ್ರಮಾಣ ಪತ್ರ ಮತ್ತು ಹತ್ತನೇ ತರಗತಿ ಅಂಕಪಟ್ಟಿ ಇತ್ಯಾದಿ.
ವರ್ಗಾವಣೆ ಪ್ರಮಾಣ ಪತ್ರ
● ಅನುಭವ ಪ್ರಮಾಣ ಪತ್ರ
● ನಿವಾಸ ಪ್ರಮಾಣ ಪತ್ರ
● ಪಾಸ್ ಪೋರ್ಟ್ ಅಳತೆಯ ಫೋಟೋಗಳು.

ಅರ್ಜಿ ಸಲ್ಲಿಸುವ ದಿನಾಂಕ:-
ಶೀಘ್ರದಲ್ಲಿಯೇ ಈ ಹುದ್ದೆಗಳಿಗೆ ಅರ್ಜಿ ಆಹ್ವಾನ ಕ್ರಿಯೆ ಆರಂಭವಾಗಲಿದೆ, ಜುಲೈ ತಿಂಗಳಿನಲ್ಲಿ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆ ಇದ್ದು ಅಷ್ಟರ ಒಳಗೆ ಆಸಕ್ತರು ಕೇಳಲಾದ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಪರೀಕ್ಷೆಗೆ ಸಿದ್ಧರಾಗಲು ಈ ನೋಟಿಫಿಕೇಶನ್ ನೀಡಲಾಗಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now