ಈಗ ಕರ್ನಾಟಕ ರಾಜ್ಯದಾದ್ಯಂತ ಚರ್ಚೆ ಆಗುತ್ತಿರುವುದು ಒಂದೇ ವಿಷಯ. ಸರ್ಕಾರವು ಜಾರಿ ಮಾಡಿರುವ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳ ಬಗ್ಗೆ ಎಲ್ಲೆಡೆ ವಿಷಯ ಪ್ರಸ್ತಾಪವಾಗುತ್ತಿದೆ. ಪ್ರತಿದಿನವೂ ಕೂಡ ಯೋಜನೆಗಳಿಗೆ ಸಂಬಂಧಿಸಿದ ಯಾವುದಾದರೂ ಹೊಸ ಸುದ್ದಿ ಪ್ರಸಾರವಾಗುತ್ತಿದೆ.
ಮೀಡಿಯ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ಗಾಸಿಪ್ ಗಳು ಈ ಬಗ್ಗೆ ಹರಿದಾಡಿದರು ಕೂಡ ಅಂತಿಮವಾಗಿ ಸರ್ಕಾರವು ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ಶಕ್ತಿ ಯೋಜನೆ ಅಡಿ ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಪಡೆಯಲು ಯಾರೆಲ್ಲ ಅರ್ಹರು ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವುದಕ್ಕೆ ಸಂಬಂಧಪಟ್ಟ ಆದೇಶ ಪತ್ರ ಹೊರಡಿಸಿ ತಿಳಿಸಿದೆ ಅದೇ ವಿಷಯದ ಕುರಿತು ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.
ಸೇವಾಸಿಂಧು ಪೋರ್ಟಲ್ ಮೂಲಕ ಈ ಮೇಲ್ಕಂಡ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು ಅದಕ್ಕಾಗಿ ಈ ಕ್ರಮಗಳನ್ನು ಅನುಸರಿಸಿ.
● ಮೊದಲಿಗೆ ಗೂಗಲ್ ಗೆ ಹೋಗಿ ಸೇವಾಸಿಂಧು ಎಂದು ಸರ್ಚ್ ಮಾಡಿ
● ಬಳಿಕ ಸೇವಾ ಸಿಂಧು ಪೋರ್ಟಲ್ ನ ಲಿಂಕ್ ಗಳು ಸಿಗುತ್ತವೆ, ಅದರಲ್ಲಿ ಒಂದನ್ನು ಸೆಲೆಕ್ಟ್ ಮಾಡಿ.
● ಸೇವಾ ಸಿಂಧು ಪೋರ್ಟಲ್ ನ ಪೇಜ್ ಓಪನ್ ಆಗುತ್ತದೆ.
● ರಿಜಿಸ್ಟರ್ ಯೂಸರ್ಸ್ ಲಾಗಿನ್ ಎನ್ನುವ ಆಪ್ಷನ್ ಮತ್ತು ನ್ಯೂ ಯೂಸರ್ ರಿಜಿಸ್ಟ್ರರ್ ಎನ್ನುವ ಆಪ್ಷನ್ ಸಿಗುತ್ತದೆ ಅದರಲ್ಲಿ ನೀವು ಈಗಾಗಲೇ ರಿಜಿಸ್ಟರ್ ಆಗಿದ್ದರೆ ಕ್ಲಿಕ್ ಮಾಡಿ ಅಥವಾ ಹೊಸ ಯೂಸರ್ಸ್ ಆಗಿದ್ದರೆ ನ್ಯೂ ಯೂಸರ್ಸ್ ರಿಜಿಸ್ಟ್ರರ್ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
● ಆಗ ಹೊಸ ಪೇಜ್ ಓಪನ್ ಆಗುತ್ತದೆ ನೀವು ಈಗಾಗಲೇ ರಿಜಿಸ್ಟರ್ ಆಗಿ ಐಡಿ ಪಡೆದಿದ್ದಾರೆ ಮೊಬೈಲ್ ನಂಬರ್ ಹಾಕಿ ಓಟಿಪಿ ಪಡೆದು ಕ್ಯಾಪ್ಚಾ ಎಂಟ್ರಿ ಮಾಡಿ ಲಾಗಿನ್ ಆಗಬೇಕು.
● ನ್ಯೂ ಯೂಸರ್ಸ್ ಎನ್ನುವಲ್ಲಿ ಕ್ಲಿಕ್ ಮಾಡಿದರೆ ಹೊಸ ಯೂಸರ್ಸ್ ಗೆ ಸೇವಾ ಸಿಂಧು ಐಡಿ ದೊರೆಯುವ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ಆಧಾರ್ ಕಾರ್ಡ್ ನಂಬರ್ ಎಂಟ್ರಿ ಮಾಡಿ ಆಧಾರ್ ಕಾರ್ಡ್ ನಂಬರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದನ್ನು ಹಾಕಿ ಕಂಟಿನ್ಯೂ ಕೊಡಿ.
● ಆಗ ಆಧಾರ್ ಕಾರ್ಡ್ ವೆರಿಫಿಕೇಶನ್ ಆಗಿ ಅಲೋವ್ ಎನ್ನುವ ಆಪ್ಷನ್ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
● ನಂತರ ರಿಜಿಸ್ಟ್ರೇಷನ್ ಎನ್ನುವ ಹೊಸ ಪೇಜ್ ಓಪನ್ ಆಗುತ್ತದೆ ಅದರಲ್ಲಿ ವ್ಯಾಲಿಡ್ ಇ-ಮೇಲ್ ಐಡಿ ಎಂಟ್ರಿ ಮಾಡಿ.
● ನಂತರ ಮೊಬೈಲ್ ನಂಬರ್ ಅನ್ನು ಹಾಕಬೇಕು ನಿಮ್ಮಿಷ್ಟದ ಪಾಸ್ವರ್ಡ್ ಕೂಡ ಸೆಟ್ ಮಾಡಿಕೊಳ್ಳಬೇಕು. ಕೊನೆಯಲ್ಲಿ ಕಾಣುವ ಕ್ಯಾಪ್ಚವನ್ನು ಎಂಟ್ರಿ ಮಾಡಿ ಸಬ್ಮಿಟ್ ಕೊಡಬೇಕು.
● ಪಾಸ್ವರ್ಡ್ 8 ರಿಂದ 15 ನಂಬರ್ ಇರಬೇಕು, ಮಧ್ಯದಲ್ಲಿ ಸ್ಪೆಷಲ್ ಕ್ಯಾರೆಕ್ಟರ್ ಗಳನ್ನು ಸ್ಮಾಲ್ ಮತ್ತು ಬಿಗ್ ಲೆಟರ್ಗಳನ್ನು ಕೂಡ ಸೇರಿಸಿ ಎಂಟ್ರಿ ಮಾಡಿದರೆ ಒಳ್ಳೆಯದು.
● ಇದಿಷ್ಟು ರಿಜಿಸ್ಟರ್ ಆಯ್ತು ನಂತರ ಹಂತಗಳನ್ನು ಹೇಗೆ ಮುಂದುವರಿಸಬೇಕು ಯಾವ ಯೋಜನೆಗೆ ಯಾವ ರೀತಿ ಅಪ್ಲೈ ಮಾಡಬೇಕು ಎನ್ನುವ ವಿವರ ಕೂಡ ಇದೆ, ಇದೆಲ್ಲವನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.