200 ಯುನಿಟ್ ಉಚಿತ ಕರೆಂಟ್ ಪಡೆಯಲು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ.! ಹಾಗಾದ್ರೆ ಗೃಹಜ್ಯೋತಿ ಯೋಜನೆಗೆ ಆದಾರ್ ಲಿಂಕ್ ಮಾಡುವುದು ಹೇಗೆ ನೋಡಿ.!

 

ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಮುನ್ನ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಲು ಮುಂದಾಗಿದೆ. ಅದರಲ್ಲಿ ಮುಖ್ಯವಾಗಿ ಪ್ರಣಾಳಿಕೆಯ ಅಸ್ತ್ರವಾಗಿ ಬಳಸಿದ್ದ 5 ಗ್ಯಾರಂಟಿ ಕಾರ್ಡ್ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಇದಕ್ಕೆ 5 ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಗ್ಯಾರಂಟಿಯಾಗಿ ಜಾರಿಗೆ ತಂದು ತಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಮಾತು ಉಳಿಸಿಕೊಳ್ಳುತ್ತೇವೆ.

ಎಂದು ಹೇಳಿರುವ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಪ್ರತಿಯೊಂದು ಯೋಜನೆಗೂ ಕೂಡ ಅದರಂತೆ ಆದ ಮಾರ್ಗಸೂಚಿ ಮತ್ತು ನಿಯಮಗಳ ಬಗ್ಗೆ ಆದೇಶ ಪತ್ರವನ್ನು ಕೂಡ ಹೊರಡಿಸಿದ್ದಾರೆ. ಇದರಲ್ಲಿ ಮೊದಲನೇ ಗ್ಯಾರಂಟಿ ಕಾರ್ಡ್ ಯೋಜನೆಯಾಗಿ ಘೋಷಣೆ ಆಗಿದ್ದ ಗೃಹ ಜ್ಯೋತಿ ಯೋಜನೆ ಬಗ್ಗೆ ಈಗ ಹೆಚ್ಚು ಚರ್ಚೆ ನಡೆಯುತ್ತಿದೆ. ಅದರ ಬಗ್ಗೆ ಪ್ರಮುಖ ವಿಷಯವನ್ನು ತಿಳಿಸುವ ಪ್ರಯತ್ನವನ್ನು ಈ ಅಂಕಣದಲ್ಲಿ ಮಾಡುತ್ತಿದ್ದೇವೆ.

ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬಕ್ಕೂ 200 ವಿದ್ಯುತ್ತನ್ನು ಉಚಿತವಾಗಿ ಕೊಡುತ್ತೇವೆ ಎಂದು ಹೇಳಿ ಗ್ಯಾರಂಟಿ ಕಾರ್ಡ್ ಗಳಲ್ಲಿ ಸಹಿ ಮಾಡಿ ಕಾಂಗ್ರೆಸ್ ಪಕ್ಷದ ವರಿಷ್ಟರುಗಳು ನೀಡಿದ್ದರು. ಅಂತೆಯೇ ಈಗ ಪ್ರತಿ ಕುಟುಂಬಕ್ಕೂ ವಿದ್ಯುತ್ ಅನ್ನು ಉಚಿತವಾಗಿ ಕೊಡುವುದಕ್ಕೆ ಒಪ್ಪಿಕೊಂಡಿರುವ ಸರ್ಕಾರವು ಅದಕ್ಕೆ ಕೆಲ ಕಂಡಿಷನ್ ಗಳನ್ನು ಕೂಡ ಸೇರಿಸುತ್ತಿದೆ.

ಇದರ ಜೊತೆಗೆ ಮೀಡಿಯ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಈ ಗೃಹ ಜ್ಯೋತಿ ಯೋಜನೆ ಕುರಿತು ಸಾಕಷ್ಟು ಊಹಪೋಹಗಳು ಕೂಡ ಹರಿದಾಡುತ್ತವೆ. ಈ ಯೋಜನೆಯ ನಿಯಮಗಳ ವಿರುದ್ಧ ಜನತೆ ತಿರುಗಿ ಬಿದ್ದಿರುವ ಬಗ್ಗೆಯೂ ಕೂಡ ಆಗಾಗ ಪೋಸ್ಟ್ಗಳು ವಿಡಿಯೋಗಳು ವೈರಲ್ ಆಗುವುದನ್ನು ನಾವು ನೋಡಿದ್ದೇವೆ. ಅಂತಿಮವಾಗಿ ಸರ್ಕಾರದಿಂದ ಹೊರ ಬಿದ್ದಿರುವ ಆದೇಶ ಪತ್ರದಲ್ಲಿ ಈ ರೀತಿ ಇದೆ.

R.R ಸಂಖ್ಯೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದವರಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದೆ. ಒಂದಕ್ಕಿಂತ ಹೆಚ್ಚು ಮನೆಗಳು ಇದ್ದರೆ ಒಂದು ಮನೆಗೆ ಮಾತ್ರ ಇದು ಅನ್ವಯ ಆಗಲಿದೆ. ಒಬ್ಬರ ಹೆಸರಿನಲ್ಲಿ ಎರಡು ಮೀಟರ್ ಗಳನ್ನು ಹೊಂದಿದ್ದರೆ ಯಾವುದಾದರೂ ಒಂದಕ್ಕೆ ಮಾತ್ರ ಅನ್ವಯ ಹಾಗಾಗಿ ಕಡ್ಡಾಯವಾಗಿ ಗ್ರಾಹಕರು ವಾಸವಿರುವ ಮನೆಯ R.R ಸಂಖ್ಯೆಯೊಂದಿಗೆ ತಮ್ಮ ಆಧಾರ್ ಕಾರ್ಡನ್ನು ಲಿಂಕ್ ಮಾಡಲೇಬೇಕು, ಬಾಡಿಗೆ ಮನೆಯವರು ಇದಕ್ಕೆ ಕರಾರು ಪತ್ರವನ್ನು ವೆಬ್ಸೈಟ್ ಅಲ್ಲಿ ಅಪ್ಲೋಡ್ ಮಾಡಬೇಕು.

ಒಂದು ದಾಖಲೆಯನ್ನು ಒಂದು ಮೀಟರ್ ಜೊತೆ ಮಾತ್ರ ಅಪ್ಲೋಡ್ ಮಾಡಲು ಅವಕಾಶ ಮನೆ ಬದಲಾಯಿಸಿದರೆ ಹಿಂದಿನ ಮನೆಯ ಮೀಟರ್ ನಂಬರ್ ಇಂದ ಲಿಂಕ್ ತೆಗೆಯಬೇಕು. ಮತ್ತೆ ಹೊಸ ಬಾಡಿಗೆ ಮನೆಯ R.R ನಂಬರ್ ಜೊತೆ ಆಧಾರ್ ಕಾರ್ಡ್ ಪುನಃ ಲಿಂಕ್ ಮಾಡಬೇಕು.

ಇದರಿಂದ ಸ್ಪಷ್ಟವಾಗುವುದು ಏನೆಂದರೆ ಅಕೌಂಟ್ ಐಡಿ ಅಥವಾ ಕಸ್ಟಮರ್ ಐಡಿ ಅಥವಾ ಮೀಟರ್ ಬಾಕ್ಸ್ ನಲ್ಲಿ ನಂಬರ್ ಜೊತೆ ಬಳಕೆದಾರರು ಅವರ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಲಿಂಕ್ ಮಾಡಲೇಬೇಕು ಆ ಮೂಲಕ ಸರಿಯಾದ ಫಲಾನುಭವಿಗಳನ್ನು ಗುರುತಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ ಎನ್ನುವುದು.

ಇದರ ಜೊತೆಗೆ ಈ ರೀತಿ ಲಿಂಕ್ ಮಾಡುವುದಕ್ಕೆ ಮೊಬೈಲ್ ಆಪನ್ನು ಬಿಡುಗಡೆ ಮಾಡುತ್ತದೆ ಎನ್ನುವ ಗಾಳಿ ಸುದ್ದಿ ಹರಡಿದ್ದಾದರೂ ಸದ್ಯಕ್ಕೆ ಬಂದ ಮಾಹಿತಿಗಳ ಪ್ರಕಾರ ಆಫ್ಲೈನ್ನಲ್ಲಿ ಮಾತ್ರ ಇದಕ್ಕೆ ಅವಕಾಶ ಎಂದು ತಿಳಿದು ಬಂದಿದೆ. ಹತ್ತಿರದಲ್ಲಿರುವ ವಿದ್ಯುತ್ ಸರಬರಾಜು ಕಂಪನಿಗಳ ಕಛೇರಿಗಳಲ್ಲಿ ಹೋಗಿ ಈ ಪ್ರಕ್ರಿಯೆ ಪೂರ್ತಿಗೊಳಿಸಬೇಕು ಎನ್ನುವ ಸುದ್ದಿ ಕೇಳಿ ಬರುತ್ತಿದೆ.

Leave a Comment

%d bloggers like this: