ಕಾರು ಓಡಿಸುವುದನ್ನು ಕಲಿಯಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ಈಗಿನ ಕಾಲದಲ್ಲಿ ಎಲ್ಲರೂ ಕೂಡ ಸ್ವಂತ ವಾಹನಗಳನ್ನು ಹೊಂದಲು ಆಸೆ ಪಡುವುದರಿಂದ ಪ್ರತಿ ಕುಟುಂಬದಲ್ಲೂ ಕೂಡ ಒಂದು ಕಾರು ಇದ್ದೇ ಇರುತ್ತದೆ. ಅವಶ್ಯಕತೆ ಸಮಯದಲ್ಲಿ ಅನುಕೂಲಕ್ಕೆ ಆಗಲಿ ಎಂದು ಪ್ರತಿಯೊಬ್ಬರೂ ಕೂಡ ಕಾರ್ ಡ್ರೈವ್ ಮಾಡುವುದನ್ನು ಕಲಿತಿರಲೇಬೇಕು. ಹೆಣ್ಣು ಮತ್ತು ಗಂಡು ಎನ್ನುವ ಬೇಧ ಇಲ್ಲದೆ ಪ್ರತಿಯೊಬ್ಬರೂ ಈಗ ವಾಹನಗಳೊಂದಿಗೆ ರಸ್ತೆಗೆ ಇಳಿಯುತ್ತಿದ್ದಾರೆ.
ಅಂತರಿಕ್ಷಕ್ಕೆ ಹಾರಿ ಭೂಮಿಯನ್ನು ಬಿಟ್ಟು ಹೋಗುತ್ತಿರುವ ಈಗಿನ ಕಾಲದಲ್ಲಿ ರಸ್ತೆ ಮೇಲೆ ಕಾರುಗಳನ್ನು ಓಡಿಸುವುದು ಅಂತಹ ಕಷ್ಟದ ವಿಷಯವಲ್ಲ. ಆರಂಭದಲ್ಲಿ ಇದು ಬಹಳ ಭಯ ಎನಿಸಿದರು ಕೂಡ ಸರಿಯಾದ ರೀತಿಯಲ್ಲಿ ಟ್ರೈನಿಂಗ್ ಪಡೆದುಕೊಂಡರೆ ಕಾರ್ ಓಡಿಸುವುದನ್ನು ಕಲಿಯಬಹುದು.
ಅನೇಕರು ಡ್ರೈವಿಂಗ್ ಕ್ಲಾಸ್ ಗಳಿಗೆ ಸೇರಿಕೊಂಡು ಕಾರುಗಳನ್ನು ಓಡಿಸುವುದನ್ನು ಕಲಿಯುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಇರುವ ಹಿರಿಯರಿಂದ ಅಥವಾ ಸ್ನೇಹಿತರಿಂದ ಕೇಳಿ ಕಲಿತುಕೊಂಡು ಕಾರು ಓಡಿಸುವುದನ್ನು ಕಲಿತುಕೊಳ್ಳುತ್ತಾರೆ. ಕೆಲವರು ಕಾರು ಓಡಿಸುವುದನ್ನೇ ಉದ್ಯೋಗ ಮಾಡಿಕೊಂಡವರು ಇದ್ದಾರೆ. ಹೀಗಾಗಿ ಕಾರು ಚಲಾಯಿಸುವುದು ಈಗ ಸರ್ವೇ ಸಾಮಾನ್ಯ ವಿಷಯ.
ಅದರಲ್ಲೂ ಕೂಡ ಬೈಕು ಓಡಿಸಿ ಅಭ್ಯಾಸ ಇರುವವರು, ಕಾರು ಓಡಿಸುವುದನ್ನು ಅರ್ಧ ಕಲಿತಂತೆ ಸರಿ. ಇನ್ನು ಒಮ್ಮೆ ಕಾರು ಓಡಿಸುವುದನ್ನು ಕಲಿಯುತರೆ ಸಾಕು ಯಾವುದೇ ಕಂಪನಿಯ ಕಾರಾಗಿದ್ದರು ಕೂಡ 80% ಯಿಂದ 90% ಸೇಮ್ ಇರುತ್ತದೆ. ಹೀಗಾಗಿ ಇದು ಹೆಚ್ಚು ಸಮಸ್ಯೆ ಎನ್ನುಸುವುದಿಲ್ಲ ಮತ್ತು ಕಾರು ಕಲಿಯುವುದಕ್ಕೆ ವಯಸ್ಸಿನ ಬೇಧವು ಇಲ್ಲ.
ಕಾಲೇಜಿಗೆ ಹೋಗುವ ಸಮಯದಿಂದ ಹಿಡಿದು ರಿಟೈರ್ಡ್ ಆದಮೇಲೆ ಕೂಡ ಆಸಕ್ತಿ ಇದ್ದರೆ ಕಾರು ಕಲಿತು ಡ್ರೈವ್ ಮಾಡಬಹುದು. ಕಾರ್ ಕಲಿಯುವುದನ್ನು ಆಸೆ ಪಡುವವರಿಗಾಗಿ ಕೆಲ ಇಂಪಾರ್ಟೆಂಟ್ ಟಿಪ್ಸ್ ಗಳನ್ನು ಈ ಅಂಕಣದಲ್ಲಿ ತಿಳಿಸುವ ಪ್ರಯತ್ನ ಮಾಡುತ್ತಿದ್ದೇನೆ. ಕಾರು ಕಲಿಯುವುದನ್ನು ಪುಸ್ತಕದಿಂದ ಓದಿ ತಿಳಿದುಕೊಳ್ಳುವುದು ಸಾಧ್ಯವಿಲ್ಲ ಎನ್ನುವುದು ನಿಜ ಅದನ್ನು ಅನುಭವದಿಂದ ಕಲಿಯಬೇಕು ಆದರೂ ಕೂಡ ಕೆಲ ಪಾಯಿಂಟ್ ಗಳು ಗಮನದಲ್ಲಿದ್ದರೆ ಅದು ಕಾರು ಬೇಗ ಕಲಿಯುವುದಕ್ಕೆ ಅಥವಾ ಕಾರು ಚಲಾಯಿಸುವಾಗ ಅಪಘಾತ ಆಗದಂತೆ ತಡೆಗಟ್ಟುವುದಕ್ಕೆ ಅನುಕೂಲವಾಗುತ್ತದೆ.
ಇಂಥಹ ವಿಷಯಗಳಲ್ಲಿ ಮುಖ್ಯವಾಗಿ ಹೇಳುವುದು ABC ಬಗ್ಗೆ ಕಾರಿನ ಡ್ರೈವಿಂಗ್ ಸೀಟ್ ಕೆಳಗೆ ಮೂರು ಆಪ್ಷನ್ ಇರುವುದನ್ನು ನಾವು ಕಾಣುತ್ತೇವೆ. ಅದನ್ನು ಬಲಭಾಗದಿಂದ ABC ಎಂದು ಕರೆಯಬಹುದು. A ಅಂದರೆ ಎಕ್ಸಲೇಟರ್ B ಎಂದರೆ ಬ್ರೇಕ್ ಮತ್ತು C ಎಂದರೆ ಕ್ಲಚ್ ಇದನ್ನು ಸರಿಯಾಗಿ ನಿಭಾಯಿಸುವುದು ಕಲಿತರೆ ಕಾರು ಓಡಿಸುವುದನ್ನು ಕಲಿತಂತೆಯೇ.
ಕಾರು ಚಲಾಯಿಸಲು ಮೊದಲು ಕೀ ಆನ್ ಮಾಡಿ ಕ್ಲಚ್ ಅನ್ನು ಫುಲ್ ಪ್ರೆಸ್ ಮಾಡಿ ಸ್ಲೋ ಆಗಿ ಕ್ಲಚ್ ಅನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಎಕ್ಸಲೇಟರ್ ಮೇಲೆ ಕಾಲಿಟ್ಟು ಸ್ಲೋ ಮಾಡಿ ಗೇರ್ ಚೇಂಜ್ ಮಾಡಿಕೊಳ್ಳಬಹುದು. ಗೇರ್ ಯಾವಾಗಲೂ ಎಡಭಾಗದಲ್ಲಿ ಇರುತ್ತದೆ ಅದನ್ನು ಸೆಟ್ ಮಾಡಿಕೊಳ್ಳಬೇಕು. ಎಡಭಾಗಕ್ಕೆ ಮತ್ತು ಬಲಭಾಗಕ್ಕೆ ಶೇಕ್ ಆಗುತ್ತಿದ್ದರೆ ಆಗ ಗಾಡಿ ನ್ಯೂಟ್ರಲ್ ಅಲ್ಲಿ ಇದೆ ಎಂದು ಅರ್ಥ.
ಗೇರ್ ಹಾಕಲು ಕ್ಲಚ್ ಅನ್ನು ಫುಲ್ ಪ್ರೆಸ್ ಮಾಡಿ ಎಡಭಾಗಕ್ಕೆ ತಳ್ಳಿ ನಂತರ ಮುಂದಕ್ಕೆ ಹಾಕಬೇಕು. ಈ ರೀತಿ ಮಾಡಿದಾಗ ಅದು ಫಸ್ಟ್ ಗೇರಿಗೆ ಬೀಳುತ್ತದೆ. ನಂತರ ಗೇರ್ ಚೇಂಜ್ ಮಾಡುವುದು ಹೇಗೆ ಎನ್ನುವುದು ಮತ್ತು ಕಾರ್ ಡ್ರೈವಿಂಗ್ ದ ಕುರಿತು ಇನ್ನಷ್ಟು ಇಂಪಾರ್ಟೆಂಟ್ ವಿಷಯ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.