1 ಗಂಟೆಯಲ್ಲಿ 100 ಬಟ್ಟೆ ವಾಶ್ ಮಾಡುವ ವಾಷಿಂಗ್ ಮಿಷನ್ ಕೇವಲ 3500 ರೂಪಾಯಿಗೆ ಲಭ್ಯ.! ಸಾಮಾನ್ಯ ವರ್ಗದವರಿಗೆ ಕೈಗೆ ಎಟಕುವ ಧರಕ್ಕೆ ಲಭ್ಯ.

 

WhatsApp Group Join Now
Telegram Group Join Now

ವಾಷಿಂಗ್ ಮಿಷನ್ ಎನ್ನುವುದು ಈಗ ಮನೆಗೆ ಬೇಕಾದ ಒಂದು ಅಗತ್ಯ ವಸ್ತು. ವಾಷಿಂಗ್ ಮಿಷನ್ ಹಳ್ಳಿಗಳಿಗಿಂತ ಪಟ್ಟಣ ಪ್ರದೇಶದಲ್ಲಿ ಹೆಚ್ಚು ಬಳಕೆ ಆಗುತ್ತದೆ ಎಂದು ಭಾವಿಸಲಾಗಿತ್ತು. ಯಾಕೆಂದರೆ ಪಟ್ಟಣ ಪ್ರದೇಶಗಳಲ್ಲಿ ಗೃಹಿಣಿಯು ಕೂಡ ಹೊರಗೆ ಹೋಗಿ ದುಡಿಯ ಬೇಕಾದ ಅನಿವಾರ್ಯತೆ ಇರುವುದರಿಂದ ಸಮಯ ವ್ಯರ್ಥ ಹಾಗೂ ಶ್ರಮ ವ್ಯರ್ಥ ಕಡಿಮೆಗೊಳಿಸಬೇಕು ಎನ್ನುವ ಕಾರಣಕ್ಕಾಗಿ ಈ ರೀತಿ ಬಟ್ಟೆ ವಾಶ್ ಮಾಡಲು ವಾಷಿಂಗ್ ಮೆಷಿನ್ ಗಳ ಮೊರೆ ಹೋಗುತ್ತಿದ್ದರು.

ಆದರೆ ಹಳ್ಳಿಗಳಲ್ಲಿ ಕೂಡ ಈಗ ವಾಷಿಂಗ್ ಮಷೀನ್ ಗಳನ್ನು ಪ್ರತಿ ಮನೆಗಳಲ್ಲೂ ಕಾಣಬಹುದು ಹಲವು ಕಾರಣಗಳಿಗಾಗಿ ಮನೆಯಲ್ಲಿ ಹೆಚ್ಚು ಜನ ಇರುವವರು ಎಲ್ಲರ ಬಟ್ಟೆಯನ್ನು ಒಂದೇ ಬಾರಿಗೆ ವಾಶ್ ಮಾಡಬಹುದು ಎನ್ನುವ ಕಾರಣಕ್ಕೆ ಅಥವಾ ತಾವು ಸಹ ದಿನಪೂರ್ತಿ ಬಿಡುವಿಲ್ಲದೆ ಇರುವುದರಿಂದ ಇದಕ್ಕೆ ಸಮಯ ಇಲ್ಲ ಎನ್ನುವ ಕಾರಣಕ್ಕೆ ಬಟ್ಟೆ ಒಗೆಯಲು ವಾಷಿಂಗ್ ಮಿಷನ್ ಗಳ ಮೊರೆ ಹೋಗುತ್ತಿದ್ದಾರೆ.

ಈಗ ಮಾರ್ಕೆಟ್ ಅಲ್ಲಿ ನಾನಾ ರೀತಿಯ ವಾಷಿಂಗ್ ಮಿಷನ್ ಗಳಿವೆ. ಮೊದಲೆಲ್ಲಾ ಟಾಪ್ ಲೋಡ್ ಮತ್ತು ಫ್ರಂಟ್ ಲೋಡ್ ವಾಷಿಂಗ್ ಮಿಷನ್ ಗಳನ್ನು ಮಾತ್ರ ನೋಡಿದ್ದ ಜನರು ಈಗ ನಾನಾ ಕಂಪನಿಯ ನಾನಾ ಮಾದರಿಯ ವಾಷಿಂಗ್ ಮಿಷನ್ ಗಳನ್ನು ನೋಡುತ್ತಿದ್ದಾರೆ. ಅದರಲ್ಲೂ ಅತಿ ಕಡಿಮೆ ಬೆಲೆಗೆ ಹೆಚ್ಚು ಲಾಭ ಕೊಡುವ ವಾಷಿಂಗ್ ಮಿಷನ್ ಎಲ್ಲರ ಗಮನವನ್ನು ಸೆಳೆದು ಬಿಡುತ್ತದೆ.

ಸದ್ಯಕ್ಕಿಗ ಮಾರ್ಕೆಟ್ ಬೆಲೆಯಲ್ಲಿ ವಾಷಿಂಗ್ ಮಿಷನ್ ಗೆ ಕನಿಷ್ಠ 15 ಸಾವಿರಕ್ಕಿಂತ ಹೆಚ್ಚು ಹಣ ತೆರಲೇಬೇಕು ಆದರೆ ಅದಕ್ಕಿಂತಲೂ ಕಡಿಮೆ ಬೆಲೆಗೆ ಡ್ರೈಯರ್ ಸಮೇತ ವಾಷಿಂಗ್ ಮಿಷನ್ ಅನ್ನು ಇಲ್ಲೊಂದು ಶೋರೂಮ್ ನೀಡುತ್ತಿದೆ. ಇದರಲ್ಲಿ ವಾಶಿಂಗ್, ಸ್ಪಿನ್ನಿಂಗ್ ಮತ್ತು ಡ್ರಯರ್ ಗೆ ಸಪರೇಟ್ ವಿಭಾಗಗಳಿದ್ದು ಎಲ್ಲದರ ಬೆಲೆ 12,000 ಒಳಗೆ ಬರುತ್ತದೆ. ಜೊತೆಗೆ ಪ್ರತ್ಯಕ್ಷವಾಗಿ ಈ ಶಾಪಿಂಗ್ ಸೆಂಟರ್ಗೆ ಭೇಟಿ ಕೊಟ್ಟು ಬಟ್ಟೆ ವಾಶ್ ಆಗುವುದನ್ನು ಪರೀಕ್ಷಿಸಿ ನೋಡಿ ಖರೀದಿಸುವ ಆಪ್ಷನ್ ಕೂಡ ಇದೆ.

ಒಂದು ಗಂಟೆಯಲ್ಲಿ 100 ಬಟ್ಟೆಗಳನ್ನು ವಾಶ್ ಮಾಡುವ ಈ ವಾಷಿಂಗ್ ಮಿಷನ್ ವಾಷ್ ಗ್ರೈಂಡರ್ ಎಂದು ಕರೆಸಿಕೊಳ್ಳುತ್ತದೆ. ಈ ವಾಶ್ ಗ್ರೈಂಡರ್ ನಲ್ಲಿ ಬಟ್ಟೆ ಹಾಕಿ ವಾಶ್ ಮಾಡಿ ನಂತರ ಸ್ಪಿನ್ನಿಂಗ್ ಅಲ್ಲಿ ಬಟ್ಟೆಯನ್ನು ಜಾಲಾಡಿ ಡ್ರೈಯರ್ ನಲ್ಲಿ ಒಣಗಿಸಬಹುದು. ಈ ವಾಶ್ ಗ್ರೈಂಡರ್ ನ ಬೆಲೆ 3,500ರೂ. ಮಾತ್ರ ಇರುತ್ತದೆ. ಹೆಚ್ಚುವರಿಯಾಗಿ ಡ್ರೈಯರ್ ಅನ್ನು ಬೇಕಾದರೆ ಖರೀದಿಸಬಹುದು ಅಥವಾ ವಾಶ್ ಗ್ರೈಂಡರ್ ಅನ್ನು ಮಾತ್ರ ಬೇಕಾದರು ಖರೀದಿಸಬಹುದು.

ಬೆಂಗಳೂರು, ಮೈಸೂರು, ತುಮಕೂರು, ಮಂಗಳೂರು, ಶಿವಮೊಗ್ಗ, ದಾವಣಗೆರೆ ಮುಂತಾದ ಕಡೆಯಲ್ಲೆಲ್ಲಾ ತನ್ನ ಬ್ರಾಂಚ್ ಹೊಂದಿರುವ ಏಮ್ಸ್ ಸ್ಕೇರ್ ಕಾರ್ಪೊರೇಷನ್ ಗೆ ಭೇಟಿ ಕೊಟ್ಟು ಈ ಉಪಕರಣವನ್ನು ಕೊಳ್ಳಬಹುದು. ಪ್ರತಿಗ್ರಾಹಕನಿಗೂ ಕೂಡ ಆತನ ಎದುರೇ ಟ್ರಯಲ್ ಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ನೀವೇನಾದರೂ ಇಂತಹ ವಾಶ್ ಗ್ರೈಂಡರನ್ನು ಕೊಳ್ಳಬೇಕು ಎನ್ನುವ ಮನಸ್ಸು ಮಾಡಿದ್ದರೆ ಇದರ ಬಗ್ಗೆ ಮಾಹಿತಿಯನ್ನು ಪಡೆಯಲು ಬಯಸಿದರೆ ಏಮ್ಸ್ ಸ್ಕ್ವೇರ್ ಕಾರ್ಪೊರೇಷನ್ ಗೆ ಭೇಟಿ ಕೊಡಬಹುದು. ಅಥವಾ ಪೂರ್ತಿ ಮಾಹಿತಿಯನ್ನು ಈ ವಿಡಿಯೋವನ್ನು ನೋಡುವ ಮೂಲಕ ಪಡೆದುಕೊಳ್ಳಬಹುದು. ಈ ವಿಡಿಯೋ ಒಮ್ಮೆ ನೋಡಿ ಆಸಕ್ತಿ ಇದ್ದರೆ ನೀವು ಕೂಡ ಇದನ್ನು ಖರೀದಿಸಿ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now