ರೈತರಿಗೆ ಡಬಲ್ ಧಮಾಕ, ಇನ್ಮುಂದೆ ಕಿಸಾನ್ ಸಮ್ಮನ್ ಯೋಜನೆಯ ಸಹಾಯಧನ ಡಬಲ್, ಈ ರೈತರಿಗೆ ಸಿಗಲಿದೆ ವರ್ಷಕ್ಕೆ 12,000 ರೂಪಾಯಿ.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದಿಯಾ ಚೆಕ್ ಮಾಡಿ.!

 

ಕೇಂದ್ರ ಸರ್ಕಾರದಲ್ಲಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಜಾರಿಗೆ ತಂದ ಹಲವು ಯೋಜನೆಗಳ ಪೈಕಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಕೂಡ ಒಂದು. ದೇಶದ ಎಲ್ಲಾ ರೈತರಿಗೂ ಕೂಡ ನರೇಂದ್ರ ಮೋದಿ ಅವರು ವರ್ಷಕ್ಕೆ 3 ಕಂತುಗಳಲ್ಲಿ ನಾಲ್ಕು ತಿಂಗಳ ಅಂತರದಲ್ಲಿ ಒಟ್ಟು 6,000 ರೂಪಾಯಿಗಳನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುತ್ತಿದ್ದಾರೆ.

ಇಂದು ದೇಶದ 14 ಕೋಟಿಗಿಂತ ಹೆಚ್ಚಿನ ರೈತರು ಈ ಪ್ರಯೋಜನ ಪಡೆಯುತ್ತಿದ್ದಾರೆ. ರೈತರ ಹಣಕಾಸಿನ ಪರಿಸ್ಥಿತಿ ಸುಧಾರಿಸಿ ಆರ್ಥಿಕ ಶಕ್ತಿಯನ್ನು ವೃದ್ಧಿಸುವ ಕಾರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು ಇದುವರೆಗೆ 13 ಕಂತುಗಳನ್ನು ಯಶಸ್ವಿಯಾಗಿ ಈ ಯೋಜನೆ ಪೂರೈಸಿದೆ. ಈಗ ಶೀಘ್ರದಲ್ಲೇ 14ನೇ ಕಂತಿನ ಹಣ ಕೂಡ ಬಿಡುಗಡೆ ಆಗಲಿದ್ದು ಈ ಕುರಿತು ವಿಶೇಷವಾದ ಸುದ್ದಿಯೊಂದಿದೆ.

ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನ ಪಡೆದಿರುವ ರೈತರಿಗೆ ರಾಜ್ಯದ ಕಡೆಯಿಂದಲೂ ಕೂಡ CM ಕಿಸಾನ್ ಸಮ್ಮಾನ್ ಸಹಾಯಧನ ಸಿಗುತ್ತಿದೆ. BJP ಸರ್ಕಾರವು ಆಡಳಿತದಲ್ಲಿದ್ದಾಗ ಕೇಂದ್ರದಿಂದ PM ಕಿಸಾನ್ ಸಮ್ಮಾನ್ ಯೋಜನೆಯ 6,000 ಸಹಾಯಧನ ಪಡೆದಿದ್ದ ಫಲಾನುಭವಿಗಳಿಗೆ ರಾಜ್ಯ ಸರ್ಕಾರದಿಂದಲೂ ಕೂಡ 4,000 ಸಹಾಯಧನವನ್ನು CM ಕಿಸಾನ್ ಯೋಜನೆ ಎನ್ನುವ ಹೆಸರಿನಲ್ಲಿ ನೀಡಲಾಗುತ್ತಿತ್ತು.

ಇದೇ ಮಾದರಿಯ ಮತ್ತೊಂದು ಯೋಜನೆ ಪಕ್ಕದ ರಾಷ್ಟ್ರ ಮಹಾರಾಷ್ಟ್ರದಲ್ಲಿ ಜಾರಿ ಆಗಿದೆ. ಮಹಾರಾಷ್ಟ್ರದ ರೈತರಿಗೆ ಈಗ ಡಬಲ್ ಧಮಾಕ. ಯಾಕೆಂದರೆ ಇನ್ನು ಮುಂದೆ ಪಿಎಂ ಕಿಸಾನ್ ಸಮ್ಮನ್ ಹಣ ಪಡೆಯುತ್ತಿದ್ದ ಎಲ್ಲಾ ರೈತರು ಕೂಡ ವರ್ಷಕ್ಕೆ 6,000 ರೂಗಳನ್ನು ಪಡೆಯುವ ಬದಲು 12,000ರೂಗಳನ್ನು ಪಡೆಯಬಹುದು.

ನಮೋ ಷಟ್ಕರಿ ಯೋಜನೆ ಎಂದು ಈ ಯೋಜನೆಗೆ ಹೆಸರಿಟ್ಟು ಹೆಚ್ಚುವರಿಯಾಗಿ ವರ್ಷಕ್ಕೆ 6,000ಗಳನ್ನು ಪಿಎಂ ಕಿಸಾನ್ ಸಮ್ಮಾನ್ ಹಣ ಪಡೆಯುವ ರೈತರಿಗೆ ಮಹಾರಾಷ್ಟ್ರ ಸರ್ಕಾರವು ನೀಡಲು ನಿರ್ಧರಿಸಿದೆ. ಈ ಮಾದರಿಯು PM ಕಿಸಾನ್ ಯೋಜನೆ ರೀತಿಯೇ ಇದ್ದು ಒಮ್ಮೆ ಈ ಯೋಜನೆಗೆ ಅರ್ಜಿ ಸಲ್ಲಿಸಿ, ನೋಂದಣಿ ಆದರೆ ಅವರು ಪ್ರತಿ ವರ್ಷ ಕೂಡ ಪಿಎಂ ಕಿಸಾನ್ ಸಮನ್ ಯೋಜನೆ 6,000 ಜೊತೆಗೆ ಹೆಚ್ಚುವರಿಯಾಗಿ ನಮ ಷಟ್ಕರಿ ಯೋಜನೆ ಮೂಲಕ ಮತ್ತೆ 6,000ಗಳನ್ನು ಸಹಾಯಧನವಾಗಿ ಪಡೆಯಲಿದ್ದಾರೆ.

ರೈತರ ಕನಿಷ್ಠ ಆದಾಯ ಬೆಂಬಲ ಹೆಚ್ಚಿಸಲು ಮಹಾರಾಷ್ಟ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದ ಮಹಾರಾಷ್ಟ್ರ ರಾಜ್ಯದ PM ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಣಿ ಆಗಿದ್ದ ಎಲ್ಲ ರೈತರಿಗೂ ಕೂಡ ಸಂತಸ ದುಪ್ಪಟ್ಟಾಗಿದೆ. ರೈತರ ಹಿತ ದೃಷ್ಟಿಯಿಂದ ಕೈಗೊಂಡಿರುವ ಈ ನಿರ್ಧಾರಕ್ಕೆ ಮಹಾ ಸಮ್ಮಾನ್ ನಿಧಿ ಯೋಜನೆ ಎಂದು ಕೂಡ ಹೆಸರಿಡಲಾಗಿದೆ.

ಇದನ್ನು ನಮೋ ಕಿಸಾನ್ ಯೋಜನೆ ಎಂದು ಕೂಡ ಕರೆಯಬಹುದು. ರಾಷ್ಟ್ರದ ಖಾಯಂ ನಿವಾಸಿಗಳಾಗಿರುವ ಕೃಷಿ ಭೂಮಿಯನ್ನು ಹೊಂದಿರುವ ರೈತರುಗಳು ಕೃಷಿ ಇಲಾಖೆಯಲ್ಲಿ ನೋಂದಾಯಿಸಿಕೊಂಡು ಅರ್ಜಿ ಸಲ್ಲಿಸಿ ಬ್ಯಾಂಕ್ ಖಾತೆ ವಿವರ, ಆಧಾರ್ ಕಾರ್ಡ್, ಜಮೀನಿನ ಪಹಣಿ ಇತ್ಯಾದಿ ಮಾಹಿತಿಗಳನ್ನು ನೀಡಿ ಯೋಜನೆಯ ಭಾಗವಾಗಬಹುದು. ಈ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಹೆಚ್ಚಿನ ಮಾಹಿತಿಗಾಗಿ ರಾಜ್ಯದ ಕೃಷಿ ಇಲಾಖೆ ವೆಬ್ಸೈಟ್ ಗೆ ಭೇಟಿ ಕೊಟ್ಟು ಮಾಹಿತಿ ಪಡೆಯಬಹುದಾಗಿದೆ.

 

Leave a Comment

%d bloggers like this: