ಫ್ರೀ ವಿದ್ಯುತ್ ಪಡೆಯುವ ಎಲ್ಲಾ ಮನೆಗಳಿಗೆ ಹೊಸ ಕಂಡೀಷನ್ ಜಾರಿ.! ಸಾರ್ವಜನಿಕರು ತಪ್ಪದೆ ಈ ವಿಚಾರ ತಿಳಿದುಕೊಳ್ಳಿ.!

ಕಾಂಗ್ರೇಸ್ ನೀಡಿದ ಐದು ಗ್ಯಾರಂಟಿ ಗಳಿಗೆ ಈಗಾಗಲೇ ಅನುಮೋದನೆ ಸಿಕ್ಕಿದ್ದು, ಯೋಜನೆಗಳಿಗೆ ಷರತ್ತುಗಳೇನು ಎಂಬುದನ್ನು ಈಗಾಗಲೇ ಪ್ರಸ್ತುತ ಪಡಿಸಿದ್ದಾರೆ. ಇದೀಗ ಐದು ಗ್ಯಾರಂಟಿಗಳಲ್ಲಿ ಬಹಳ ಸುದ್ದಿಯಲ್ಲಿರುವ ಯೋಜನೆ ಎಂದರೆ, ಅದು ಗೃಹ ಜ್ಯೊತಿ ಯೋಜನೆ. ಈ ಯೋಜನೆ ಜಾರಿ ಬೆನ್ನಲ್ಲೇ, ಒಂದೆಡೆ ವಿದ್ಯುತ್ ಬಿಲ್ ಹೆಚ್ಚಾಗಿದೆ ಎಂಬ ಆತಂಕದಲ್ಲಿ ಜನರಿದ್ದರೆ, ಇನ್ನೊಂದೆಡೆ ಈ ಗೃಹ ಜ್ಯೋತಿಯ ಉಪಯೋಗ ನಮಗೂ ಸಿಗುತ್ತಾ ಎನ್ನುವ ಆತಂಕದಲ್ಲಿ ಜನರಿದ್ದಾರೆ. ಇದೀಗ ಈ ಬಗ್ಗೆ ಸಚಿವ ಕೆ.ಜೆ. ಜಾರ್ಜ್ ಮಾಹಿತಿ ನೀಡಿದ್ದಾರೆ,

ಏನು ಹೇಳಿದ್ರು ಕೆ.ಜೆ. ಜಾರ್ಜ್?
ಚುನಾವಣೆಯಲ್ಲಿ ಗೆಲ್ಲುವ ಮೊದಲು ಗೃಹಜ್ಯೋತಿ ಯೋಜನೆ ಕುರಿತಂತೆ ಕಾಂಗ್ರೆಸ್‌ ಭರವಸೆ ನೀಡಿತ್ತು. ಜೂನ್‌ 2 ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಗೃಹ ಜ್ಯೋತಿ ಯೋಜನೆಯನ್ನು ಅನುಷ್ಠಾನಗೊಳಿಸುವ ವಿಚಾರ ಕುರಿತಂತೆ ಮಾಹಿತಿ ನೀಡಲಾಗಿತ್ತು, ಇದೀಗ ಉಚಿತ ವಿದ್ಯುತ್‌ (Free Electricity) ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎನ್ನಲಾಗಿದೆ. ಆದರೆ, ಕೆಲವೊಂದು ಮಾರ್ಗ ಸೂಚಿಗಳಿದ್ದು ಮನೆಯ ಅಗ್ರಿಮೆಂಟ್ ಇದ್ದರೆ ಉಚಿತ ವಿದ್ಯುತ್ ಬಳಕೆ ಮಾಡಬಹುದು. ಆದರೆ, ಆರ್ ಆರ್ ನಂಬರ್ ಗೆ ವೋಟರ್ ಐಡಿ ಲಿಂಕ್ ಮಾಡುವುದು ಕಡ್ಡಾಯ. ಈ ಮೂಲಕ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಪಡೆಯಬಹುದು.

ಉಚಿತ ವಿದ್ಯುತ್‌ ಹೇಗೆ?
ಕಾಂಗ್ರೆಸ್‌ ಘೋಷಣೆಯಂತೆ 200 ಯೂನಿಟ್‌‌ ಉಚಿತ ವಿದ್ಯುತ್‌ ನೀಡಲಿದ್ದು, ಅದರಿಂದ ಹೆಚ್ಚು ಬಳಕೆ ಮಾಡಿದರೆ, ಉಚಿತವಾಗಿ ನೀಡಲಾಗುವುದಿಲ್ಲ. ಸರಾಸರಿ ವಿದ್ಯುತ್ ಬಳಕೆಯ 10% ರಷ್ಟು ಹೆಚ್ಚು ಮಾತ್ರ ಬಳಸಲು ಅವಕಾಶವಿದೆ. ಇನ್ನು ಹಳೆ ಬಾಕಿಯನ್ನು ಪಾವತಿ ಮಾಡಲು ಇದ್ದರೆ ಸರ್ಕಾರ ಭರಿಸುವುದಿಲ್ಲ. ಜುಲೈ 1ರವರೆಗೆ ಬಳಕೆ ಮಾಡಿದ ವಿದ್ಯುತ್‌ನ ಯಾವುದೇ ಹಣ ಬಾಕಿ ಇಟ್ಟುಕೊಳ್ಳುವಂತಿಲ್ಲ ಜುಲೈನಿಂದ ಈ ಯೋಜನೆ ಆರಂಭವಾಗಲಿದೆ. ಆಗಸ್ಟ್ ತಿಂಗಳಿನಿಂದ ವಿದ್ಯುತ್‌ ಬಿಲ್‌ ಅನ್ನು ಸರಕಾರವೇ ಭರಿಸುತ್ತದೆ.

ಬಾಡಿಗೆ ಮನೆಗೂ ವಿದ್ಯುತ್‌ ಫ್ರೀ
ಹೊಸದಾಗಿ ಮನೆ ನಿರ್ಮಾಣ ಮಾಡಿದವರಿಗೂ ಈ ಯೋಜನೆಯ ಫಲ ಸಿಗಲಿದೆ. ಬಾಡಿಗೆ ಮನೆಯಲ್ಲಿ ಇರುವವರಿಗೂ ಈ ಯೋಜನೆಯ ಸದುಪಯೋಗ ಮಾಡಬಹುದಾಗಿದೆ. ಆಗಸ್ಟ್ 1 ರಂದು ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಇದೀಗ ಮನೆಯ ವಿದ್ಯುತ್‌ ಸಂಪರ್ಕದ Customer ID & Account ID ಆಧಾರ್‌ಗೆ ಜೋಡಣೆ ಕಡ್ಡಾಯ​​ವಾಗಿ ಮಾಡಬೇಕು ಎನ್ನಲಾಗಿದೆ.

ಹೊಸ ಮನೆ ಹಾಗೂ ಹೊಸ ಬಾಡಿಗೆದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗೃಹಜ್ಯೋತಿ ಯೋಜನೆ ನಿಯಮಗಳಲ್ಲಿ ಕೊಂಚ ಮಾರ್ಪಾಡು ಮಾಡಲಾಗಿರುವುದಾಗಿ ಇಂಧನ ಸಚಿವ ಕೆ ಜೆ ಜಾರ್ಜ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಜೂನ್‌ 12ರಂದು ಇಂಧನ ಇಲಾಖೆ ಇಲಾಖೆ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆ ಜೆ ಜಾರ್ಜ್, ಹೊಸ ಮನೆ ಮತ್ತು ಮನೆ ಬದಲಾವಣೆ ವಿಚಾರ ಸಿಎಂ ಜೊತೆ ಚರ್ಚೆಯಾಗಿದೆ. ಯಾರು ಹೊಸದಾಗಿ ಬಾಡಿಗೆ ಮನೆಗೆ ಬರ್ತಾರೆ ಅವರಿಗೆ ಅಗತ್ಯ ದಾಖಲೆಗಳಿರುವುದಿಲ್ಲ. ಹಾಗಾಗಿ, ಅವರಿಗೆ ಅವರೇಜ್ 53% +10% ಸೇರಿಸಿ 58 ಯೂನಿಟ್ ವರೆಗೂ ವಿದ್ಯುತ್ ಉಚಿತ ನೀಡಲಾಗುತ್ತದೆ ಎಂದರು.

ಇದೇ ನಿಯಮ ಹೊಸದಾಗಿ ಮನೆ ನಿರ್ಮಿಸಿದವರಿಗೂ ಅನ್ವಯವಾಗಲಿದೆ. ಏಕೆಂದರೆ, ಹಿಂದಿನ ಒಂದು ವರ್ಷದವರೆಗಿನ ಲೆಕ್ಕ ಇವರಿಗೆ ಸಿಗುವುದಿಲ್ಲ, ಹೀಗಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ಜಾರ್ಜ್ ಹೇಳಿದರು.

ಗೃಹಜ್ಯೋತಿ ಜಾರಿ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದಿಲ್ಲ. ಗೃಹಜ್ಯೋತಿ ಯೋಜನೆ ವೆಚ್ಚವನ್ನು ರಾಜ್ಯ ಸರ್ಕಾವೇ ಭರಿಸಲಿದೆ.ಉಚಿತ ಯೋಜನೆ ಪಡೆಯುವ ಮುನ್ನ ಬಾಕಿ ಬಿಲ್‌ ಪಾವತಿ ಮಾಡಬೇಕು.ಈ ಹಿಂದಿನ ಬಿಲ್ ಪಾವತಿಸಲು ಗ್ರಾಹಕರಿಗೆ 3 ತಿಂಗಳ ಕಾಲಾವಕಾಶವಿದೆ ಎಂದು ಇಂಧನ ಸಚಿವರು ಹೇಳಿದರು.

Leave a Comment

%d bloggers like this: