ಉಚಿತ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯುವುದಕ್ಕಾಗಿ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸುವ ವಿಧಾನ.!

 

WhatsApp Group Join Now
Telegram Group Join Now

ಜೂನ್ 11ರಿಂದ ರಾಜ್ಯದಾದ್ಯಂತ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ರಾಜ್ಯದ ಕಾಂಗ್ರೆಸ್ ಸರ್ಕಾರವು ಅವಕಾಶ ಮಾಡಿಕೊಟ್ಟಿದೆ. ಕರ್ನಾಟಕದ ಗಡಿಯೊಳಗೆ ಕರ್ನಾಟಕದಲ್ಲಿ ಇರುವ ವಿದ್ಯಾರ್ಥಿನಿಯರು ಸೇರಿದಂತೆ ಎಲ್ಲಾ ಮಹಿಳೆಯರಿಗೂ ಕೂಡ ಐಷಾರಾಮಿ ಬಸ್ ಗಳು ಹೊರತುಪಡಿಸಿ ಕರ್ನಾಟಕ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಇವರಿಗೆ ಶೂನ್ಯ ದರದಲ್ಲಿ ಟಿಕೆಟ್ ವಿತರಣೆ ಮಾಡಲಾಗುತ್ತಿದೆ. ಮಹಿಳೆಯರು ಈ ಉಚಿತ ಯೋಜನೆ ಪ್ರಯೋಜನ ಪಡೆಯಲು ಶಕ್ತಿ ಸ್ಮಾರ್ಟ್ ಕಾರ್ಡ್ ಅನ್ನು ಹೊಂದಿರಬೇಕು ಎನ್ನುವ ಸೂಚನೆಯನ್ನು ಕೂಡ ಸರ್ಕಾರ ಕೊಟ್ಟಿದೆ. ಇದಕ್ಕೆ ಮೂರು ತಿಂಗಳವರೆಗೆ ಅವಕಾಶ ಮಾಡಿಕೊಟ್ಟಿರುವ ಸರ್ಕಾರವು ಸೇವಾ ಸಿಂಧು ಪೋರ್ಟಲ್ ಮೂಲಕ ನೋಂದಾಯಿಸಿ ಈ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎನ್ನುವ ಭರವಸೆಯನ್ನು ಕೂಡ ನೀಡಿದೆ.

ಈ ಸ್ಮಾರ್ಟ್ ಕಾರ್ಡ್ ಪಡೆಯುವವರೆಗೂ ಕೂಡ ಮಹಿಳೆಯರು ಗುರುತಿಗಾಗಿ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಗಳನ್ನು ದಾಖಲೆಯಾಗಿ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು. ಸ್ಮಾರ್ಟ್ ಕಾರ್ಡ್ ಪಡೆಯುವುದಕ್ಕಾಗಿ ಮಹಿಳೆಯರು ಹತ್ತಿರದಲ್ಲಿರುವ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಅಥವಾ CSC ಸೈಬರ್ ಸೆಂಟರ್ ಗಳಲ್ಲಿ ಅಪ್ಲೈ ಮಾಡಬಹುದು.

ಮೊದಲಿಗೆ ನೋಂದಣಿ ಆಗಬೇಕು ನಂತರ ಅದನ್ನು ಪರಿಶೀಲಿಸಿ ಸರ್ಕಾರವೇ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಿದೆ. ಮೊಬೈಲ್ ಮೂಲಕ ಕೂಡ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಲು ಸೇವಾ ಸಿಂಧು ಪೋರ್ಟಲ್ ನಲ್ಲಿ ನೊಂದಾಯಿಸಿಕೊಳ್ಳಬಹುದು. ಇದಕ್ಕಾಗಿ ಕೆಲವೇ ಕೆಲವು ಸರಳ ಹಂತಗಳನ್ನು ಪಾಲಿಸಿದರೆ ಸಾಕು.

● ಮೊಬೈಲ್ ನಲ್ಲಿ ಗೂಗಲ್ ಮೂಲಕ ಸೇವಾ ಸಿಂಧು ಪೋರ್ಟಲ್ ಓಪನ್ ಮಾಡಿ.
● ಸೇವಾ ಸಿಂಧುವಿನ DigiLocker ಪುಟ ತೆರೆಯುತ್ತದೆ.
● ಹೊಸದಾಗಿ ಸೇವಾ ಸಿಂಧು ಪೋರ್ಟಲ್ ಓಪನ್ ಮಾಡುತ್ತಿರುವವರು ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಹಾಕಿ DigiLocker ಅಕೌಂಟ್ ಕ್ರಿಯೇಟ್ ಮಾಡಬೇಕು.

● ಇದಾದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಹಾಕಿ ನಿಮ್ಮ ಮೊಬೈಲ್ ಗೆ ಬರುವ OTP ಎಂಟ್ರಿ ಮಾಡಿ, ಈ DigiLocker ಅಕೌಂಟ್ ಗೆ ಲಾಗ್ ಇನ್ ಆಗಿ.
● ಸರ್ಚ್ ಬಾರ್ ಅಲ್ಲಿ ಶಕ್ತಿ ಸ್ಮಾರ್ಟ್ ಕಾರ್ಡ್ ಆಯ್ಕೆ ಮಾಡಿಕೊಂಡು ಅರ್ಜಿ ಫಾರಂ ಮೇಲೆ ಕ್ಲಿಕ್ ಮಾಡಿ.
● ಅರ್ಜಿ ಫಾರಂ ಅಲ್ಲಿ ಕೇಳಲಾಗುವ ಹೆಸರು ವಿಳಾಸ ಮೊಬೈಲ್ ಸಂಖ್ಯೆ ಇಮೇಲ್ ಐಡಿ ಆಧಾರ್ ಸಂಖ್ಯೆ ಗುರುತಿನ ಚೀಟಿ ಈ ಎಲ್ಲಾ ದಾಖಲೆಗಳಲ್ಲಿ ಸರಿಯಾದ ವಿವರಗಳನ್ನು ಫಿಲ್ ಮಾಡಿ ಮತ್ತು ಅವಶ್ಯಕ ಪ್ರಮುಖ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಈ ಪ್ರಕ್ರಿಯೆಯನ್ನು ಪೂರ್ತಿ ಗೊಳಿಸಿ.

● ಎಲ್ಲಾ ಮಾಹಿತಿಯು ಸರಿಯಾಗಿ ಇದ್ದರೆ ಶಕ್ತಿ ಸ್ಮಾರ್ಟ್ ಕಾರ್ಡ್ pdf ಫೈಲ್ ನಿಮ್ಮ ಮುಂದೆ ತೆರೆಯುತ್ತದೆ
● ಅದನ್ನು ಡೌನ್ಲೋಡ್ ಮಾಡಿಕೊಂಡ pdf ಅನ್ನು ಕ್ಲಿಕ್ ಮಾಡುವ ಮೂಲಕ ಸೇವಾ ಸಿಂಧು ಶಕ್ತಿ ಸ್ಮಾರ್ಟ್ ಕಾರ್ಡನ್ನು ನಿಮ್ಮ ಮೊಬೈಲ್ ಅಲ್ಲಿಯೇ ಪಡೆಯಬಹುದು. ಕರ್ನಾಟಕದ ಮಹಿಳೆಯರಿಗೆಲ್ಲ ಅನುಕೂಲ ಆಗುವ ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now