ಜಮೀನಿನ ಪಹಣಿ ತಿದ್ದುಪಡಿ ಮಾಡಿಸುವುದು ಹೇಗೆ.? ಬೇಕಾಗುವ ದಾಖಲೆಗಳೇನು ನೋಡಿ.!

 

ರೈತರಿಗೆ ಇದು ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಪ್ರತಿಯೊಂದು ಪ್ರಯೋಜನಗಳನ್ನು ಕೂಡ ಪಡೆಯಲು ಅಗತ್ಯ ದಾಖಲೆಯಾಗಿ ಪಹಣಿ ಪತ್ರ ಬೇಕು. ಪಹಣಿ ಪತ್ರ ಮಾತ್ರವಲ್ಲದೇ ಆ ಪಹಣಿ ಪತ್ರದಲ್ಲಿ ಇರುವ ಮಾಲೀಕನ ಹೆಸರು ಸರಿಯಾಗಿರಬೇಕು. ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗಲು ಇತರ ದಾಖಲೆಗಳಂತೆ ಪಹಣಿ ಪತ್ರದಲ್ಲಿ ಇರುವ ಹೆಸರು ಹೊಂದಾಣಿಕೆ ಆದಾಗ ಮಾತ್ರ ಅವರಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಫಸಲ್ ಭೀಮಾ ಯೋಜನೆ, ಬೆಳೆ ಲೋನ್ ಪಡೆಯಲು ಇನ್ನು ಮುಂತಾಗಿ ಬಿತ್ತನೆಬೀಜ, ರಸಗೊಬ್ಬರುಗಳಿಗೆ ಸಿಗುವ ಸಬ್ಸಿಡಿ ಪಡೆಯುವ ವಿಷಯದಲ್ಲೂ ಕೂಡ ಈ ಪಹಣಿ ಪತ್ರ ಅಗತ್ಯ ದಾಖಲೆಯಾಗಿ ಬೇಕಾಗುತ್ತದೆ. ಆಸ್ತಿ ವಿಭಾಗ ಆಗುವ ಸಮಯದಲ್ಲಿ ಪಹಣಿ ಪತ್ರವು ಮುಖ್ಯವಾಗುತ್ತದೆ. ಅಂತಹ ಸಮಯದಲ್ಲಿ ಕೂಡ ಪಹಣಿ ಪತ್ರದಲ್ಲಿರುವ ದಾಖಲೆ ಸರಿಯಾಗಿ ಇರುವುದು ಬಹಳ ಮುಖ್ಯವಾದ ವಿಷಯ.

ಆದರೆ ಹಲವು ಕಾರಣಗಳಿಂದ ಈ ಪಹಣಿ ಪತದಲ್ಲಿ ಇರುವ ಹೆಸರು ಮತ್ತು ಇತರ ಮಾಹಿತಿಗಳು ತಪ್ಪಾಗಿರುತ್ತವೆ. ಕೆಲವೊಮ್ಮೆ ಲಿಪ್ಯಂತಕರಣ ದೋಷವಾಗಿದ್ದರೆ ಕೆಲವೊಮ್ಮೆ ಹೆಸರೇ ಬದಲಾಗಬಹುದು. ಅಂತಹ ಸಮಯದಲ್ಲಿ ಅಗತ್ಯವಾಗಿ ಪಹಣಿ ಪತ್ರಗಳಲ್ಲಿ ಇರುವ ಹೆಸರನ್ನು ರೈತರು ತಿದ್ದುಪಡಿ ಮಾಡಿಸಿಕೊಳ್ಳಬೇಕು. 1964 ರಿಂದಲೂ ಪ್ರತಿ ವರ್ಷವೂ ಕೂಡ ರೈತರು ತಮ್ಮ ಜಮೀನಿನ ಪಹಣಿ ಪತ್ರವನ್ನು ಪಡೆದುಕೊಳ್ಳಬೇಕು ಎನ್ನುವ ನಿಯಮ ಇದೆ.

ಅಂತಹ ಸಮಯದಲ್ಲಿ ಹೆಸರಿನಲ್ಲಿ ತೊಂದರೆ ಆಗಿರುವುದು ಕಂಡು ಬಂದಾಗ ಅಥವಾ ಹೊಸದಾಗಿ ಜಮೀನನ್ನು ಮಾಡಿಸಿಕೊಂಡಾಗ ಈ ರೀತಿ ಲೋಪಗಳು ಆಗಿರುವುದು ಕಂಡುಬಂದ ಸಮಯದಲ್ಲಿ ಈ ಕ್ರಮಗಳನ್ನು ಬಳಸಿ ನಿಮ್ಮ ಪಹಣಿ ಪತ್ರದಲ್ಲಿರುವ ಹೆಸರಿನ ಮಾಹಿತಿಯನ್ನು ತಿದ್ದುಪಡಿ ಮಾಡಿಸಿಕೊಳ್ಳಿ.

● ತಾಲೂಕು ಆಫೀಸ್ ಬಳಿ ಇರುವ ಪಹಣಿ ಕೇಂದ್ರಗಳಲ್ಲಿ ಪಹಣಿ ಪತ್ರ ತೆಗೆದುಕೊಳ್ಳಿ.
● 20 ರೂಪಾಯಿ ಸ್ಟ್ಯಾಂಪ್ ಪೇಪರ್ ಪಡೆದು ಆ ಸ್ಟಾಂಪ್ ಪೇಪರ್ ಮೇಲೆ ಟೈಪಿಂಗ್ ಅಲ್ಲಿ ಪಹಣಿ ಪತ್ರದಲ್ಲಿ ಇರುವ ಹೆಸರಿನ ಬದಲಾವಣೆಗಾಗಿ ಅರ್ಜಿ ಬರೆಸಬೇಕು.
● ಟೈಪಿಂಗ್ ಫಾರ್ಮೆಟ್ ಅಲ್ಲಿಯೇ ಅರ್ಜಿ ಇರಬೇಕು
ನಂತರ ತಪ್ಪದೆ ವಕೀಲರಿಂದ ನೋಟರಿ ಸಹಾ ಮಾಡಿಸಬೇಕು.

● ಪಹಣಿ ಪತ್ರದಲ್ಲಿ ಹೆಸರನ್ನು ತಿದ್ದುಪಡಿ ಮಾಡುವ ಸಲುವಾಗಿ ಒಂದು ಮಾದರಿ ಅರ್ಜಿಯನ್ನು ಕೂಡ ಸಿದ್ಧಪಡಿಸಬೇಕು. ಹೆಸರನ್ನು ಹೇಗೆ ತಿದ್ದುಪಡಿ ಮಾಡಬೇಕು ಎನ್ನುವುದನ್ನು ಕೂಡ ಟೈಪಿಂಗ್ ಅಲ್ಲಿಯೇ ಮಾದರಿ ಅರ್ಜಿಯಲ್ಲಿ ತಿಳಿಸಿರಬೇಕು.
● ಮುಖ್ಯವಾಗಿ ಆಧಾರ್ ಕಾರ್ಡ್ ಸೇರಿದಂತೆ, ಈ ರೀತಿ ಹೆಸರು ಬದಲಾವಣೆಗಾಗಿ ಕೇಳುವ ಎಲ್ಲ ದಾಖಲೆಗಳನ್ನು ಕೂಡ ತೆಗೆದುಕೊಂಡು ಅರ್ಜಿ ಜೊತೆಗೆ ತಾಲೂಕು ಕಚೇರಿಯಲ್ಲಿರುವ ಭೂಮಿ ಕೇಂದ್ರಕ್ಕೆ ಸಲ್ಲಿಸಬೇಕು.

● ಭೂಮಿ ಕೇಂದ್ರದಿಂದ ದಾಖಲೆಗಳನ್ನು ಗ್ರಾಮ ಲೆಕ್ಕಗರಿಗೆ ಕಳಿಸುತ್ತಾರೆ.
● ಗ್ರಾಮ ಲೆಕ್ಕಿಗರು ಅರ್ಜಿಗಳನ್ನು ಪರಿಶೀಲಿಸಿ ಮತ್ತು ಅವುಗಳನ್ನು ಅನುಮೋದಿಸುವ ಹಾಗು ತಿರುಗಿಸ್ಕರಿಸುವ ಹಕ್ಕುಗಳನ್ನು ಹೊಂದಿರುತ್ತಾರೆ.
● ಒಂದು ವೇಳೆ ದಾಖಲೆಗಳನ್ನು ಸರಿಯಾಗಿ ಇದ್ದ ಪಕ್ಷದಲ್ಲಿ ಭೂಮಿ ಕೇಂದ್ರಕ್ಕೆ ಪಹಣಿ ತಿದ್ದುಪಡಿ ಮಾಡಲು ಆದೇಶ ಮಾಡುವ ಅಧಿಕಾರವನ್ನು ಗ್ರಾಮ ಲೆಕ್ಕಿಗರೇ ಹೊಂದಿರುತ್ತಾರೆ.
● ಭೂಮಿ ಕೇಂದ್ರದಲ್ಲಿ ಈ ರೀತಿ ಅರ್ಜಿ ಸಲ್ಲಿಸಿದ ಪಹಣಿ ಪತ್ರಗಳಲ್ಲಿ ಹೆಸರಿನ ತಿದ್ದುಪಡಿ ಕಾರ್ಯವನ್ನು ಮಾಡುತ್ತಾರೆ.
● ಕೆಲವು ದಿನಗಳು ಆದ ಬಳಿಕ ಹೆಸರು ತಿದ್ದುಪಡಿ ಆಗಿರುವ ಪಹಣಿ ಪತ್ರವನ್ನು ನೀವು ಪಡೆಯಬಹುದು.

Leave a Comment

%d bloggers like this: