ಕಾಂಗ್ರೆಸ್ ಪಕ್ಷವು ಘೋಷಿಸಿದ ಪಂಚಖಾತ್ರಿ ಯೋಜನೆಗಳನ್ನು ಒಂದೊಂದಾಗಿ ಸರ್ಕಾರ ಸ್ಥಾಪನೆಯಾದ ಬಳಿಕ ಜಾರಿಗೆ ತರುತ್ತದೆ. ಅದರಲ್ಲಿ ಕರ್ನಾಟಕದ ಮಹಿಳೆಯರು ಮಹತ್ವಕಾಂಕ್ಷೆಯಿಂದ ಕಾಯುತ್ತಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ. ಈ ಯೋಜನೆಯಲ್ಲಿ ಕರ್ನಾಟಕದ ಪ್ರತಿ ಕುಟುಂಬದ ಯಜಮಾನಿಗೆ 2,000 ಸಹಾಯಧನವು DBT ಮೂಲಕ ವರ್ಗಾವಣೆ ಆಗಲಿದೆ.
ಆಗಸ್ಟ್ 15ರಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಸ್ವತಂತ್ರ ದಿನಾಚರಣೆ ಪ್ರಯುಕ್ತ ಈ ಯೋಜನೆಯನ್ನು ಲಾಂಚ್ ಮಾಡಲಿದ್ದಾರೆ. ಅದಕ್ಕೆ ಪೂರ್ವವಾಗಿ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದ್ದು ಜೂನ್ 16ರ ಮಧ್ಯಾಹ್ನ 1:30 ರಿಂದ ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಶಕ್ತಿ ಭವನದಲ್ಲಿ ಸಿದ್ದರಾಮಯ್ಯ ಅವರೇ ಈ ಅರ್ಜಿ ಸಲ್ಲಿಸುವ ಸೇವೆ ಸಿಂಧು ಪೋರ್ಟಲ್ ಅನ್ನು ಸಾಂಕೇತಿಕವಾಗಿ ಲಾಂಚ್ ಮಾಡಲಿದ್ದಾರೆ. ಈ ಯೋಜನೆಗೆ ಆಫ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಛೇರಿಗಳಲ್ಲಿ ಅರ್ಜಿ ಫಾರಂ ಪಡೆದು ಪೂರಕವಾದ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು ಇದಕ್ಕೆ ಯಾವುದೇ ರೀತಿಯ ಅರ್ಜಿ ಶುಲ್ಕವನ್ನು ವಿಧಿಸಿರುವುದಿಲ್ಲ.
ಆನ್ಲೈನ್ ಸೇವಾ ಸಿಂಧು ಪೋರ್ಟಲ್ ಮೂಲಕ ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಅಥವಾ ಸೈಬರ್ ಸೆಂಟರ್ ಗಳಲ್ಲಿ ಮತ್ತು ಮೊಬೈಲ್ ಮೂಲಕವೂ ಈ ಯೋಜನೆಗೆ ಉಚಿತವಾಗಿ ಅರ್ಜಿ ಸಲ್ಲಿಸಲು ಕೂಡ ಅವಕಾಶ ಮಾಡಿಕೊಡಲಾಗಿದೆ. ಜೂನ್ 16 ರಿಂದ ಅರ್ಜಿ ಸಲ್ಲಿಸಲು ಅವಕಾಶವಿದ್ದು ಇದಕ್ಕೆ ಯಾವುದೇ ಅಂತಿಮ ದಿನಾಂಕವೂ ಇಲ್ಲ. ಅರ್ಜಿ ಪರಿಶೀಲನೆ ನಡೆದು ಅನುಮೋದನೆ ಆದ ನಂತರ ಪ್ರತಿ ತಿಂಗಳು ಅವರ ಖಾತೆಗೆ 2000ರೂ. ಸಹಾಯಧನ ನೇರ ವರ್ಗಾವಣೆ ಮೂಲಕ ಬರಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಆನ್ಲೈನ್ ಅಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-
● ಮೊದಲು ಸೇವಾ ಸಿಂಧು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಲು https://sevasindhuservices.karnataka.gov.in ಗೆ ಭೇಟಿಕೊಡಿ.
● ಮೊದಲ ಬಾರಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುತ್ತಿದ್ದರೆ ನಿಮ್ಮ ಅಕೌಂಟನ್ನು ಕ್ರಿಯೇಟ್ ಮಾಡಬೇಕಾಗುತ್ತದೆ. ಅದಕ್ಕಾಗಿ Register Here ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಹಾಕಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಿ.
● ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಅಥವಾ OTP ಮೂಲಕ ಲಾಗಿನ್ ಆಗಿ. ನಂತರ ಸರ್ಚ್ ಆಪ್ಷನ್ ಅಲ್ಲಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಿ.
● ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಆಧಾರ್ ಸಂಖ್ಯೆ, ಗುರುತಿನ ಚೀಟಿ ಮುಂತಾದ ನಿಮಗೆ ಅಗತ್ಯವಿರುವ ವಿವರಗಳನ್ನು ಇಲ್ಲಿ ನಮೂದಿಸಿ. ಕೊನೆಯದಾಗಿ, ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ತಿಗೊಳಿಸಿ.
ಈ ಯೋಚನೆಯ ಬಗ್ಗೆ ಇರುವ ಪ್ರಮುಖವಾದ ಮತ್ತೊಂದು ವಿಷಯವೆಂದರೆ ಮನೆಯಲ್ಲಿ ಮಕ್ಕಳು ತೆರಿಗೆ ಪಾವತಿದಾರರಾಗಿದ್ದರೆ,GST ಪಾವತಿ ಮಾಡುವ ಕುಟುಂಬಗಳು ಯಜಮಾನಿಗೆ, APL, BPL ಕಾರ್ಡ್ ಹೊಂದಿರದ ಕುಟುಂಬಗಳ ಯಜಮಾನಿಗೆ, ಮನೆಯಲ್ಲಿ ಮಕ್ಕಳು ಅಥವಾ ಗಂಡ ಅಥವಾ ಹೆಂಡತಿ ಸರ್ಕಾರಿ ನೌಕರರಾಗಿದ್ದರೆ, ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಯಾರಾದರೂ ತೆರಿಗೆ ಪಾವತಿಯನ್ನು ಮಾಡುತ್ತಿದ್ದರೆ ಅವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿರುವುದಿಲ್ಲ. ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಸರ್ಕಾರ ಹೊರಡಿಸಿರುವ ಅಧಿಕೃತ ಆದೇಶ ಪತ್ರವನ್ನು ಗಮನಿಸಿ.