ಸರ್ಕಾರದಿಂದ 2023-24ನೇ ಸಾಲಿನ ವಸತಿ ಯೋಜನೆ ಬಿಡುಗಡೆ. ಮನೆ ಇಲ್ಲದವರು ಮನೆ ಪಡೆಯಲು ಈ ಕೂಡಲೇ ಅರ್ಜಿ ಸಲ್ಲಿಸಿ.!

ವಸತಿ ಎನ್ನುವುದು ಮನುಷ್ಯನ ಮೂಲಭೂತ ಅವಶ್ಯಕತೆ. ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರು ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಸರ್ಕಾರಗಳು ಸಹ ಶ್ರಮಿಸುತ್ತಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದು ಈ ರೀತಿ ಎಲ್ಲರಿಗೂ ಸ್ವಂತ ಮನೆಯನ್ನು ಕಟ್ಟಿಕೊಳ್ಳಲು ಸಹಾಯ ಮಾಡುತ್ತಿವೆ.

ಈಗಾಗಲೇ ಪ್ರಧಾನಮಂತ್ರಿ ಆವಾಸ್ ಯೋಜನೆಯಿಂದ ಹಿಡಿದು ರಾಜೀವ್ ಗಾಂಧಿ ವಸತಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ರಾಜ್ಯದಲ್ಲಿ ಇವೆ. ಈಗಿನ ಕಾಲದಲ್ಲಿ ಸ್ವಂತ ಮನೆ ನಿರ್ಮಾಣ ಮಾಡುವುದು ಬಹಳ ಕಷ್ಟದ ಕೆಲಸವಾಗಿದೆ ಆದ್ದರಿಂದ ಬ್ಯಾಂಕ್ ಗಳು ಕೂಡ ಸಾಲ ಸೌಲಭ್ಯವನ್ನು ನೀಡಿ ಮನೆ ಕಟ್ಟುವ ಅಥವಾ ಕೊಳ್ಳುವ ಆಸೆ ಇರುವವರಿಗೆ ನೆರವಾಗುತ್ತಿವೆ.

ರಾಜ್ಯ ಸರ್ಕಾರದ ವತಿಯಿಂದ ಕೂಡ ಜನರಿಗೆ ಸಿಗುತ್ತಿರುವ ಅನುಕೂಲತೆಯನ್ನು ನೋಡುವುದಾದರೆ ಸ್ವಂತ ಮನೆ ನಿರ್ಮಿಸಿಕೊಳ್ಳಬೇಕು ಅಥವಾ ಸ್ವಂತ ಮನೆ ಇಲ್ಲದವರು ಮನೆ ಕೊಳ್ಳಬೇಕು ಎಂದು ನಿರ್ಧರಿಸಿದರೆ ಸರ್ಕಾರವು ಜಾರಿಗೆ ತರುವ ಯೋಜನೆಗಳ ಫಲಾನುಭವಿಗಳಾಗಿ ಸರ್ಕಾರದಿಂದ ಸಹಾಯದೊಂದಿಗೆ ಈ ಕನಸನ್ನು ಸಹಕಾರ ಮಾಡಿಕೊಳ್ಳಬಹುದು.

ಈಗಷ್ಟೇ ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬಹು ಅಂತಸ್ತಿನ ಮನೆ ನಿರ್ಮಾಣ ಯೋಜನೆಯಡಿ ಬೆಂಗಳೂರು ಹೊಲವಲಯದಲ್ಲಿ ಬಹು ಅಂತಸ್ತಿನ ಮನೆಗಳನ್ನು ನಿರ್ಮಾಣ ಮಾಡಿ ಬ್ಯಾಂಕ್ ಸಾಲ ಸೌಲಭ್ಯದೊಂದಿಗೆ ಮಾರಾಟ ಮಾಡಲಾಗಿತ್ತು. ಇದರಿಂದಾಗಿ ಅನೇಕರು ಸ್ವಂತ ಮನೆಯಲ್ಲಿ ವಾಸಿಸುವ ಅನುಕೂಲತೆ ದೊರೆಯಿತು. ಈ ರೀತಿಯ ಹಲವು ಯೋಜನೆಗಳು ಇವೆ.

ರಾಜ್ಯದಲ್ಲಿ ಹೆಸರಾಗಿರುವ ಇಂತಹದೇ ಮತ್ತೊಂದು ಯೋಜನೆ ನನ್ನ ಮನೆ ವಸತಿ ಯೋಜನೆ, ಈ ಯೋಜನೆಯ ಮೂಲಕ ಹೇಗೆ ಸ್ವಂತ ಮನೆಯನ್ನು ಪಡೆಯಬಹುದು ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಕರ್ನಾಟಕ ಸರ್ಕಾರದ ವಸತಿ ಇಲಾಖೆ ಅಡಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಸಹಕಾರದೊಂದಿಗೆ ಸರ್ಕಾರವು ನನ್ನ ಮನೆ ವಸತಿ ಯೋಜನೆ ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ.

ಈ ಹಿಂದೆ ತಿಳಿಸಿದ ಮುಖ್ಯಮಂತ್ರಿಗಳ ಬಹು ಅಂತಸ್ತಿನ ಘಟಕದ ಯೋಜನೆ ಮಾದರಿಯಲ್ಲಿಯೇ ಈ ಯೋಜನೆ ಇದ್ದು ರಾಜ್ಯದ ಹಲವು ಭಾಗಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡಿ ಸ್ವಂತ ಮನೆ ಇಲ್ಲದವರಿಗೆ ವರ್ಗಾವಣೆ ಮಾಡಲಾಗುತ್ತಿದೆ. ಇದಕ್ಕಾಗಿ ಪೂರಕ ದಾಖಲೆಗಳ ಜೊತೆ ಫಲಾನುಭವಿಗಳಾಗಲು ಇಚ್ಚಿಸುವವರು ಅರ್ಜಿಯನ್ನು ಸಲ್ಲಿಸಬೇಕು. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಟ್ಟು ಪೂರಕ ದಾಖಲೆಗಳ ಜೊತೆ ಅರ್ಜಿಯನ್ನು ಸಲ್ಲಿಸಿ ನೋಂದಣಿ ಆಗಬೇಕು.

2023-24ನೇ ಸಾಲಿನ ನನ್ನ ಮನೆ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಲು ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವೆಬ್ಸೈಟ್ ಓಪನ್ ಮಾಡಿ ಅರ್ಜಿ ಸಲ್ಲಿಸುವುದಕ್ಕಾಗಿ ಇರುವ ಲಿಂಕನ್ನು ಕ್ಲಿಕ್ ಮಾಡಿ ಅದರಲ್ಲಿ ಜಿಲ್ಲೆ, ತಾಲೂಕು, ಗ್ರಾಮ, ವಾರ್ಡ್ ಸಂಖ್ಯೆ ಮುಂತಾದ ಆಪ್ಷನ್ ಗಳನ್ನು ಸರಿಯಾದ ಮಾಹಿತಿ ಜೊತೆ ತುಂಬಿಸಿ ಮುಂದಿನ ಹಂತದಲ್ಲಿ ಆಧಾರ್ ಕಾರ್ಡ್ ಮಾಹಿತಿಯನ್ನು ಕೂಡ ನೀಡಿ.

ಈ ವಸತಿ ಯೋಜನೆಯಲ್ಲಿ ನಿರ್ಮಾಣವಾಗಿರುವ ವಸತಿ ಘಟಕಗಳ ಮಾಹಿತಿಯನ್ನು ಪರಿಶೀಲಿಸಬಹುದು. ನಂತರ ಇವು ಒಪ್ಪಿಗೆಯಾದ ಬಳಿಕ ಮುಂದಿನ ಕ್ರಮಗಳನ್ನು ಕೂಡ ಆನ್ಲೈನ್ ಮೂಲಕವೇ ಪೂರೈಸಬಹುದು. ಇದಕ್ಕಾಗಿ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಒಮ್ಮೆ ವೆಬ್ಸೈಟ್ಗೆ ಭೇಟಿ ಕೊಟ್ಟು ಮಾಹಿತಿ ತಿಳಿದುಕೊಳ್ಳಿ. ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

Leave a Comment

%d bloggers like this: