ಕುಡಿತದ ಚಟ ಬಿಡಿಸಬೇಕಾ.? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್, ಈ ರೀತಿ ಮಾಡಿ ನೋಡಿ ಜನುಮದಲ್ಲಿ ಎಣ್ಣೆ ಮುಟ್ಟಲ್ಲ.!

 

ಭಾರತದಲ್ಲಿ ಬಡತನ ಇದ್ದರೂ ಪರವಾಗಿಲ್ಲ ಜನರು ಕುಡಿತದ ಚಟಕ್ಕೆ ದಾಸರಾಗಬಾರದು ಎನ್ನುವುದು ಗಾಂಧೀಜಿ ಅವರ ಕನಸಾಗಿತ್ತು. ಇಂದು ಪ್ರತಿ ಮನೆ ಮನೆಗಳಲ್ಲೂ ಕೂಡ ಪುರುಷರು ಕುಡಿತಕ್ಕೆ ದಾಸರಾಗಿರುವುದನ್ನು ನೋಡುತ್ತಿದ್ದೇವೆ. ಒಂದೊಂದು ಕುಟುಂಬದಲ್ಲೂ ಕೂಡ ಗಂಡ, ತಂದೆ ಅಥವಾ ಮಗ ಕುಡಿತದ ಚಟಕ್ಕೆ ಒಳಗಾಗಿ ಜೀನವನ್ನು ನಾಶಪಡಿಸಿಕೊಂಡು.

ಆ ಕುಟುಂಬದ ಇತರ ಸದಸ್ಯರು ಕೂಡ ನೆಮ್ಮದಿ ಹಾಳು ಮಾಡಿಕೊಂಡು ಪ್ರತಿದಿನವೂ ಕೂಡ ಇದರಿಂದ ಕೊರಗುತ್ತಿರುವ ಉದಾಹರಣೆಗಳು ನಮ್ಮ ಕಣ್ಣೆದುರಿಗೆ ಸಿಗುತ್ತವೆ. ಕುಡಿತದ ಚಟವು ವ್ಯಕ್ತಿಯನ್ನು ದೈಹಿಕವಾಗಿ ದುರ್ಬಲನನ್ನಾಗಿ ಮಾಡಿ ಅನೇಕ ಕಾಯಿಲೆಗಳಿಗೆ ತುತ್ತು ಮಾಡುತ್ತದೆ. ಲಿವರ್ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ಮಾತ್ರವಲ್ಲದೆ ಅನೇಕ ದೈಹಿಕ ಸಮಸ್ಯೆಗಳು ಕೂಡ ಕುಡಿತದ ಚಟ ಹೊಂದಿರುವವರನ್ನು ಕಾಡುತ್ತದೆ.

ಜೊತೆಗೆ ಕುಡಿತದ ದಾಸರಾಗಿ ಸರಿಯಾಗಿ ದುಡಿಮೆ ಮಾಡದೆ ಮನೆಯಲ್ಲಿ ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳದ ಕಾರಣ ಸಮಾಜದ ಸ್ವಾಸ್ಥ್ಯವೂ ಹಾಳಾಗುತ್ತದೆ. ಈ ಎಲ್ಲಾ ಕಾರಣದಿಂದ ಅವರನ್ನು ಕುಡಿತದ ಚಟದಿಂದ ಕೊರತರಲು ಆತನ ಕುಟುಂಬಸ್ಥರು ಮತ್ತು ಸ್ನೇಹಿತರು ಬಹಳ ಶ್ರಮ ಹಾಕುತ್ತಾರೆ. ಇದಕ್ಕೆ ಇಂಗ್ಲಿಷ್ ಔಷಧಿಗಳ ಮೊರೆ ಹೋಗುವುದರಿಂದ ಸೈಡ್ ಎಫೆಕ್ಟ್ ಆಗಬಹುದು ಎನ್ನುವ ಗೊಂದಲ ಜೊತೆಗೆ ಅದು ಸರಿಯಾಗಿ ಕೆಲಸ ಮಾಡದೆಯೇ ಇರಬಹುದು.

ಕೆಲವೊಮ್ಮೆ ದಶ್ಚಟಕ್ಕೆ ದಾಸನಾಗಿರುವ ವ್ಯಕ್ತಿ ಒಪ್ಪದೇ ಇದ್ದಲ್ಲಿ ಆ ಪ್ರಯತ್ನ ವ್ಯರ್ಥವಾಗಬಹುದು. ಆದ್ದರಿಂದ ಮನೆಯಲ್ಲಿ ಸಿಗುವ ಕೆಲವು ಮನೆಮದ್ದುಗಳನ್ನು ಬಳಸಿಕೊಂಡು ಈ ರೀತಿ ಕುಳಿತದ ಚಟವನ್ನು ಬಿಡಿಸಲು ಪ್ರಯತ್ನಿಸಬೇಕು. ಆಯುರ್ವೇದ ಶಾಸ್ತ್ರದ ಪ್ರಕಾರ ನಮ್ಮ ಹಿರಿಯರು ನಡೆಸಿಕೊಂಡು ಬಂದಿರುವ ರೂಢಿಯ ಪ್ರಕಾರ ಮನೆಮದ್ದುಗಳಿಂದ ಎಂತಹ ಸಮಸ್ಯೆಗಳನ್ನು ಕೂಡ ಪರಿಹಾರ ಮಾಡಬಹುದು ಹಾಗೆ ಕುಡಿತದ ಚಟವನ್ನು ಕೂಡ ಬಿಡಿಸಬಹುದು.

ವ್ಯಕ್ತಿಗೆ ತಿಳಿಸದೆಯೂ ಕೂಡ ಇದನ್ನು ಪ್ರಯತ್ನಿಸಬಹುದು ಅಥವಾ ವ್ಯಕ್ತಿಯೇ ಮನಃಪರಿವರ್ತನೆಯಾಗಿ ಕುಳಿತದ ಚಟ ಬಿಡಬೇಕು ಎಂದುಕೊಂಡರೆ ಆಗಲೂ ಕೂಡ ಇದನ್ನು ಪ್ರಯತ್ನಿಸಬಹುದು. ಮಧ್ಯಪಾನ ಮಾತ್ರವಲ್ಲದೆ ಧೂಮಪಾನ, ತಂಬಾಕು, ಗುಟ್ಕ ಸೇವನೆ ಈ ರೀತಿ ಯಾವುದೇ ಕೆಟ್ಟ ಅಭ್ಯಾಸಗಳು ಇದ್ದರೂ ಕೂಡ ಆರೋಗ್ಯವನ್ನು ಹಾಳು ಮಾಡುವ ಈ ಎಲ್ಲ ದುಷ್ಟಗಳಿಂದ ದೂರ ಉಳಿಯಲು ಈ ಒಂದು ಮನೆ ಮದ್ದಿನ ಸೇವನೆ ಮಾಡಬಹುದು.

ಇದನ್ನು ಮಾಡುವುದು ಬಹಳ ಸರಳ. ನಿಮ್ಮ ಮನೆಯಲ್ಲೇ ಸಿಗುವಂತಹ ಏಲಕ್ಕಿ, ಬಜೆ ಹಾಗೂ ಜೀರಿಗೆಯಿಂದ ಈ ಮನೆ ಮದ್ದನ್ನು ಮಾಡಬಹುದು. 2 ಗ್ರಾಂ ಏಲಕ್ಕಿ, 2 ಗ್ರಾಂ ಬಜೆ ಮತ್ತು 2 ಗ್ರಾಂ ಜೀರಿಗೆಯನ್ನು ತೆಗೆದುಕೊಳ್ಳಿ ಇದನ್ನು ಚೆನ್ನಾಗಿ ಪುಡಿ ಮಾಡಿ ಮಿಕ್ಸ್ ಮಾಡಿ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಮಾಡಿ ಸ್ಟೋರ್ ಮಾಡಿ ಇಟ್ಟುಕೊಳ್ಳುವುದಾದರೆ.

ಈ ಮೂರು ಪದಾರ್ಥಗಳನ್ನು ಕೂಡ ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಪುಡಿ ಮಾಡಿ ಇಟ್ಟುಕೊಳ್ಳಿ. ಈಗ ಪ್ರತಿದಿನ ಬೆಳಿಗ್ಗೆ ಊಟಕ್ಕೂ ಮುನ್ನ ಹಾಗೂ ಪ್ರತಿದಿನ ರಾತ್ರಿ ಊಟಕ್ಕೂ ಮುನ್ನ ಒಂದು ಲೋಟ ನೀರಿಗೆ ಒಂದು ಚಮಚ ಈ ಪುಡಿಯನ್ನು ಚೆನ್ನಾಗಿ ಮಿಕ್ಸ್ ಮಾಡಿ ಮೂರು ತಿಂಗಳವರೆಗೆ ತಪ್ಪದೇ ಪ್ರತಿದಿನ ಕೂಡ ಎರಡು ಬಾರಿ ಇದರ ಸೇವನೆ ಮಾಡಿದರೆ ಆ ವ್ಯಕ್ತಿಗೆ ದುಶ್ಚಟಗಳಿಂದ ದೂರ ಉಳಿಯುತ್ತಾರೆ. ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆ ತಪ್ಪದೆ ಹಂಚಿಕೊಳ್ಳಿ.

Leave a Comment

%d bloggers like this: