ಸರ್ಕಾರದ ಫ್ರೀ ಬಸ್ ಯೋಜನೆಯಿಂದ ಮೂರೇ ದಿನಕ್ಕೆ ಸಾರಿಗೆ ನಿಗಮಕ್ಕೆ ನಷ್ಟ ಆಗಿದೆಷ್ಟು ಗೊತ್ತಾ.?

 

WhatsApp Group Join Now
Telegram Group Join Now

ಜೂನ್ 11ನೇ ತಾರೀಖಿನಂದು ಕಾಂಗ್ರೆಸ್ ಪಕ್ಷವು ಚುನಾವಣೆಯೋತ್ತವಾಗಿ ನೀಡಿದ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಮೊದಲನೇ ಗ್ಯಾರೆಂಟಿ ಕಾರ್ಡ್ ಯೋಜನೆ ಅಡಿ ಶಕ್ತಿ ಯೋಜನೆ ಲಾಂಚ್ ಆಗಿದೆ. ಈ ಶಕ್ತಿ ಯೋಜನೆ ಅಡಿಯಲ್ಲಿ ಕರ್ನಾಟಕದಾದ್ಯಂತ ಕರ್ನಾಟಕ ರಾಜ್ಯದ ಮಹಿಳೆಯರು ಉಚಿತವಾಗಿ ಕರ್ನಾಟಕ ಸಾರಿಗೆ ಸಂಸ್ಥೆ ನಿಗಮದ ಬಸ್ ಗಳಲ್ಲಿ ಪ್ರಯಾಣ ಮಾಡಬಹುದು.

ಇವರಿಗೆ ಶೂನ್ಯ ದರದ ಟಿಕೆಟ್ ನೀಡಲಾಗುತ್ತದೆ. ಮಹಿಳೆಯರ ಪ್ರಯಾಣದ ದತ್ತಾಂಶವನ್ನು ಸಂಗ್ರಹಿಸುವ ಕಾರಣಕ್ಕಾಗಿ ಮಹಿಳೆಯರಿಗೆ ಈ ರೀತಿ ಶೂನ್ಯ ದರದ ಟಿಕೆಟ್ ವಿತರಣೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದಕ್ಕಾಗಿ ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆಯಬೇಕು ಎಂದು ಸರ್ಕಾರ ತಿಳಿಸಿದೆ. ಸರ್ಕಾರವು ಶಕ್ತಿ ಯೋಜನೆ ಬಗ್ಗೆ ಹೊರಡಿಸಿರುವ ಆದೇಶ ಪತ್ರದಲ್ಲಿ ತಿಳಿಸಿರುವಂತೆ ಐಷಾರಾಮಿ ಬಸ್ ಗಳನ್ನು ಹೊರತುಪಡಿಸಿ ಉಳಿದ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.

ಇಂತಹದೊಂದು ಯೋಜನೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿಗೆ ಆಗಿದ್ದು, ಈ ಯೋಜನೆ ಬಗ್ಗೆ ಇದು ಜಾರಿಗೆ ಬಂದ ದಿನದಿಂದಲೂ ಕೂಡ ಜನಸಾಮಾನ್ಯನಿಂದ ಮತ್ತು ವಿರೋಧ ಪಕ್ಷಗಳಿಂದ ವಿರೋಧ ಇದ್ದೇ ಇದೆ. ಈ ಯೋಜನೆಯ ಪರ ಮತ್ತು ವಿರೋಧ ಚರ್ಚೆಗಳು ಬಹಳ ದೊಡ್ಡ ಮಟ್ಟಿಗೆ ನಡೆದಿದೆ, ಅಂತಿಮವಾಗಿ ಸರ್ಕಾರ ಈ ಯೋಜನೆಯನ್ನು ಸದುದ್ದೇಶದಿಂದ ಲಾಂಚ್ ಮಾಡಿಯೇ ಬಿಟ್ಟಿದೆ.

ಈಗ ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು ಕೂಡ ತಮ್ಮ ಗುರುತಿನ ಚೀಟಿಯಾಗಿ ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್ ತೋರಿಸಿ ಈ ಉಚಿತ ಪ್ರಯಾಣದ ಅನುಕೂಲತೆ ಪಡೆದುಕೊಳ್ಳುತ್ತಿದ್ದಾರೆ. ಜೂನ್ 11ರ ಮಧ್ಯಾಹ್ನದಿಂದ ರಾಜ್ಯದಾದ್ಯಂತ ಮಹಿಳೆಯರು ಒಂದು ರೂಪಾಯಿ ಕೂಡ ಟಿಕೆಟ್ ಚಾರ್ಜ್ ನೀಡದೆ ಪ್ರಯಾಣ ಮಾಡುತ್ತಿರುವುದರಿಂದ ಅಂದಿನಿಂದ ಲೆಕ್ಕಾಚಾರ ಶುರುವಾಗಿದೆ.

ದಿನವೂ ಕೂಡ ಎಷ್ಟು ಜನರು ಈ ಉಚಿತ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಇವರು ಎಷ್ಟು ದೂರ ಪ್ರಯಾಣಿಸುತ್ತಿದ್ದಾರೆ, ಒಂದು ವೇಳೆ ಇವರು ಟಿಕೆಟ್ ಪಡೆದುಕೊಂಡು ಪ್ರಯಾಣ ಮಾಡಿದ್ದರೆ ರಾಜ್ಯದ ಬೊಕ್ಕಸಕ್ಕೆ ಎಷ್ಟು ಆದಾಯ ಬರುತಿತ್ತು. ಈಗ ಸರ್ಕಾರದ ಫ್ರೀ ಬಸ್ ಯೋಜನೆ ಕಾರಣದಿಂದಾಗಿ ಕರ್ನಾಟಕ ಸಾರಿಗೆ ಸಂಸ್ಥೆ ಎಷ್ಟು ನಷ್ಟ ಅನುಭವಿಸುತ್ತಿದೆ ಎನ್ನುವುದರ ಕುರಿತು ದೊಡ್ಡ ವಿವರವೇ ರೆಡಿ ಆಗುತ್ತಿದೆ.

ಸರ್ಕಾರಕ್ಕೂ ಇದರ ಅಂಕಿ ಅಂಶದ ದಾಖಲೆ ಇದ್ದು ಸದ್ಯಕ್ಕಿಗ ತಿಳಿದು ಬಂದಿರುವ ಬಲವಾದ ಮೂಲಗಳ ಮಾಹಿತಿ ಪ್ರಕಾರ ಯೋಜನೆಯ ಲಾಂಚ್ ಆದ ದಿನಾಂಕ ಭಾನುವಾರ ಆಗಿದ್ದರಿಂದ ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣಿಸಿದ್ದಾರೆ. ವಾರಾಂತ್ಯದ ದಿನಗಳಕ್ಕಿಂತ ವಾರದ ದಿನಗಳಲ್ಲಿ ಮಹಿಳೆಯರ ಪ್ರಯಾಣ ಹೆಚ್ಚಾಗಿದ್ದು, ಭಾನುವಾರವೂ ಸೇರಿದಂತೆ ಮೂರು ದಿನಗಳವರೆಗೆ ಎಷ್ಟು ಮಹಿಳೆಯರು ಪ್ರಯಾಣ ಮಾಡಿದ್ದರು ಎನ್ನುವುದರ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಮೊದಲ ಮೂರು ದಿನಗಳ ಲೆಕ್ಕದಲ್ಲಿ KSRTC ಯಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆ 11,40,057, ಒಂದು ವೇಳೆ ಇವರು ಟಿಕೆಟ್ ದರ ಕೊಟ್ಟು ಪ್ರಯಾಣಿಸಿದ್ದರೆ 3,57,84,677 ಆದಾಯವಾಗುತ್ತಿತ್ತು ಅದೇ ಪ್ರಕಾರ BMTC ಮಹಿಳಾ ಪ್ರಯಾಣಿಕರ ಸಂಖ್ಯೆ 17,57,887 ಇವರ ಮೂಲಕ 1,75,33,234 ಆದಾಯ ಬರುತ್ತಿತ್ತು.

NWKRTC ಬಸ್ಗಳಲ್ಲಿ ಒಟ್ಟು 8,31,840 ಮಹಿಳಾ ಪ್ರಯಾಣಿಕರು ಸಂಚರಿಸಿದ್ದಾರೆ, ಇದರಿಂದ ಇಲಾಖೆಯ ಖಜಾನೆಗೆ 2,10,66,638 ನಷ್ಟವಾಗಿದೆ ಮತ್ತು KKRTC ಬಸ್ಗಳಲ್ಲಿ 41,34,776 ಮಹಿಳೆಯರು ಪ್ರಯಾಣಿಸಿದ್ದಾರೆ, ಇವರ ಪ್ರಯಾಣದ ವೆಚ್ಚವು 8,83,53,434 ಆಗುತ್ತಿತ್ತು ಆದರೆ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಪ್ರಯಾಣವಾಗಿರುವ ಕಾರಣ ಇಷ್ಟು ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now