ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಇಂದಿನಿಂದ ಅವಕಾಶ ಏನೆಲ್ಲಾ ದಾಖಲೆಗಳು ಬೇಕು, ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಅಂತ ನೋಡಿ.!

 

ಉಚಿತ ಬೆಳಕು ಸುಸ್ಥಿರ ಬದುಕು ಎನ್ನುವ ಧ್ಯೇಯದೊಂದಿಗೆ ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ಕುಟುಂಬಕ್ಕೂ ಕೂಡ ಗೃಹ ಬಳಕೆಗೆ 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದೆ. ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಆಗಿರುವ ಈ ಗೃಹಜ್ಯೋತಿ ಯೋಜನೆಯು ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಪಂಚಖಾತ್ರಿ ಯೋಜನೆಗಳಲ್ಲಿ ಮೊದಲನೇಯದಾಗಿತ್ತು.

ಕರ್ನಾಟಕವನ್ನು ಕತ್ತಲೆ ಮುಕ್ತ ಮಾಡುವ ಕನಸನ್ನು ಹೊಂದಿರುವ ಈ ಯೋಜನೆಗೆ ಇರುವ ನಿಬಂಧನೆಗಳು ಮತ್ತು ಮಾರ್ಗಸೂಚಿಗಳ ಕುರಿತು ಆದೇಶ ಪತ್ರವೂ ಕೂಡ ಹೊರಬಿದ್ದಿತ್ತು. ಇದರ ಪ್ರಕಾರ ಗೃಹ ಜ್ಯೋತಿ ಯೋಜನೆಗೆ ಅರ್ಹತೆಯುಳ್ಳ ಫಲಾನುಭವಿಗಳು ಕೆಲ ದಾಖಲೆಗಳನ್ನು ಕೊಟ್ಟು ಗ್ರಾಹಕರು ತಮ್ಮ ವಿದ್ಯುತ್ ಖಾತೆಗೆ ಅವರ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ. ಜೂನ್ 18 ಗೃಹ ಜ್ಯೋತಿ ಯೋಜನೆಗೆ ಅರ್ಜಿ ಆಹ್ವಾನ ಮಾಡಲಾಗುತ್ತಿದೆ.

ಗ್ರಾಹಕರು ಸೇವಾ ಸಿಂಧು ಪೋರ್ಟಲ್ ಗೆ ಲಾಗ್ ಇನ್ ಆಗಿ ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ಮೂಲಕ ಅಥವಾ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಅಥವಾ ಗ್ರಾಮ ಪಂಚಾಯಿತಿ, ನಾಡಕಚೇರಿ ಮತ್ತು ಎಲ್ಲಾ ವಿದ್ಯುತ್ ಕಚೇರಿಗಳಲ್ಲೂ ಕೂಡ ಅರ್ಜಿ ಸಲ್ಲಿಸಬಹುದು ಈ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿರುತ್ತದೆ.

ಈ ರೀತಿ ಅರ್ಜಿ ಸಲ್ಲಿಸಿ ನೋಂದಣಿ ಮಾಡುವಾಗ ಆಧಾರ್ ಸಂಖ್ಯೆಯನ್ನು ತಪ್ಪದೇ ವಿದ್ಯುತ್ ಬಿಲ್ ಅಲ್ಲಿ ನೀಡಲಾದ ವಿದ್ಯುತ್ ಖಾತೆ ಸಂಖ್ಯೆಗೆ ಲಿಂಕ್ ಮಾಡಬೇಕು ಮತ್ತು ಮೊಬೈಲ್ ನಂಬರ್ ಅನ್ನು ಕೂಡ ತಪ್ಪದೇ ನೀಡಬೇಕು. ಇದರ ಬಗ್ಗೆ ಏನೇ ಗೊಂದಲಗಳು ಇದ್ದರೂ ಕೂಡ ಹತ್ತಿರದಲ್ಲಿರುವ ವಿದ್ಯುತ್ ಕಛೇರಿಗೆ ಭೇಟಿಕೊಟ್ಟು ಸಿಬ್ಬಂದಿಗಳಿಂದ ಮಾಹಿತಿ ಪಡೆಯಬಹುದು ಅಥವಾ ಇಲಾಖೆಯ ಅಧಿಕೃತ ವೆಬ್ಸೈಟ್ ಆದ https://energy.karnataka.gov.in ಭೇಟಿ ನೀಡಿ ಅಥವಾ ಸಹಾಯವಾಣಿ 1912 ಗೆ ದಿನದ ಯಾವ ಸಮಯದಲ್ಲಿ ಬೇಕಾದರೂ ಕರೆ ಮಾಡಿ ಮಾಹಿತಿ ಕಲೆ ಹಾಕಬಹುದು ಅಥವಾ ದೂರುಗಳಿದ್ದರೂ ಕೂಡ ಸಲ್ಲಿಸಬಹುದು.

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳು:-
● ಆಧಾರ್ ಕಾರ್ಡ್
● ವೋಟರ್ ಐಡಿ
● ಹಳೆ ವಿದ್ಯುತ್ ಬಿಲ್ ಅಥವಾ ವಿದ್ಯುತ್ ಖಾತೆ ಸಂಖ್ಯೆ
● ಮೊಬೈಲ್ ಸಂಖ್ಯೆ
● ಬಾಡಿಗೆದಾರರಿಗೆ ಕರಾರು ಪತ್ರ

ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-
● ಮೊದಲಿಗೆ ಗೂಗಲ್ ಮೂಲಕ https://sevasindhugs.karnataka.gov.in ವೆಬ್ಸೈಟ್‌ಗೆ ಭೇಟಿ ಕೊಡಿ.
ನೀವು ಈಗಾಗಲೇ ಸೇವಾ ಸಿಂಧು ಅಕೌಂಟ್ ಹೊಂದಿದ್ದರೆ ಯೂಸರ್ ಐಡಿ ಮತ್ತು ಪಾಸ್ವರ್ಡ್ ಹಾಕುವ ಮೂಲಕ ಲಾಗಿನ್ ಆಗಿ ಅಥವಾ ಸೇವಾ ಸಿಂಧು ಅಕೌಂಟ್ ಕ್ರಿಯೇಟ್ ಮಾಡಿ ಪಾಸ್ವರ್ಡ್ ಪಡೆದು ನಂತರ ಈ ವೆಬ್ಸೈಟ್ಗೆ ಲಾಗಿನ್ ಆಗಿ.

● ಎಡ ಭಾಗದಲ್ಲಿರುವ ಡ್ಯಾಶ್ ಬೋರ್ಡ್ ಅಲ್ಲಿ ಅಪ್ಲೈ ಫಾರ್ ಸರ್ವಿಸಸ್ ಕ್ಲಿಕ್ ಮಾಡಿ ನಂತರ ಅವೈಲೇಬಲ್ ಆಲ್ ಸರ್ವಿಸಸ್ ಇನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿ.
● ಸಧ್ಯಕ್ಕೀಗ ಅದರಲ್ಲಿ ಗೃಹಜ್ಯೋತಿ ಸ್ಕೀಮ್ ಒಂದೇ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ಇಂಧನ ಇಲಾಖೆಯ ಹೊಸ ಸೇವೆಗಳು ಸಿಗುತ್ತವೆ. ಅದರಲ್ಲಿ ಅರ್ಜಿ ಫಾರಂ ಕೂಡ ಕಾಣುತ್ತದೆ. ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳ ಆಯ್ಕೆ ಇರುತ್ತದೆ. ಇದರಲ್ಲಿ ನಿಮ್ಮ ಆಯ್ಕೆಯ ಭಾಷೆಯನ್ನು ಕ್ಲಿಕ್ ಮಾಡಿ.

● ನಿಮ್ಮ ವಿದ್ಯುತ್ ಖಾತೆ ಸಂಖ್ಯೆ ಅಂದರೆ ಕನೆಕ್ಷನ್ ID ಸಂಖ್ಯೆಯನ್ನು ಹಾಕಿ ಮತ್ತು ಇದನ್ನು ಹೊಂದಿರುವ ಖಾತೆದಾರರ ಹೆಸರನ್ನು ಹಾಕಿ ಅಂದರೆ ನೀವು ಕರೆಂಟ್ ಬಿಲ್ ಅಲ್ಲಿ ಇರುವ ಹೆಸರನ್ನು ಹಾಕಬೇಕು. ಇಷ್ಟು ಹಾಕಿದರೆ ಉಳಿದ ಎರಡು ಆಪ್ಷನ್ಗಳು ಆಟೋಮೆಟಿಕ್ ಫಿಲ್ ಆಗುತ್ತದೆ.
● ಬಳಕೆದಾರ ವಿಧ ಎನ್ನುವ ಆಪ್ಷನ್ ಇರುತ್ತದೆ ಅದರಲ್ಲಿ ಓನರ್ ಅಥವಾ ರೆಂಟ್ ಎನ್ನುವ ಆಪ್ಷನ್ಗಳು ಇರುತ್ತದೆ ನೀವು ಬಾಡಿಗೆದಾರರಾಗಿದ್ದರೆ ರೆಂಟರ್ ಎನ್ನುವ ಆಪ್ಷನ್ ಕ್ಲಿಕ್ ಮಾಡಿ. ಬಳಿಕ ನಿಮ್ಮ ಆಧಾರ್ ಸಂಖ್ಯೆ ಆಧಾರ್ ನಲ್ಲಿ ಇರುವಂತೆ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ಕೂಡ ಫಿಲ್ ಮಾಡಿ.

● ಇದಾದ ಮೇಲೆ ಆದರೆ ಅಥೆಂಟಿಕೇಶನ್ ಲಿಂಕ್ ಗಳು ಬರುತ್ತವೆ ಅವೆಲ್ಲವನ್ನು ಓಕೆ ಎಂದು ಕ್ಲಿಕ್ ಮಾಡಿ.
● ಪೇಜ್ ಕೆಳಗೆ ಒಂದು ಘೋಷಣೆ ಇರುತ್ತದೆ ಅದನ್ನು ಓದಿ ಅರ್ಥೈಸಿಕೊಂಡು ಅಗ್ರಿ ಎಂದು ಇರುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಬಳಿಕ ಒಂದು ಕ್ಯಾಪ್ಚಾ ಕೋಡ್ ಕಾಣುತ್ತದೆ. ಆ ಕ್ಯಾಪ್ಚರ್ ಅನ್ನು ಸರಿಯಾಗಿ ಎಂಟ್ರಿ ಮಾಡಿ ಸಬ್ಮಿಟ್ ಕೊಡಿ. ಆಗ ನೀವು ಅರ್ಜಿ ಸಲ್ಲಿಸಲು ವಿವರ ಸರಿ ಇದೆ ಎಂದು ಚೆಕ್ ಮಾಡಿಕೊಳ್ಳಲು ಒಂದು ಡ್ರಾಫ್ಟ್ ಬರುತ್ತದೆ. ಮತ್ತೊಮ್ಮೆ ಸಬ್ಮಿಟ್ ಕೊಟ್ಟರೆ ನಿಮಗೆ ಅಕ್ನೋಲೆಜ್ಮೆಂಟ್ ಕಾಪಿ ಸಿಗುತ್ತದೆ ಇಷ್ಟಾದರೆ ಅಜ್ಜಿ ಸಲ್ಲಿಸುವ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ತಿಯಾಗುತ್ತದೆ.

 

Leave a Comment

%d bloggers like this: