5 ಗ್ಯಾರಂಟಿ ಯೋಜನೆಗಳಿಗೆ ಅರ್ಜಿ ಸಲ್ಲಿಸು ಮುನ್ನ ಈ ವಿಚಾರ ತಿಳಿಯಿರಿ. ಈ ಲಿಂಕ್ ಕ್ಲಿಕ್ ಮಾಡಿದ್ರೆ ಸಾಕು ನಿಮ್ಮ ಬ್ಯಾಂಕ್ ನಲ್ಲಿ ಇರೋ ಹಣ ಖಾಲಿಯಾಗುತ್ತೆ ಎಚ್ಚರ.!

ಸದ್ಯಕ್ಕೆ ಈಗ ಕರ್ನಾಟಕದಾದ್ಯಂತ ಕಾಂಗ್ರೆಸ್ ನೇತೃತ್ವದ ಸರ್ಕಾರವು ಘೋಷಿಸಿರುವ ಪಂಚ ಖಾತ್ರಿ ಯೋಜನೆಗಳದ್ದೇ ಸದ್ದು. ಈ ಗ್ಯಾರಂಟಿ ಕಾರ್ಡ್ ಯೋಜನೆಗಳಲ್ಲಿ ಗ್ರಹ ಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಶಕ್ತಿ ಯೋಜನೆ ಮತ್ತು ಯುವನಿಧಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ನೋಂದಣಿ ಆಗಬೇಕು ಎಂದು ಸರ್ಕಾರ ಆದೇಶ ಪತ್ರದಲ್ಲಿ ತಿಳಿಸಿದೆ.

ಆನ್ಲೈನಲ್ಲಿ ಮೊಬೈಲ್, ಕಂಪ್ಯೂಟರ್, ಲ್ಯಾಪ್ಟಾಪ್ ಮೂಲಕ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದ್ದು ಸರ್ಕಾರ ಪ್ರತಿಯೊಂದು ಯೋಜನೆಗೂ ಕೂಡ ನಿಗದಿತ ದಿನಾಂಕವನ್ನು ಗೊತ್ತು ಮಾಡಿದೆ. ಆ ದಿನದಂದು ಅದಕ್ಕೆ ಸಂಬಂಧಿಸಿದ ವೆಬ್ಸೈಟ್ ಅನ್ನು ಓಪನ್ ಮಾಡುತ್ತಿದೆ ಈ ಅವಕಾಶಕ್ಕೆ ಕಾದು ಕೊಡುತ್ತಿರುವ ಮತ್ತೊಂದು ವರ್ಗ ಇದೆ ಇದರ ಬಗ್ಗೆ ಈಗ ಎಚ್ಚರಿಕೆ ಕೇಳಿ ಬಂದಿದೆ.

ಆನ್ಲೈನ್ ನಲ್ಲಿ ವಹಿವಾಟು ಹೆಚ್ಚಾಗುತ್ತಿದ್ದಂತೆ ಆನ್ಲೈನ್ ಕಳ್ಳತನ ಕೂಡ ಹೆಚ್ಚಾಗಿದೆ. ಇದನ್ನು ಸೈಬರ್ ಪ್ರಕರಣ ಎಂದು ಪರಿಗಣಿಸಲಾಗಿದೆ. ವೈಯುಕ್ತಿಕ ಮಾಹಿತಿಗಳನ್ನು ಕದಿಯುವುದರ ಜೊತೆಗೆ ಖಾತೆಗಳಿಗೆ ಕನ್ನಹಾಕಿ ಹಣ ದೋಚುವಂತಹ ಸೈಬರ್ ಕಳ್ಳತನದ ಪ್ರಕರಣಗಳು ಸೈಬರ್ ಪೊಲೀಸ್ ಬ್ರಾಂಚ್ ಗೆ ದೊಡ್ಡ ತಲೆ ನೋವಾಗಿದೆ.

ಸಾಧ್ಯವಾದಷ್ಟು ಸೈಬರ್ ತಜ್ಞರು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದರು ಭಾರತದಾದ್ಯಂತ ಈ ರೀತಿ ಸೈಬರ್ ಕಳ್ಳತನದಿಂದ ವಂಚಿತರಾಗುತ್ತಿರುವ ಪ್ರಕರಣದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಪ್ರತಿನಿತ್ಯವೂ ಕೂಡ ಒಂದು ಕೋಟಿಯಷ್ಟು ಕರ್ನಾಟಕ ಜನತೆಯ ಹಣವು ಈ ರೀತಿ ವಂಚನೆಯಿಂದ ಸೈಬರ್ ಕಳ್ಳರ ಪಾಲಾಗುತ್ತಿದೆ. ಅದಕ್ಕಾಗಿ ಸೈಬರ್ ತಜ್ಞರು ಈಗ ಎಲ್ಲರಿಗೂ ಎಚ್ಚರಿಕೆ ನೀಡಿದ್ದಾರೆ.

ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಬೆಂಗಳೂರು ಒನ್ ಕೇಂದ್ರಗಳನ್ನು ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದರ ಜೊತೆಗೆ ತಾವೇ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಇಚ್ಛಿಸಿದರೆ ಅಂತವರು ಅನಧಿಕೃತವಾದ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡದೆ ಇರಲು ಸೈಬರ್ ತಜ್ಞರು ಸೂಚಿಸುತ್ತಿದ್ದಾರೆ.

ಅದರಲ್ಲೂ ಗೃಹಲಕ್ಷ್ಮಿ ಯೋಜನೆ ಮತ್ತು ಯುವನಿಧಿ ಯೋಜನೆಗೆ ಬ್ಯಾಂಕ್ ಖಾತೆ ಸಂಖ್ಯೆ ಇತ್ಯಾದಿ ವಿವರಗಳನ್ನು ನೀಡುವ ಕಾರಣದಿಂದಾಗಿ ಈ ಮಾಹಿತಿಗಳು ಸೈಬರ್ ಕಳ್ಳರ ಪಾಲಾಗದಂತೆ ತಡೆಯಲು ಜಾಗ್ರತೆ ವಹಿಸಿದ್ದಾರೆ. ಯಾವುದೇ ಕಾರಣಕ್ಕೂ ಅಪರಿಚಿತ ಲಿಂಕ್ ಗಳನ್ನು ಅರ್ಜಿ ಸಲ್ಲಿಸುವ ವೇಳೆ ಕ್ಲಿಕ್ ಮಾಡಬೇಡಿ ಮತ್ತು ನಿಮ್ಮ ವೈಯುಕ್ತಿಕ ವಿವರಗಳನ್ನು ಸಲ್ಲಿಸುವ ಪೋರ್ಟಲ್ ಬಗ್ಗೆ ಮತ್ತೊಮ್ಮೆ ಎಚ್ಚರಿಕೆಯಿಂದ ತಿಳಿದುಕೊಂಡು ಪರಿಶೀಲಿಸಿ ನಂತರ ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಕಾರ್ಡ್ ಇತ್ಯಾದಿ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಿ.

ಯಾವುದಾದರೂ OTPಗಳು ಬಂದರೂ ಕೂಡ ಅನಧಿಕೃತ ವ್ಯಕ್ತಿ ಕರೆ ಮಾಡಿ OTP ಗಳನ್ನು ಹಂಚಿಕೊಳ್ಳುವಂತೆ ಸೂಚಿಸಿದರೆ ಯಾವುದೇ ಕಾರಣಕ್ಕೂ ಕೂಡ ಸಹಕರಿಸಬೇಡಿ. ಜೊತೆಗೆ ಈ ಯೋಜನೆಗಳ ಹೆಸರನ್ನು ಹೇಳಿಕೊಂಡು ಯಾವುದೇ ಇ-ಮೇಲ್ ಲಿಂಕ್ ಅಥವಾ SMS ಗಳ ಮೂಲಕ ಲಿಂಕ್ ಬಂದರೂ ಕೂಡ ಕ್ಲಿಕ್ ಮಾಡದೆ ಇರುವುದು ಉತ್ತಮ ಎನ್ನುವ ಸಲಹೆಗಳನ್ನು ನೀಡಿದ್ದಾರೆ. ಅದರಿಂದ ಈ ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಮತ್ತು ಇಂತಹ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.

Leave a Comment

%d bloggers like this: